ಟ್ರೆಂಡಿಂಗ್​ ಹುಟ್ಟಿಸಿದ #WeLoveYouSalmanKhan


Updated:April 6, 2018, 10:52 AM IST
ಟ್ರೆಂಡಿಂಗ್​ ಹುಟ್ಟಿಸಿದ #WeLoveYouSalmanKhan

Updated: April 6, 2018, 10:52 AM IST
ಮುಂಬೈ(ಏ.06): ಕೃಷ್ಣ ಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್​ ಬಾಯ್​ಜಾನ್​ ಸಲ್ಮಾನ್​ ಖಾನ್​ ಪರ ಅವರ ಅಭಿಮಾನಿಗಳು ಒಟ್ಟು ಸೇರಿದ್ದು, ಸಾಮಾಜಿಕ ಜಾಲತಾಣದಲ್ಲಿ #WeLoveYouSalmanKhan ಭಾರೀ ಟ್ರೆಂಡಿಂಗ್​ ಹುಟ್ಟಿಸಿದೆ.

ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆ ನಡೆಸಿದ ರಾಜಸ್ತಾನದ ಜೋಧಪುರದ ಸೆಷನ್ಸ್ ನ್ಯಾಯಲಯ ಸಲ್ಮಾನ್​ ಖಾನ್​ ದೋಷಿ ಎಂದು ತೀರ್ಪು ನೀಡಿ, 5 ವರ್ಷ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿತ್ತು. ಈ ತೀರ್ಪಿನ ಬಳಿಕ ಟ್ವಿಟ್ಟರ್​ನಲ್ಲಿ ಅಭಿಮಾನಿಗಳು ಭಾರೀ ಮಟ್ಟದಲ್ಲೇ ಸಲ್ಮಾನ್​ ಬೆಂಬಲಕ್ಕೆ ನಿಂತಿದ್ದು, ಇತ್ತೀಚೆಗೆ ಸಲ್ಮಾನ್​ ಫೌಂಡೇಶನ್​ನಿಂದ ಕೆಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯ ಚಿಕಿತ್ಸಾ ವೆಚ್ಚವನ್ನು ಫೌಂಡೇಶನ್​ ಭರಿಸಿದ್ದು, ಇದಕ್ಕೆ ಸಂಬಂಧಿಸಿರುವ ರಶೀದಿ ಕೂಡಾ ವೈರಲ್​ ಆಗಿದೆ.  ಒಟ್ಟಾರೆ #WeLoveYouSalmanKhan ಹ್ಯಾಶ್​ಟ್ಯಾಗ್​ನಲ್ಲಿ 77 ಸಾವಿರಕ್ಕು ಅಧಿಕ ಟ್ವೀಟ್​ ಮಾಡಲಾಗಿದೆ.

Loading...

 

 

 

ಸಲ್ಮಾನ್​ ಖಾನ್​ ಹಾಗೂ ಇವರ ಫೌಂಡೇಶನ್​ ನಿಂದ ಈವರೆಗೆ ನಡೆದಿರುವ ಎಲ್ಲಾ ಸಮಾಜ ಮುಖಿ ಕಾರ್ಯಗಳು ಸಹ ಹೆಚ್ಚು ವೈರಲಾಗ ತೊಡಗಿದೆ. ಹಲವಾರು ಮಂದಿ ಸಲ್ಮಾನ್​ ಬೇಲ್​ ಸಿಗಲಿ ಎಂದು ಮಂದಿರದಲ್ಲಿ ಪ್ರಾರ್ಥನೆ ಕೂಡಾ ನಡೆಸಿದ್ದಾರೆ.

 

ಸಲ್ಮಾನ್ ಪರ ವಕೀಲರು ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗಾದರೂ ಸಲ್ಮಾನ್ ಖಾನ್ ಜೈಲಿನಲ್ಲಿ ಕಳೆಯಲೇಬೇಕಾಗುತ್ತದೆ.
First published:April 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ