ಆನ್ಲೈನ್​ ಕ್ಲಾಸ್​ಗಾಗಿ ಮೊಬೈಲ್ ಕಳ್ಳತನ; ಬಾಲಕನಿಗೆ ಹೊಸ ಫೋನ್​ ಉಡುಗೊರೆ ಕೊಟ್ಟ ಪೊಲೀಸ್

ತಂದೆ ಬಿಸ್ಕತ್​ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದು, ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಶಾಲಾ ತರಗತಿ ಈಗಾಗಲೇ ಆರಂಭವಾಗಿದೆ. ಮನೆಯಲ್ಲಿ ಸ್ಮಾರ್ಟ್​ ಇಲ್ಲದ ಕಾರಣ ಈ ಕಳ್ಳತನ ಮಾಡಿದೆ ಎಂದು ಬಾಲಕ ತಿಳಿಸಿದ್ದಾನೆ.

news18-kannada
Updated:September 21, 2020, 9:55 PM IST
ಆನ್ಲೈನ್​ ಕ್ಲಾಸ್​ಗಾಗಿ ಮೊಬೈಲ್ ಕಳ್ಳತನ; ಬಾಲಕನಿಗೆ ಹೊಸ ಫೋನ್​ ಉಡುಗೊರೆ ಕೊಟ್ಟ ಪೊಲೀಸ್
ಪ್ರಾತಿನಿಧಿಕ ಚಿತ್ರ
  • Share this:
ಚೆನ್ನೈ (ಸೆ.21): ಕೋರೊನಾ ಸಂಕಷ್ಟ ಸೃಷ್ಟಿಸಿರುವ ಬಿಕ್ಕಟ್ಟು ಒಂದೆರಡಲ್ಲ. ಉದ್ಯೋಗ ಕಳೆದುಕೊಂಡು ಪರಿತಪಿಸುತ್ತಿರುವ ವರ್ಗ ಒಂದುಕಡೆಯಾದರೆ, ಕಲಿಕೆ ಇಲ್ಲದೇ ಸಂಕಷ್ಟ ಪಡುತ್ತಿರುವ ವಿದ್ಯಾರ್ಥಿಗಳು ಮತ್ತೊಂದು ಕಡೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇನ್ನು ದೇಶದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಈ ಕಾರಣದಿಂದ ತಂತ್ರಜ್ಞಾನದ ಮೊರೆ ಹೋಗಿರುವ ಶಾಲೆಗಳು ವಿದ್ಯಾರ್ಥಿಗಳಿಗಾಗಿ ಆನ್ಲೈನ್​ ತರಗತಿಗಳನ್ನು ಶುರುಮಾಡಿದೆ. ಇದರಿಂದ ಗುಡ್ಡಗಾಡು, ಗ್ರಾಮೀಣ ಪ್ರದೇಶದ ಮಕ್ಕಳು ಒಂದು ಕಡೆಯಾದರೆ, ಮತ್ತೊಂದು ಕಡೆ ಸ್ಮಾರ್ಟ್​ಫೋನ್​ ಇಲ್ಲದೇ ಪರಿತಪಿಸುತ್ತಿರುವ ವಿದ್ಯಾರ್ಥಿಗಳು ಮತ್ತೊಂದುಕಡೆ. ಇಲ್ಲೋಬ್ಬ ವಿದ್ಯಾರ್ಥಿ ಕೂಡ ಸ್ಮಾರ್ಟ್​ಫೋನ್​ ಇಲ್ಲದ ಕಾರಣ ಶಾಲಾ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಮನೆಯಲ್ಲಿನ ಬಡತನದಿಂದ ಅಪ್ಪ-ಅಮ್ಮನಿಗೆ ಮೊಬೈಲ್​ ಕೊಡಿಸಿ ಎಂದು ಹೇಳಲು ಆಗದೆ, ಫೋನ್​ ಕದಿಯಲು ಮುಂದಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

13 ವರ್ಷದ ಹುಡುಗನೊಬ್ಬ ಮೊಬೈಲ್​ ಅಂಗಡಿಯಲ್ಲಿ ಸ್ಮಾರ್ಟ್​ಫೋನ್​ ಕದಿಯುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಬಗ್ಗೆ ಅಂಗಡಿ ಮಾಲೀಕರು ದೂರು ನೀಡಿದ್ದಾರೆ. ಹುಡುಗನನ್ನು ಸೆರೆಹಿಡಿದ ಪೊಲೀಸ್​ ಕಾನ್ಸ್​ಟೇಬಲ್​, ಹುಡುಗನ ಕಥೆಗೆ ಮರುಗಿದ್ದಾರೆ.

ತಂದೆ ಬಿಸ್ಕತ್​ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದು, ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಶಾಲಾ ತರಗತಿ ಈಗಾಗಲೇ ಆರಂಭವಾಗಿದೆ. ಮನೆಯಲ್ಲಿ ಸ್ಮಾರ್ಟ್​ ಇಲ್ಲದ ಕಾರಣ ಈ ಕಳ್ಳತನ ಮಾಡಿದ್ದೇನೆ ಎಂದಿದ್ದಾನೆ.

ಈ ಕಥೆ ಕೇಳಿದ ಪೊಲೀಸ್​ ಬಾಲಕನಿಗೆ ಹೊಸ ಮೊಬೈಲ್​ ಫೋನ್​ ಕೊಡಿಸಿ ಆತನ ಶಿಕ್ಷಣಕ್ಕೆ ನೆರವಾಗಿದ್ದಾರೆ.
Published by: Seema R
First published: September 21, 2020, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading