ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ | ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಎಂಬ ಮಹತ್ತರ ಸಾಲುಗಳಿವೆ. ಗುರುವೇ ದೇವರು, ಅವರಿಂದ ಜೀವನ ಪಾಠಗಳನ್ನು ಕಲಿಯಲು ಸಾಕಷ್ಟು ಇವೆ. ಹೀಗೆ ನಾನಾ ರೀತಿಯ ಮಾತುಗಳನ್ನು ನಾವು ಕೇಳಿಕೊಂಡೇ ಬಂದಿರುತ್ತೇವೆ. ಹೌದು, ಯಾಕೆಂದರೆ ನಮಗೆ ಬುದ್ದಿ ಬರೋದು ಶಾಲೆಗೆ (School) ಹೋಗುವ ಸಮಯದಲ್ಲಿ, ಅದೂ ಕೂಡ ಜೀವನದಲ್ಲಿ ಏನು ಮಾಡಬಾರದು, ಏನು ಮಾಡಬೇಕು ಎಂಬ ಒಂದಷ್ಟು ಪರಿಪಾಠಗಳನ್ನು ಹೇಳಿಕೊಡುತ್ತಾರೆ. ತಾಯಿಯೇ ಮೊದಲ ಗುರು ಎಂಬ ಮಾತಿದೆ. ತಾಯಿಯ ನಂತರ ನಮಗೆ ಶಾಲೆಯಲ್ಲಿ (School) ಹೇಳಿಕೊಡುವ ಪಾಠಗಳು, ಜೀವನದ ಮೌಲ್ಯಶಿಕ್ಷಣ, ತಪ್ಪು ದಾರಿಯಿಂದ ಸರಿದಾರಿಗೆ ನಡೆಯುವ ಹೀಗೆ ನಾನಾ ರೀತಿಯಾದ ಮಾರ್ಗದರ್ಶನಗಳನ್ನು ನಮಗೆ ಶಿಕ್ಷಕರು (Teacher) ಹೇಳಿಕೊಡುತ್ತಾರೆ.
ಇನ್ನೂ ಬೆಳೆಯುತ್ತಾ ಟೀನೇಜ್ಗೆ ಬಂದಾಗ ಪ್ರೀತಿ, ಪ್ರಣಯ, ಕ್ರಶ್ಗಳು ಆಗುವುದಿ ಸಹಜ. ಇದು ತಪ್ಪಲ್ಲ. ಹುಚ್ಚುಕೋಡಿ ಮನಸ್ಸು, ಅದು ಹದಿನಾರನೆ ವಯಸ್ಸು ಎಂಬ ಮಾತಿದೆ. ಇಂತ ಟೀನೇಜ್ ಸಾಲುಗಳನ್ನು ನಾವು ಕೇಳಿದ್ದೇವೆ. 16ನೇ ವಯಸ್ಸನಲ್ಲಿ ಮನಸ್ಸು ಹುಚ್ಚು ಕುದುರೆಯ ಹಾಗೆ ಓಡುತ್ತಾ ಇರುತ್ತದೆ. ಅದಕ್ಕೆ ಲಗಾಮು ಹಾಕಿ ಹಿಡಿದಿಟ್ಟುಕೊಳ್ಳಬೇಕು. ಹಲವಾರು ಬಾರಿ ಶಿಕ್ಷಕರ ಮೇಲೆ ಕ್ರಶ್ ಆಗೋದು ಉಂಟು. ಇಂತಹ ಅನುಭವ ನೂರಾರು ಜನರಿಗೆ ಆಗುತ್ತದೆ.
ಇದನ್ನೂ ಓದಿ: ಇವು ಪ್ರಪಂಚದ ಅತಿ ದೊಡ್ಡ ಗ್ರಂಥಾಲಯಗಳು, ನಿಮಗೆ ಯಾವ ಪುಸ್ತಕ ಬೇಕಿದ್ರೂ ಇಲ್ಲಿ ಸಿಗುತ್ತೆ!
ಇದೀಗ ಒಂದು ಉಲ್ಟ ಕೇಸ್ ಆಗಿದೆ. ಅದುವೇ ಶಿಕ್ಷಕರಿಗೆ ಓರ್ವ ವಿದ್ಯಾಥಿನಿಯ ಮೇಲೆ ಲವ್ ಆಗಿದೆ. ಇದು ವಿಚಿತ್ರ ಅಂತ ಅನಿಸಿದರೂ ಕೂಡ ಸತ್ಯವಾದ ಘಟನೆ. ಈಗಾಗಲೇ ಹಲವಾರು ಬಾರಿ ಶಿಕ್ಷಕರ ಮೇಲೆ ವಿದ್ಯಾರ್ಥಿನಿಯರಿಗೆ ಲವ್ ಆಗಿ ಅದು ಸಕ್ಸಸ್ ಆಗದೇ ಇರೋ ಉದಾಹರಣೆಗಳನ್ನು ಕೇಳಿದ್ದೆವು. ಅದಾಗಿಯೂ, ವಿದ್ಯಾರ್ಥಿ ಜೊತೆಯಲ್ಲಿ ಶಿಕ್ಷಕರು ಮದುವೆ ಆದ ಉದಾಹರಣೆಗಳನ್ನು ನೋಡಿದ್ದೇವೆ. ಇವಗಳನ್ನೆಲ್ಲಾ ಮೀರಿಸಿ ಇದೀಗ ಒಂದು ಅನಾಹುತ ಆಗಿದೆ.
ಏನಿದು ಘಟನೆ?
ಉತ್ತರ ಪ್ರದೇಶದ ಕನ್ನೂಜ್ನಲ್ಲಿ ಸರಕಾರಿ ಶಿಕ್ಷಕರೊಬ್ಬರು 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದು ಪತ್ರದ ಬಗ್ಗೆ ಯಾರಿಗೂ ಹೇಳಬೇಡಿ ಎಂದು ಕೇಳಿದ್ದಾರೆ.
ವರದಿಗಳ ಪ್ರಕಾರ, 47ವರ್ಷದ ಹರಿ ಓಮ್ ಸಿಂಗ್ ಎಂಬ ಶಿಕ್ಷಕರು 13 ವರ್ಷದ ಅಪ್ರಾಪ್ತೆ ಬಾಲಕಿಗೆ ಲವ್ ಲೆಟರ್ ಬರೆದಿದ್ದಾರೆ. ಶಾಲೆಯ ಚಳಿಗಾಲದ ರಜೆಯ ಮೊದಲು ಪತ್ರವನ್ನು ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿರುವ ಪತ್ರದಲ್ಲಿ, "ಶಿಕ್ಷಕನು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಚಳಿಗಾಲದ ರಜೆಯಲ್ಲಿನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಈ ಪತ್ರವನ್ನು ಓದಿ ಹರಿದುಹಾಕು. ಯಾರಿಗೂ ಹೇಳಬೇಡ" ಈ ಎಂದು ಬರೆದಿದ್ದಾರೆ ಎಂದು ಹೇಳಲಾಗಿದೆ. ನಿನಗೆ ಸಾಧ್ಯವಾದಾಗ ತನಗೆ ಕರೆ ಮಾಡುವಂತೆಯೂ ಪತ್ರದಲ್ಲಿ ತಿಳಿಸಿದ್ದಾನೆ.
ಈ ವಿಷಯವು ವಿದ್ಯಾರ್ಥಿಯ ಮನೆಯವರಿಗೆ ತಿಳಿದಿದೆ ಮತ್ತು ಬೆದರಿಕೆಯ ಆರೋಪದ ಮೇಲೆ ಕುಟುಂಬವು ಸದರ್ ಕೊತ್ವಾಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿದ ಕನೌಜ್ ಎಸ್ಪಿ ಕುನ್ವರ್ ಅನುಪಮ್ ಸಿಂಗ್, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ರಾಜ್ಯ ಶಿಕ್ಷಣ ಇಲಾಖೆಯು ವಿಚಾರಣೆ ನಡೆಸಿ ವರದಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಕೇಳಲಾಗಿದೆ. ಸದ್ಯ ಶಿಕ್ಷಕರನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ.
"ಪತ್ರದಲ್ಲಿನ ಕೈಬರಹವನ್ನು ಶಿಕ್ಷಕರ ಕೈಬರಹದೊಂದಿಗೆ ಹೊಂದಿಸಲು ನಾವು ಪೊಲೀಸರಿಗೆ ವಿನಂತಿಸಿದ್ದೇವೆ" ಎಂದು ಮೂಲ ಶಿಕ್ಷಾ ಅಧಿಕಾರಿ ಕೌಸ್ತುಭ್ ಸಿಂಗ್ ಉಲ್ಲೇಖಿಸಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೂಡ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ