VIRAL VIDEO: ನಾಮಫಲಕ ಉದ್ಘಾಟನೆ ವೇಳೆ ಕೂದಲೆಳೆ ಅಂತರದಿಂದ ಪಾರಾದ ರಿಚರ್ಡ್​

ರಿಚರ್ಡ್​ ಪ್ಲೋರಿಡಾದ ಮಿಯಾಮಿಯಲ್ಲಿ ವರ್ಜಿನ್​ ಕಂಪೆನಿಯ ಮುಖ್ಯ ಕಾರ್ಯಾಲಯವನ್ನು ಪ್ರಾರಂಭಿಸಿದ್ದು, ಕಂಪೆನಿಯ ನಾಮಫಲಕದ ಉದ್ಘಾಟನೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ.

news18
Updated:April 23, 2019, 10:08 PM IST
VIRAL VIDEO: ನಾಮಫಲಕ ಉದ್ಘಾಟನೆ ವೇಳೆ ಕೂದಲೆಳೆ ಅಂತರದಿಂದ ಪಾರಾದ ರಿಚರ್ಡ್​
ರಿಚರ್ಡ್​ ಬ್ರಾನ್ಸನ್
  • News18
  • Last Updated: April 23, 2019, 10:08 PM IST
  • Share this:
ಬಿಲಿಯನೆರ್​​, ಲೇಖಕ ಹಾಗೂ ವರ್ಜಿನ್​​ ಕಂಪನಿಯ ಸಂಸ್ಥಾಪಕ ರಿಚರ್ಡ್​ ಬ್ರಾನ್ಸನ್​ ಕೂದಲೆಳೆ ಅಂತರದಲ್ಲಿ ದೊಡ್ಡ ಅವಘಡದಿಂದ ಪಾರಾಗಿದ್ದಾರೆ. ತಮ್ಮದೇ ಆದ ವರ್ಜಿನ್​ ಮಿಯಾಮಿ ಮುಖ್ಯ ಕಾರ್ಯಾಲಯದ ನಾಮಫಲಕ​ ಉದ್ಘಾಟನೆ ವೇಳೆ ಮೆಟಲ್​ ಬಾರ್​ ಉರುಳಿಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಇದೀಗ ಪ್ರಾಣಪಾಯದಿಂದ ಪಾರಾದ ವಿಡಿಯೋವನ್ನು ರಿಚರ್ಡ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದು, ಅರ್ಧಗಂಟೆಯಲ್ಲಿ 9,000 ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ.

ರಿಚರ್ಡ್​ ಪ್ಲೋರಿಡಾದ ಮಿಯಾಮಿಯಲ್ಲಿ ವರ್ಜಿನ್​ ಕಂಪೆನಿಯ ಮುಖ್ಯ ಕಾರ್ಯಾಲಯವನ್ನು ಪ್ರಾರಂಭಿಸಿದ್ದು, ಕಂಪೆನಿಯ ನಾಮಫಲಕದ ಉದ್ಘಾಟನೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ.ಕಂಪೆನಿಯ ನಾಮಫಲಕಕ್ಕೆ ಕಟ್ಟಲಾಗಿದ್ದ ಬ್ಯಾನರ್ ಓಪನ್​ ಮಾಡಿ ಉದ್ಘಾಟನೆ ಮಾಡಲು ರಿಚರ್ಡ್​ ಮುಂದಾಗಿದ್ದರು. ಬ್ಯಾನರ್​ಗೆ ಸಪೋರ್ಟ್​ ಆಗಿದ್ದ ಹಗ್ಗವನ್ನು ಹಿಡಿದುಕೊಂಡು ಬಿಡುವ ವೇಳೆ ಬ್ಯಾನರ್​ ಜೊತೆಗಿದ್ದ ಮೆಟಲ್​ ಬಾರ್​ ಸಮೇತ ಕೆಳಗೆ ಬಿದ್ದಿದೆ. ಈ ಘಟನೆಯ ಕುರಿತು ರಿಚರ್ಡ್​ ತಮ್ಮ ಟ್ಟಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು,  ಮೆಟಲ್​ ಬಾರ್​ ಸಿಲುಕಿಕೊಂಡಿರುವುದರಿಂದ ಪಾರಾದೆ ಎಂದು ಬರೆದುಕೊಂಡಿದ್ದಾರೆ.
First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ