ಟ್ರೆಂಡ್​ ಆಯ್ತು ಸೈನಿಕರ ಸಾಹಸ ದೃಶ್ಯಗಳನ್ನೊಳಗೊಂಡ ನೀರೆಯರ ಸೀರೆ

ಸದ್ಯ ಸಿಕ್ಕಾಪಟ್ಟೆ ಟ್ರೆಂಡ್​ ಆಗಿರುವ ಈ ಸೀರೆಗೆ ಬೇಡಿಕೆ ಕೂಡ ಹೆಚ್ಚಿದೆ. ಜೂ ಬಿಯರ್​ ಎಂಬಾತ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಸೈನಿಕರ ಚಿತ್ರಣವನ್ನು ಅಚ್ಚುಹಾಕಿದ ಸೀರೆಗಳ ಫೋಟೋವನ್ನು ಶೇರ್​ ಮಾಡಿದ್ದು, ಬಾರಿ ಮೆಚ್ಚುಗೆಯ ಪ್ರತಿಕ್ರೀಯೆ ವ್ಯಕ್ತ ಪಡಿಸುತ್ತಿದ್ದಾರೆ.  ಪುಲ್ವಾಮ ದಾಳಿಯ ಕುರಿತಾಗಿ ಸೂರತ್​ ಸೀರೆ ಮಳಿಗೆಯು ಮಾಡಿದ ಹೋಸ ಯೋಜನೆ ಇದೀಗ ಸಕ್ಕತ್​ ವೈರಲ್​ ಆಗುತ್ತಿದೆ.

ಸೀರೆ

ಸೀರೆ

  • News18
  • Last Updated :
  • Share this:
ಇತ್ತೀಚೆಗೆ ನಡೆದ ಪುಲ್ವಾಮ ಉಗ್ರರ ದಾಳಿಯಿಂದಾಗಿ ಭಾರತೀಯ 49 ಸೈನಿಕರು ಹುತಾತ್ಮರಾಗಿರುವುದು ದೇಶದ ಪ್ರತಿಯೊಬ್ಬನ ಕಣ್ಣನ್ನು ತೊಯಿಸಿದೆ.

ಭಾರತದ ಸೈನಿಕರು ಪಾಕಿಸ್ತಾನದ ಉಗ್ರರ ದಮನಕ್ಕೆ ಕೈಗೊಂಡ ಕ್ರಮದ ಬಗ್ಗೆ ಈಗ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಜೊತೆಗೆ ಅವರ ಕಾರ್ಯ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಉಕ್ಕಿಸಿದೆ. ಈ ದೇಶಾಭಿಮಾನದಿಂದ  ಸೂರತ್​ನ ​​​ ಸೀರೆ ತಯಾರಿಕರೊಬ್ಬರು  ಸೀರೆಯಲ್ಲಿ ಸೈನಿಕರ ಸಾಹಸ ದೃಶ್ಯಗಳನ್ನು ಮೂಡಿಸಿದ್ದಾರೆ.

ಸೀರೆಯಲ್ಲಿ ವಿಶಿಷ್ಟ ಚಿತ್ರಗಳನ್ನು ಮೂಡಿಸುತ್ತಿದ್ದ ಈ  ಸೀರೆ ತಯಾರಕರು, ಈ ಬಾರಿ ಮೋದಿ ಸೇರಿದಂತೆ ಭಾರತೀಯ ಸೈನಿಕರ ಚಿತ್ರಣವನ್ನು ಸೀರೆಯ ಮೇಲೆ ಮೂಡಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ಸದ್ಯ ಸಿಕ್ಕಾಪಟ್ಟೆ ಟ್ರೆಂಡ್​ ಆಗಿರುವ ಈ ಸೀರೆಗೆ ಬೇಡಿಕೆ ಕೂಡ ಹೆಚ್ಚಿದೆ. ಜೂ ಬಿಯರ್​ ಎಂಬಾತ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಸೈನಿಕರ ಚಿತ್ರಣವನ್ನು ಅಚ್ಚುಹಾಕಿದ ಸೀರೆಗಳ ಫೋಟೋವನ್ನು ಶೇರ್​ ಮಾಡಿದ್ದು, ಬಾರಿ ಮೆಚ್ಚುಗೆಯ ಪ್ರತಿಕ್ರೀಯೆ ವ್ಯಕ್ತ ಪಡಿಸುತ್ತಿದ್ದಾರೆ.  ಪುಲ್ವಾಮ ದಾಳಿಯ ಕುರಿತಾಗಿ ಸೂರತ್​ ಸೀರೆ ಮಳಿಗೆಯು ಮಾಡಿದ ಹೋಸ ಯೋಜನೆ ಇದೀಗ ಸಕ್ಕತ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಸಂಕಲ್ಪ ಯಾತ್ರೆ: ಉಗ್ರರ ವಿರುದ್ಧ ಮೋದಿ ಕೈಗೊಂಡ ಕಾರ್ಯ ಶ್ಲಾಘನೀಯ; ನಿತೀಶ್​ ಕುಮಾರ್​ 
First published: