ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಸಂಪಾದನೆಯಲ್ಲಿನ ಕೊಂಚ ಕೊಂಚವೇ ಉಳಿಕೆಯಿಂದಲೇ ನಮ್ಮ ಕನಸು ನನಸು ಮಾಡಲು ಸಾಧ್ಯ. ಆದಾಯ ಕಡಿಮೆ ಎಂದ ಮಾತ್ರಕ್ಕೆ ಉಳಿತಾಯ ಸಾಧ್ಯವಿಲ್ಲ ಎನ್ನಲಾಗದು. ಉಳಿತಾಯ ಎಂಬುದು ನಾವು ರೂಢಿಸಿಕೊಂಡ ಮಾರ್ಗದಲ್ಲಿ ಇರುತ್ತದೆ. ದಿನನಿತ್ಯದ ನಮ್ಮ ಅನಗತ್ಯ ಖರ್ಚುಗಳನ್ನು ಹೇಗೆ ಕಡಿತ ಮಾಡಬೇಕು ಎಂಬ ಬಗ್ಗೆ ನಮಗೆ ಅರಿವಿರಬೇಕು, ಈ ಮೂಲಕ ಚಿಕ್ಕ ಸಂಪಾದನೆಯಲ್ಲೂ ದೊಡ್ಡ ಉಳಿತಾಯ ಮಾಡಲು ಸಾಧ್ಯ. ದೈನಂದಿನ ಜೀವನದ ಉಳಿತಾಯ ಹೇಗೆ ಮಾಡುವುದು ಎಂಬ ಗೊಂದಲ ನಿಮಗಿದ್ದರೆ, ಇಲ್ಲಿದೆ ಸರಳ ಉಪಾಯ
ಅನಗತ್ಯ ಖರ್ಚು ಉಳಿತಾಯ
ಅನಗತ್ಯವಾಗಿ ಏನು ಖರ್ಚು ಮಾಡುತ್ತಿದ್ದೇವೆ ಎಂಬ ಎಲ್ಲರಿಗೂ ಅನುಮಾನ ಕಾಡುವುದು ಸಹಜ. ನಮ್ಮೆ ಅರಿವಿಗೆ ಬಾರದೇ ಅನೇಕ ಬಾರಿ ಕೆಲವೊಮ್ಮೆ ಹಣ ವ್ಯಯಿಸಿರುತ್ತೇವೆ. ಈ ಖರ್ಚಿನ ಉಳಿತಾಯ ಬಹು ಸುಲಭ. ನೀವು ದಿನ ನಿತ್ಯ ಕಚೇರಿ ಅಥವಾ ಇತರೆ ಸ್ಥಳಗಳಿಗೆ ಹೋಗುವಾಗ ಬಾಟಲ್ ನೀರು ಕೊಳ್ಳುವ ಬದಲು ಮನೆಯಿಂದಲೇ ನೀರಿನ ಬಾಟಲ್ ತೆಗೆದುಕೊಂಡು ಹೋಗಿ, ಜೊತೆಗೆ ಸ್ನಾಕ್ಸ್ ಐಟಂ, ತಿಂಡಿಗಳನ್ನು ಆದಷ್ಟು ಮನೆಯಿಂದಲೇ ಕೊಂಡೊಯ್ಯುವ ಅಭ್ಯಾಸ ಮಾಡಿದರೆ, ಉಳಿತಾಯದ ಜೊತೆ ಆರೋಗ್ಯವೂ ಕಾಪಾಡಬಹುದು. ಇದರ ಜೊತೆ ಮದ್ಯಪಾನ ಮತ್ತು ಧೂಮಪಾನ ತ್ಯಜಿಸುವುದರಿಂದ ವಾರಕ್ಕೆ ಕನಿಷ್ಠ ಎಂದರೂ 800 ರೂ ಉಳಿತಾಯ ಮಾಡಬಹುದು. ಈ ಮೇಲಿನ ಅಭ್ಯಾಸ ರೂಢಿಸಿಕೊಳ್ಳುವುದರಿಂದ ದಿನಕ್ಕೆ 3 ರಿಂದ 4 ಸಾವಿರ ಉಳಿಸಬಹುದು
ವಿದ್ಯುತ್ ಬಿಲ್
ಎಸಿ ಬಳಕೆ ಮಾಡುತ್ತಿದ್ದೀರಾ ಎಂದರೆ ಅದನ್ನು 18ಡಿಗ್ರಿಗೆ ಇಡುವ ಬದಲು 24-25 ಡಿಗ್ರಿಗೆ ಇಡಿ. ಅನಗತ್ಯವಾಗಿ ಲೈಟ್ಸ್ ಮತ್ತು ಫ್ಯಾನ್ ಉರಿಸಬೇಡಿ. ಬಳಕೆ ಇಲ್ಲದ ಸಮಯದಲ್ಲಿ ಫ್ರಿಡ್ಜ್ ಅನ್ನು ಕೂಡ ಬಂದ್ ಮಾಡಿ. ಕಡಿಮೆ ವಿದ್ಯುತ್ ಬಳಕೆಯಿಂದ ದರದಲ್ಲೂ ಉಳಿತಾಯ ಮಾಡಬಹುದು.
ತರಕಾರಿಗೆ ವ್ಯಯ
ಬಿಗ್ ಬ್ರಾಂಡ್ ತರಕಾರಿ ಅಂಗಡಿ ಬದಲಾಗಿ ಉತ್ತಮ ಗುಣಮಟ್ಟದ ತರಕಾರಿಯನ್ನು ಮಾರುಕಟ್ಟೆಯಲ್ಲಿ ಕೊಳ್ಳುವುದರಿಂದ ನಿಮಗೂ ಹಾಗೂ ಮಾರಾಟಗಾರರಿಬ್ಬರಿಗೂ ಒಳಿತು.
ಪೋನ್ ಮತ್ತು ಡಾಟಾ ಪ್ಲಾನ್
ಕಾಲಿಂಗ್ ಮತ್ತು ಡಾಟಾ ಪ್ಲಾನ್ಗಳನ್ನು ಅಗತ್ಯಕ್ಕೆ ತಕ್ಕಂತೆ ಕೊಳ್ಳಿ. ಪ್ರೀ ಪೇಯ್ಡ್ ಪ್ಲಾನ್ಗಿಂತ ಪೋಷ್ಟ್ ಪೇಯ್ಡ್ ಪ್ಲಾನ್ಗಳ ಲಭ್ಯತೆಗೆ ಅನುಸಾರವಾಗಿ ಪಡೆಯಿರಿ.
ಸಂಚಾರ
ಸ್ವಂತಃ ಕಾರು, ಬೈಕ್ ಬದಲಾಗಿ ನಿಮ್ಮ ಸ್ನೇಹಿತರ ಕಾರು, ಬೈಕ್ನಲ್ಲಿನ ಪ್ರಯಾಣದಿಂದ ಉಳಿತಾಯದ ಜೊತೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಜೊತೆಗೆ ಆಗ್ಗಿಂದಾಗೆ ಸಾರ್ವಜನಿಕ ಸಾರಿಗೆ ಬಳಸುವುದರಿಂದ ಇನ್ನಷ್ಟು ಉಳಿಕೆ ಸಾಧ್ಯ
ಇದನ್ನು ಓದಿ: ವಿಜಯ್ರನ್ನು ಜೀವಂತವಾಗಿಡಲು ಕುಟುಂಬದ ಕೊನೆ ಪ್ರಯತ್ನ; ಸಾರ್ಥಕತೆಯತ್ತ ಸಂಚಾರ
ಬಿಲ್ ಪಾವತಿ
ತಂತ್ರಜ್ಞಾನದ ಈ ಯುಗದಲ್ಲಿ ಬಿಲ್ ಪಾವತಿಗೆ ಅತ್ಯುತ್ತಮ ಮಾರ್ಗ ಎಂದರೆ ಇ ವಾಲೆಟ್, ಆನ್ಲೈನ್ ಬ್ಯಾಂಕಿಂಗ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ. ಈ ಎಲ್ಲಾ ಆಯ್ಕೆಗಳಲ್ಲಿ ಕ್ಯಾಶ್ಬ್ಯಾಕ್, ಡಿಸ್ಕೌಂಟ್ಗಳು ಸಿಗುವ ಹಿನ್ನಲೆಯಲ್ಲಿ ಹಣ ಉಳಿಕೆಗೆ ಇದು ಉತ್ತಮ ಅವಕಾಶ
ಹೊರಗೆ ತಿನ್ನುವುದು
ಹಣ ಉಳಿಸುವುದು ಎಂದ ಮಾತ್ರಕ್ಕೆ ನಮ್ಮಿಷ್ಟವಾದ ತಿಂಡಿ ತಿನ್ನುವುದು ಬಿಡುವುದು ಎಂದರ್ಥವಲ್ಲ. ಬದಲಾಗಿ ಯಾವುದೇ ಹೊಟೇಲ್ನಲ್ಲಿ ಏನೇ ತಿನ್ನಬೇಕು ಎನ್ನಿಸಿದಾಕ್ಷಣ ಎನ್ಲೈನ್ ಬುಕ್ ಮಾಡುವಾಗ ಸಿಗುವ ಆಫರ್ ನೋಡಿಕೊಂಡು ತೆಗೆದುಕೊಳ್ಳುವುದು ಜಾಣ್ಮೆಯ ಮಾರ್ಗ. ವೋಚರ್ ಬಳಕೆಯಿಂದಾಗಿ 6 ರಿಂದ 7 ಸಾವಿರ ಉಳಿಸಬಹುದು
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ