Real Estate: ಬೆಂಗಳೂರಿನ ಯಾವ ಏರಿಯಾದಲ್ಲಿ ಮನೆ ಅಥವಾ ಫ್ಲಾಟ್ ರೇಟ್ ಎಷ್ಟಿದೆ? ಫುಲ್ ಡೀಟೆಲ್ಸ್

Cost of Flats in Bengaluru, Hyderabad and Chennai: ಬೆಂಗಳೂರಿನಲ್ಲಿ 1 BHK ಮನೆಗಳಿಗೆ ಮಾರತ್‌ಹಳ್ಳಿ ಮತ್ತು ರಾಜಾಜಿನಗರ, 2 BHK ಗಾಗಿ ಎಲೆಕ್ಟ್ರಾನಿಕ್ ಸಿಟಿ, ರಾಮಮೂರ್ತಿ ನಗರ ಮತ್ತು ಹೆಬ್ಬಾಳದಲ್ಲಿ ಬೇಡಿಕೆ ಹೆಚ್ಚಿದೆ ಎಂದು ವರದಿಯು ತಿಳಿಸುತ್ತದೆ. 3BHK ಗಳಿಗೆ ಹೆಚ್ಚಿನ ಬೇಡಿಕೆಯು ವೈಟ್‌ಫೀಲ್ಡ್, ಯಲಹಂಕ ಮತ್ತು ಕೆ.ಆರ್ ಪುರಂ ಪರಿಸರಕ್ಕೆ ಸೀಮಿತವಾಗಿದೆ. ಈ ಎಲ್ಲಾ ಮನೆಗಳ ಬೆಲೆಗಳು ಎಷ್ಟು ಹೆಚ್ಚಾಗಿವೆ? ವಿವರ ಇಲ್ಲಿದೆ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Buying Home in Bengaluru: 99acres.com ಪ್ರಸ್ತುತಪಡಿಸಿರುವ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಮನೆಗಳ ಮಾರಾಟವು (House Sale) ಮೂರು ಪಟ್ಟು ಹೆಚ್ಚಾಗಿದ್ದು, ಚೆನ್ನೈನಲ್ಲಿ ದ್ವಿಗುಣಗೊಂಡಿದೆ ಮತ್ತು ಹೈದರಾಬಾದ್‌ನಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಿ ಬೆಳವಣಿಗೆ (Chennai and Hyderabad) ಕಂಡುಬಂದಿದೆ ಎಂದಾಗಿದೆ. ಸಂಸ್ಥೆಯ ಮುಖ್ಯ ವ್ಯವಹಾರ ಅಧಿಕಾರಿ ಮನೀಶ್ ಉಪಾಧ್ಯಾಯ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು ಜುಲೈ-ಸಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಮೆಟ್ರೋ (House in Metro) ನಗರಗಳಲ್ಲಿ ವಸತಿ ಮಾರಾಟದಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು ಸಾಂಕ್ರಾಮಿಕದ ಕಾರಣದಿಂದ ಹಾಗೂ ಕೆಲವು ರಾಜ್ಯಗಳಲ್ಲಿ ಸೀಮಿತ ಸ್ಟಾಂಪ್ ಡ್ಯೂಟಿ (Stamp Duty) ಕಡಿತದಿಂದಾಗಿ ಬೇಡಿಕೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎಷ್ಟಿದೆ ಮನೆಗಳ ಬೆಲೆ?

99acres ಹೇಳುವಂತೆ ಬೆಂಗಳೂರಿನಲ್ಲಿ ಮಾರಾಟಗಳನ್ನು ಸ್ಟಾಂಪ್ ಡ್ಯೂಟಿ ದರಗಳಿಂದ ಮುಂದೂಡಲಾಗಿದ್ದು ಬೇಡಿಕೆಯನ್ನು ಹೆಚ್ಚಿಸಿವೆ. ಅದೇ ರೀತಿ ಪ್ರಸ್ತುತ ಹೋಮ್ ಲೋನ್ ದರಗಳನ್ನು ಕಡಿತಗೊಳಿಸಿದ್ದು ಮಾರಾಟದಲ್ಲಿ ಅಭಿವೃದ್ಧಿಯನ್ನುಂಟು ಮಾಡಿದೆ ಎಂದು ತಿಳಿಸಿದೆ. ವರದಿಯ ಪ್ರಕಾರ ವಸತಿ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 1,742 ರಿಂದ 5,100 ಯೂನಿಟ್‌ಗಳಿಗೆ ಏರಿಕೆಯಾಗಿದೆ.

ಫ್ಲಾಟ್ ಮತ್ತು ವಿಲ್ಲಾ ಎರಡಕ್ಕೂ ಡಿಮ್ಯಾಂಡ್

ಗ್ರಾಹಕರ ಬೇಡಿಕೆ ಮತ್ತು ಸಕ್ರಿಯ ಪಟ್ಟಿಯನ್ನು ಆಧರಿಸಿ, ನಗರದ 1 BHK ಆಸ್ತಿಗಳಿಗೆ ಮಾರತ್‌ಹಳ್ಳಿ ಮತ್ತು ರಾಜಾಜಿ ನಗರ ಮತ್ತು 2 BHK ಗಾಗಿ ಎಲೆಕ್ಟ್ರಾನಿಕ್ ಸಿಟಿ, ರಾಮಮೂರ್ತಿ ನಗರ ಮತ್ತು ಹೆಬ್ಬಾಳ್‌ನಲ್ಲಿ ಬೇಡಿಕೆ ಹೆಚ್ಚಿದೆ ಎಂದು ವರದಿಯು ತಿಳಿಸುತ್ತದೆ. 3BHK ಗಳಿಗೆ ಹೆಚ್ಚಿನ ಬೇಡಿಕೆಯು ವೈಟ್‌ಫೀಲ್ಡ್, ಯಲಹಂಕ ಮತ್ತು ಕೆ.ಆರ್ ಪುರಂ ಪರಿಸರಕ್ಕೆ ಸೀಮಿತವಾಗಿದೆ.

ಇದನ್ನೂ ಓದಿ: Home Loan: ಗೃಹ ಸಾಲ ಪಡೆದುಕೊಳ್ಳುವ ಮುನ್ನ ಅರಿತುಕೊಳ್ಳಬೇಕಾಗಿರುವ ಅಂಶಗಳೇನು..? ಇಲ್ಲಿದೆ ವಿವರ

3 BHK ಮನೆಗಳು ಅಥವಾ ವಿಲ್ಲಾಗಳನ್ನು ಖರೀದಿಸಲು ಬೇಡಿಕೆ ಹೆಚ್ಚಾಗಿದ್ದು ಬೆಲೆಗಳನ್ನು ನೋಡುವುದಾದರೆ 90 ಲಕ್ಷದಿಂದ 1.5 ಕೋಟಿಯವರೆಗೆ ಬೇಡಿಕೆ ಇದೆ. ದೇವನಹಳ್ಳಿ, ಚಂದಾಪುರ, ಸರ್ಜಾಪುರ ರಸ್ತೆ, ಅತ್ತಿಬೆಲೆ ಮತ್ತು ಹೊಸಕೋಟೆ ಮುಂತಾದ ಪ್ರದೇಶಗಳಲ್ಲಿ 1 ಕೋಟಿ ರೂ.ಗಳ ವ್ಯಾಪ್ತಿಯಲ್ಲಿ ಭೂಮಿಗೆ ಬೇಡಿಕೆ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. ನಗರದ ಸುತ್ತಮುತ್ತಲಿನ ಕೃಷಿ ಭೂಮಿಯಲ್ಲಿ, ವಿಶೇಷವಾಗಿ ಚಿಕ್ಕಮಗಳೂರು, ಹೊಸೂರು, ಸಕಲೇಶಪುರ, ಚಿಕ್ಕಬಳ್ಳಾಪುರ, ಮಡಿಕೇರಿ ಮತ್ತು ಚಿಂತಾಮಣಿ ರಸ್ತೆಯಲ್ಲಿ ಹೂಡಿಕೆ ಮಾ.ಡಲು ಜನರು ಆಸಕ್ತಿ ಹೊಂದಿದ್ದಾರೆ.

ಚೆನ್ನೈ ಕೂಡಾ ಹಿಂದೆ ಬಿದ್ದಿಲ್ಲ

99acres ವರದಿಯ ಪ್ರಕಾರ ಚೆನ್ನೈನಲ್ಲಿ ತ್ರೈಮಾಸಿಕದಲ್ಲಿ 3,000 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ, ಹೆಚ್ಚಾಗಿ ಮಧ್ಯಮ ಆದಾಯದ ವಿಭಾಗದಲ್ಲಿ (ರೂ. 40 ಲಕ್ಷ ಮತ್ತು 1 ಕೋಟಿ ರೂ.ಗಳ ನಡುವಿನ ಬೆಲೆ), ಮತ್ತು ಕಡಿಮೆ ಗೃಹ ಸಾಲ ದರಗಳಂತಹ ಅಂಶಗಳಿಗೆ ಪ್ರಾಧಾನ್ಯತೆಯ ಮೇಲೆ ಏರಿಕೆ ಕಂಡುಬಂದಿದೆ. ಕಮ್ಯುನಿಟಿಗಳು ಹಾಗೂ ಸ್ವತಂತ್ರ ವಿಲ್ಲಾಗಳಿಗೆ ಬೇಡಿಕೆ ಏರಿಕೆಯಾಗಿದೆ ಅದೇ ರೀತಿ ಹೆಚ್ಚಿನ ಹಣ ವಿನಿಯೋಗವಾಗದಂತೆ ಖರೀದಿದಾರರು ದೊಡ್ಡ ಮನೆಗಳನ್ನು ಉಪನಗರ/ಬಾಹ್ಯ ಮಾರುಕಟ್ಟೆಗಳಲ್ಲಿ ಖರೀದಿಸಲು ಒಲವು ತೋರುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಪೋರೂರ್, ಸಿರುಸೇರಿ, ತಿರುವಲ್ಲೂರ್, ಪಲ್ಲಿಕರನೈ, ಈಸ್ಟ್ ತಾಂಬರಮ್ ಹೊಸ ಖರೀದಿಯಲ್ಲಿನ ಏರಿಕೆಯನ್ನು ಕಂಡುಕೊಂಡಿರುವ ಪ್ರದೇಶಗಳಾಗಿವೆ. ಹೊಸ ಮನೆಗಳು 60 ಲಕ್ಷಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ.

ಇದನ್ನೂ ಓದಿ: Vaastu Tips: ಅಪ್ಪಿ ತಪ್ಪಿ ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡ್ರೆ ಮನೆಯ ನೆಮ್ಮದಿ ಹಾಳಾಗುವುದು ಗ್ಯಾರೆಂಟಿ..

ಖರೀದಿದಾರರು ಗುಡುವಾಂಚೇರಿ ಮತ್ತು ಆವಡಿಯಲ್ಲಿ 45 ಲಕ್ಷಕ್ಕಿಂತ ಕಡಿಮೆ ದರದ ಮನೆಗಳನ್ನು ಖರೀದಿಸಲು ಆಸಕ್ತಿ ತೋರಿದ್ದರೆ ಮಡಿಪ್ಪಾಕಮ್, ಕೊಲತ್ತೂರು ಹಾಗೂ ಮೀಡಿವಾಕ್ಕಮ್‌ನಲ್ಲಿ ಮನೆಗಳ ಖರೀದಿ ದರವು 40ಲಕ್ಷದಿಂದ 1 ಕೋಟಿಯವರೆಗೆ ಇದೆ. ವೇಲಚೇರಿ, ಪೆರಂಬೂರು ಮತ್ತು ತೋರೈಪಾಕ್ಕಂನಂತಹ ಪ್ರದೇಶಗಳಲ್ಲಿ ಖರೀದಿ ದರವು 1 ಕೋಟಿ ಮೀರಿ ಏರಿಕೆಯಾಗಿದೆ.

ಹೈದ್ರಾಬಾದ್ ನಲ್ಲಿ ಮನೆ ಕೊಳ್ಳಬೇಕಾ?

ವರದಿಯ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮನೆಗಳ ಬೇಡಿಕೆ ಮತ್ತು ಪೂರೈಕೆ ಎರಡರಲ್ಲೂ ಬೆಳವಣಿಗೆಯನ್ನು ತೋರಿಸಿದೆ. ಅಂತಿಮ ಬಳಕೆದಾರರು, ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು ಮತ್ತು NRI ಗಳ ಪಾತ್ರ ಇದರಲ್ಲಿ ಹೆಚ್ಚಿದೆ ಎಂಬುದನ್ನು ವರದಿಯು ತೋರಿಸುತ್ತದೆ.

ಸಾಮಾನ್ಯವಾಗಿ, 2 ಮತ್ತು 3 BHK ಮನೆಗಳು, 2 BHK ಗೆ 1,100-1,300 ಚದರ ಅಡಿ ಅಳತೆ ಮತ್ತು 3 BHK ಗೆ 1,500- 2,500 ಚದರ ಅಡಿಗಳ ಮನೆಗಳಿಗೆ ಬೇಡಿಕೆ ಇದೆ. ಮೂರನೇ ತ್ರೈಮಾಸಿಕ 2021 ರಲ್ಲಿ ಹೊಸ ವಸತಿ ಯೋಜನೆಗಳು ಖರೀದಿದಾರರಿಂದ ಯೋಗ್ಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿವೆ, "ಎಂದು ವರದಿ ಬಹಿರಂಗಪಡಿಸಿದೆ. ವೈಭವೋಪೇತ ಮನೆಗಳು ಅದರಲ್ಲೂ ವಿಲ್ಲಾಗಳನ್ನು ಖರೀದಿಸುವುದು ನಗರದಲ್ಲಿ ಹೊಸ ಟ್ರೆಂಡ್ ಆಗಿದೆ ಎಂದು ವರದಿ ತಿಳಿಸಿದೆ.

ಹೊಸ ಮನೆಗಳ ಬೆಲೆ ಹೆಚ್ಚಳ

ಸ್ಥಿರವಾದ ಬೇಡಿಕೆಯಿಂದಾಗಿ, ನಗರವು ಈ ಆಸ್ತಿ ಪ್ರಕಾರದ ಪ್ರತಿ ಚದರ ಅಡಿ ದರದಲ್ಲಿ, ವಿಶೇಷವಾಗಿ ಹೊಸದಾಗಿ ನಿರ್ಮಿಸಿದ ಮೌಲ್ಯದಲ್ಲಿ ಹೆಚ್ಚಳವನ್ನು ದಾಖಲಿಸಿದೆ. ಪಶ್ಚಿಮದ ಚತುಷ್ಪಥದಲ್ಲಿರುವ ನಾನಾಕ್ರಮಗುಡ, ಕೋಕಪೇಟೆ, ನರಸಿಂಗಿ ಮತ್ತು ಕೊಂಡಾಪುರ ಮುಂತಾದ ಪ್ರದೇಶಗಳು ಖರೀದಿದಾರರ ವಿಚಾರಣೆ, ಹೊಸ ಸ್ಥಾಪನೆಗಳು ಮತ್ತು ವಸತಿ ಮಾರಾಟದ ದೃಷ್ಟಿಕೋನದಿಂದ ಮುನ್ನಡೆಯನ್ನು ಸಾಧಿಸಿವೆ.

1BHK ಮನೆಗಳಿಗೆ ಪ್ರಮುಖ ಬೇಡಿಕೆ ಕುಕಟಪಲ್ಲಿ ಮತ್ತು ಬೀರಮಗುಡ ಪ್ರದೇಶಗಳಿಗಿದೆ. 2BHK ಗಳಿಗೆ ಮಿಯಾಪುರ, ನಿಜಂಪೇಟೆ ಮತ್ತು ಮಣಿಕೊಂಡ ಅಂತೆಯೇ ಮತ್ತು 3BHK ಗಳಿಗೆ ಗಚಿಬೌಲಿ, ಕೊಂಡಾಪುರ ಮತ್ತು ನರಸಿಂಗಿ ಪ್ರದೇಶಗಳು ಬೇಡಿಕೆ ಪಡೆದುಕೊಂಡಿವೆ. ವಿಶೇಷವಾಗಿ ಮಣಿಕೊಂಡ, ಕುಕಟಪಲ್ಲಿ, ಗಚಿಬೌಲಿಯಂತಹ ಪ್ರದೇಶಗಳಲ್ಲಿ 2 ಮತ್ತು 3 BHK ಬಾಡಿಗೆ ಮನೆಗಳಿಗೆ ಬೇಡಿಕೆಯಿದೆ ಎಂಬುದಾಗಿ ವರದಿ ತಿಳಿಸಿದೆ.
Published by:Soumya KN
First published: