ಸ್ಕಾಟ್ಲೆಂಡ್​ನಲ್ಲಿ 29 ವರ್ಷ ಹಿಂದಿನ ಸ್ಯಾಂಡ್‌ವಿಚ್‌ ಕವರ್ ಪತ್ತೆ; ಪ್ಲಾಸ್ಟಿಕ್​ ಅಪಾಯದ ಬಗ್ಗೆ ಮತ್ತೊಂದು ಪುರಾವೆ

ಸ್ಕಾಟ್‌ಲ್ಯಾಂಡ್‌ನ ಕೈರ್ನ್‌ ಗಾರ್ಮ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಯಾಂಡ್‌ವಿಚ್ ಕವರ್ ಸಿಕ್ಕಿದ್ದು. ಇದು ಪ್ಲಾಸ್ಟಿಕ್ ಎಷ್ಟು ವರ್ಷ ಕಳೆದರೂ ಜೀವಂತವಾಗಿರುತ್ತದೆ ಎನ್ನುವುದನ್ನು ತೋರಿಸುತ್ತಿದೆ.

ಸ್ಕಾಟ್‌ಲ್ಯಾಂಡ್‌ನ ಕೈರ್ನ್‌ ಗಾರ್ಮ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಯಾಂಡ್‌ವಿಚ್ ಕವರ್ ಸಿಕ್ಕಿದ್ದು. ಇದು ಪ್ಲಾಸ್ಟಿಕ್ ಎಷ್ಟು ವರ್ಷ ಕಳೆದರೂ ಜೀವಂತವಾಗಿರುತ್ತದೆ ಎನ್ನುವುದನ್ನು ತೋರಿಸುತ್ತಿದೆ.

ಸ್ಕಾಟ್‌ಲ್ಯಾಂಡ್‌ನ ಕೈರ್ನ್‌ ಗಾರ್ಮ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಯಾಂಡ್‌ವಿಚ್ ಕವರ್ ಸಿಕ್ಕಿದ್ದು. ಇದು ಪ್ಲಾಸ್ಟಿಕ್ ಎಷ್ಟು ವರ್ಷ ಕಳೆದರೂ ಜೀವಂತವಾಗಿರುತ್ತದೆ ಎನ್ನುವುದನ್ನು ತೋರಿಸುತ್ತಿದೆ.

  • Share this:
ಪ್ಲಾಸ್ಟಿಕ್ ಎಲ್ಲೇ ಇದ್ದರೂ ಅದು ಕರಗುವುದಿಲ್ಲ ಎನ್ನುವುದನ್ನು ಹಿಂದಿನಿಂದಲೂ ನೋಡಿಕೊಂಡು ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಮೊದಲಿನಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಇಂತಹದ್ದೇ ಘಟನೆಯನ್ನು ಪುಷ್ಠೀಕರಿಸುವ ಘಟನೆಯೊಂದು ಸ್ಕಾಟ್‌ಲ್ಯಾಂಡ್‌ನಲ್ಲಿ ನಡೆದಿದೆ. ಸ್ಕಾಟ್‌ಲ್ಯಾಂಡ್‌ನ ಕೈರ್ನ್‌ ಗಾರ್ಮ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಯಾಂಡ್‌ವಿಚ್ ಕವರ್ ಸಿಕ್ಕಿದ್ದು. ಇದು ಪ್ಲಾಸ್ಟಿಕ್ ಎಷ್ಟು ವರ್ಷ ಕಳೆದರೂ ಜೀವಂತವಾಗಿರುತ್ತದೆ ಎನ್ನುವುದನ್ನು ತೋರಿಸುತ್ತಿದೆ.

ನ್ಯಾಷನಲ್ ಟ್ರಸ್ಟ್ ಫಾರ್ ಸ್ಕಾಟ್ಲೆಂಡ್‌ಗೆ ಸಂಬಂಧಿಸಿದ ಮಾರ್ ಲಾಡ್ಜ್ ಎಸ್ಟೇಟ್ ಜಾಗದಲ್ಲಿ ಪ್ಲಾಸ್ಟಿಕ್ ಕವರ್ ಕಂಡು ಬಂದಿದೆ. ಇನ್ನು ಇತ್ತೀಚೆಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಹಂಚಿಕೊಳ್ಳಲಾಗಿತ್ತು. 1992 ರಲ್ಲಿ ಮಾಡಲಾದ ಈ ಸ್ಯಾಂಡ್ವಿಚ್ ಹೊದಿಕೆ ಇನ್ನೂ ಕೂಡ ಕರಗದೇ, ನಾಶವಾಗದೇ ಅಂದು ಹೇಗಿತ್ತೋ ಇಂದು ಕೂಡ ಹಾಗೆಯೇ ಇರುವುದನ್ನು ಅನೇಕ ಜನರು ಫೇಸ್‌ಬುಕ್‌ನಲ್ಲಿ ಗಮನಿಸಿದ್ದಾರೆ.

ಇನ್ನು, ಈ ಜಾಗವನ್ನು ಸ್ವಚ್ಛ ಮಾಡುವ ಸಮಯದಲ್ಲಿ ಈ ಪ್ಲಾಸ್ಟಿಕ್ ಹೊದಿಕೆ ಲಭ್ಯವಾಗಿದೆ. ಈ ಪ್ಲಾಸ್ಟಿಕ್ ಪ್ಯಾಕೇಜ್ ಹೊದಿಕೆಯಲ್ಲಿ ಇದು ಯಾವ ತಿನಿಸಿನ ಕವರ್ ಎನ್ನುವ ವಿವರ ಸೇರಿದಂತೆ ಇದು ಯಾವ ವರ್ಷದ್ದು ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇದರಲ್ಲಿ ಹ್ಯಾಮ್ ಮತ್ತು ಟೊಮ್ಯಾಟೋ ಸ್ಯಾಂಡ್ವಿಚ್ ಇತ್ತು ಎನ್ನುವ ವಿವರ ಲಭ್ಯವಾಗಿದೆ. ಈ ಸ್ಯಾಂಡ್ವಿಚ್ ಅನ್ನು ಮಾಲ್ಟೆಡ್ ಬ್ರೆಡ್, ಹ್ಯಾಮ್ ತುಣುಕುಗಳು, ಟೊಮ್ಯಾಟೋ ಹೋಳುಗಳು ಮತ್ತು ಮಾರ್ಗರೀನ್‌ನಿಂದ ಮಾಡಲಾಗಿದೆ ಎನ್ನುವ ವಿವರವನ್ನು ಅದರಲ್ಲಿ ಮುದ್ರಿಸಲಾಗಿದೆ. ಸ್ಯಾಂಡ್‌ವಿಚ್‌ನ ಬೆಲೆ 1.09 ಪೌಂಡ್ ಅಂದರೆ 112 ರೂಪಾಯಿ. ಮತ್ತು ಮಾರ್ಚ್ 23, 1992ರಂದು ಈ ಆಹಾರದ ಎಕ್ಸ್ಪೈರಿ ಡೇಟ್ ಎಂದು ನಮೂದಿಸಲಾಗಿದೆ. ಈ ನಿಟ್ಟಿನಲ್ಲಿ ಈ ಹೊದಿಕೆ 29 ವರ್ಷಕ್ಕಿಂತಲೂ ಹಳೆಯದು ಎನ್ನುವ ಅಂಶ ಸ್ಪಷ್ಟವಾಗುತ್ತದೆ.

Found this sandwich wrapper under a rock today on the estate. Use by 23.3.92. Twenty-nine years later it is still...

Posted by Mar Lodge Estate on Sunday, April 25, 2021


ಈ ಚಿತ್ರಕ್ಕೆ ಕ್ಯಾಪ್ಷನ್‌ ಅನ್ನೂ ನೀಡಿದ ಮಾರ್ ಲಾಡ್ಜ್ ಎಸ್ಟೇಟ್‌ನವರು ಈ ಪ್ಲಾಸ್ಟಿಕ್ ಹೊದಿಕೆಯನ್ನು ಎಸ್ಟೇಟ್ ಬಂಡೆಯ ಕೆಳಗೆ ಕಂಡರು ಎನ್ನುವುದನ್ನು ಬರೆದಿದ್ದಾರೆ. ಇಪ್ಪತ್ತೊಂಬತ್ತು ವರ್ಷಗಳ ನಂತರವೂ ಪ್ಲಾಸ್ಟಿಕ್ ಹಾಗೇ ಇದೆ ಮತ್ತು ಪ್ಲಾಸ್ಟಿಕ್ ಯಾವುದೇ ರೀತಿಯಲ್ಲೂ ಕರಗಿಲ್ಲ, ಇದು ಭೂಮಿಯ ಮೇಲೆ ಬಹುಕಾಲ ಉಳಿಯುತ್ತದೆ ಎನ್ನುವುದನ್ನು ತಿಳಿಸಿದೆ. ಈ ಅಂಶವನ್ನು ಜನರಿಗೆ ತಿಳಿಸಲು ಇದೊಂದು ಅದ್ಭುತ ಅವಕಾಶವೆಂದು ಹೇಳಿದ್ದಾರೆ.

ಇನ್ನು ಎಸ್ಟೇಟ್ ಬಹಳ ಸುಂದರವಾಗಿದ್ದು, ಅದನ್ನು ರಕ್ಷಿಸುವ ಕೆಲಸ ಚೆನ್ನಾಗಿಯೇ ನಡೆಯುತ್ತಿದೆ ಎಂದು ಬರೆದಿದ್ದಾರೆ. ಅಲ್ಲದೇ ಈ ಪ್ರದೇಶಕ್ಕೆ ಬಂದಾಗ ಇಲ್ಲಿನ ನಿಯಮಗಳನ್ನು ಅನುಸರಿಸಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳುವವ ಕಾರ್ಯ ನಿರ್ವಹಿಸಬೇಕು. ಜೊತೆಗೆ ಕಸವನ್ನು ಬಿಸಾಡದೇ ನೀವೇ ತೆಗೆದುಕೊಂಡು ಹೋಗಬೇಕು ಎಂದಿದ್ದಾರೆ.

ವಾರದ ಆರಂಭದಲ್ಲೇ ಪೋಸ್ಟ್ ಮಾಡಿದ ಈ ಚಿತ್ರವನ್ನು 4 ಸಾವಿರ ಮಂದಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಒಬ್ಬ ಬಳಕೆದಾರರು 'ನಾನು ಒಮ್ಮೆ ತೋಟದಲ್ಲಿ ಅಗೆಯುತ್ತಿದ್ದಾಗ 80 ರ ದಶಕದ ಲಯನ್ ಬಾರ್ ಚಾಕೋಲೇಟ್ ಪ್ಲಾಸ್ಟಿಕ್ ಹೊದಿಕೆ ಕಂಡುಹಿಡಿದಿದ್ದೆ. ಅದು ಹೊಸದರಂತೆಯೇ ಇದೆ' ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರರು 'ಕಸ ಹಾಕುವುದನ್ನು ನಿಯಂತ್ರಿಸಿ ಜಾಗವನ್ನು ರಕ್ಷಿಸಬೇಕು. ನಾನು ಇತ್ತೀಚೆಗೆ ಐಲ್ ಆಫ್ ವೈಟ್‌ ಲಂಡನ್‌ನ ದ್ವೀಪದಲ್ಲಿದ್ದೆ. ನಾನು ಎಲ್ಲಿಯೂ ಯಾವುದೇ ಕಸವನ್ನು ನೋಡಲಿಲ್ಲ. ನಿಜವಾಗಿಯೂ ಕೆಲವರು ತಾವು ಇರುವ ಸ್ಥಳವನ್ನು ರಕ್ಷಿಸುವುದಿಲ್ಲ' ಎಂದಿದ್ದಾರೆ.
First published: