Love Story: ನಯನತಾರಾ ಸಿನಿಮಾ ಥರಾನೇ ಇದೆ ಈ ಲವ್​ಸ್ಟೋರಿ! ಇಬ್ಬರ ಮೇಲೂ ಡೀಪ್ ಲವ್

ವಿಜಯ್ ಸೇತುಪತಿ, ನಯನತಾರಾ ಹಾಗೂ ಸಮಂತಾರ ಕಾತುವಾಕುಲ ರೆಂಡು ಕಾದಲ್ ಸಿನಿಮಾ ನೋಡಿದ್ದೀರಾ? ಅದಕ್ಕಿಂತ ಭಿನ್ನವಿಲ್ಲ ಇವರ ಕಥೆ. ಇಬ್ಬರ ಮೇಲೆ ಬೆಟ್ಟದಷ್ಟು ಪ್ರೀತಿ. ಯಾರೊಬ್ಬರ ಮೇಲೆ ಹೆಚ್ಚೂ ಇಲ್ಲ, ಕಮ್ಮಿಯೂ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐ ಲವ್ ಯೂ ಟೂ ನಿಜಮಾ ಐ ಲವ್ ಯೂ ಟೂ ಎಂದು ಹಾಡುವ ವಿಜಯ್ ಸೇತುಪತಿ, ನಯನತಾರಾ ಹಾಗೂ ಸಮಂತಾರ ಕಾತುವಾಕುಲ ರೆಂಡು ಕಾದಲ್ ಸಿನಿಮಾ ನೋಡಿದ್ದೀರಾ? ಅದಕ್ಕಿಂತ ಭಿನ್ನವಿಲ್ಲ ಇವರ ಕಥೆ. ಇಬ್ಬರ ಮೇಲೆ ಬೆಟ್ಟದಷ್ಟು ಪ್ರೀತಿ. ಯಾರೊಬ್ಬರ ಮೇಲೆ ಹೆಚ್ಚೂ ಇಲ್ಲ, ಕಮ್ಮಿಯೂ ಇಲ್ಲ. ಇಬ್ಬರ ಮೇಲೆಯೂ ಅಗಾಧ ಪ್ರೀತಿ. ಈ ವ್ಯಕ್ತಿ ರಿಯಲ್ ಲೈಫ್​ನಲ್ಲಿ (Real Life) ವಿಜಯ್ ಸೇತುವಪತಿಯಂತೆಯೇ ವರ್ತಿಸಿದ್ದಾನೆ. ಪ್ರೀತಿಸಿದ್ದು (Love) ಮಾತ್ರವಲ್ಲ ಮದುವೆಯೂ ಮಾಡಿಕೊಂಡಿದ್ದಾನೆ. ಸದ್ಯ ಇವರ ಲವ್​ಸ್ಟೋರಿ ಸಖತ್ ವೈರಲ್ (Viral) ಆಗುತ್ತಿದೆ.

ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕುಸುಮ್ ಲಕ್ರಾ ಹಾಗೂ ಸ್ವಾತಿ ಕುಮಾರಿ ಎಂಬ ಇಬ್ಬರೂ ಮಹಿಳೆಯರು ಒಬ್ಬನನ್ನೇ ಪ್ರೀತಿಸುತ್ತಿದ್ದು, ಒಂದೇ ಕಡೆ ಇವರಿಬ್ಬರು ಯುವಕನನ್ನು ಮದುವೆಯಾಗಿದ್ದಾರೆ (Marriage). ಜಾರ್ಖಂಡ್‌ನ ಲೋಹರ್ದಾಗ ಜಿಲ್ಲೆಯ ಬಂದಾ ಗ್ರಾಮದ ಭಂದ್ರಾ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಇನ್ನೂ ಮುಖ್ಯವೆಂದರೆ ಈ ಯುವಕನಿಗೆ ಎರಡನೇ ಬಾರಿ ಲವ್ (Love) ಆಗಿದೆ. ಅಂತಿಂಥಾ ಲವ್ ಅಲ್ಲ, ಅಕ್ರಮ ಸಂಬಂಧವೂ ಅಲ್ಲ, ಡೀಪ್ ಲವ್ (Deep Love), ಜೀವನ ಪೂರ್ತಿ ಜೊತೆಗಿರುವ ಲವ್.

ಇಟ್ಟಿಗೆ ಗೂಡಿನಲ್ಲಿ ಶುರುವಾಯ್ತು ಎರಡನೇ ಲವ್

ಸಂದೀಪ್ ಹಾಗೂ ಕುಸುಮ್‌ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗದಿದ್ದರೂ ಜೊತೆಯಾಗಿಯೇ ಜೀವನ ಮಾಡುತ್ತಿದ್ದರು. ಅಲ್ಲದೇ ಇವರಿಬ್ಬರ ಸಹ ಜೀವನದಿಂದ ಇವರಿಗೊಂದು ಮಗು ಕೂಡ ಆಗಿತ್ತು. ಆದರೆ ವರ್ಷಗಳಿಗೂ ಹಿಂದೆ ಸಂದೀಪ್‌ ಪಶ್ಚಿಮ ಬಂಗಾಳದ ಇಟ್ಟಿಗೆ ಗೂಡಿಗೆ ಕೆಲಸಕ್ಕಾಗಿ ತೆರಳಿದ. ಇಟ್ಟಿಗೆ ಗೂಡಿನಲ್ಲಿ ಶುರುವಾಗಿತ್ತು ಹೊಸ ಲವ್.

ಇದನ್ನೂ ಓದಿ: Cambodia: ಕಾಂಬೋಡಿಯಾದಲ್ಲಿ ಸಿಕ್ತು ಬೃಹತ್ ಮೀನು, ಬರೋಬ್ಬರಿ 300 ಕೆಜಿ!

ಸ್ವಾತಿಯ ಜೊತೆ ಹೊಸ ಪ್ರಣಯ

ಅಲ್ಲಿ ಸಂದೀಪ್‌ಗೆ ಸ್ವಾತಿ ಕುಮಾರಿ ಎಂಬ ಯುವತಿಯ ಪರಿಚಯವಾಗಿದೆ. ಈ ಸ್ವಾತಿ ಕುಮಾರಿಯೂ ಕೂಡ ಇಟ್ಟಿಗೆ ಗೂಡಿಗೆ ಕೆಲಸಕ್ಕೆ ಬರುತ್ತಿದ್ದಳು. ಇವರಿಬ್ಬರಿಗೆ ಅಲ್ಲಿ ಪ್ರೀತಿಯಾಗಿದ್ದು, ಕೆಲಸ ಮುಗಿದ ನಂತರವೂ ಈ ಜೋಡಿ ಪರಸ್ಪರ ಭೇಟಿಯಾಗುತ್ತಿದ್ದರು. ಇದು ಇವರ ಮನೆಯವರಿಗೆ ತಿಳಿದಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸಲು ಶುರು ಮಾಡಿದರು.

ಇಬ್ಬರು ಹುಡುಗಿಯರಿಗೂ ಒಬ್ಬನೇ ಗಂಡ, ಆದರೂ ಬೇಡ ಎನ್ನಲಿಲ್ಲ

ಇದಾಗಿ ಹಲವು ಬಾರಿ ಜಗಳಗಳಾಗಿದ್ದು, ನಂತರ ಕೊನೆಯದಾಗಿ ಗ್ರಾಮಸ್ಥರು ಪಂಚಾಯತ್ ಕರೆದು ಸಂದೀಪ್ ಈ ಇಬ್ಬರನ್ನೂ ಕೂಡ ವಿವಾಹವಾಗಬೇಕು ಎಂದು ನಿರ್ಧರಿಸಿದರು. ಇದಕ್ಕೆ ಮಹಿಳೆಯರಾಗಲಿ ಅವರ ಕುಟುಂಬದವರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಹೀಗಾಗಿ ಈತ ಒಂದೇ ಸ್ಥಳದಲ್ಲಿ ತನ್ನ ಕಂದನ ಸಮ್ಮುಖದಲ್ಲಿ ತಾನು ಪ್ರೀತಿಸಿದ ಇಬ್ಬರನ್ನು ಮದುವೆಯಾಗಿದ್ದಾನೆ.

ಇದನ್ನೂ ಓದಿ: Crocodile and Dog: ವಾಕಿಂಗ್ ಹೋಗಿದ್ದ ಸಾಕು ನಾಯಿಯನ್ನು ಎಳೆದೊಯ್ದ ದೈತ್ಯ ಮೊಸಳೆ

ಇಬ್ಬರನ್ನೂ ಪ್ರೀತಿಸುತ್ತಿದ್ದೇನೆ, ಒಬ್ಬರನ್ನೂ ಬಿಡಲು ಸಿದ್ಧನಿಲ್ಲ

ಮದುವೆಯಾದ ಬಳಿಕ ಮಾಧ್ಯಮಗಳು ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಸಂದೀಪ್ ಎರಡು ಮದುವೆಯಾಗಿರುವುದು ಕಾನೂನು ಪ್ರಕಾರ ತೊಡಕಾಗಿರಬಹುದು. ಆದರೆ ನಾನು ಅವರಿಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರಿಬ್ಬರಲ್ಲಿ ಒಬ್ಬರನ್ನು ಕೂಡ ನಾನು ಬಿಡಲು ಸಿದ್ಧನಿಲ್ಲ ಎಂದು ಆತ ಹೇಳಿದ್ದಾನೆ.
Published by:Divya D
First published: