PAN-Aadhaar Link: ಎಸ್‌ಬಿಐ ಗ್ರಾಹಕರೇ ಎಚ್ಚರ! ಪ್ಯಾನ್​-ಆಧಾರ್​ ಲಿಂಕ್ ಮಾಡದಿದ್ದರೆ ತೊಂದರೆ ಆಗೋದು ಗ್ಯಾರಂಟಿ...!

ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಅಥವಾ ನಿಷ್ಕ್ರಿಯಮಾಡಲಾಗುವುದು ಮತ್ತು ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ಉಲ್ಲೇಖಿಸಲಾಗುವುದಿಲ್ಲ "ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

    ನಿಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಅನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಶೀಘ್ರದಲ್ಲೇ ಬ್ಯಾಂಕಿಂಗ್ ಸೇವೆಗಳು ಮತ್ತು ಹಣಕಾಸು ವ್ಯವಹಾರಗಳಲ್ಲಿನ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಿಸಲು ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ. ಲಿಂಕ್ ಮಾಡದ ಪ್ಯಾನ್ ನಿಷ್ಪ್ರಯೋಜಕವಾಗುತ್ತದೆ ಮತ್ತು ಗಡುವಿನ ನಂತರ ನಿಮ್ಮ ಪ್ಯಾನ್‌ ಅನ್ನು ನಿಷ್ಕ್ರಿಯ ಮಾಡಲಾಗುವುದು ಎಂದು ಘೋಷಿಸಿದೆ.


    “ಒಬ್ಬ ವ್ಯಕ್ತಿಯು ಆಧಾರ್ ಸಂಖ್ಯೆಯನ್ನು ನೊಂದಣಿ ಮಾಡಲು ವಿಫಲವಾದರೆ, ಅಂತಹ ವ್ಯಕ್ತಿಗೆ ನಿಗದಿಪಡಿಸಿದ ಶಾಶ್ವತ ಖಾತೆ ಸಂಖ್ಯೆಯನ್ನು ಅಧಿಸೂಚನೆ ದಿನಾಂಕದ ನಂತರ ನಿಯಮಗಳ ಪ್ರಕಾರ ಒದಗಿಸಲಾಗದ ರೀತಿಯಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ."ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ. ಶಾಶ್ವತ ಖಾತೆ ಸಂಖ್ಯೆ 10-ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದ್ದು, ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಒಬ್ಬ ವ್ಯಕ್ತಿಯು ಮಾಡಿದ ಎಲ್ಲಾ ಹಣಕಾಸಿನ ವಹಿವಾಟುಗಳಿಗೆ ಇದು ಸಂಬಂಧ ಹೊಂದಿದೆ, ಇದು ತೆರಿಗೆ ವಂಚನೆ ಮತ್ತು ವಂಚನೆಗಳನ್ನು ತಡೆಯಲು ತೆರಿಗೆ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಈ ಕಾರಣ ಬ್ಯಾಂಕ್‌ಗಳು ಈ ಹೊಸ ಕ್ರಮವನ್ನು ಜಾರಿಗೆ ತಂದಿವೆ.


    ಇದನ್ನೂ ಓದಿ:Karnataka Weather Update| ರಾಜ್ಯದಲ್ಲಿ ಜುಲೈ 18ರವರೆಗೂ ಮುಂದುವರೆಯಲಿದೆ ಮಳೆ; ಕೊಡಗಿನಲ್ಲಿ ಭೂ ಕುಸಿತದ ಆತಂಕ, ಹಲವೆಡೆ ರೆಡ್​ ಅಲರ್ಟ್​

    ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಬ್ಯಾಂಕುಗಳು ತಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ಶೀಘ್ರದಲ್ಲೇ ಲಿಂಕ್ ಮಾಡಲು ಗ್ರಾಹಕರಿಗೆ ಹೇಳಲು ಪ್ರಾರಂಭಿಸಿವೆ. “ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ನಮ್ಮ ಗ್ರಾಹಕರಿಗೆ ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ.” ಜೊತೆಗೆ, ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಅಥವಾ ನಿಷ್ಕ್ರಿಯಮಾಡಲಾಗುವುದು ಮತ್ತು ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ಉಲ್ಲೇಖಿಸಲಾಗುವುದಿಲ್ಲ" ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದೆ.


    ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು, ನೀವು ಪ್ಯಾನ್ ಕಾರ್ಡ್‌ ಹೊಂದಿರಬೇಕು. ನೀವು ಆಧಾರ್‌ನೊಂದಿಗೆ ಪ್ಯಾನ್‌ ಅನ್ನು ಲಿಂಕ್‌ ಮಾಡದ್ದಿದರೆ ನಿಮ್ಮ ಪ್ಯಾನ್ ಅಮಾನ್ಯವಾಗುತ್ತದೆ, ನೀವು ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಕೇವಲ ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ, ಇದು, ನಿಮ್ಮ ಹೂಡಿಕೆಗೆ ಸಂಬಂಧಿಸಿದ ಹೆಚ್ಚಿನ ಚಟುವಟಿಕೆಗಳ ಮೇಲೆಯೂ ಕೂಡ ಪರಿಣಾಮ ಬೀರುವುದು. ಹೊಸದಾದ ಹೂಡಿಕೆ ಅಥವಾ ಉಳಿತಾಯಗಳನ್ನು ಕೂಡ ಬ್ಯಾಂಕ್‌ ನಿಷೇಧಿಸುತ್ತದೆ ಎಂದು ಆದಾಯ ತೆರಿಗೆ ಇಲಾಖೆಯು ಎಚ್ಚರಿಸಿದೆ.


    ಇದನ್ನೂ ಓದಿ:Corona Effect: ಕೊರೋನಾ ಹೊಡೆತಕ್ಕೆ ನಲುಗಿದ ಹೋಟೆಲ್ ಉದ್ಯಮ; ಆಸ್ಪತ್ರೆಗಳಾಗಿ ಕನ್ವರ್ಟ್ ಆಗ್ತಿವೆ ಹೋಟೆಲ್​ಗಳು..!

    ನಿಮ್ಮ ಹಿಂದಿನ ಮತ್ತು ನೀವು ಈಗ ಹೊಂದಿರುವ ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು (ಎಸ್‌ಐಪಿ) ಸಹ ನಿಲ್ಲಿಸಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ. ಬ್ಯಾಂಕ್ ಡ್ರಾಫ್ಟ್‌ಗಳನ್ನು ಖರೀದಿಸಲು ಅಥವಾ ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕಿನಿಂದ ಬ್ಯಾಂಕರ್‌ನ ಚೆಕ್‌ಗಳನ್ನು ಪಾವತಿಸಲು ಹಾಗೂ ಒಂದೇ ದಿನದಲ್ಲಿ ಗ್ರಾಹಕರು ₹ 50,000 ಕ್ಕಿಂತ ಹೆಚ್ಚು ಹಣವನ್ನು ಪಾವತಿಸುವಾಗ ಪ್ಯಾನ್ ವಿವರಗಳನ್ನು ಒದಗಿಸಬೇಕಾಗುತ್ತದೆ ಎಂದು ಬ್ಯಾಂಕ್‌ ತಿಳಿಸಿದೆ. ಎಸ್‌ಬಿಐ ತನ್ನ ಬಳಕೆದಾರರಿಗೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಮೂಲಕ "ತಡೆರಹಿತ ಬ್ಯಾಂಕಿಂಗ್ ಸೇವೆಗಳನ್ನು" ಆನಂದಿಸಲು ವಿನಂತಿಸಿದೆ.




    ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ಸೆಕ್ಷನ್ 234 ಹೆಚ್ ಅನ್ನು ಸೇರಿಸಿದೆ. ಏನೆಂದರೆ ಬಜೆಟ್ 2021 ರಲ್ಲಿ, ಗಡುವು ಮುಗಿದ ನಂತರ ಪ್ಯಾನ್ ಮತ್ತು ಆಧಾರ್ ಅನ್ನು ಯಾರು ಲಿಂಕ್‌ ಮಾಡುವುದಿಲ್ಲ ಆ ವ್ಯಕ್ತಿಯು ದಂಡವನ್ನು ಪಾವತಿಸಬೇಕಾಗುತ್ತದೆ. ಗಡುವಿನ ಸಮಯ ಮುಗಿದ ನಂತರ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದವರು 1,000 ರೂ.ಗಿಂತ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

    Published by:Latha CG
    First published: