ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ಜೋಡಿ ಎಂದೇ ಹೇಳಬಹುದು. ಸಮಂತಾ ತನ್ನ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಿಂದ ಅಕ್ಕಿನೇನಿ ಎಂಬ ಉಪನಾಮವನ್ನು ತೆಗೆದುಹಾಕಿದಾಗಿನಿಂದ, ಈ ಇಬ್ಬರ ಸಂಸಾರದಲ್ಲಿ ಏನಾದರೂ ತೊಂದರೆಗಳು ಬಂದಿವೆಯೇ ಎನ್ನುವುದರ ಬಗ್ಗೆ ಊಹಾಪೋಹಗಳು ಹರಿದಾಡತೊಡಗಿದ್ದಾವೆ.
ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಹೆಸರನ್ನು ಕೇವಲ ಎಸ್ (S) ಎಂದು ಬದಲಾಯಿಸಿಕೊಂಡಿದ್ದಾರೆ. ಸಮಂತಾ ಮತ್ತು ಚೈತನ್ಯ ಒಟ್ಟಿಗೆ ಇಲ್ಲ ಮತ್ತು ಇಬ್ಬರೂ ಸಹ ಸಂಸಾರದಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮದ ವರದಿಗಳು ಸೂಚಿಸಿವೆ.
ಕೆಲವು ಅಭಿಮಾನಿಗಳು ಬೇರೆಯದೇ ಆದ ಒಂದು ಸಿದ್ಧಾಂತ ಮಂಡಿಸಿದ್ದು ಸಮಂತಾ ಅವರ ಹೆಸರು ಬದಲಾವಣೆಯು ಅವರ ಮುಂಬರುವ ಚಿತ್ರ ಶಕುಂತಲಂ, ಪೌರಾಣಿಕ ಮಹಾಕಾವ್ಯ ಪ್ರೇಮಕಥೆಯ ಪ್ರಚಾರದ ಭಾಗವಾಗಿದೆ ಎಂದು ತಮ್ಮ ತರ್ಕವನ್ನು ಮಂಡಿಸಿದ್ದಾರೆ. ಗುಣಶೇಖರ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಮಂತಾ ಶಕುತಲಂ ಪಾತ್ರದಲ್ಲಿ ಮಿಂಚಿದ್ದಾರೆ.
ದಿ ಫಿಲ್ಮ್ ಕಂಪ್ಯಾನಿಯನ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ, ಸಮಂತಾ ತನ್ನ ಕೊನೆಯ ಹೆಸರನ್ನು ಬಿಡಲು ಏನು ಕಾರಣ ಎಂದು ಪ್ರಶ್ನೆ ಎದುರಿಸ ಬೇಕಾಯಿತು. ಇದಕ್ಕೆ, ನಟಿ ಮುಗುಳ್ನಕ್ಕು, ಗಾಸಿಪ್ ಮತ್ತು ವದಂತಿಗಳು ಎಂದು ತಮಗೆ ಅನಿಸಿದಾಗ ಮಾತ್ರ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಎಲ್ಲರಂತೆ ನಾನು ತನ್ನದೇ ಅಭಿಪ್ರಾಯಕ್ಕೆ ಅರ್ಹಳಾಗಿದ್ದೇನೆ ಮತ್ತು ವಿವಾದದ ಮುಂದೆ ಅವಳು ತನ್ನ ಮನಸ್ಸನ್ನು ಕಳೆದುಕೊಳ್ಳುವವಳಲ್ಲ. ಇತ್ತೀಚೆಗೆ ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ರಲ್ಲಿ ಶ್ರೀಲಂಕಾದ ತಮಿಳು ಮಹಿಳೆ ರಾಜಿಯ ಪಾತ್ರವನ್ನು ನಿರ್ವಹಿಸಿದ ಸಮಂತಾ, ತನ್ನ ಪಾತ್ರಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಆ ವಿವಾದದ ನಿದರ್ಶನನ್ನು ಹೇಳುತ್ತಾ, ಟ್ರೋಲ್ಗಳು ಮತ್ತು ವಿವಾದಗಳು ತನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.
ಗ್ರೇಟ್ ಆಂಧ್ರದ ಮಾಧ್ಯಮದ ವರದಿಯ ಪ್ರಕಾರ, ಚೈತನ್ಯ ಸಂಸಾರದಲ್ಲಿ ಎದ್ದಿರುವ ಈ ಸಂಬಂಧದ ವಿವಾದಕ್ಕೆ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕುಟುಂಬದ ಸಮಸ್ಯೆಯ ಬಗ್ಗೆ ಯಾರಾದರೂ ವಿಚಾರಿಸಲು ಕರೆ ಮಾಡುತ್ತಾರೆ ಎಂದು ಚಲನಚಿತ್ರ ನಿರ್ಮಾಪಕರ ಹಾಗೂ ತನ್ನ ಸ್ನೇಹಿತರ ಕರೆಗಳನ್ನು ತಪ್ಪಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಮಂತಾ ಮತ್ತು ಚೈತನ್ಯರ ಪ್ರೇಮಕಥೆಯನ್ನು ಸ್ವರ್ಗದಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. 2010 ರ ತೆಲುಗು ರೋಮ್ಯಾಂಟಿಕ್ ಚಿತ್ರ ಯೇ ಮಾಯಾ ಚೆಸಾವ ಸೆಟ್ ನಲ್ಲಿ ಈ ಜೋಡಿ ಭೇಟಿಯಾದರು ಮತ್ತು ಅಂದಿನಿಂದ ಅವರು ಜೊತೆಯಾಗಿದ್ದರು. ಈ ಇಬ್ಬರು ಜನವರಿ 2017 ರಲ್ಲಿ ಹೈದರಾಬಾದ್ನಲ್ಲಿ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ದಂಪತಿಗಳು ಅಕ್ಟೋಬರ್ 2017 ರಲ್ಲಿ ಗೋವಾದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ದತಿಯಲ್ಲಿ ವಿವಾಹವಾದರು.
ದಕ್ಷಿಣ ಸೂಪರ್ ಸ್ಟಾರ್ ನಾಗಾರ್ಜುನ ಅವರ ಮಗ ಚೈತನ್ಯ ಕೊನೆಯದಾಗಿ 2019 ರಲ್ಲಿ ಹಾಸ್ಯ ಚಿತ್ರ ವೆಂಕಿ ಮಾಮಾದಲ್ಲಿ ಕಾಣಿಸಿಕೊಂಡಿದ್ದರು. ಅವರು ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ