HOME » NEWS » Trend » SANIA MIRZA SISTER ANAMS INSTAGRAM VIDEO WENT VIRAL KVD

ರಾತ್ರಿ ಇಡೀ ಗಂಡ ಹೇಗೆಲ್ಲಾ ಕಾಟ ಕೊಡ್ತಾನೆ ಅಂತ ವಿಡಿಯೋ ಮಾಡಿದ ಸಾನಿಯಾ ಮಿರ್ಜಾ ತಂಗಿ!

ಅನಮ್​​ ಮಾಜಿ ಕ್ರಿಕೆಟಿಗ ಅಜಾರುದ್ದೀನ್​ ಪುತ್ರ ಮೊಹಮ್ಮದ್​ ಅಸಾದುದ್ದೀನ್​ರನ್ನು 2ನೇ ಮದುವೆಯಾಗಿದ್ದಾರೆ. ಅನಮ್​​ ಅವರ ಮೊದಲ ಮದುವೆ ಕೆಲವೇ ತಿಂಗಳಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತ್ತು.

Kavya V | news18-kannada
Updated:May 30, 2021, 1:49 PM IST
ರಾತ್ರಿ ಇಡೀ ಗಂಡ ಹೇಗೆಲ್ಲಾ ಕಾಟ ಕೊಡ್ತಾನೆ ಅಂತ ವಿಡಿಯೋ ಮಾಡಿದ ಸಾನಿಯಾ ಮಿರ್ಜಾ ತಂಗಿ!
ತಂಗಿ ಮದುವೆಯಲ್ಲಿ ಸಾನಿಯಾ ಮಿರ್ಜಾ
  • Share this:
ಟೆನ್ನಿಸ್​​ ತಾರೆ ಸಾನಿಯಾ ಮಿರ್ಜಾ ಆಟದ ಜೊತೆ ಜೊತೆಗೆ ಆಕೆಯ ಸೌಂದರ್ಯಕ್ಕೂ ಅಭಿಮಾನಿಗಳು ಮಾರು ಹೋಗಿದ್ದಾರೆ. ಮೂಗುತ್ತಿ ಸುಂದರಿಯ ಸ್ನಿಗ್ಧ ಚೆಲುವು ಯಾರನ್ನಾದರೂ ಸೆಳೆಯದೆ ಬಿಡುವುದಿಲ್ಲ. ಟೆನ್ನಿಸ್​​ ಆಟಕ್ಕಿಂತ ಹೆಚ್ಚಾಗಿ ಮುತ್ತಿನ ನಗರಿ ಹೈದ್ರಾಬಾದ್​ನ ಆಟಗಾರ್ತಿಯನ್ನು ನೋಡಲು ಪಡ್ಡೆಗಳ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದರು. ನಂತರದ ದಿನಗಳಲ್ಲಿ ಭಾರತದ ಮೂಗುತ್ತಿ ಸುಂದರಿ ಪಾಕಿಸ್ತಾನದ ಸೊಸೆಯಾದರು. ಪಾಕ್​​ ಕ್ರಿಕೆಟ್​ ಆಟಗಾರ ಶೋಹಿಬ್​​​​ ಮಲ್ಲಿಕ್​​ರನ್ನು ವರಿಸಿದರು. ಇಬ್ಬರಿಗೂ ಮುದ್ದಾದ ಮಗನೂ ಇದ್ದಾನೆ. ಈಗ ಸಾನಿಯಾರ ತಂಗಿ ಅನಮ್​​​ ಸೋಷಿಯಲ್​ ಮೀಡಿಯಾ ಮೂಲಕ ಸಖತ್​ ಸದ್ದು ಮಾಡುತ್ತಿದ್ದಾರೆ.

ಸಾನಿಯಾ ಮಿರ್ಜಾಗೆ ಮುದ್ದಾದ ತಂಗಿಯಿದ್ದು ಅವರ ಹೆಸರು ಅನಮ್​​ ಮಿರ್ಜಾ. ಅಕ್ಕನಂತೆ ಟೆನ್ನಿಸ್ ಬ್ಯಾಟ್​ ಹಿಡಿಯದಿದ್ದರೂ ಅನಮ್​​ ಫ್ಯಾಷನ್​​ ಫೀಲ್ಡ್​​ನಲ್ಲಿದ್ದಾರೆ. ತಮ್ಮದೇ ಬ್ರಾಂಡ್​ನ ಬಟ್ಟೆಗಳ ಬೊಟಿಕ್​​ ನೋಡಿಕೊಳ್ಳುತ್ತಾರೆ. ಅನಮ್​​ ಮಾಜಿ ಕ್ರಿಕೆಟಿಗ ಅಜಾರುದ್ದೀನ್​ ಪುತ್ರ ಮೊಹಮ್ಮದ್​ ಅಸಾದುದ್ದೀನ್​ರನ್ನು 2ನೇ ಮದುವೆಯಾಗಿದ್ದಾರೆ. ಅನಮ್​​ ಅವರ ಮೊದಲ ಮದುವೆ ಕೆಲವೇ ತಿಂಗಳಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ನಂತರ ಅನಮ್​​ ಅವರು ಅಜಾರುದ್ದೀನ್​​ ಪುತ್ರನನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದಾರೆ.

ಇದನ್ನೂ ಓದಿ : Yashika Aannand: ಸೈಜ್ ಎಷ್ಟು ಎಂದವನಿಗೆ ತಿರುಗಿ ಅದೇ ಪ್ರಶ್ನೆ ಕೇಳಿ ಬೆವರಿಳಿಸಿದ ಬೋಲ್ಡ್ ನಟಿ!

ಅನಮ್​​- ಮೊಹಮ್ಮದ್ ಜೋಡಿ ನೋಡಲು ಮುದ್ದಾಗಿದ್ದು, ಇನ್​​ಸ್ಟಾಗ್ರಾಂನಲ್ಲಿ ಸಖತ್​ ಆಕ್ಟೀವ್​ ಇರುತ್ತಾರೆ. ಗಂಡ-ಹೆಂಡತಿ ಇಬ್ಬರು ಹಲವು ತಮಾಷೆ ರೀಲ್​ಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಅವರು ಮಾಡಿದ ರೀಲ್​ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ರಾತ್ರಿ ಪೂರ್ತಿ ಗಂಡ ಹೇಗೆ ನಿದ್ದೆ ಹಾಳು ಮಾಡಿ ಕಾಟ ಕೊಡುತ್ತಾನೆ ಅಂತ ವಿಡಿಯೋವನ್ನೇ ಮಾಡಿ ಹರಿಬಿಟ್ಟಿದ್ದಾರೆ.

ಅಚ್ಚರಿಯಾದರೂ ಇದು ಸತ್ಯ. ಫನ್ನಿ ವಿಡಿಯೋ ಮಾಡಿರುವ ಅನಮ್​​ ನಾನು ಮಧ್ಯರಾತ್ರಿ ಎಚ್ಚರಗೊಂಡರೆ ಹೇಗೆ ವಾಷ್​ ರೂಂಗೆ ಹೋಗ್ತೀನಿ. ಅದೇ ನನ್ನ ಗಂಡ ಹೇಗೆ ಹೋಗ್ತಾನೆ ಎಂದು ಹೋಲಿಸಿ ವಿಡಿಯೋ ಮಾಡಿದ್ದಾರೆ. ಗಂಡನಿಗೆ ಎಚ್ಚರವಾಗಬಾರದು ಅಂತ ಮೆಲ್ಲಗೆ ವಾಷ್​ ರೂಂಗೆ ಹೋದರೆ, ಪತಿ ಮಾತ್ರ ಶಬ್ಧ ಮಾಡಿಕೊಂಡು, ಲೈಟ್​​ ಹಾಕಿ ನಿದ್ದೆಗೆ ಭಂಗ ತರುತ್ತಾನಂತೆ. ಇದರಿಂದ ಬೇಸತ್ತು ತಮಾಷೆಯಾಗಿ ಅನಮ್​​ ರೀಲ್​ ಮಾಡಿ ಹರಿಬಿಟ್ಟಿದ್ದಾರೆ.View this post on Instagram


A post shared by Anam Mirza (@anammirzaaa)


ಇನ್ನು ದೇಶಾದ್ಯಂತ 24 ಗಂಟೆಗಳ ಅವಧಿಯಲ್ಲಿ  1,86,364 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,75,55,457ಕ್ಕೆ ಏರಿಕೆ ಆಗಿದೆ.‌ ಗುರುವಾರ 3,660 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,18,895ಕ್ಕೆ ಏರಿಕೆ ಆಗಿದೆ. ಈವರೆಗೆ 2,48,93,410 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 23,43,152 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ.‌ ಈವರೆಗೆ 20,57,20,660 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: May 28, 2021, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories