ಮಹಿಳೆಯರ ಸೀರೆ ಮೋಹಕ್ಕೆ ವೇದಿಕೆಯಾದ ಟ್ವಿಟರ್​; ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಸುತ್ತಿರುವ #SareeTwitter

ಸೋಮವಾರ #sareeTwitter ಎಂಬ ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಭಾರೀ ಸದ್ದು ಮಾಡಿದೆ. ರಾಜಕಾರಣಿ, ಸೆಲೆಬ್ರಿಟಿ ಹಾಗೂ ಸಾಮಾನ್ಯ ಮಹಿಳೆ ಕೂಡ ತಮ್ಮ ನೆಚ್ಚಿನ ಸೀರೆಯುಟ್ಟ ಭಾವಚಿತ್ರವನ್ನು ಪೋಸ್ಟ್​ ಮಾಡುವ ಮೂಲಕ ಹೊಸ ಟ್ರೆಂಡ್​ ಸೃಷ್ಟಿಸಿದ್ದಾರೆ.

ಸೀರೆಯುಟ್ಟ ಮಹಿಳೆಯರು

ಸೀರೆಯುಟ್ಟ ಮಹಿಳೆಯರು

  • Share this:
ಸೀರೆ ಎಂದರೆ ಸಾಕು ಹೆಣ್ಮಕ್ಕಳಿಗೆ ಇನ್ನಿಲ್ಲದಂತಹ ಮೋಹ. ಅದೆಷ್ಟೇ ಟ್ರೆಂಡಿಂಗ್​​ ಫ್ಯಾಷನ್​ ಧಿರಿಸುಗಳು ಬಂದರೂ ಸೀರೆಗೆ ಸೀರೆಯೇ ಸರಿಸಾಟಿ.

ಸರ್ವಕಾಲಕ್ಕೂ ಮಹಿಳೆಯರ ನೆಚ್ಚಿನ ಉಡುಪು ಈ ಸೀರೆ. ಮಹಿಳೆಯ ಅಂದ ಹೆಚ್ಚಿಸುವ ಈ ಸೀರೆಗೆ ಫಿದಾ ಆಗದವರಿಲ್ಲ. ಇದೇ ಕಾರಣಕ್ಕೆ ಕೇವಲ ಭಾರತೀಯ ಮಹಿಳೆಯರಿಗೆ ಮಾತ್ರವಲ್ಲ ಇದರ ವ್ಯಾಮೋಹ ಸಾಗರದಾಚೆಗೂ ಹಬ್ಬಿದೆ.

ಮಹಿಳೆಯರಿಗೆ ಈ ಸೀರೆಯ ಬಗ್ಗೆಗಿನ ಪ್ರೀತಿ ಈಗ ಟ್ವಿಟರ್​ನಲ್ಲಿ ಬಹಿರಂಗ ಗೊಂಡಿದೆ. ಸೋಮವಾರ #sareeTwitter ಎಂಬ ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಭಾರೀ ಸದ್ದು ಮಾಡಿದೆ. ರಾಜಕಾರಣಿ, ಸೆಲೆಬ್ರಿಟಿ ಹಾಗೂ ಸಾಮಾನ್ಯ ಮಹಿಳೆಯರು ಕೂಡ ತಮ್ಮ ನೆಚ್ಚಿನ ಸೀರೆಯುಟ್ಟ ಭಾವಚಿತ್ರವನ್ನು ಪೋಸ್ಟ್​ ಮಾಡುವ ಮೂಲಕ ಹೊಸ ಟ್ರೆಂಡ್​ ಸೃಷ್ಟಿಸಿದ್ದಾರೆ.

ಕಾಂಗ್ರೆಸ್​ ವಕ್ತಾರೆ ಐಶ್ವರ್ಯ ಮಹದೇವ್​​

 ಶಿವಸೇನಾ ಪಕ್ಷದ ವಕ್ತಾರೆ  ಚುತುರ್ವೇದಿ

 ಬಿಜೆಪಿ ನಾಯಕಿ ನುಪೂರ್​ ಶರ್ಮಾನಟಿ, ರಾಜಕಾರಣಿ ನಗ್ಮಾ

First published: