ಲೈವ್​ ಶೋನಲ್ಲಿ ಸಂಗೀತಕಾರನನ್ನು ತಬ್ಬಿಕೊಂಡ ಮಹಿಳೆಗೆ ಭಯಾನಕ ಶಿಕ್ಷೆ!


Updated:July 16, 2018, 4:27 PM IST
ಲೈವ್​ ಶೋನಲ್ಲಿ ಸಂಗೀತಕಾರನನ್ನು ತಬ್ಬಿಕೊಂಡ ಮಹಿಳೆಗೆ ಭಯಾನಕ ಶಿಕ್ಷೆ!

Updated: July 16, 2018, 4:27 PM IST
ನ್ಯೂಸ್​ 18 ಕನ್ನಡ

ಸೌದಿ ಅರೇಬಿಯಾ(ಜು.16): ಸೌದಿ ಅರೇಬಿಯಾದ ರಿಯಾದ್​ ಬಳಿ ನಡೆದ ಘಟನೆಯೊಂದು ಎಲ್ಲರಿಗೂ ಆಘಾತ ನೀಡಿದೆ. ಲೈವ್​ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬಳು ಸಂಗೀತಕಾರನನ್ನು ತಬ್ಬಕೊಂಡಿದ್ದಕ್ಕೆ ಆಕೆಯನ್ನು ಬಂಧಿಸಲಾಗಿದೆ. ಶುಕ್ರವಾರದಂದು ಸಿಂಗರ್​ ಮಾಜಿದ್​-ಲ-ಮೋಹನ್​ದಿಸ್​, ಸೌದಿ ಅರೇಬಿಯಾದ ಹಬ್ಬದಲ್ಲಿ ಲೈವ್​ ಪ್ರದರ್ಶನ ನೀಡುತ್ತಿದ್ದರು. ಅದೇ ಸಂದರ್ಭದಲ್ಲಿ ಮಹಿಳೆಯು ಆತುರಾತುವಾಗಿ ವೇದಿಕೆಗೆ ಬಂದು ಮಾಜಿದ್​ರನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ಇದಾದ ಬಳಿಕ ಸೆಕ್ಯೂರಿಟಿ ಗಾರ್ಡ್​ಗಳು ಮಹಿಳೆಯನ್ನು ದೂರ ಸರಿಸಿ ಅಲ್ಲಿಂದ ದೂರ ಕೊಂಡೊಯ್ದಿದ್ದಾರೆ.

ಸೌದಿ ಅರೇಬಿಯಾದಲ್ಲಿ ಯುವಕ ಯುವತಿಯರು ಒಟ್ಟಿಗೆ ಓಡಾಡಲು ಅನುಮತಿ ಇಲ್ಲ. ಹೀಗಿರುವಾಗ ಮಹಿಳೆಯು ವೇದಿಕೆ ಏರಿ ಮಾಜಿದ್​ರನ್ನು ತಬ್ಬಿಕೊಂಡಿದ್ದಾಳೆ. ಹೀಗಾಗಿ ಪೊಲಿಸರು ಆಕೆಯನ್ನು ಬಂಧಿಸಿದ್ದಾರೆ. ಈ ಎಲ್ಲಾ ಘಟನೆಗಳ ಬಳಿಕ ವಿಡಿಯೋ ಕೂಡಾ ವೈರಲ್​ ಆಗಿದೆ.


ಮೆಕ್ಕಾ ಪೊಲೀಸ್​ ಆಯುಕ್ತರು ಈ ಪ್ರಕರಣದ ಕುರಿತಾಗಿ ಪ್ರತಿಕ್ರಿಯಿಸಿದ್ದು, "ನಾವು ಮಹಿಳೆಯನ್ನು ಬಂಧಿಸಿದ್ದೇವೆ. ಕ್ರಿಮಿನಲ್​ ಕಿರುಕುಳ ನೀಡಿರುವ ಆರೋಪದಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ. ಘಟನೆಯ ಬಳಿಕ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದಿದ್ದಾರೆ. ಇನ್ನು ಈ ಘಟನೆಯ ಬಳಿಕ ಸಂಗೀತಕಾರ ಮಾಜಿದ್​ ತಮ್ಮ ಲೈವ್​ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ವಿಡಿಯೋ ವೈರಲ್​ ಆಗಿದ್ದರೂ ಸಿಂಗರ್​ ಮಾಜಿದ್​ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಜಿದ್​ರನ್ನು ಪ್ರಿನ್ಸ್​ ಆಫ್​ ಅರಬ್​ ಸಿಂಗರ್​ ಎಂದೂ ಕರೆಯಲಾಗುತ್ತದೆ. ಮಾಜಿದ್​ ಮೂಲತಃ ಇರಾಕ್​ನವರಾಗಿದ್ದು, ಅವರ ಬಬಳಿ ಸೌದಿ ಅರೇಬಿಯಾದ ಪೌರತ್ವವೂ ಇದೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...