• Home
  • »
  • News
  • »
  • trend
  • »
  • Viral Video: ಸ್ನೇಹಿತರ ಮುಂದೆ ಮ್ಯಾಜಿಕ್ ಮಾಡಿ ತೋರಿಸಿದ ಶಾಲಾ ಬಾಲಕ! ಫುಲ್ ವೈರಲ್ ಆಯ್ತು ವಿಡಿಯೋ

Viral Video: ಸ್ನೇಹಿತರ ಮುಂದೆ ಮ್ಯಾಜಿಕ್ ಮಾಡಿ ತೋರಿಸಿದ ಶಾಲಾ ಬಾಲಕ! ಫುಲ್ ವೈರಲ್ ಆಯ್ತು ವಿಡಿಯೋ

ಸ್ನೇಹಿತರ ಮುಂದೆ ಮ್ಯಾಜಿಕ್ ಮಾಡಿ ತೋರಿಸಿದ ಶಾಲಾ ಬಾಲಕ

ಸ್ನೇಹಿತರ ಮುಂದೆ ಮ್ಯಾಜಿಕ್ ಮಾಡಿ ತೋರಿಸಿದ ಶಾಲಾ ಬಾಲಕ

ಒಂದು ಮ್ಯಾಜಿಕ್ ಶೋ ವಿಡಿಯೋ ವೊಂದು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾಗಿದೆ ನೋಡಿ. ಈ ವಿಡಿಯೋ ಇಷ್ಟೊಂದು ವೈರಲ್ ಆಗಲು ಬಹುಶಃ ಇದೇ ಕಾರಣವಿರಬಹುದು ಅನ್ನಿಸುತ್ತದೆ. ಇದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ ಸೇರಿದಂತೆ ಅನೇಕರನ್ನು ಕುತೂಹಲಕ್ಕೀಡು ಮಾಡಿದ ಮ್ಯಾಜಿಕ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮುಂದೆ ಓದಿ ...
  • Share this:

ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ (School) ನಮಗೆ ಮನೋರಂಜನೆ ಸಿಗಲಿ ಎಂಬ ಉದ್ದೇಶದಿಂದ ಶಾಲಾ ಮಂಡಳಿಯವರು ಶಾಲೆಯಲ್ಲಿ ಮ್ಯಾಜಿಕ್ ಶೋ (Magic Show) ಗಳನ್ನು ಏರ್ಪಡಿಸುತ್ತಿದ್ದರು. ಅಲ್ಲಿ ಜಾದೂಗಾರನೊಬ್ಬ (magician) ಬಂದು ನಮಗೆ ಅನೇಕ ರೀತಿಯ ಜಾದೂಗಳನ್ನು ತೋರಿಸಿ ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ವಿಭಿನ್ನವಾದ ಜಾದೂಗಳನ್ನು ನೋಡಿ ನಮಗೆ ‘ಅರೇ ವ್ಹಾ.. ಕೈಯ ಮುಷ್ಟಿಯಲ್ಲಿ ಇರಿಸಿಕೊಂಡ ವಸ್ತು ಕೈಯನ್ನು ಒಮ್ಮೆ ಮುಚ್ಚಿ ಕೆಲವು ಸೆಕೆಂಡುಗಳ ನಂತರ ಅದನ್ನು ತೆಗೆದರೆ ಅಲ್ಲಿರುವ ವಸ್ತು ಅಲ್ಲಿಂದ ಮಾಯಾವಾಗಿ ಬಿಡುತ್ತದೆ. ಹೇಗೆ ಮಾಡುತ್ತಾರೆ ಇದೆಲ್ಲಾ’ ಅಂತ ನಮಗೆ ಅನ್ನಿಸಿಯೇ ಇರುತ್ತದೆ.


ಇಷ್ಟೇ ಅಲ್ಲದೆ ನಾವು ಅವರ ಬಳಿ ಈ ಜಾದೂಗಳನ್ನು ಹೇಗೆ ಮಾಡಿದ್ದೀರಿ, ಏನಿದರ ಹಿಂದಿನ ಗುಟ್ಟು ಅಂತ ಅವರನ್ನು ಕೇಳಿಯೂ ಇರುತ್ತೇವೆ. ಹೌದು.. ಆಗಿನ ದಿನಗಳಲ್ಲಿ ಈ ಮ್ಯಾಜಿಕ್ ಮಾಡುವವರ ಶೋ ಗಳು ಎಂದರೆ ಮಕ್ಕಳಿಗೆಲ್ಲಾ ತುಂಬಾನೇ ಅಚ್ಚುಮೆಚ್ಚು ಆಗಿದ್ದವು.


ಶಾಲೆಗಳಲ್ಲಿ ಮ್ಯಾಜಿಕ್ ಶೋ  ಆಯೋಜನೆ
ಇತ್ತೀಚಿನ ದಿನಗಳಲ್ಲಿ ಈ ನಗರ ಪ್ರದೇಶಗಳಲ್ಲಿ ಮ್ಯಾಜಿಕ್ ಶೋ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕಡಿಮೆ ಆಗಿರಬಹುದು. ಆದರೆ ಹಳ್ಳಿಗಳಿಗೆ ಹೋದರೆ ಇನ್ನೂ ಈ ಮ್ಯಾಜಿಕ್ ಶೋ ಗಳನ್ನು ಶಾಲೆಗಳಲ್ಲಿ ಆಯೋಜಿಸುತ್ತಾರೆ.


ಪುಟ್ಟ ಬಾಲಕನಿಂದ ಮ್ಯಾಜಿಕ್ ಶೋ
ಒಟ್ಟಿನಲ್ಲಿ ಹೇಳುವುದಾದರೆ, ನೀವು ಯಾವುದೇ ವಯಸ್ಸಿನವರಾದರೂ ಸರಿಯೇ ಈ ಮ್ಯಾಜಿಕ್ ತಂತ್ರಗಳು ಸಾಮಾನ್ಯವಾಗಿ ಹೆಚ್ಚಿನ ಜನರನ್ನು ಪ್ರಭಾವಿಸುತ್ತವೆ. ಅದೇ ಇಂತಹ ಮ್ಯಾಜಿಕ್ ಗಳನ್ನು ಒಬ್ಬ ನುರಿತ ಜಾದೂಗಾರನು ಮಾಡಲಾರದೇ ಒಬ್ಬ ಶಾಲೆಗೆ ಹೋಗುವ ಪುಟ್ಟ ಬಾಲಕ ಮಾಡಿದರೆ ಹೇಗಿರುತ್ತೆ ಗೊತ್ತೇ? ಪುಟ್ಟ ಬಾಲಕನೊಬ್ಬ ಇಂತಹ ಮ್ಯಾಜಿಕ್ ಗಳನ್ನು ಮಾಡಿದರೆ ನೋಡುವ ಕಣ್ಣುಗಳಿಗೆ ಇನ್ನಷ್ಟು ಹೆಚ್ಚು ಆನಂದವಾಗುತ್ತದೆ ಎಂದು ಹೇಳಬಹುದು.


ಇದನ್ನೂ ಓದಿ: Van life: ವ್ಯಾನ್ ಅನ್ನು ಮನೆಯನ್ನಾಗಿಸಿ ಜೀವನ ಸಾಗಿಸುತ್ತಿದ್ದಾಳೆ 35 ವರ್ಷದ ಈ ಮಹಿಳೆ!


ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಯ್ತು ವಿಡಿಯೋ
ಇಂತಹದೇ ಒಂದು ಮ್ಯಾಜಿಕ್ ಶೋ ವಿಡಿಯೋ ವೊಂದು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾಗಿದೆ ನೋಡಿ. ಈ ವಿಡಿಯೋ ಇಷ್ಟೊಂದು ವೈರಲ್ ಆಗಲು ಬಹುಶಃ ಇದೇ ಕಾರಣವಿರಬಹುದು ಅನ್ನಿಸುತ್ತದೆ. ಇದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ ಸೇರಿದಂತೆ ಅನೇಕರನ್ನು ಕುತೂಹಲಕ್ಕೀಡು ಮಾಡಿದ ಮ್ಯಾಜಿಕ್ ಅಂತ ಹೇಳಿದರೆ ತಪ್ಪಾಗುವುದಿಲ್ಲ. ವಿಡಿಯೋ ದಲ್ಲಿ ಈ ಶಾಲಾ ಬಾಲಕ ತೋರಿಸುತ್ತಿರುವ ಮ್ಯಾಜಿಕ್ ಎಲ್ಲರನ್ನು ಬೆರಗುಗೊಳಿಸಿದೆ ಎಂದು ಹೇಳಬಹುದು.


ಈ ವಿಡಿಯೋದಲ್ಲಿ ಏನಿದೆ?
ವಿಡಿಯೋ ದ ಆರಂಭದಲ್ಲಿ ಶಾಲಾ ಬಾಲಕನೊಬ್ಬ ತನ್ನ ಸ್ನೇಹಿತರ ನಡುವೆ ನಿಂತಿರುವುದನ್ನು ನೋಡಬಹುದು. ನಂತರ ಆ ಬಾಲಕ ತನ್ನ ಕೈಯಲ್ಲಿ ಸಣ್ಣ ಚೆಂಡುಗಳಂತೆ ಕಾಣುವ ಎರಡು ಸಣ್ಣ ವಸ್ತುಗಳನ್ನು ಹಿಡಿದಿರುವುದು ಕಂಡು ಬರುತ್ತದೆ. ನಂತರ ಅವನು ತನ್ನ ಮ್ಯಾಜಿಕ್ ತಂತ್ರವನ್ನು ಒಂದಲ್ಲ, ಎರಡು ಬಾರಿ ತೋರಿಸುವುದರೊಂದಿಗೆ ಅಲ್ಲಿದ್ದವರನ್ನು ಬೆರಗುಗೊಳಿಸುತ್ತಾನೆ. ಈ ಬಾಲಕ ತೋರಿಸುವ ಮ್ಯಾಜಿಕ್ ನೀವು ಒಮ್ಮೆ ನೋಡಿ, ಇದು ನಿಮ್ಮನ್ನು ಸಹ ದಿಗ್ಭ್ರಮೆಗೊಳಿಸುವ ಸಾಧ್ಯತೆಯಿದೆ.

View this post on Instagram


A post shared by Sahil Saifi (@sahil.aazam)
125 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ ವಿಡಿಯೋ
ಈ ವಿಡಿಯೋ ವನ್ನು ಜೂನ್ 9 ರಂದು ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ಈ ಕ್ಲಿಪ್ 125 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 56 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಈ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ಹೇಳಬಹುದು. ಈ ವಿಡಿಯೋ ವು ಜನರನ್ನು ವಿವಿಧ ಕಾಮೆಂಟ್ ಗಳನ್ನು ಹಂಚಿಕೊಳ್ಳಲು ಸಹ ಪ್ರೇರೇಪಿಸಿದೆ.


ಇದನ್ನೂ ಓದಿ:  Veena-Vani Twins: ಅಪರೂಪದ ಸಾಧನೆ ಮಾಡಿದ ಹೈದ್ರಾಬಾದ್​​ನ ಸಯಾಮಿ ಅವಳಿ ಸೋದರಿಯರು


ಈ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು "ಉತ್ತಮ ವೇಗ" ಎಂದು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಕಾಮೆಂಟ್ ಮಾಡಿದ್ದಾರೆ. "ಇದು ವೇಗದ ಮಾಂತ್ರಿಕತೆ" ಎಂದು ಇನ್ನೊಬ್ಬರು ಹಂಚಿಕೊಂಡರು. "ಒಳ್ಳೆಯ ವೇಗ... ಅವನು 18 ವರ್ಷ ತುಂಬಿದಾಗ ಅವನ ಸಾಮರ್ಥ್ಯ ಹೇಗಿರಬಹುದು ಎಂಬುದು ನನಗೆ ತಿಳಿದಿಲ್ಲ. ಅಭಿನಂದನೆಗಳು" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

Published by:Ashwini Prabhu
First published: