ಫೇಸ್​​ಬುಕ್​​ ಮೂಲಕ ಗರ್ಭಿಣಿಯರಾದ ಇಬ್ಬರು ಯುವತಿಯರು.. ಹೇಗೆ ಅಂತ ನೀವೇ ನೋಡಿ!

ಸಲಿಂಗಿ ದಂಪತಿ ಒಂದೇ ವೀರ್ಯ ದಾನಿಯ ಮೂಲಕ ಗರ್ಭಿಣಿಯಾಗಿ 13 ದಿನಗಳ ಅಂತರದಲ್ಲಿ ಇಬ್ಬರೂ ಒಂದೊಂದು ಮಕ್ಕಳಿಗೆ ಜನ್ಮನೀಡಿದ್ದಾರೆ.

ಸಲಿಂಗಿ ದಂಪತಿ ಒಂದೇ ವೀರ್ಯ ದಾನಿಯ ಮೂಲಕ ಗರ್ಭಿಣಿಯಾಗಿ 13 ದಿನಗಳ ಅಂತರದಲ್ಲಿ ಇಬ್ಬರೂ ಒಂದೊಂದು ಮಕ್ಕಳಿಗೆ ಜನ್ಮನೀಡಿದ್ದಾರೆ.

ಸಲಿಂಗಿ ದಂಪತಿ ಒಂದೇ ವೀರ್ಯ ದಾನಿಯ ಮೂಲಕ ಗರ್ಭಿಣಿಯಾಗಿ 13 ದಿನಗಳ ಅಂತರದಲ್ಲಿ ಇಬ್ಬರೂ ಒಂದೊಂದು ಮಕ್ಕಳಿಗೆ ಜನ್ಮನೀಡಿದ್ದಾರೆ.

  • Share this:

ವಿಶ್ವವು ಅನೇಕ ಚಮತ್ಕಾರಗಳ ಆಗರವಾಗಿದೆ ಎಂಬುದಕ್ಕೆ ಹಲವಾರು ದೃಷ್ಟಾಂತಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುತ್ತದೆ. 5-6 ಮಕ್ಕಳಿಗೆ ಏಕಕಾಲದಲ್ಲಿ ಜನ್ಮನೀಡುವುದು, ಸಯಾಮಿ ಮಕ್ಕಳ ಜನನ, ಹುಟ್ಟುವ ಮಗುವಿಗೆ ಎರಡು ಕಾಲು ಇಲ್ಲವೇ ಎರಡು ಕೈಗಳು ಹೀಗೆ ಬೇರೆ ಬೇರೆ ಕೌತುಕಮಯವಾದ ಸುದ್ದಿಗಳನ್ನು ನಾವು ಓದುತ್ತಿರುತ್ತೇವೆ. ಇದು ಸತ್ಯವೋ ಸುಳ್ಳೋ ಎಂಬುದು ನಂತರ ಬಂದ ವರದಿಗಳಿಂದ ಖಾತ್ರಿಯಾದರೂ ಒಮ್ಮೆಲೆ ನಮಗೆ ಸೋಜಿಗವನ್ನುಂಟು ಮಾಡುವುದು ಸತ್ಯ. ಇದೇ ರೀತಿ ಇಂಗ್ಲೆಂಡ್‌ನಲ್ಲಿ ನಡೆದಿರುವ ಘಟನೆ ವಿಚಿತ್ರವಾದರೂ ಸತ್ಯವಾಗಿದೆ.  


ಸಲಿಂಗಿ ದಂಪತಿ ಒಂದೇ ವೀರ್ಯ ದಾನಿಯ ಮೂಲಕ ಗರ್ಭಿಣಿಯಾಗಿ 13 ದಿನಗಳ ಅಂತರದಲ್ಲಿ ಇಬ್ಬರೂ ಒಂದೊಂದು ಮಕ್ಕಳಿಗೆ ಜನ್ಮನೀಡಿದ್ದಾರೆ. ಜಾರ್ಜಿಯಾ ಮತ್ತು ಆಕೆಯ ಸಂಗಾತಿ ಬೆಕ್ಕಿ ಒಂದೇ ಸಮಯದಲ್ಲಿ ಗರ್ಭಿಣಿಯರಾಗಬೇಕೆಂದು ನಿರ್ಧರಿಸಿದರು. ಹೀಗಾಗಿ ಅವರು ಫೇಸ್‌ಬುಕ್‌ನಲ್ಲಿ ದಾನಿಯನ್ನು ಪಡೆದುಕೊಂಡರು. 6 ದಿನಗಳ ಅಂತರದಲ್ಲಿ ಗರ್ಭಧಾರಣೆ ಮಾಡಿಕೊಂಡರು ಮತ್ತು ಗರ್ಭಿಣಿಯರಾದರು. ಒಂಭತ್ತು ತಿಂಗಳ ನಂತರ 13 ದಿನಗಳ ಅಂತರದಲ್ಲಿ ಇವರಿಬ್ಬರೂ ಮಕ್ಕಳಿಬ್ಬರಿಗೆ ಜನ್ಮನೀಡಿದ್ದಾರೆ. ಈ ಮಕ್ಕಳಿಗೆ ವಿಲ್ಲೋ ಮತ್ತು ವೂಡಿ ಎಂದು ಹೆಸರನ್ನಿಟ್ಟಿದ್ದಾರೆ. ಬೆಕ್ಕಿ ಏಪ್ರಿಲ್ 11 ರಂದು ಜನ್ಮ ನೀಡಿದ್ದರೆ, ಜಾರ್ಜಿಯಾ ಏಪ್ರಿಲ್ 25 ರಂದು ಜನ್ಮವಿತ್ತಿದ್ದಾರೆ. ಎರಡು ಹೆರಿಗೆಗಳು ಸ್ವಾಭಾವಿಕವಾಗಿದ್ದು, ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವರದಿಗಳು ತಿಳಿಸಿವೆ.


ನಾವು ಒಂದೇ ಸಮಯದಲ್ಲಿ ಗರ್ಭಿಣಿಯರಾದರೆ ಎಷ್ಟೊಂದು ಕೌತುಕಮಯವಾಗಿರಬಹುದು ಅಲ್ಲವೇ ಎಂದು ನಮ್ಮ ಕುಟುಂಬಗಳು ಹಾಸ್ಯ ಮಾಡಿದ್ದರು. ಆದರೆ ನಮ್ಮ ವಿಷಯದಲ್ಲಿ ಇದು ನಿಜವಾಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಾವಿಬ್ಬರೂ ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದೇವೆ ಮತ್ತು 13 ದಿನಗಳ ಅಂತರದಲ್ಲಿ ಅಂದದ ಮಕ್ಕಳಿಗೆ ಜನ್ಮನೀಡಿದ್ದೇವೆ ಎಂದು ದಂಪತಿ ಸಂತಸ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: 30ರ ಅಸುಪಾಸಿನಲ್ಲಿ ಮದುವೆಯಾಗುವ ಮಹಿಳೆಯರು ಎಷ್ಟು ವರ್ಷದೊಳಗೆ ಮಕ್ಕಳು ಮಾಡಿಕೊಂಡರೆ ಉತ್ತಮ?


ಬೆಕ್ಕಿ ತನ್ನ 18 ರ ಹರೆಯದಲ್ಲಿಯೇ ಮಕ್ಕಳನ್ನು ಹೊಂದಬೇಕೆಂಬ ತೀವ್ರ ಬಯಕೆಯನ್ನು ಹೊಂದಿದ್ದಳು. ಆಕೆಯ ಸಹೋದರಿಯ ಮಕ್ಕಳೊಂದಿಗೆ ಆಕೆ ಹೆಚ್ಚು ಸಮಯ ಕಳೆಯುತ್ತಿದ್ದಳು. ಆದರೆ ತನ್ನದೇ ಮಕ್ಕಳಿರಬೇಕೆಂದು ಬೆಕ್ಕಿ ಬಯಸಿದ್ದಳು. ಆಕೆಗೆ ಇದು ನಿಜಕ್ಕೂ ಹೆಚ್ಚು ಸಂತಸ ತಂದ ಸುದ್ದಿಯಾಗಿದೆ ಎಂದು ಜಾರ್ಜಿಯಾ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಇಬ್ಬರು ಸಲಿಂಗಿಗಳು ಡೇಟಿಂಗ್ ಮಾಡುತ್ತಿರುವಾಗಲೇ ವೀರ್ಯ ದಾನಿಗಾಗಿ ಫೇಸ್‌ಬುಕ್‌ನಲ್ಲಿ ಹುಡುಕುತ್ತಿದ್ದರಂತೆ. ಜಾರ್ಜಿಯಾಳ ಅಂಡಾಣುಗಳಲ್ಲೊಂದನ್ನು ಬೆಕ್ಕಿ ಇವಳಿಗೆ ಅಳವಡಿಸುವ ಮುನ್ನ ಅದನ್ನು ದಾನಿಯ ವೀರ್ಯದೊಂದಿಗೆ ಫಲವತ್ತಾಗಿಸಿದ್ದರು. ತಾಯಿಯಾಗುವ ಇವರ ಈ ಪ್ರಯತ್ನ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಇವರಿಗೆ ತಗುಲಿದ ವೆಚ್ಚ £6,000 ಆಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 6,19,233.60 ಆಗಿದೆ. ದಂಪತಿಗಳು ಫೇಸ್‌ಬುಕ್‌ನಲ್ಲಿ ದಾನಿಗಳಿಗಾಗಿ ಹುಡುಕಾಡುವ ಮೂಲಕ ಉತ್ತಮ ವಿಧಾನವನ್ನು ಕಂಡುಕೊಂಡಿದ್ದಾರೆ. ಮಕ್ಕಳು ದೈಹಿಕವಾಗಿ ಹೇಗೆ ಕಾಣುತ್ತಾರೆ ಎಂಬುದನ್ನು ಕುರಿತು ನಾವು ಗಮನ ಹರಿಸಲಿಲ್ಲ. ಅವರು ಹೇಗಿದ್ದರೂ ನಮ್ಮ ಮಕ್ಕಳೇ. ಮಕ್ಕಳು ನಮ್ಮ ಪಡಿಯಚ್ಚಿನಂತಿದ್ದಾರೆಂದು ಇಬ್ಬರೂ ತಾಯಂದಿರು ಸಂತಸ ವ್ಯಕ್ತಪಡಿಸಿದರು.

top videos
    First published: