SBI ಪಿಂಚಣಿದಾರರು Life Certificate ಅನ್ನು ವಿಡಿಯೋ ಕಾಲ್ ಮೂಲಕವೂ ತಲುಪಿಸಬಹುದು..! ಇಲ್ಲಿದೆ ಮಾಹಿತಿ

ಪಿಂಚಣಿದಾರರು ಬ್ಯಾಂಕ್, ಅಂಚೆ ಕಚೇರಿ, ಮನೆ ಬಾಗಿಲಿಗೆ ಸೇವೆ ಪಡೆಯುವ ಮೂಲಕ ಅಥವಾ ಜೀವನ್ ಪ್ರಮಾಣ್ ಪೋರ್ಟಲ್‍ಗೆ ಭೇಟಿ ನೀಡುವ ಮೂಲಕ ತಮ್ಮ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India-SBI) ಭಾರತದ ಮೊದಲ ವಿಡಿಯೋ ಲೈಫ್ ಸರ್ಟಿಫಿಕೇಟ್ (Video Life Certificate- VLC) ಸೇವೆಯನ್ನು 1 ನವೆಂಬರ್ 2021ರಂದು ಪ್ರಾರಂಭಿಸಲು ಸಜ್ಜಾಗಿದೆ. ಇದು ಪಿಂಚಣಿದಾರರು ತಮ್ಮ ಮನೆಯಿಂದ ವಿಡಿಯೋ ಕರೆ ಮೂಲಕ ತಮ್ಮ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ. “ಈಗ ನಿಮ್ಮ #ಲೈಫ್ ಸರ್ಟಿಫಿಕೇಟ್ ಅನ್ನು ನಿಮ್ಮ ಮನೆಯಿಂದಲೇ ಸಲ್ಲಿಸಿ! ನಮ್ಮ #VideoLifeCertificate ಸೇವೆಯು 1ನೇ ನವೆಂಬರ್ 2021ರಂದು ಪ್ರಾರಂಭವಾಗಲಿದ್ದು, ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರಗಳನ್ನು ವಿಡಿಯೋ ಕರೆ ಮೂಲಕ ಸುಲಭವಾಗಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪಿಂಚಣಿ ಪಡೆಯುವುದನ್ನು ಮುಂದುವರಿಸಲು, ಪ್ರತಿ ಸರ್ಕಾರಿ ಪಿಂಚಣಿದಾರರು ನವೆಂಬರ್‌ನಲ್ಲಿ ವಾರ್ಷಿಕ ಜೀವನ ಪ್ರಮಾಣಪತ್ರ ಸಲ್ಲಿಸಬೇಕು. ಸುಮಾರು 1-ನಿಮಿಷದ ವಿಡಿಯೋ ಹಂಚಿಕೊಳ್ಳುವ ಮೂಲಕ, ಎಸ್‍ಬಿಐ ಹಂತಗಳನ್ನು ವಿವರಿಸಿದೆ. ಅದರ ಮೂಲಕ ಬ್ಯಾಂಕ್ ಪಿಂಚಣಿ ಖಾತೆದಾರರು ತಮ್ಮ ಜೀವನ ಪ್ರಮಾಣಪತ್ರವನ್ನು 1 ನವೆಂಬರ್ 2021ರಿಂದ ವಿಡಿಯೋ ಕರೆ ಮೂಲಕ ಸಲ್ಲಿಸಬಹುದು.

ಇದನ್ನೂ ಓದಿ:Business Idea: ಸ್ವಂತದ್ದೊಂದು Boutique ಆರಂಭಿಸಬೇಕಾ? ಎಷ್ಟು ಹಣ ಬೇಕಾಗುತ್ತೆ, ಏನೆಲ್ಲಾ ತಯಾರಿ ಮಾಡ್ಕೊಬೇಕು? ಫುಲ್ ಪ್ಲಾನ್ ಇಲ್ಲಿದೆ...

ಎಸ್‍ಬಿಐ ಪಿಂಚಣಿದಾರರು ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಹೇಗೆ?

1. ಎಸ್‍ಬಿಐ ಪಿಂಚಣಿ ಸೇವಾ ಪೋರ್ಟಲ್‍ಗೆ ಭೇಟಿ ನೀಡಿ
2. ನಂತರ ವಿಡಿಯೋ ಕಾಲ್ ಪ್ರಕ್ರಿಯೆಯನ್ನು ಮುಂದುವರೆಸಲು 'VideoLC' ಆಯ್ಕೆ ಮೇಲೆ ಕ್ಲಿಕ್ ಮಾಡಿ
3. ನಿಮ್ಮ ಎಸ್‍ಬಿಐ ಪಿಂಚಣಿ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ ಒನ್-ಟೈಮ್ ಪಾಸ್‍ವರ್ಡ್ (ಒಟಿಪಿ) ನಮೂದಿಸಿ.
4. 'ನಿಯಮಗಳು ಮತ್ತು ಷರತ್ತುಗಳನ್ನು' ಓದಿ ಮತ್ತು ಸ್ವೀಕರಿಸಿ ಹಾಗೂ 'ಪ್ರಯಾಣ ಪ್ರಾರಂಭಿಸಿ' (Start Journey) ಆಯ್ಕೆ ಮೇಲೆ ಕ್ಲಿಕ್ ಮಾಡಿ.
5. ನಿಮ್ಮ ಪ್ಯಾನ್ ಕಾರ್ಡ್ ಅನ್ನು ಹಿಡಿದುಕೊಂಡು 'I am Ready ಎಂಬ ಆಯ್ಕೆ ಕ್ಲಿಕ್ ಮಾಡಿ
6. ವಿಡಿಯೋ ಕರೆಯನ್ನು ಪ್ರಾರಂಭಿಸಲು ಅನುಮತಿ ನೀಡಿ ಮತ್ತು ಎಸ್‍ಬಿಐ ಅಧಿಕಾರಿಯು ಲಭ್ಯವಾದ ತಕ್ಷಣ ನಿಮ್ಮ ಸಂವಹನವು ಪ್ರಾರಂಭವಾಗುತ್ತದೆ.
7. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಂವಹನ ನಡೆಸಲು ನೀವು ವೇಳಾಪಟ್ಟಿಯನ್ನು ಸಹ ತಯಾರಿಸಬಹುದು
8. ಎಸ್‍ಬಿಐ ಅಧಿಕಾರಿಯು ನಿಮ್ಮ ಪರದೆಯ ಮೇಲೆ ಕಾಣುವ 4 ಅಂಕಿಯ ಪರಿಶೀಲನೆ ಕೋಡ್ ಅನ್ನು ಓದಿ ಹೇಳಲು ಸೂಚಿಸುತ್ತಾರೆ.
9. ನಂತರ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಅಧಿಕಾರಿಗೆ ತೋರಿಸಿ ಮತ್ತು ಅದನ್ನು ಸೆರೆಹಿಡಿಯಲು ಅವರಿಗೆ ಅನುಮತಿಸಿ
10. ಇದಾದ ಬಳಿಕ ಅಧಿಕಾರಿಗಳು ನಿಮ್ಮ ಹಿಡಿದಿರುವ ಪ್ಯಾನ್ ಕಾರ್ಡ್‍ನ ಚಿತ್ರವನ್ನು ಸೆರೆಹಿಡಿಯುತ್ತಾರೆ. ಇಲ್ಲಿಗೆ ವಿಡಿಯೋ ಕಾಲ್ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಅಕಸ್ಮಾತ್ ಇದು ತಿರಸ್ಕೃತಗೊಂಡರೆ ಒಂದು ಸಂದೇಶದ ಮೂಲಕ ಬ್ಯಾಂಕ್‍ಗೆ ವಿಷಯ ತಲುಪಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಿಮಗೆ ಹತ್ತಿರವಿರುವ ನಿಮ್ಮ ಪಿಂಚಣಿ ಬ್ಯಾಂಕಿಗೆ ಹೋಗಿ ಜೀವನ ಪ್ರಮಾಣಪತ್ರ ನೀಡಬೇಕಾಗುತ್ತದೆ. ಸೆಪ್ಟೆಂಬರ್‌ನಲ್ಲಿ, ಎಸ್‍ಬಿಐ ಪಿಂಚಣಿದಾರರಿಗಾಗಿ ಎಸ್‍ಬಿಐ ಪಿಂಚಣಿ ಸೇವಾ ಎಂಬ ವೆಬ್‍ಸೈಟ್ ಅನ್ನು ನವೀಕರಿಸಿದೆ.

ಇದನ್ನೂ ಓದಿ: Earning Tips: ಆಧಾರ್ ಕಾರ್ಡ್ ಮತ್ತು ಪೋಸ್ಟ್ ಆಫೀಸ್ ಸರ್ಕಾರಿ ಫ್ರಾಂಚೈಸಿ ಆರಂಭಿಸಿ 50,000 ರೂ. ಹಣ ಗಳಿಸಿ..!

ಪಿಂಚಣಿದಾರರು ಬ್ಯಾಂಕ್, ಅಂಚೆ ಕಚೇರಿ, ಮನೆ ಬಾಗಿಲಿಗೆ ಸೇವೆ ಪಡೆಯುವ ಮೂಲಕ ಅಥವಾ ಜೀವನ್ ಪ್ರಮಾಣ್ ಪೋರ್ಟಲ್‍ಗೆ ಭೇಟಿ ನೀಡುವ ಮೂಲಕ ತಮ್ಮ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.
Published by:Latha CG
First published: