SBI Loan: ಎಸ್​ಬಿಐನಲ್ಲಿ ಹೋಂ ಲೋನ್, ವೈಯಕ್ತಿಕ ಸಾಲ ಪುನರ್​ ರಚನೆಗೆ ಅರ್ಜಿ ಸಲ್ಲಿಸುವುದು ಹೇಗೆ?; ಇಲ್ಲಿದೆ ಮಾಹಿತಿ

SBI Home Loan: ಎಸ್​ಬಿಐನಲ್ಲಿ ಸಾಲ ಪುನರಚನೆಗೆ ನೀವು ಅರ್ಹರಾಗಿದ್ದೀರಾ? ಎಂದು ತಿಳಿಯಲು ಮತ್ತು ಅರ್ಜಿ ಸಲ್ಲಿಸಲು ಗ್ರಾಹಕರು ಎಸ್​ಬಿಐನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬಹುದು. ಸಾಲಗಾರನು ಬ್ಯಾಂಕಿನ ವೆಬ್ ಸೈಟ್​ನಲ್ಲಿ ಖಾತೆಯ ನಂಬರ್, ಮೊಬೈಲ್ ನಂಬರ್ ಮುಂತಾದ ಅಗತ್ಯ ವಿವರಗಳನ್ನು ನಮೂದಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಸೆ. 23): ನೀವು ಎಸ್​ಬಿಐನಲ್ಲಿ ಲೋನ್ ಪಡೆದಿದ್ದೀರಾ? ಅಥವಾ ಸಾಲ ಪಡೆಯಲು ನಿರ್ಧರಿಸಿದ್ದೀರಾ? ಹಾಗಿದ್ದರೆ ನಿಮಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ. ಎಸ್​ಬಿಐನಲ್ಲಿ ನಿಮ್ಮ ಗೃಹ ಸಾಲ ಅಥವಾ ವೈಯಕ್ತಿಕ ಸಾಲದ ಇಎಂಐ ಕಟ್ಟಲು ಸಾಧ್ಯವಾಗದೆ ಒದ್ದಾಡುತ್ತಿದ್ದೀರಾ? ರಿಸರ್ವ್ ಬ್ಯಾಂಕ್​ನಿಂದ ಅನುಮೋದನೆಗೊಂಡ ಸಾಲ ಮರುಹೊಂದಾಣಿಕೆ ಯೋಜನೆಯಡಿ  ಸಾಲಗಾರರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎರಡು ವರ್ಷಗಳವರೆಗೆ ಸಾಲ ನೀಡಲು ಮುಂದಾಗಿದೆ. ಎಸ್​ಬಿಐನಲ್ಲಿ ಸಾಲ ಪುನರಚನೆಗೆ ನೀವು ಅರ್ಹರಾಗಿದ್ದೀರಾ? ಎಂದು ತಿಳಿಯಲು ಮತ್ತು ಅರ್ಜಿ ಸಲ್ಲಿಸಲು ಗ್ರಾಹಕರು ಎಸ್​ಬಿಐನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬಹುದು. ಸಾಲಗಾರನು ಬ್ಯಾಂಕಿನ ವೆಬ್ ಸೈಟ್​ನಲ್ಲಿ ಖಾತೆಯ ನಂಬರ್, ಮೊಬೈಲ್ ನಂಬರ್ ಮುಂತಾದ ಅಗತ್ಯ ವಿವರಗಳನ್ನು ನಮೂದಿಸಬೇಕು. ನಂತರ, ಒಟಿಪಿ ಮೂಲಕ ಅರ್ಜಿಯನ್ನು ಮಾನ್ಯ ಮಾಡಲಾಗುತ್ತದೆ.

    ಗೃಹ, ಶಿಕ್ಷಣ, ವಾಹನ ಅಥವಾ ವೈಯಕ್ತಿಕ ಸಾಲಗಳು ಸಾಲ-ಪುನರ್ ರಚನಾ ಆಯ್ಕೆಯ ಅಡಿಯಲ್ಲಿ ಬರುತ್ತವೆ. ಎರಡು ವರ್ಷಗಳ ಮೊರಟೋರಿಯಂ ಅವಧಿಯಲ್ಲಿ ಗ್ರಾಹಕರು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸಾಲ ಮರುಹೊಂದಾಣಿಕೆ ಯೋಜನೆಯಡಿ ವರ್ಷಕ್ಕೆ ಶೇ. 0.35ರಷ್ಟು ಹೆಚ್ಚುವರಿ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.

    ಇದನ್ನೂ ಓದಿ: Shocking News: ಹುಟ್ಟುವ ಮಗುವಿನ ಲಿಂಗ ತಿಳಿಯಲು ಹೆಂಡತಿಯ ಹೊಟ್ಟೆಯನ್ನೇ ಸೀಳಿದ ಗಂಡ!

    ನೀವು ಅರ್ಜಿ ಸಲ್ಲಿಸಿದ ಬಳಿಕ ನೀವು ಸಾಲ ಪಡೆಯಲು ಅರ್ಹರೇ ಎಂದು ಪರಿಶೀಲಿಸಿ, ನಿಮಗೆ ಒಂದು ಉಲ್ಲೇಖ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಉಲ್ಲೇಖ ಸಂಖ್ಯೆ 30 ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ. ನಂತರ ಸಾಲಗಾರನು ಅಗತ್ಯ ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಲು ಹತ್ತಿರದ ಎಸ್​ಬಿಐ ಶಾಖೆಗೆ ಭೇಟಿ ನೀಡಬಹುದು.ಸಾಲ ಪುನರಚನೆಗೆ ಅರ್ಜಿ ಸಲ್ಲಿಸಲು 2020ರ ಡಿಸೆಂಬರ್ 24 ಕೊನೆಯ ದಿನವಾಗಿದೆ.

    ನೀವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಅಪ್ ಲೋಡ್ ಮಾಡಬೇಕಾದ ದಾಖಲೆಗಳ ಪಟ್ಟಿ ಇಲ್ಲಿದೆ:

    • 2020ರ ಫೆಬ್ರವರಿ ತಿಂಗಳ ಸ್ಯಾಲರಿ ಸ್ಲಿಪ್ ಮತ್ತು ಇತ್ತೀಚಿನ ಸ್ಯಾಲರಿ ಸ್ಲಿಪ್.

    • ಮೊರಟೋರಿಯಂ ಅವಧಿ ಮುಗಿದ ತಕ್ಷಣ ಅಂದಾಜು ವೇತನ/ ಆದಾಯ ಘೋಷಣೆ (ಗರಿಷ್ಠ 24 ತಿಂಗಳು)

    •  ಕೆಲಸದಿಂದ ರಿಲೀವ್ ಮಾಡಿದ ಪತ್ರ (ಉದ್ಯೋಗ ನಷ್ಟಸಂದರ್ಭದಲ್ಲಿ).

    • ತಮ್ಮ ವ್ಯಾಪಾರದ ಮೇಲೆ ಕೊರೋನಾ ಪರಿಣಾಮ ಬೀರುತ್ತದೆ ಎಂಬ ಸ್ವಯಂ-ಉದ್ಯೋಗಿ/ ಉದ್ಯಮಿಗಳ ಡಿಕ್ಲರೇಷನ್.

    • ನಿಮ್ಮ ಅಕೌಂಟ್ ನಂಬರ್, ಮೊಬೈಲ್ ಸಂಖ್ಯೆ, ವಿಳಾಸದ ದಾಖಲೆಯ ಪ್ರತಿಗಳು.

    Published by:Sushma Chakre
    First published: