Saree Secrets: ಸೀರೆ ಉಟ್ಟು ಸುಂದರವಾಗಿ ಕಾಣಬೇಕೇ? ಈ ರೀತಿ ಮಾಡಿ ನೀವು ಗೊಂಬೆ ತರ ಕಾಣಿಸ್ತೀರಿ!

ನೀವು ಉಡುವ ಸೀರೆ ನಿಮ್ಮ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಸೀರೆ ಉಡುವಾಗ ಬಟ್ಟೆಯಿಂದ ಹಿಡಿದು ಅದನ್ನು ತೊಡುವ ರೀತಿ ಎಲ್ಲವೂ ಮುಖ್ಯವಾಗುತ್ತದೆ. ಅದಕ್ಕೆ ಸೀರೆ ಉಡುವ ಮುನ್ನ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ ಓದಿ...

ಸಾಂದರ್ಭಿಕ ಚಿತ್ರ
(ಕೃಪೆ: ದಿ ವೆಡ್ಡಿಂಗ್ ಬ್ರಿಗೇಡ್)

ಸಾಂದರ್ಭಿಕ ಚಿತ್ರ (ಕೃಪೆ: ದಿ ವೆಡ್ಡಿಂಗ್ ಬ್ರಿಗೇಡ್)

  • Share this:
    ಸೀರೆಯು (Saree) ಭಾರತೀಯ (Indian) ಸಾಂಪ್ರದಾಯಿಕ (Traditional) ಉಡುಪು ಆಗಿದ್ದು, ಇದನ್ನು ಇಂದು ಹಲವು ವಿಧಗಳಲ್ಲಿ ಧರಿಸಲಾಗುತ್ತದೆ. ನಿಮ್ಮ ಸೀರೆಯೊಂದಿಗೆ ನೀವು ಪ್ರಯೋಗ ಮಾಡಬಹುದಾದ ಹಲವಾರು ಟ್ರೆಂಡ್‍ಗಳು (Trends) ಬರುತ್ತವೆ ಮತ್ತು ಹೋಗುತ್ತವೆ. ಆದರೂ, ನೀವು ತಿಳಿದಿರಬೇಕಾದ ಕೆಲವು ರಹಸ್ಯಗಳಿವೆ, ಅದು ಯಾವಾಗಲೂ ನಿಮ್ಮ ತಲೆಯಲ್ಲಿ ಇರಬೇಕು. ಆ ರಹಸ್ಯಗಳು (Secrets) ನಿಮ್ಮ ನೋಟದ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಸೀರೆ ಉಡುವಾಗ ಬಟ್ಟೆಯಿಂದ ಹಿಡಿದು ಅದನ್ನು ತೊಡುವ ರೀತಿ ಎಲ್ಲವೂ ಮುಖ್ಯವಾಗುತ್ತದೆ. ಅದಕ್ಕೆ ಸೀರೆ ಉಡುವ ಮುನ್ನ ಏನು ಮಾಡಬೇಕು. ನಿಮ್ಮ ಸೀರೆಯ ಅಂದ ಹೆಚ್ಚಿಸಲು ಐದು ಮಾರ್ಗಗಳು ಇವು.

    ಸರಿ ಹೊಂದುವ ಬ್ಲೌಸ್
    ಸೀರೆ ಉಡುವಾಗ, ನಿಮ್ಮ ಕುಪ್ಪಸವು ಹೆಚ್ಚು ಮುಖ್ಯವಾಗಿದೆ. ಬ್ಲೌಸ್‍ನಲ್ಲಿರುವ ವಿನ್ಯಾಸ ನಿಮ್ಮ ಸೀರೆಯ ಅಂದ ಹೆಚ್ಚಿಸಬಹುದು. ಮಾರುಕಟ್ಟೆಯಲ್ಲಿ ಹಲವಾರು ವಿನ್ಯಾಸಗಳು ಇರುವುದರಿಂದ, ನಿಮ್ಮ ಸೀರೆ ಬಟ್ಟೆಗೆ ಸೂಕ್ತವಾದ ಅತ್ಯುತ್ತಮ ಆಯ್ಕೆಯನ್ನು ನೀವು ಆರಿಸಿಕೊಳ್ಳಿ. ಕುಪ್ಪಸದ ಮೇಲಿನ ವಿನ್ಯಾಸಗಳು ಭಿನ್ನವಾಗಿರಬೇಕು. ನೀವು ಎದ್ದು ಕಾಣುವಂತೆ ಇರಬೇಕು. ಹೊಸ ಶೈಲಿಗಳು ಮತ್ತು ವಿನ್ಯಾಸಗಳನ್ನು ಪ್ರಯೋಗಿಸಿ. ಆಗ ನೀವು ಸೀರೆ ಉಟ್ಟಾದ ಸುಂದರವಾಗಿ ಕಾಣುತ್ತೀರಿ.

    ಸರಿಯಾದ ಬಣ್ಣ ಆಯ್ಕೆ ಮಾಡಿ
    ನೀವು ಉಡುಪನ್ನು ಧರಿಸಿದಾಗ ಬಣ್ಣದ ಹೆಚ್ಚು ಮುಖ್ಯವಾಗಿದೆ. ನೀವು ಮಂದವಾಗಿ ಕಾಣುವ ಬದಲು ಪ್ರಕಾಶ ಮಾನವಾಗಿ ಕಾಣುವ ಬಣ್ಣಗಳನ್ನು ಆರಿಸಿಕೊಳ್ಳಬೇಕು. ಬಣ್ಣಗಳು ತುಂಬಾ ಶಕ್ತಿಯುತವಾಗಿವೆ ಆದ್ದರಿಂದ ಅವುಗಳು ನಿಮ್ಮ ಅಂದ ಹೆಚ್ಚಿಸುತ್ತವೆ. ವಿಶೇಷವಾಗಿ ಸೀರೆಗಳೊಂದಿಗೆ, ಬ್ಲೌಸ್‍ನ ಬಣ್ಣ ಮತ್ತು ವಿನ್ಯಾಸ ಮತ್ತು ಬಾರ್ಡರ್ ಸೊಗಸಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಆನಂತರ ಸೀರೆ ಉಡಬೇಕು. ನಿಮ್ಮ ದೇಹದ ಬಣ್ಣಕ್ಕೆ ಮ್ಯಾಚ್ ಆಗುವ ಕಲರ್ ಸೀರೆಗಳನ್ನು ಹಾಕಿಕೊಳ್ಳಿ.

    ಇದನ್ನೂ ಓದಿ: Independence Day: 75ನೇ ಸ್ವಾತಂತ್ರ್ಯ ದಿನಾಚರಣೆಗೆ ಪುಟಾಣಿಗಳು ಹೇಗೆ ರೆಡಿಯಾಗಿದ್ರು? ನೀವೇ ನೋಡಿ

    ಮ್ಯಾಚಿಂಗ್ ಬಳೆ, ಸರ ಹಾಕಿ
    ನೀವು ಸೀರೆ ಉಡುಲು ಪ್ಲ್ಯಾನ್ ಮಾಡಿದ್ರೆ, ಅದಕ್ಕೆ ಮ್ಯಾಚ್ ಆಗುವ ಸರಗಳು, ಕಿವಿಯೋಲೆಗಳನ್ನು ಧರಿಸಬೇಕು. ಅವು ಸೀರೆ ಮ್ಯಾಚ್ ಆಗೋ ರೀತಿ ಇರಬೇಕು. ನೀವು ಚೆಂದನೆಯ ಸೀರೆ ಉಟ್ಟು ಅದಕ್ಕೆ ಸರಿಯಾದ ಸರ, ಬಳೆ, ಕಿವಿಯೋಲೆ ಹಾಕಿದಿದ್ದರೆ, ಚೆನ್ನಾಗಿ ಕಾಣಲ್ಲ. ಅದಕ್ಕೆ ನೀವು ಯಾವಾಗಲು ಉತ್ತವಾದ ಸರ, ಬಳೆಗಳನ್ನು ಹಾಕಿ. ಸೂಕ್ಷ್ಮ ಬಣ್ಣಗಳನ್ನು ಆಯ್ಕೆ ಮಾಡಿದೆರ ಒಳ್ಳೆಯದು.

    ಸೀರೆಗೆ ತಕ್ಕ ಪಾದರಕ್ಷೆಗಳನ್ನು ಧರಿಸಬೇಕು
    ಸೀರೆಗೆ ತಕ್ಕಂತೆ ಸರಿಯಾದ ಪಾದರಕ್ಷೆಗಳನ್ನು ಧರಿಸುವುದು ಅತ್ಯಗತ್ಯ. ಸರಿಯಾದ ಪಾದರಕ್ಷೆಗಳು ನಿಮಗೆ ಹೊಳಪುಳ್ಳ ನೋಟವನ್ನು ಹೊಂದಲು ಸಹಾಯ ಮಾಡುತ್ತದೆ. ಸೀರೆಗೆ ತಕ್ಕಂತೆ ಪಾದರಕ್ಷೆಗಳನ್ನು ಧರಿಸಿ.

    ಜಾಕೆಟ್ ಧರಿಸಿ
    ನಿಮ್ಮ ಸೀರೆಯನ್ನು ಸೊಗಸಾಗಿ ಕಾಣುವಂತೆ ಮಾಡುವ ಸರಳ ವಿಧಾನವೆಂದರೆ ಜಾಕೆಟ್ ಧರಿಸುವುದು. ಇದರರ್ಥ ನೀವು ನಿಮ್ಮ ಬೀರುಗಳಿಂದ ಯಾವುದೇ ಜಾಕೆಟ್ ಅನ್ನು ತೆಗೆದುಕೊಂಡು ಅದನ್ನು ನಿಮ್ಮ ಸೀರೆಯ ಮೇಲೆ ಧರಿಸಬಹುದು ಎಂದಲ್ಲ. ವಿನ್ಯಾಸಗಳು ಚೆನ್ನಾಗಿರಬೇಕು. ಅವು ನಿಮ್ಮ ಸೀರೆಗೆ ಮ್ಯಾಷ್ ಆಗಬೇಕು.

    ಇದನ್ನೂ ಓದಿ: Google Doodle India: ಸ್ವಾತಂತ್ರ್ಯ ದಿನಾಚರಣೆಯನ್ನು ಗೂಗಲ್ ಹೇಗೆಲ್ಲ ಪ್ರದರ್ಶಿಸಿತ್ತು? ಇಲ್ಲಿದೆ ನೋಡಿ

    ಇಳಕಲ್ ಸೀರೆ ವಿಶೇಷತೆ
    ಇಳಕಲ್ ಸೀರೆಗಳ ಅಂಚುಗಳು 3 ಬಗೆಯದಾಗಿರುತ್ತವೆ. 1. ಗೋಮಿ, 2. ಪರಸ್ ಪೇಟ್, 3. ಗಾಡಿ. ಈ ಸೀರೆಗಳ ಮೈ ಅಥವಾ ಒಡಲುಗಳಲ್ಲಿ 3 ವಿನ್ಯಾಸಗಳನ್ನು ನಾವು ಕಾಣಬಹುದು. 'ಬಣ್ಣದ ಪಟ್ಟೆಗಳು', 'ಆಯತಾಕೃತಿ', ಹಾಗೂ 'ಚೌಕಳಿ ಆಕಾರದ ವಿನ್ಯಾಸ'ದವು. ಇಳಕಲ್ ನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ನೇಕಾರರು ಸೀರೆ ನೇಯ್ಗೆ, ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದರ ವಿನ್ಯಾಸ ಹಾಗೂ ನೇಯ್ಗೆಯ ವಿಶೇಷತೆಯೆಂದರೆ, ಸೀರೆಯ ಮೈಗೆ ಹತ್ತಿಎಳೆಗಳನ್ನು ಬಳಸಿದ ಬಾಗು,ಅಥವಾ ವಕ್ರ ಡೊಂಕು ನೇಯ್ಗೆ ವ್ಯವಸ್ಥೆ. ಸೀರೆಯ ಅಂಚಿಗೆ ಹಾಗೂ ಸೆರಗಿಗೆ ಕಚ್ಚಾ ರೇಷ್ಮೆಯ ನೂಲನ್ನು ಬಳಸುತ್ತಾರೆ.
    Published by:Savitha Savitha
    First published: