Human Evolution: ಮನುಷ್ಯನ ಬಲಗೈಯಲ್ಲಿ ಹೊಸಾ ರಕ್ತನಾಳ ಹುಟ್ಟಿಕೊಂಡಿದೆ, ನಾವಿನ್ನೂ ವಿಕಸನಗೊಳ್ಳುತ್ತಲೇ ಇದ್ದೀವಿ!

Human Evolution has continued: ಮಗು ಗರ್ಭದಲ್ಲಿದ್ದಾಗ ತೋಳುಗಳ ಮಧ್ಯಭಾಗಕ್ಕೆ ಚಲಿಸುವ ಅಪಧಮನಿ (Artery) ಈ ಹಿಂದಿನಂತೆಯೇ ಮಾಯವಾಗುವುದಿಲ್ಲ ಬದಲಿಗೆ ಹೆಚ್ಚಿನ ವಯಸ್ಕರಲ್ಲಿ ಇದು ಹೆಚ್ಚಿನ ನಾಳದ ಅಂಗಾಂಶವನ್ನು ನೀಡುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿಸಿರುವ ಮಾಹಿತಿಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Extra Artery in Human Hand: ಅಡಿಲೇಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು ವಯಸ್ಕರಲ್ಲಿ ಅಪಧಮನಿಯ ಇರುವಿಕೆಯನ್ನು ವಿಶ್ಲೇಷಣೆ ನಡೆಸುತ್ತಿದ್ದು ಇದು ಗಣನೀಯವಾಗಿ ಬೆಳವಣಿಗೆಯಾಗುತ್ತಿದೆ ಎಂಬ ಅಂಶವನ್ನು ಎದ್ದುಗಾಣಿಸಿದ್ದಾರೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಮಗು ಗರ್ಭದಲ್ಲಿದ್ದಾಗ ತೋಳುಗಳ ಮಧ್ಯಭಾಗಕ್ಕೆ ಚಲಿಸುವ ಅಪಧಮನಿ (Artery) ಈ ಹಿಂದಿನಂತೆಯೇ ಮಾಯವಾಗುವುದಿಲ್ಲ ಬದಲಿಗೆ ಹೆಚ್ಚಿನ ವಯಸ್ಕರಲ್ಲಿ ಇದು ಹೆಚ್ಚಿನ ನಾಳದ ಅಂಗಾಂಶವನ್ನು ನೀಡುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿಸಿರುವ ಮಾಹಿತಿಯಾಗಿದೆ. ಫ್ಲಿಂಡರ್ಸ್ ವಿಶ್ವವಿದ್ಯಾನಿಲವು ಅಧ್ಯಯನ ನಡೆಸಿರುವಂತೆ 1880 ರಲ್ಲಿ ಜನಿಸಿದವರಲ್ಲಿ ಈ ಪ್ರಮಾಣವು 10% ನಷ್ಟಿದ್ದರೆ 20 ನೇ ಶತಮಾನದಲ್ಲಿ ಜನಿಸಿದವರಲ್ಲಿ ಈ ಪ್ರಮಾಣ 30% ದಷ್ಟಿದೆ ಎಂದು ಹೇಳಿದೆ. ವಿಕಾಸದ ದೃಷ್ಟಿಯಲ್ಲಿ (Evolution Process) ಅವಲೋಕಿಸಿದಾಗ ಇದು ಕಡಿಮೆ ಅವಧಿಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.


ಮಧ್ಯದ ಅಪಧಮನಿಯು ಮಾನವ ಬೆಳವಣಿಗೆಯ ಆರಂಭದಲ್ಲಿ ರೂಪುಗೊಳ್ಳುತ್ತದೆ ಹಾಗೂ ಬೆಳವಣಿಗೆಯ ಹಂತದಲ್ಲಿರುವ ಕೈಗಳನ್ನು ಸಮರ್ಥಗೊಳಿಸಲು ತೋಳುಗಳ ಮಧ್ಯಭಾಗದಲ್ಲಿ ರಕ್ತಪ್ರಸರಣಕ್ಕೆ ಸಹಾಯ ಮಾಡುತ್ತದೆ. 8 ವಾರಗಳಲ್ಲಿ ಈ ಕೆಲಸವನ್ನು ಅಂಗಗಳಾದ ರೇಡಿಯಲ್ ಹಾಗೂ ಅಲ್ನರ್ ಅಪಧಮನಿಗಳಿಗೆ ಬಿಡುತ್ತದೆ.


ಅಂಗರಚನಾಶಾಸ್ತ್ರಜ್ಞರ ಪ್ರಕಾರ ಮಧ್ಯದ ಅಪಧಮನಿ ಹಂತ ಹಂತವಾಗಿ ಹೋಗುತ್ತದೆ ಎಂಬುದು ಖಾತ್ರಿಯಾಗದೇ ಇದ್ದರೂ ಅನೇಕ ಸಂದರ್ಭಗಳಲ್ಲಿ ಇದು ಒಂದು ತಿಂಗಳು ಅಥವಾ ಹೆಚ್ಚುಕಾಲ ಉಳಿಯುತ್ತದೆ ಎಂಬುದು ಅಧ್ಯಯನದಲ್ಲಿರುವ ಮಾಹಿತಿಯಾಗಿದೆ. ರಕ್ತಹ ಹರಿವು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಕಂಡುಕೊಳ್ಳಲು ಸಂಶೋಧಕರು ಯುರೋಪಿಯನ್ ಮೂಲದ ಆಸ್ಟ್ರೇಲಿಯನ್ನರು ದಾನ ಮಾಡಿದ ಶವಗಳ 80 ಅಂಗಗಳನ್ನು ಪರಿಶೀಲಿಸಿದರು. 51 ರಿಂದ 101 ವಯೋಮಾನದ ದಾನಿಗಳು 20 ನೇ ಶತಮಾನದ ಮೊದಲರ್ಧದಲ್ಲಿ ಜನಿಸಿದವರು ಎಂಬುದನ್ನು ಇದು ತಿಳಿಸುತ್ತದೆ.


ಇದನ್ನೂ ಓದಿ: Pregnancy Tips: ಗರ್ಭಿಣಿ ಕೇಸರಿ ಹಾಕಿದ ಹಾಲು ಕುಡಿದರೆ ಕೆಂಪು ಕೆಂಪಾದ ಮಗು ಹುಟ್ಟುತ್ತಾ? ಕೇಸರಿಯಿಂದ ಏನು ಪ್ರಯೋಜನ?

ಮಧ್ಯಭಾಗದ ಅಪಧಮನಿಯು ಉತ್ತಮ ರಕ್ತ ಪೂರೈಕೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಸಂಶೋಧನಾ ತಂಡವು ಹಿಂದಿನ ದಾಖಲೆಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ. ಇಂದಿನ ಕಾಲಮಾನದ ವಯೋಮಾನದವರಲ್ಲಿ ಅಪಧಮನಿಯು ಹಿಂದಿನವರಿಗಿಂತ ಮೂರು ಪಟ್ಟು ಹೆಚ್ಚು ಸಾಮಾನ್ಯವಾಗಿದೆ ಎಂಬ ಅಂಶವನ್ನು ಕಂಡುಹಿಡಿದಿದ್ದಾರೆ. ಈ ಹೆಚ್ಚುವರಿ ರಕ್ತ ಪೂರೈಕೆಯ ಅಂಶವನ್ನು ಉಳಿಸಿಕೊಂಡವರಲ್ಲಿ ಅನುಕೂಲಕರವಾಗಿದೆ ಎಂಬುದನ್ನು ಸಂಶೋಧನಾ ತಂಡ ಪ್ರಸ್ತುತಪಡಿಸಿದೆ.


ಸೈನ್ಸ್ ಅಲರ್ಟ್‌ನೊಂದಿಗೆ ಈ ಅಧ್ಯಯನದ ವಿಶ್ಲೇಷಣೆಗಳನ್ನು ವಿವರಿಸಿರುವ ಅಧ್ಯಯನಕಾರರಾದ ಲೂಕಾಸ್ ಹೇಳಿರುವಂತೆ ಈ ಹೆಚ್ಚಳಕ್ಕೆ ಕಾರಣ ಅಪಧಮನಿಯ ಬೆಳವಣಿಗೆಯಲ್ಲಿ ಒಳಗೊಂಡಿರುವ ವಂಶವಾಹಿಗಳ ರೂಪಾಂತರಗಳು ಅಥವಾ ಗರ್ಭಾವಸ್ಥೆಯಲ್ಲಿ ತಾಯಂದಿರಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ.


ಹೆಚ್ಚುವರಿ ಅಪಧಮನಿಯ ಇರುವಿಕೆಯಿಂದ ಬೆರಳು ಇಲ್ಲವೇ ಮೊಣಕೈಗಳಿಗೆ ರಕ್ತದ ಹೆಚ್ಚಿನ ಹರಿಯುವಿಕೆಯನ್ನು ಒದಗಿಸಬಹುದು ಹಾಗೂ ಇದರಿಂದ ಅವುಗಳು ಇನ್ನಷ್ಟು ಬಲವಾಗಿ ಪರಿಣಾಮಕಾರಿಯಾಗಿಸಬಹುದು. ಇದರಿಂದ ಕಾರ್ಪಲ್ ಟನಲ್ ಸಿಂಡ್ರೋಮ್‌ಗೆ ತುತ್ತಾಗುವ ಅಪಾಯ ಹೆಚ್ಚಾಗಿದ್ದು ನಮ್ಮ ಕೈಗಳನ್ನು ಕಡಿಮೆ ಬಳಸಬೇಕಾಗುವ ಪರಿಸ್ಥಿತಿ ಬಂದೊದಗುತ್ತದೆ. ಲೂಕಾಸ್ ಅಭಿಪ್ರಾಯಪಟ್ಟಿರುವಂತೆ ಇದೇ ಪ್ರವೃತ್ತಿ ನಿರಂತರವಾದಲ್ಲಿ 2100 ರ ವೇಳೆಗೆ ಜನರು ತೋಳುಗಳ ಮಧ್ಯಭಾಗದಲ್ಲಿ ಅಪಧಮನಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

Published by:Soumya KN
First published: