• Home
  • »
  • News
  • »
  • trend
  • »
  • Viral Video: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಬಿದ್ದ ವ್ಯಕ್ತಿ! ಲಕ್ಕಿ ಮ್ಯಾನ್​ ಅಂದ್ರೆ ಇವ್ನೇ ನೋಡಿ!

Viral Video: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಬಿದ್ದ ವ್ಯಕ್ತಿ! ಲಕ್ಕಿ ಮ್ಯಾನ್​ ಅಂದ್ರೆ ಇವ್ನೇ ನೋಡಿ!

ರೈಲಿಗೆ ಹತ್ತಲು ಹೋಗುತ್ತಿರುವ ವ್ಯಕ್ತಿ

ರೈಲಿಗೆ ಹತ್ತಲು ಹೋಗುತ್ತಿರುವ ವ್ಯಕ್ತಿ

ರೈಲ್ವೇ ಸ್ಟೇಷನ್​ನಲ್ಲಿ ಅನಾಹುತಗಳು ಆಗುವುದು ಸಾಮಾನ್ಯ. ಕೆಲವೊಂದಷ್ಟು ಜೀವ ಹೋಗುತ್ತವೆ. ಇನ್ನೂ ಒಂದಷ್ಟು ಜೀವ ಉಳಿಯುತ್ತವೆ. ಆದರೆ ಇದೀಗ ವೈರಲ್​ ಆಗ್ತಾ ಇರೋ ಸುದ್ಧಿ ನಿಜಕ್ಕೂ ಮಿರಾಕಲ್​ ಅನ್ಬೋದು!

  • Share this:

ನಾವು  ಬಸ್ಸಿನಲ್ಲಿ ಪ್ರಯಾಣಿಸುವ (Travelling) ಸಮಯದಲ್ಲಿ ಪೋಷಕರು  ಕಿಟಕಿಯ ಬಳಿ ಬಂದು, ಬಸ್ಸಿನಲ್ಲಿ ಕುಳಿತಾಗ ಹೊರಗಡೆ ಕೈ ಹಾಕಬೇಡ, ತಲೆಯನ್ನು ಯಾವುದೇ ಕಾರಣಕ್ಕೂ ಹೊರಗೆ ಹಾಕಬೇಡ, ಬಸ್ಸು ಹೋಗ್ತಾ ಇಳಿಬೇಡ, ಕಂಡಕ್ಟರ್​ ಹತ್ರ ಹೇಳಿಯೇ ಬಸ್ಸಿನಿಂದ ಇಳಿ ಅಂತೆಲ್ಲಾ ಒಂದಷ್ಟು ಬುದ್ಧಿ ಮಾತುಗಳನ್ನು ಹೇಳುತ್ತಾರೆ ಅಲ್ವಾ? ಇದು ಒಂದೆಡೆ ಆದ್ರೆ, ರೈಲಿನ ವಿಚಾರವೇ ಬೇರೆ ಬಿಡಿ. ರೈಲು ಚಲಿಸುವಾಗ ನಾವು ಆದಷ್ಟು ಜಾಗರೂಕರಾಗಿರಬೇಕು. ರೈಲು (Rail)  ಹೋಗುತ್ತಿರುವಾಗ ಬಾಗಿಲಿನಲ್ಲಿ ನಿಂತು ವಿಡಿಯೋ ಮಾಡುವುದು, ತರ್ಲೆಗಳನ್ನು ಮಾಡಬಾರದು. ಇನ್ನು ಬಾಗಿಲಿನ ತುದಿ ನಿಂತು ವಿಡಿಯೋ (Video) ಮಾಡುತ್ತಾ ಇರುವಾಗ ಅದೆಷ್ಟೋ ಪ್ರಾಣಹಾನಿ ಆಗಿರುವ ಉದಾಹರಣೆಗಳು ನಮಗೆ ಗೊತ್ತು.


ಅದೃಷ್ಟ ಚೆನ್ನಾಗಿದ್ರೆ  ಏನು ಬೇಕಾದರು ಮಿರಾಕಲ್​ ಆಗ್ಬೋದು ಅನ್ನೋದಕ್ಕೆ ಈತನೇ ಸಾಕ್ಷಿ! ಯಾಕಂದ್ರೆ ಈ ವಿಡಿಯೋ ನೋಡಿದ್ರೆ ನಿಮಗೇ ಶಾಕ್​ ಆಗೋದಂತೂ ಪಕ್ಕಾ! ರೈಲ್ವೇ ನಿಲ್ಧಾಣದಲ್ಲಿ ಈ ರೀತಿಯಾದ  ಘಟನೆಗಳು ನಡೆಯುತ್ತಲೇ ಇರುತ್ತದೆ. ಈ ಹಿಂದೆ ರೈಲು ಆಕಡೆಯಿಂದ ಬರುವಾಗ ಒಂದು ಮಗುವನ್ನು ಓರ್ವ ವ್ಯಕ್ತಿ  ರೈಲಿನತ್ತ ತಳ್ಳುತ್ತಾನೆ. ಈ ವಿಡಿಯೋ ಅಂತು ಎಲ್ಲರನ್ನೂ ಬೆಚ್ಚಿಬೀಳಿಸಿದೆ ಅಂತಾನೇ ಹೇಳಬಹುದು.


ವೈರಲ್​ ಆದ ಘಟನೆ ಏನು?


ಪ್ರಯಾಣಿಕರನ್ನು ರಕ್ಷಿಸಲು ರೈಲ್ವೆ ಭದ್ರತಾ ಸಿಬ್ಬಂದಿಯನ್ನು ಪ್ಲಾಟ್‌ಫಾರ್ಮ್‌ನಲ್ಲಿ ನಿಯೋಜಿಸಲಾಗಿದೆ. ಭಾರತೀಯ ರೈಲ್ವೇ ಯಾವಾಗಲೂ ಎಲ್ಲಾ ಪ್ರಯಾಣಿಕರಿಗೆ ಚಲಿಸುವ ರೈಲನ್ನು ಹತ್ತಬೇಡಿ ಎಂದು ಸಲಹೆ ನೀಡುತ್ತದೆ, ಇಲ್ಲದಿದ್ದರೆ ಅವರು ಅಪಘಾತವನ್ನು ಎದುರಿಸಬೇಕಾಗುತ್ತದೆ. ಆದರೆ ಇನ್ನೂ ಪ್ರಯಾಣಿಕರು ಈ ನಿಯಮಗಳನ್ನು ನಿರ್ಲಕ್ಷಿಸಿ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತಾರೆ.


ಸದ್ಯ, ಅಂತಹದ್ದೇ ಘಟನೆಯ ವಿಡಿಯೋವೊಂದು ಹೊರಬಿದ್ದಿದೆ. ಈ ವೀಡಿಯೋ ನೋಡುವುದರಿಂದ ನಿಮಗೂ ಭಯ ಆಗುತ್ತೆ. ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಯೊಬ್ಬರು ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ವೃದ್ಧೆಯ ಪ್ರಾಣ ಉಳಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ರೈಲ್ವೇ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.


ಇದನ್ನೂ ಓದಿ: ಒಂದು ಮಾತ್ರೆ ನಿಲ್ಲಿಸಿದ್ಲು ಅಷ್ಟೇ! ಈಗ ಆಕೆಗೆ ಹುಡುಗರಿಗಿಂತ ಹುಡುಗಿಯರೇ ಇಷ್ಟವಂತೆ!


ವೀಡಿಯೊವನ್ನು ಹಂಚಿಕೊಂಡಿರುವ ಭಾರತೀಯ ರೈಲ್ವೇಸ್ ಶೀರ್ಷಿಕೆಯಲ್ಲಿ, "ಬಿಹಾರದ ಪುರ್ನಿಯಾದಲ್ಲಿ ಚಲಿಸುವ ರೈಲನ್ನು ಹತ್ತುವಾಗ ಅಪಘಾತಕ್ಕೀಡಾದ ಪ್ರಯಾಣಿಕನನ್ನು ಎಚ್‌ಪಿಎಫ್ ಜವಾನ್ ರಕ್ಷಿಸಿದ್ದಾರೆ. ದಯವಿಟ್ಟು ಚಲಿಸುವ ರೈಲನ್ನು ಹತ್ತಲು/ಇಳಿಯಲು ಪ್ರಯತ್ನಿಸಬೇಡಿ" ಎಂದು ಬರೆದಿದ್ದಾರೆ. ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಈ ರೈಲ್ವೇ ಭದ್ರತಾ ನೌಕರನನ್ನು ಜನ ಕೊಂಡಾಡಿದ್ದಾರೆ.ಈ 20 ಸೆಕೆಂಡುಗಳ ವೀಡಿಯೊದಲ್ಲಿ, ವಯಸ್ಸಾದ ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ನಂತರ ವೀಡಿಯೊದಲ್ಲಿ, ಅವನು ರೈಲು ಮತ್ತು ಹಳಿಗಳ ನಡುವೆ ಬೀಳುತ್ತಾರೆ, ರೈಲು ಅವರನ್ನು ಕೆಲವು ಅಡಿಗಳಷ್ಟು ಎಸೆಯುತ್ತದೆ. ಆಗ ಓರ್ವ ಆರ್‌ಪಿಎಫ್ ಜವಾನ ವೃದ್ಧನ ಜೀವ ಉಳಿಸಲು ಮುಂದೆ ಬಂದು ಆತನನ್ನು ಕೈ ಹಿಡಿದು ಹೊರಗೆಳೆದರು.


ಇದಾದ ನಂತರ ಚಲಿಸುತ್ತಿದ್ದ ರೈಲು ಕೆಲವು ಸೆಕೆಂಡುಗಳ ನಂತರ ನಿಂತಿತು. ಟ್ವಿಟ್ಟರ್ ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ, "ಒಳ್ಳೆಯದು! ಚೆನ್ನಾಗಿದೆ. ನೀವು ಅಮೂಲ್ಯವಾದ ಜೀವವನ್ನು ಉಳಿಸಿದ್ದೀರಿ. ನಾನು ಅದೇ ರೈಲಿನಲ್ಲಿದ್ದೆ." ಆದರೆ, ರೈಲಿನಲ್ಲಿ ಇರುವ ಕಾರಣದಿಂದಾಗಿ ಯಾವ ಸಮಯ ಹೇಗಿರುತ್ತದೆ ಎಂದು ಹೇಳಲು ಅಸಾಧ್ಯ.


ಈ ವಿಡಿಯೋ ನೋಡಿದ ಮೇಲೆ ನೀವಂತು ಬಸ್​, ಮೆಟ್ರೋ, ರೈಲುಗಳನ್ನು ಹತ್ತುವಾಗ ತುಂಬಾ ಜಾಗರೂಕರಾಗಿರಬೇಕು ಅಂತ ಅಂದುಕೊಂಡಿರುತ್ತೀರ ಅಲ್ವಾ?

First published: