• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Motivational Story: 6ನೇ ಕ್ಲಾಸಲ್ಲಿ ಸ್ಕೂಲ್​​ ಬಿಟ್ಟವನು ಈಗ ಕಂಪನಿಯೊಂದರ ಸಿಇಒ; ಇದೆಲ್ಲಾ ಹೇಗೆ ಸಾಧ್ಯ ಆಯ್ತು?

Motivational Story: 6ನೇ ಕ್ಲಾಸಲ್ಲಿ ಸ್ಕೂಲ್​​ ಬಿಟ್ಟವನು ಈಗ ಕಂಪನಿಯೊಂದರ ಸಿಇಒ; ಇದೆಲ್ಲಾ ಹೇಗೆ ಸಾಧ್ಯ ಆಯ್ತು?

ಮುಸ್ತಫಾ

ಮುಸ್ತಫಾ

ಕೇರಳದ ದೂರದ ಹಳ್ಳಿಯ ದಿನಗೂಲಿ ಕೆಲಸಗಾರನ ಮಗನಾದ ಮುಸ್ತಫಾ ಪಿ.ಸಿ. 6ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ನಂತರ ಶಾಲೆಯಿಂದ ಹೊರಗುಳಿಯಲು ನಿರ್ಧರಿಸಿದರು. ಅಲ್ಲದೆ, ತಂದೆಯ ಜತೆ ಜಮೀನಿನಲ್ಲಿ ಕೆಲಸ ಮಾಡುವ ನಿರ್ಧಾರ ಮಾಡಿದ್ದರು. ಅದೇ ವ್ಯಕ್ತಿ ಈಗ ವರ್ಷಗಳ ನಂತರ, ಐಡಿ (iD) ಫ್ರೆಶ್ ಫುಡ್‌ನ ಸಿಇಒ ಆಗಿದ್ದಾರೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತಿದೆ. ಒಂದು ಗುರಿಯ ಕಡೆಗೆ ನಮ್ಮ ಗಮನವಿದ್ದರೆ ಅದು ಎಷ್ಟು ಕಷ್ಟವಾದರೂ ಸಹ ಏಕಾಗ್ರತೆಯಿಂದ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ ಆ ಗುರಿಯನ್ನು ತಲುಪಬಹುದು. ಅದೇ ರೀತಿ, ಸರಿಯಾಗಿ ಓದದ ಹಾಗೂ ಅವಿದ್ಯಾವಂತರೂ ಸಹ ಕಷ್ಟಪಟ್ಟು ದುಡಿದರೆ ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೂ ಹಲವು ಸಾಕ್ಷಿಗಳಿದ್ದಾರೆ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ಕೇರಳದ ದೂರದ ಹಳ್ಳಿಯ ದಿನಗೂಲಿ ಕೆಲಸಗಾರನ ಮಗನಾದ ಮುಸ್ತಫಾ ಪಿ.ಸಿ. 6ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ನಂತರ ಶಾಲೆಯಿಂದ ಹೊರಗುಳಿಯಲು ನಿರ್ಧರಿಸಿದರು. ಅಲ್ಲದೆ, ತಂದೆಯ ಜತೆ ಜಮೀನಿನಲ್ಲಿ ಕೆಲಸ ಮಾಡುವ ನಿರ್ಧಾರ ಮಾಡಿದ್ದರು. ಅದೇ ವ್ಯಕ್ತಿ ಈಗ ವರ್ಷಗಳ ನಂತರ, ಐಡಿ (iD) ಫ್ರೆಶ್ ಫುಡ್‌ನ ಸಿಇಒ ಆಗಿದ್ದಾರೆ. ಹ್ಯೂಮನ್ಸ್ ಆಫ್ ಬಾಂಬೆಗೆ ಅವರು ಇತ್ತೀಚೆಗೆ ಸಂದರ್ಶನ ನೀಡಿದ್ದು, ಆ ಸಂದರ್ಶನದ ಆಯ್ದ ಭಾಗ ಇಲ್ಲಿದೆ ನೋಡಿ..


ಮುಸ್ತಫಾ, ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ “ನನ್ನ ಶಿಕ್ಷಕರು ಶಾಲೆಗೆ ಮರಳಲು ನನಗೆ ಮನವರಿಕೆ ಮಾಡಿದರು: ಅಲ್ಲದೆ, ಅವರು ನನಗೆ ಉಚಿತವಾಗಿ ಬೋಧಿಸಿದರು. ಅವರ ಕಾರಣದಿಂದಾಗಿ, ನಾನು ನನ್ನ ತರಗತಿಯಲ್ಲಿ ಗಣಿತದಲ್ಲಿ ಅಗ್ರಸ್ಥಾನ ಪಡೆದಿದ್ದೆ. ಅದು ನನ್ನನ್ನು ಕಷ್ಟಪಟ್ಟು ಅಧ್ಯಯನ ಮಾಡಲು ಪ್ರೇರೇಪಿಸಿತು ಮತ್ತು ನಾನು ಶಾಲೆಯ ಟಾಪರ್ ಆಗಿದ್ದೆ. ನಂತರ ನನ್ನ ಶಿಕ್ಷಕರು ಒಟ್ಟಾಗಿ ಬಂದು ನನ್ನ ಕಾಲೇಜು ಶುಲ್ಕವನ್ನು ಪಾವತಿಸಿದರು'' ಎಂದು ತನ್ನ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


ಮುಸ್ತಫಾ ಭಾರತದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರು. ಅಲ್ಲಿ, ಅವರು ತನ್ನ ತಂದೆಯ ಸಾಲವನ್ನು ಕೇವಲ 2 ತಿಂಗಳಲ್ಲಿ ತೀರಿಸಲು ಸಾಕಷ್ಟು ಸಂಪಾದಿಸಿದರು. ಉತ್ತಮ ಸಂಬಳದ ಕೆಲಸದ ಹೊರತಾಗಿಯೂ, ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರು. ಈ ಹಿನ್ನೆಲೆ ಕಳಪೆ ಗುಣಮಟ್ಟದ ಇಡ್ಲಿ-ದೋಸೆ ಹಿಟ್ಟಿನ ಬಗ್ಗೆ ಗ್ರಾಹಕರು ದೂರು ನೀಡಿದ ನಂತರ ಆತನ ಸೋದರಸಂಬಂಧಿಯೊಬ್ಬರು ಉತ್ತಮ ಗುಣಮಟ್ಟದ ಇಡ್ಲಿ-ದೋಸೆ ಹಿಟ್ಟಿನ ಕಂಪನಿ ಆರಂಭಿಸುವ ಐಡಿಯಾ ನೀಡಿದರು. ಅವರು ಕಂಪನಿಯಲ್ಲಿ ಆರಂಭದಲ್ಲಿ 50,000 ರೂ. ಹೂಡಿಕೆ ಮಾಡಿದರು ಮತ್ತು ಅವರ ಸೋದರಸಂಬಂಧಿಗಳು ಅದನ್ನು ನಡೆಸಲು ಅವಕಾಶ ನೀಡಿದರು ಎಂಬುದನ್ನೂ ತನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಉದ್ಯಮಿ ಮುಸ್ತಫಾ.


ಆದರೂ, ಮೂರು ವರ್ಷಗಳ ನಂತರ ಅವರು ತನ್ನ ಪೂರ್ಣ ಸಮಯವನ್ನು ಕಂಪನಿಯಲ್ಲಿ ಹೂಡಿಕೆ ಮಾಡಬೇಕೆಂದು ಅರಿತುಕೊಂಡರು. ಆದ್ದರಿಂದ ಅವರು ತನ್ನ ಕೆಲಸ ಬಿಟ್ಟು ಭಾರತಕ್ಕೆ ಮರಳಿದರು. ಅಲ್ಲದೆ, ಈ ಕಂಪನಿ ನನ್ನ ಕೈ ಹಿಡಿಯದಿದ್ದರೆ ಬೇರೆ ಒಳ್ಳೆಯ ಕೆಲಸ ಹುಡುಕುತ್ತೇನೆಂದು ಅವರು ತನ್ನ ಹೆತ್ತವರಿಗೆ ಭರವಸೆ ನೀಡಿದರು. ಇನ್ನು, ಕಂಪನಿ ನಡೆಸೋದು ಅಷ್ಟು ಸುಲಭನಾ..? ಕಷ್ಟ ಪಡಲೇಬೇಕಲ್ವ. ಅದೇ ರೀತಿ, ಅವರಿಗೂ ಕಂಪನಿಯ ಕೆಲಸ ಅಷ್ಟು ಸುಲಭವಾಗಿರಲಿಲ್ಲ ಮತ್ತು ಅವರು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು.


ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗದ ದಿನಗಳು ಇದ್ದವು ಎಂಬುದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡರು ಮುಸ್ತಫಾ. ಆದರೆ ಕಂಪನಿಯು ಯಶಸ್ವಿಯಾದ ನಂತರ ಎಲ್ಲ 25 ಜನ ಉದ್ಯೋಗಿಗಳನ್ನು ಮಿಲಿಯನೇರ್‌ಗಳನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದ್ದೆ ಹಾಗೂ ಕಂಪನಿಯ ಷೇರುಗಳನ್ನು ನೀಡಿದ್ದೆ. ಎಂಟು ವರ್ಷಗಳ ಹೋರಾಟದ ನಂತರ, ಅವರು ಹೂಡಿಕೆದಾರರನ್ನು ಕಂಡುಕೊಂಡರು ಮತ್ತು ಐಡಿ ಫ್ರೆಶ್ ಫುಡ್ 2000 ಕೋಟಿ ರೂ. ಮೌಲ್ಯದ ಕಂಪನಿ ಎನಿಸಿಕೊಂಡಿದೆ. ಈ ಮೂಲಕ ಉದ್ಯೋಗಿಗಳಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಮುಸ್ತಫಾ.


ಈಗ ಉದ್ಯಮಿ ಮುಸ್ತಫಾ ತನ್ನ ಯಶಸ್ಸಿಗೆ ಸ್ಪೂರ್ತಿ ತನ್ನ ಶಿಕ್ಷಕರೆಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟು ವರ್ಷಗಳ ಹಿಂದೆ ಎಂದಿಗೂ ಬಿಟ್ಟುಕೊಡದಂತೆ ಸ್ಫೂರ್ತಿ ನೀಡಿದ ಎಲ್ಲಾ ಶಿಕ್ಷಕರೂ ಈ ಯಶಸ್ಸಿಗೆ ಕಾರಣ. ಆದರೆ, ಅವರು ನನ್ನ ಯಶಸ್ಸನ್ನು ನೋಡದ್ದಕ್ಕೆ ತನ್ನ ಬಗ್ಗೆ ಪಶ್ಚಾತಾಪವನ್ನೂ ಪಟ್ಟರು ಮುಸ್ತಫಾ. "ನಾನು ನನ್ನ ಯಶಸ್ಸನ್ನು ನನ್ನ ಶಿಕ್ಷಕರೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ, ಆದರೆ ನಾನು ಮನೆಗೆ ಹಿಂದಿರುಗಿದಾಗ, ಅವರು ತೀರಿಕೊಂಡರೆಂದು ನನಗೆ ತಿಳಿಯಿತು. ನಾನು ಎದೆಗುಂದಿದ್ದೆ ಮತ್ತು ಯೋಚಿಸಿದೆ, ‘ಒಬ್ಬ ಕಾರ್ಮಿಕ ತನ್ನಿಂದ ಏನನ್ನು ಸಾಧಿಸಿದನೆಂದು ಸರ್ ನೋಡಿದ್ದರೆ!’ಈಗ, ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಅವರ ಪರಂಪರೆಯನ್ನು ಗೌರವಿಸಲು, ಅವರ ಬಗ್ಗೆ ಮಾತನಾಡುತ್ತೇನೆ'' ಎಂದೂ ಹ್ಯೂಮನ್ಸ್ ಆಫ್‌ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಮುಸ್ತಫಾ ಹೇಳಿದ್ದಾರೆ.


2018ರಲ್ಲಿ ಹಾರ್ವರ್ಡ್‌ನಲ್ಲಿ ಮಾತನಾಡಲು ಆಹ್ವಾನಿಸಿದಾಗ ಮುಸ್ತಫಾ, ತಮ್ಮ ತಂದೆ ಮತ್ತು ಶಿಕ್ಷಕರಿಗೆ ಧನ್ಯವಾದ ಅರ್ಪಿಸಿದರು.


  


Published by:Latha CG
First published: