Money saving Tips: ಆಧುನಿಕ ಮಹಿಳೆ, ಅವಳು ಉದ್ಯೋಗಿಯಾಗಿರಲಿ ಅಥವಾ ಒಬ್ಬಂಟಿಯಾಗಿರಲಿ, ತಾಯಿಯಾಗಿರಲಿ ಅಥವಾ ಹೆಂಡತಿಯಾಗಿರಲಿ ಅಥವಾ ಮಗಳಾಗಿರಲಿ, ಆಕೆಯ ಜೀವನ ಬಹುಮಖಗಳನ್ನು ಹೊಂದಿದೆ. ಮಹಿಳೆ ನಿರ್ವಹಿಸುವ ಕೆಲವು ಜವಾಬ್ದಾರಿಗಳಿಗೆ ಮನ್ನಣೆಯೇ ಸಿಗುವುದಿಲ್ಲ, ವೃತ್ತಿ ಜೀವನದ ನಿರ್ವಹಣೆ, ಮನೆಯ ಕೆಲಸಗಳು ಮತ್ತು ಮಕ್ಕಳು ಹಾಗೂ ಕುಟುಂಬವನ್ನು ನೋಡಿಕೊಳ್ಳುವ ಆಕೆಯ ಕೆಲಸಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮಹಿಳೆ ಎಲ್ಲಾ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ, ಸಂತೋಷ ಮತ್ತು ಸ್ವಾವಲಂಬನೆಯಿಂದ ಜೀವಿಸಬಲ್ಲಳು. ಮಹಿಳೆ ಆರ್ಥಿಕವಾಗಿ ಸಬಲಳಾಗಲು ಇಲ್ಲಿವೆ ಕೆಲವು ಮಾರ್ಗಗಳು..
ನಿಮ್ಮ ಗುರಿ ಮತ್ತು ಖರ್ಚುಗಳ ಒಂದು ಪಟ್ಟಿ ಮಾಡಿ -ನಮ್ಮಲ್ಲಿರುವ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಪರಿಶೀಲಿಸಿ, ಆರ್ಥಿಕ ತಜ್ಞರನ್ನು ವಿಮರ್ಶಿಸುವ ಮೂಲಕ ಹಣಕಾಸಿನ ನಿರ್ವಹಣೆಯನ್ನು ಮಾಡುವ ಯೋಜನೆಯನ್ನು ಹಾಕಿಕೊಳ್ಳಬೇಕು. ಮುಂದಿನ ಯಾವುದಕ್ಕಾಗಿ ಹಣ ಖರ್ಚು ಮಾಡಬೇಕು ಮತ್ತು ಎಲ್ಲಿ ಉಳಿತಾಯ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ವರ್ಷಕ್ಕಾಗಿ ಹಣಕಾಸಿನ ಯೋಜನೆ ತಯಾರಿಸುವುದು ಅತ್ಯಂತ ಅಗತ್ಯ, ಹೊಸ ಮನೆ ಅಥವಾ ಕಾರು ಖರೀದಿಗೆ, ಮಗುವಿನ ಶಿಕ್ಷಣಕ್ಕೆ ಅಥವಾ ಪ್ರವಾಸಕ್ಕೆ ಹಣ ತೆಗೆದಿಡಬೇಕೆಂದರೆ, ಖರ್ಚು ಮತ್ತು ಉಳಿತಾಯದ ಯೋಜನೆಯನ್ನು ಹಾಕಿಕೊಳ್ಳುವುದು ಬಹಳ ಮುಖ್ಯ.
ಆರ್ಥಿಕ ಯೋಜನೆಯ ಕಲೆಯನ್ನು ಕಲಿಯಿರಿ -ಇಂದಿನ ಧಾವಂತದ ಬದುಕಿನಲ್ಲಿ, ಹೆಣ್ಣು ಸುರಕ್ಷಿತ ಭವಿಷ್ಯಕ್ಕಾಗಿ ಪೂರ್ವಾಭಾವಿಯಾಗಿ ಅರ್ಥಿಕ ಯೋಜನೆಯ ಕಡೆ ಹೆಜ್ಜೆ ಇಡುವುದು ಅಗತ್ಯ. ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆಯಂತಹ ಜವಾಬ್ಧಾರಿಗಳಿಂದಾಗಿ ಮಹಿಳೆಯರಿಗೆ, ದುಡಿಯಲು ಹೆಚ್ಚು ಸಮಯ ಸಿಗುವುದಿಲ್ಲ ಮತ್ತು ಅದರಿಂದ ವಾರ್ಷಿಕವಾಗಿ ಹೆಚ್ಚು ಉಳಿತಾಯ/ ಹೂಡಿಕೆ ಮಾಡಲು ಸಾಧ್ಯ ವಾಗುವುದಿಲ್ಲ. ಗೌರವ, ಮೌಲ್ಯ ಮತ್ತು ಸುರಕ್ಷಿತ ಬದುಕನ್ನು ಹೊಂದಲು ಅವರಿಗೆ ವಿಮೆ ಮತ್ತು ಹೂಡಿಕೆ ಬಹಳ ಮಹತ್ವಪೂರ್ಣವಾದದ್ದು. ಮಹಿಳೆ ಸ್ವಂತದ ಹಣಕಾಸಿನ ಯೋಜನೆಯನ್ನು ಹೊಂದುವುದರಿಂದ, ಮನೆಯ ಹಣಕಾಸಿನ ಯೋಜನೆ ಇನ್ನಷ್ಟು ಗಟ್ಟಿಯಾಗುತ್ತದೆ, ಮತ್ತು ಅದರಿಂದ ಹೊಸ ಮನೆ ಖರೀದಿ ಹಾಗೂ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತಹ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯ ವಾಗುತ್ತದೆ. ಬೇರೆಯವರ ಮೇಲೆ ಅವಲಂಬಿತವಾಗದೆ, ವೈಯುಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದ ಕನಸುಗಳನ್ನು ಈಡೇರಿಸಿಕೊಳ್ಳು ಕೂಡ ಆರ್ಥಿಕ ಯೋಜನೆ ಬಹಳ ಮುಖ್ಯ.
ಕೇವಲ ಉಳಿತಾಯ ಮಾಡುವುದಲ್ಲ, ಹೂಡಿಕೆ ಮಾಡಿ-ಹೂಡಿಕೆ ಮಾಡಲು ಸಾಕಷ್ಟು ಆಯ್ಕೆಗಳು ಇವೆ, ಹಾಗಾಗಿ ಸಂಬಳದ ಖಾತೆಯಲ್ಲಿ ದುಡ್ಡನ್ನು ಹಾಗೆಯೇ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಉಳಿತಾಯ ಮಾಡುವುದು ಒಳ್ಳೆಯ ಸಂಗತಿ, ಆದರೆ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವ ಮೂಲಕ ಉಳಿಸಿದ ಹಣವನ್ನು ಬೆಳೆಸುವುದು ಜಾಣತನವೆನಿಸುತ್ತದೆ. ಉಳಿಸಿದ ಹಣವನ್ನು ಶೀಘ್ರವಾಗಿ ಹೆಚ್ಚು ಮಾಡಲು ಹೂಡಿಕೆ ಸಹಾಯ ಮಾಡುತ್ತದೆ. ವೃತ್ತಿಪರ ಸಲಹೆಗಾಗಿ , ಒಬ್ಬ ನಿಯಂತ್ರಿತ ಹಣಕಾಸು ಸಲಹೆಗಾರನ್ನು ಸಂಪರ್ಕಿಸಬಹುದು ಅಥವಾ ಪ್ರತ್ಯೇಕ ಉಳಿತಾಯ ಖಾತೆಯನ್ನು ತೆಗೆಯಬಹುದು, ದುಪ್ಪಟ್ಟು ಹಣ ಮರಳಿಸುವ ವಿಮಾ ಯೋಜನೆ ಅಥವಾ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು.
ಹೆಚ್ಚುವರಿ ಆದಾಯವನ್ನು ಸೃಷ್ಟಿಸಿ -ಕಡಿಮೆ ಆದಾಯದಿಂದ ಕೆಲವೊಮ್ಮೆ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವುದು ಕಷ್ಟವಾಗುತ್ತದೆ. ಬರುವ ಆದಾಯದಿಂದ ಹಣಕಾಸಿನ ಯೋಜನೆ ಅಥವಾ ಸ್ವಂತದ ಖರ್ಚನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ, ಹೆಚ್ಚುವರಿ ಆದಾಯ ಗಳಿಸುವ ಪ್ರಯತ್ನಕ್ಕೆ ಕೈ ಹಾಕಬೇಕಾಗುತ್ತದೆ. ಬರುವ ಆದಾಯವನ್ನು ಸಂಪೂರ್ಣವಾಗಿ ಖರ್ಚು ಮಾಡುವ ಬದಲು, ಖರ್ಚಿಗೆ ಕತ್ತರಿ ಹಾಕಿ, ಹೆಚ್ಚುವರಿ ಆದಾಯ ಬರುವಂತಹ ದಾರಿಯನ್ನು ಹುಡುಕಿಕೊಳ್ಳಬೇಕು. ಹೆಚ್ಚಿನ ಆದಾಯದಿಂದ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ, ಮತ್ತು ಹೆಚ್ಚುವರಿಯಾಗಿ ಗಳಿಸಿದ ಆದಾಯವನ್ನು ಸಾಲ ತೀರಿಸಲು, ಸಾಲದ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು, ನಿವೃತ್ತಿಗಾಗಿ ಕೊಂಚ ಹೆಚ್ಚು ಉಳಿಸಲು ಅಥವಾ ತಿಂಗಳ ಖರ್ಚಿಗೆ ಪೂರಕವಾಗಿ ಬಳಸಬಹುದು.
ಸೂಕ್ತ ವಿಮೆಗಳ ಮೂಲಕ ಕುಟುಂಬವನ್ನು ರಕ್ಷಿಸಿ -¨ಬದುಕು ಅನಿಶ್ಚಿತ, ನಾವು ನಿರೀಕ್ಷಿಸಿರದಂತಹ ರೀತಿಯಲ್ಲಿ ದುರಂತಗಳು ಬಂದು ಬದುಕಿನ ಬಾಗಿಲು ಬಡಿಯುತ್ತವೆ. ಹಾಗಂತ, ವ್ಯಕ್ತಿ ಸ್ವಂತದ ಮತ್ತು ತನ್ನ ಪ್ರೀತಿ ಪಾತ್ರರ ಭವಿಷ್ಯದ ಸುರಕ್ಷತೆಯ ಬಗ್ಗೆ ಯೋಚಿಸದಿರಲು ಸಾಧ್ಯವಿಲ್ಲ. ಸರಿಯಾದ ವಿಮಾ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ , ಕುಟುಂಬ ಭವಿಷ್ಯದಲ್ಲಿ ಬರಬಹುದಾದ ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಿರುವಂತೆ ಮಾಡಬೇಕು. ಒಂದು ಅವಧಿ ವಿಮೆ ಕೈಗೆಟುವಂತದ್ದಾಗಿರುತ್ತದೆ ಮತ್ತು ಮಹಿಳೆ ಹಾಗೂ ಆಕೆಯ ಕುಟುಂಬಕ್ಕೆ ಸಮಗ್ರ ಭದ್ರತೆ ಒದಗಿಸುತ್ತದೆ. ಇದು ಪ್ರತಿಯೊಬ್ಬರೂ ಹೊಂದಿರಲೇಬೇಕಾದ ಆರ್ಥಿಕ ಆದಾಯವಾಗಿದೆ. ನೀವು ಈಗಾಗಲೇ ಆರೋಗ್ಯ ವಿಮೆ ಹೊಂದಿದ್ದರೆ, ಅದರ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಯೋಚಿಸಬಹುದು. ಮಕ್ಕಳ ಕನಸು, ಶಿಕ್ಷಣ ಮತ್ತು ಮದುವೆಗಾಗಿ ಮಕ್ಕಳ ವಿಮಾ ಪಾಲಿಸಿಯಲ್ಲೂ ಹೂಡಿಕೆ ಮಾಡಬಹುದು.
ತುರ್ತು ನಿಧಿಯನ್ನು ಇಟ್ಟುಕೊಳ್ಳಿ –ಅನಿರೀಕ್ಷಿತಾಗಿ ಹಣಕಾಸಿನ ಅಡಚಣೆ ಉಂಟಾದಾಗ ಸಹಾಯಕ್ಕೆ ಬರುವ ತುರ್ತು ನಿಧಿ, ಹಣಕಾಸು ಯೋಜನೆಯ ಪ್ರಮುಖ ಭಾಗವಾಗಿರಲಿ. ಪ್ರಸ್ತುತ ಆದಾಯ, ಕುಟುಂಬದ ಸದಸ್ಯರ ಸಂಖ್ಯೆ ಮತ್ತು ಆಸ್ತಿಯನ್ನು ಆಧರಿಸಿ, ಸಣ್ಣ ತುರ್ತು ನಿಧಿಯನ್ನು ಕೂಡಿಡಲು ಆರಂಭಿಸಿ. ಪೇಚೆಕ್ಗಳನ್ನು ಉಳಿತಾಯದ ಖಾತೆಗೆ ಸ್ವಯಂಚಾಲಿತವಾಗಿ ವರ್ಗಾಯಿಸುವುದಕ್ಕೆ ಆದ್ಯತೆ ಕೊಡಿ, ಆದರೆ ತುರ್ತು ನಿಧಿಗಳು ಆರು ತಿಂಗಳ ವರೆಗಿನ ಖರ್ಚನ್ನು ನಿರ್ವಹಣೆ ಮಾಡುವಷ್ಟು ದೊಡ್ಡ ಮೊತ್ತ ಹೊಂದಿರಬೇಕು ಹಾಗೂ ನಗದು ರೂಪದಲ್ಲಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ