ಪೊಲೀಸರ(Police)ನ್ನು ಕಂಡರೇ ಎಲ್ಲರಿಗೂ ಭಯ.. ಪೊಲೀಸ್ ಅವರ ಸಹವಾಸನೇ ಬೇಡ ಗುರೂ ಅಂತ ಅದೆಷ್ಟೋ ಮಂದಿ ಹೇಳಿರುವುದನ್ನು ನಾವು ಕೇಳಿದ್ದೇವೆ. ಏನಾದರೂ ಕಳ್ಳತನವಾದರೂ ಕೆಲವರು ಪೊಲೀಸ್ ಠಾಣೆ(Police Station)ಗೆ ತೆರಳಿ ದೂರು(Complaint) ಕೊಡುವುದಿಲ್ಲ. ಯಾಕ್ ಬೇಕು ಪೊಲೀಸ್ ಅವರ ಸಹವಾಸ. ಯಾರು ಅವರ ಹಿಂದೆ ಪ್ರತಿ ದಿನ ಹೋಗಿ ಕೇಳುತ್ತಾರೆ. ಪೊಲೀಸರು ಬಾಯಿಗೆ ಬಂದ ಹಾಗೇ ಬೈತಾರೆ.. ಕಂಪ್ಲೆಂಟ್ ಕೊಟ್ಟು ಅವರು ಅದನ್ನು ಹುಡುಕಿಕೊಡುವಷ್ಟರಲ್ಲಿ ಕಥೆ ಮುಗಿದಿರುತ್ತೆ. ಅದರ ಬದಲು ಕಳ್ಳತನವಾಗಿದ್ದು ಆಯ್ತು, ಇನ್ನು ಮುಂದೆ ಆದರೂ ಹುಷಾರಾಗಿ ಇರೋಣ ಅನ್ನೋದನ್ನೂ ಕೇಳಿದ್ದೇವೆ. ಮತ್ತೊಂದೆಡೆ ಜನ ಕಳ್ಳತನ(Theft), ಕಿಡ್ನಾಪ್(Kidnap), ಜೀವ ಬೆದರಿಕೆ(Life threatening), ಅಪಘಾತ(Accident), ಮಿಸ್ಸಿಂಗ್(Missing) ಈ ರೀತಿಯ ದೂರುಗಳನ್ನೇ ಹೆಚ್ಚು ನೀಡುವುದನ್ನು ನೋಡಿದ್ದೇವೆ. ಮೊನ್ನೆ ಮೊನ್ನೆ ವ್ಯಕ್ತಿಯೊಬ್ಬ ಎಮ್ಮೆ(Bufelow) ಹಾಲು(Milk) ನೀಡುತ್ತಿಲ್ಲ ಅಂತ ಪೊಲೀಸ್ ಠಾಣೆಗ ಮೆಟ್ಟಿಲೇರಿದ್ದ. ಇದಾದ ಮಾರನೇ ದಿನ ಎಮ್ಮೆ ಹಾಲು ಕೊಡಲು ಶುರು ಮಾಡಿತ್ತು. ಆದರೆ ಇಲ್ಲೊಂದು ಕೇಸ್ ದಾಖಲಾಗಿದೆ. ಆ ಕೇಸ್ ಕಂಡು ಪೊಲೀಸರೇ ಕಕ್ಕಾಬಿಕ್ಕಾಯಾಗಿದ್ದಾರೆ. ಅಷ್ಟಕ್ಕೂ ಏನದು ಕೇಸ್? ಆ ದೂರು ಕೊಟ್ಟವರಾದರೂ ಯಾರೂ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
ಪೆನ್ಸಿಲ್ ಕಳುವಾಗಿದ್ದಕ್ಕೆ ಪೊಲೀಸರಿಗೆ ಬಾಲಕನ ದೂರು!
ಹೌದು, ಕರ್ನೂಲ್ನಲ್ಲಿ ಇಂತಹ ವಿಚಿತ್ರ ದೂರು ದಾಖಲಾಗಿದೆ. 3ನೇ ಕ್ಲಾಸ್ ಬಾಲಕನೊಬ್ಬ ತನ್ನ ಪೆನ್ಸಿಲ್ ಕದ್ದಿದ್ದಕ್ಕೆ ತನ್ನ ಸ್ನೇಹಿತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಇದನ್ನು ಕೇಳಿದರೆ ನಿಮಗೆ ನಗು ಬರಬಹುದು, ಆದರೂ ಇದು ಸತ್ಯ. ಮೂರನೇ ತರಗತಿಯ ಬಾಲಕ ಹನುಮಂತು ತನ್ನ ಪೆನ್ಸಿಲ್ ಕಳ್ಳತನದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾನೆ.ಕರ್ನೂಲು ಜಿಲ್ಲೆಯ ಪೆದ್ದಕಡಬೂರು ಮೂಲದ ವಿದ್ಯಾರ್ಥಿನಿ ಖಾಸಗಿ ಶಾಲೆಯಲ್ಲಿ ಹನುಮಂತು ಓದುತ್ತಿದ್ದಾನೆ. ಹೀಗೇ ಏಕಾಏಕಿ ಈ ಬಾಲಕ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವಂತೆ ಒತ್ತಾಯಿಸಿದ್ದನ್ನು ಕಂಡು ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದರು. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಸ್ನೇಹಿತನನ್ನ ಹಿಡಿದು ಸ್ಟೇಷನ್ಗೆ ಹೋಗಿದ್ದ ಹನುಮಂತು
ಹನುಮಂತು ಮನೆಯ ಪಕ್ಕದ ಮನೆಯ ಸ್ನೇಹಿತ ಮತ್ತು ಸಹಪಾಠಿ ಒಂದೇ ಹೆಸರಿನ ಹನುಮಂತು ಮೇಲೆ ಪೆನ್ಸಿಲ್ ಕದ್ದ ಆರೋಪವಿತ್ತು. ಪ್ರತಿದಿನ ತನ್ನ ಪೆನ್ಸಿಲ್ ಮತ್ತು ಕೆಲವೊಮ್ಮೆ ಹಣವನ್ನು ಸಹ ಕದಿಯುತ್ತಿದ್ದ ಎಂದು ಹನುಮಂತು ಆರೋಪಿಸಿದ್ದಾನೆ. ಆತನನ್ನು ತನ್ನ ಸ್ನೇಹಿತರ ಸಹಾಯದಿಂದ ಕಳ್ಳನನ್ನು ಹಿಡಿದು ಠಾಣೆಗೆ ಕರೆದೊಯ್ದು ತನ್ನ ಪೆನ್ಸಿಲ್ಗಳು ಹೇಗೆ ಕಾಣೆಯಾಗಿದೆ ಎಂದು ಕಾನ್ಸ್ಟೆಬಲ್ಗೆ ವಿವರಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾನೆ . ಇದನ್ನು ಕೇಳುತ್ತಿದ್ದಂತೆ ಠಾಣೆಯಲ್ಲಿದ್ದ ಪೊಲೀಸರು ನಗೆಗಡಲಲ್ಲಿ ತೇಲಿದ್ದಾಲರೆ. ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ : ವರ ಅಂದ್ರೆ ಹೀಗಿರಬೇಕು: ವೈರಲ್ ಆಗ್ತಿರೋ ಮುದ್ದಾದ ವಿಡಿಯೋ ನೀವೂ ನೋಡಿ
ಇಬ್ಬರಿಗೂ ರಾಜಿ ಮಾಡಿ ಕಳಿಸಿದ ಪೊಲೀಸರು
ಪ್ರಕರಣ ದಾಖಲಿಸಿದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಪೋಷಕರನ್ನು ಠಾಣೆಗೆ ಕರೆತರುವಂತೆ ಕಾನ್ಸ್ಟೆಬಲ್ ತಮಾಷೆಯಾಗಿ ಗದರಿಸಿದ್ದಾರೆ. ಇದನ್ನು ಕೇಳಿ ಇಬ್ಬರು ಹನುಮಂತರಿಗೆ ಗಾಬರಿಯಾಗಿದೆ. ಪೆನ್ಸಿಲ್ ಕದಿಯುತ್ತಿದ್ದವನಿಗೆ ಪೊಲೀಸರು ಮತ್ತೆ ಹೀಗೆ ಕಳ್ಳತನ ಮಾಡದಂತೆ ಪಾಠ ಮಾಡಿದ್ದಾರೆ. ಇಬ್ಬರಿಗೂ ರಾಜಿ ಮಾಡಿಸಿದ್ದಾರೆ. ಬಳಿಕ ಇಬ್ಬರೂ ಚೆನ್ನಾಗಿ ಓದುವಂತೆ ಸೂಚಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಈ ಘಟನೆ ನಡೆದಿದ್ದು. ಈಗ ಎಲ್ಲಡೆ ವೈರಲ್ ಆಗುತ್ತಿದೆ
ಇದನ್ನು ಓದಿ : ಕೊರೊನಾ ಭಯವಿಲ್ಲದೇ ತಿನ್ನಿ ಪಾನಿಪುರಿ: ಹೊಸ ಮಷೀನ್ ಗೆ ಆಹಾರ ಪ್ರಿಯರು ಫುಲ್ ಖುಷ್
ಈ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪೊಲೀಸ್ ಠಾಣೆಗೆ ಆಗಾಗ ಭೇಟಿ ನೀಡುತ್ತಿದ್ದು, ಪೊಲೀಸರು ಸಹ ವಿದ್ಯಾರ್ಥಿಗಳೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರಂತೆ. ಜನರೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಕಾಯ್ದುಕೊಂಡಿದ್ದಕ್ಕಾಗಿ 2020 ರಲ್ಲಿ ಈ ಪೊಲೀಸ್ ಠಾಣೆ ಪ್ರಶಸ್ತಿಯನ್ನು ಸಹ ಗೆದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ