ಬೋಲ್ಡ್​ ಫೋಟೋಗಳಿಂದ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾದ ಕಿರಿಕ್​ ಬೆಡಗಿ ಸಂಯುಕ್ತಾ ಹೆಗ್ಡೆ

Anitha E | news18
Updated:June 3, 2018, 12:10 PM IST
ಬೋಲ್ಡ್​ ಫೋಟೋಗಳಿಂದ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾದ ಕಿರಿಕ್​ ಬೆಡಗಿ ಸಂಯುಕ್ತಾ ಹೆಗ್ಡೆ
ಕೃಪೆ: ದ ಪೆಂಟಗಾಂ ಸ್ಟುಡಿಯೋ​ ಫೇಸ್​ಬುಕ್​ ಪುಟ
Anitha E | news18
Updated: June 3, 2018, 12:10 PM IST
ಅನಿತಾ ಈ. ನ್ಯೂಸ್​ 18 ಕನ್ನಡ 

ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಸದಾ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿರುತ್ತಾರೆ. ಒಮ್ಮೆ ಅವರು ಮಾಡಿಕೊಳ್ಳುವ ಕಿರಿಕ್​ನಿಂದಾದರೆ, ಕೆಲವೊಮ್ಮೆ ಅವರ ಬೋಲ್ಡ್​ ಮತ್ತು ಹಾಟ್​ ಫೋಟೋಗಳಿಂದ. ಈಗಲೂ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಅದಕ್ಕೆ ಕಾರಣ ಅವರು ಮಾಡಿಸಿಕೊಂಡಿರುವ ಫೋಟೋಶೂಟ್​. ಹೌದು 'ದ ಪೆಂಟಾಗ್ರಾಂ ಸ್ಟುಡಿಯೋ' ಮಾಡಿರುವ ಪೋಟಫಶೂಟ್​ನಿಂದಾಗಿ ಸಂಯುಕ್ತ ಮತ್ತೊಮ್ಮೆ ಈಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಈ ಹಿಂದೆ ಸಹ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಫೋಟೋಗಳಿಂದ ಟ್ರೋಲ್​ಗೆ ಬಲಿಯಾಗಿದ್ದರು.

ಏಪ್ರಿಲ್​ನಲ್ಲಿ ಮಾಡಿಸಿರುವ ಫೋಟೋಶೂಟ್​ನ ಫೋಟೋಗಳನ್ನು 'ದ ಪೆಂಟಾಗ್ರಾಂ ಸ್ಟುಡಿಯೋ' ತನ್ನ ಫೇಸ್​ಬುಕ್​ ಪುಟದಲ್ಲಿ ಪೋಸ್ಟ್​ ಮಾಡಿದ್ದಾರೆ. ಅದಕ್ಕೂ ಮೊದಲು ಅವರು ಏಪ್ರಿಲ್​ 22ರಂದು ಈ ಪೋಟೋಶೂಟ್​ ಮಾಡುವ ಕುರಿತು ಒಂದು ವಿಡಿಯೋವನ್ನು ಶೇರ್​ ಮಾಡಿದ್ದರು.ನಂತರ ಏಪ್ರಿಲ್​ 27ರಂದು ಅವರು ಈ ಪೋಟೋಶೂಟ್​ನ ಚಿತ್ರಗಳನ್ನು ಫೇಸ್​ಬುಕ್​ನಲ್ಲಿ ಪ್ರಕಟಿಸಿದ್ದರು. ಇದು ಈಗ ಟ್ರೋಲ್ ಹುಡುಗರ ಪಾಲಿಗೆ ಫುಲ್ ಕೆಲಸ ನೀಡಿದೆ. ಈ ಫೋಟೋಗಳನ್ನ ಟ್ರೋಲ್ ಮಾಡುತ್ತಿರೋ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನ ಶೇರ್ ಮಾಡುತ್ತಿದ್ದಾರೆ.


Loading...First published:June 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...