• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Love: ಇದಪ್ಪಾ ಪ್ರೀತಿ ಅಂದ್ರೆ! 1 ವರ್ಷ ಆರೈಕೆ ಮಾಡಿದ್ದಾತನ ನೋಡಿ ಕುಣಿದಾಡಿದ ಕೊಕ್ಕರೆ- ವಿಡಿಯೋ ವೈರಲ್

Love: ಇದಪ್ಪಾ ಪ್ರೀತಿ ಅಂದ್ರೆ! 1 ವರ್ಷ ಆರೈಕೆ ಮಾಡಿದ್ದಾತನ ನೋಡಿ ಕುಣಿದಾಡಿದ ಕೊಕ್ಕರೆ- ವಿಡಿಯೋ ವೈರಲ್

ಕೊಕ್ಕರೆ & ಆರಿಫ್

ಕೊಕ್ಕರೆ & ಆರಿಫ್

ಹದಿನೈದು ದಿನಗಳ ನಂತರ ಆರಿಫ್ ನನ್ನು ಮತ್ತೆ ನೋಡಿದ ಆ ಕೊಕ್ಕರೆ ಹೇಗೆ ಅತ್ತಿಂದಿತ್ತ ಕುಣಿದಾಡಿದೆ ನೋಡಿ.

  • Share this:

ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲೂ ಇರುವಂತಹ ಪ್ರಾಣಿ ಪಕ್ಷಿಗಳಿಗೆ (Pets) ನಾವೇನಾದರೂ ಅವುಗಳಿಗೆ ತಿನ್ನಲು ಆಹಾರ (Food) ಕೊಟ್ಟರೆ ಅಥವಾ ಕುಡಿಯಲಿಕ್ಕೆ ನೀರನ್ನು (Water) ಒಂದು ಚಿಕ್ಕ ಬಟ್ಟಲಿನಲ್ಲಿ ಹಾಕಿಟ್ಟರೆ, ಅವುಗಳು ದಿನಾ ಬಂದು ಅಲ್ಲಿಯೇ ಕುಳಿತುಕೊಳ್ಳುತ್ತವೆ. ಅಂತಹದರಲ್ಲಿ ಸಣ್ಣ ಪುಟ್ಟ ಗಾಯಗಳಾಗಿರುವ ಪ್ರಾಣಿ ಪಕ್ಷಿಗಳಿಗೆ ನಾವು ಆರೈಕೆ ಮಾಡಿದರೆ, ಅವು ನಮ್ಮನ್ನು ಬಿಟ್ಟು ಹೋಗುತ್ತವೆಯೇ? ಪ್ರಾಣಿ ಪಕ್ಷಿಗಳಿಗೆ ಸಣ್ಣಪುಟ್ಟ ಗಾಯಗಳಾದರೆ (Wound), ಅವುಗಳನ್ನು ನಾವು ಗುಣಪಡಿಸಿದರೆ, ಅವು ನಮ್ಮ ಮೇಲೆ ತುಂಬಾನೇ ಪ್ರೀತಿ (Love) ತೋರಿಸುತ್ತವೆ ಅಂತ ಹೇಳಬಹುದು.


ಸಾರಸ್ ಕೊಕ್ಕರೆಗೆ ಆರೈಕೆ ಮಾಡಿದ ಯುಪಿ ವ್ಯಕ್ತಿ


ಇಲ್ಲೊಂದು ವೀಡಿಯೋ ಇದೆ ನೋಡಿ, ಇದನ್ನು ನೋಡಿದರೆ ಪ್ರಾಣಿ ಪಕ್ಷಿಗಳು ಎಷ್ಟು ಕೃತಜ್ಞರಾಗಿರುತ್ತವೆ ಮತ್ತು ಪ್ರೀತಿ ತೋರಿಸುತ್ತವೆ ಅಂತ ತಿಳಿಯಬಹುದು.


ಉತ್ತರ ಪ್ರದೇಶದ ವ್ಯಕ್ತಿ ಮತ್ತು ಸಾರಸ್ ಕೊಕ್ಕರೆ (ಕ್ರೇನ್) ನಡುವಿನ ಅನನ್ಯ ಸ್ನೇಹವು ಕೆಲವು ವಾರಗಳ ಹಿಂದೆ ಸುದ್ದಿಯಾಗಿತ್ತು. ಅಮೇಥಿಯ ಮೊಹಮ್ಮದ್ ಆರಿಫ್ ಎಂಬ ವ್ಯಕ್ತಿ ಅಳಿವಿನಂಚಿನಲ್ಲಿರುವ ಪಕ್ಷಿಯನ್ನು ರಕ್ಷಿಸಿ ಮತ್ತೆ ಅದು ಆರೋಗ್ಯವಾಗುವಂತೆ ಮಾಡಿದ್ದರು.


ಕೊಕ್ಕರೆ ಪೂರ್ತಿಯಾಗಿ ಹುಷಾರಾದ ನಂತರ ಅದು ಆರಿಫ್ ಅವರು ವಾಸಿಸುವ ಪಟ್ಟಣದಾದ್ಯಂತ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿತು ಮತ್ತು ಅವರ ವೀಡಿಯೋಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆದವು.


ಇದನ್ನೂ ಓದಿ: Birds Intresting Facts: ಮರದ ತುದಿಯಲ್ಲಿ ಮಲಗಿದ್ರೂ ಪಕ್ಷಿಗಳು ಬೀಳುವುದಿಲ್ಲ ಏಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ


ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿದಾಗ, ಅವರು ಆರಿಫ್ ನಿಂದ ಆ ಕೊಕ್ಕರೆಯನ್ನು ಬೇರ್ಪಡಿಸಿದರು ಮತ್ತು ಅವನಿಗೆ ಒಂದು ನೋಟಿಸ್ ಸಹ ಕಳುಹಿಸಿದರಂತೆ.


ಆರಿಫ್ ಮತ್ತು ಕೊಕ್ಕರೆಯನ್ನು ಮತ್ತೆ ಒಗ್ಗೂಡಿಸಲು ಸರ್ಕಾರಕ್ಕೆ ಮನವಿ ಮಾಡಿದ ಜನರು


ಆದರೆ ಅವರಿಬ್ಬರ ಮಧ್ಯೆ ಹುಟ್ಟಿದ ಸ್ನೇಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಅಂತ ಹೇಳಬಹುದು. ಏಕೆಂದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಆರಿಫ್ ಮತ್ತು ಈ ಕೊಕ್ಕರೆಯನ್ನು ಮತ್ತೆ ಒಗ್ಗೂಡಿಸಲು ಏನಾದರೂ ಮಾಡಬೇಕೆಂದು ಸರ್ಕಾರವನ್ನು ಬೇಡಿಕೊಳ್ಳುತ್ತಲೇ ಇದ್ದರು. ಇದಕ್ಕೆ ಮತ್ತೆ ಅವರಿಬ್ಬರು ಭೇಟಿ ಮಾಡುವ ಅವಕಾಶವನ್ನು ನೀಡಿದರು.


ಹದಿನೈದು ದಿನಗಳ ನಂತರ ಆರಿಫ್ ನನ್ನು ಮತ್ತೆ ನೋಡಿದ ಆ ಕೊಕ್ಕರೆ ಹೇಗೆ ಅತ್ತಿಂದಿತ್ತ ಕುಣಿದಾಡಿದೆ ನೋಡಿ. ಕೊಕ್ಕರೆಯ ಪ್ರತಿಕ್ರಿಯೆಯ ಹೃದಯಸ್ಪರ್ಶಿ ವೀಡಿಯೋ ಈಗ ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಮತ್ತೆ ಜನರ ಗಮನವನ್ನು ಸೆಳೆಯುತ್ತಿದೆ.


ಕೊಕ್ಕರೆಯನ್ನು ದೊಡ್ಡದಾದ ಒಂದು ಪಂಜರದಲ್ಲಿ ಇರಿಸಲಾಗಿರುವ ಕಾನ್ಪುರ ಮೃಗಾಲಯಕ್ಕೆ ಆರಿಫ್ ಭೇಟಿ ನೀಡಿದ ಸಂದರ್ಭದಲ್ಲಿ ಈ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ.


ಕೈಲಾಶ್ ನಾಥ್ ಎಂಬುವವರು ಈ ವೀಡಿಯೋವನ್ನ ಟ್ವೀಟ್ ಮಾಡಿದ್ದಂತೆ..


ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಕೈಲಾಶ್ ನಾಥ್ ಯಾದವ್ ಎಂಬುವವರು ಈ ಹೃದಯಸ್ಪರ್ಶಿ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ."ಇಂದು, ಮತ್ತೊಮ್ಮೆ ತನಗೆ ಜೀವ ನೀಡಿದ ಸ್ನೇಹಿತ ಆರಿಫ್ ನನ್ನು ನೋಡಿ ಕೊಕ್ಕರೆ ಹೇಗೆ ಅತ್ತಿಂದಿತ್ತ ಓಡಾಡಿದೆ ನೋಡಿ. ಆದರೆ ಇಬ್ಬರೂ ಅಸಹಾಯಕರಾಗಿದ್ದರು ಮತ್ತು ಪರಸ್ಪರರನ್ನು ಸ್ಪರ್ಶಿಸಲು ಸಾಧ್ಯವಾಗಲಿಲ್ಲ" ಎಂದು ಯಾದವ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


ಎಸ್‌ಪಿ ಶಾಸಕ ಅಮಿತಾಭ್ ವಾಜಪೇಯಿ ಎಂದು ಹೇಳಿಕೊಂಡ ವ್ಯಕ್ತಿಯೊಂದಿಗೆ ಆರಿಫ್ ಪಕ್ಷಿಯ ಆವರಣದ ಹೊರಗೆ ನಿಂತಿರುವುದು ವೀಡಿಯೋದಲ್ಲಿ ಕಂಡು ಬರುತ್ತದೆ.
ಏತನ್ಮಧ್ಯೆ, ಸಾರಸ್ ಕೊಕ್ಕರೆ ತುಂಬಾನೇ ಉತ್ಸಾಹದಿಂದ ಜಿಗಿಯುವುದನ್ನು ಕಾಣಬಹುದು. ಪಕ್ಷಿ ತನ್ನ ರೆಕ್ಕೆಗಳನ್ನು ಸಹ ಹರಡುತ್ತದೆ ಮತ್ತು ಆ ಅವರಣದಿಂದ ಹೊರಬರುವ ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತದೆ.


ಒಂದು ವರ್ಷ ಆ ಪಕ್ಷಿಯ ಆರೈಕೆ ಮಾಡಿದ್ರು ಆರಿಫ್


ಆರಿಫ್ ಕಳೆದ ಫೆಬ್ರವರಿಯಲ್ಲಿ ಗಾಯಗೊಂಡ ಪಕ್ಷಿಯನ್ನು ತನ್ನ ಹೊಲದಲ್ಲಿ ನೋಡಿದನು ಮತ್ತು ಅದನ್ನು ಒಂದು ವರ್ಷದವರೆಗೆ ನೋಡಿಕೊಂಡನು. ಆದರೆ ಸಾರಸ್ ಪಕ್ಷಿಯನ್ನು ಕಾನ್ಪುರ ಮೃಗಾಲಯಕ್ಕೆ ಸ್ಥಳಾಂತರಿಸಿದ ನಂತರ ಪಕ್ಷಿ ಸರಿಯಾಗಿ ಆಹಾರವನ್ನು ತಿನ್ನುತ್ತಿಲ್ಲ ಎಂಬ ವರದಿಗಳು ಹೊರ ಬಂದವು.


ಟ್ವಿಟರ್ ಬಳಕೆದಾರರು ಈ ವೀಡಿಯೋದಿಂದ ತುಂಬಾನೇ ಪ್ರಭಾವಿತರಾಗಿದ್ದಾರೆ ಮತ್ತು ಈ ಕೊಕ್ಕರೆಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಮೃಗಾಲಯದ ಅಧಿಕಾರಿಗಳು ಈ ವಿಷಯಗಳು ಸ್ವಲ್ಪ ದಿನಗಳ ನಂತರ ಮತ್ತೆ ಸುಧಾರಿಸುತ್ತವೆ ಮತ್ತು ಅದನ್ನು ಅಂತಿಮವಾಗಿ ಕಾಡಿನಲ್ಲಿ ಬಿಡಲಾಗುವುದು ಎಂದು ಹೇಳಿದರು.

First published: