Viral News: ಇದೇನು ಆಫೀಸಾ, ಮನೆನಾ ಅಂತ ಇವ್ನನ್ನ ಕೇಳ್ಬೇಡಿ! ಈತ ಇಲ್ಲೇ ಕೆಲ್ಸ ಮಾಡ್ತಾನೆ, ಇಲ್ಲೇ ಮಲಗ್ತಾನೆ!

ಒಳ್ಳೆಯ ಸಂಬಳ ಸಿಗಬಹುದು ಎಂಬ ಒಂದು ಆಶಾ ಭಾವನೆಯೊಂದಿಗೆ ಬಹುತೇಕರು ಕೆಲಸ ಮಾಡುತ್ತಿರುತ್ತಾರೆ. ಇಲ್ಲಿಯೂ ಸಹ ಒಬ್ಬ ವ್ಯಕ್ತಿಗೆ ತನ್ನ ಬಾಸ್ ನೀಡುವ ಸಂಬಳ ಅವನ ಮನೆಯ ಬಾಡಿಗೆ ಕಟ್ಟುವುದಕ್ಕೂ ಆಗದ ಕಾರಣ, ಅವನು ಏನು ಮಾಡಿದ್ದಾನೆ ನೀವೇ ಓದಿ...

ಆಫೀಸ್‌ ಅನ್ನೇ ಮನೆ ಮಾಡಿಕೊಂಡ ವ್ಯಕ್ತಿ

ಆಫೀಸ್‌ ಅನ್ನೇ ಮನೆ ಮಾಡಿಕೊಂಡ ವ್ಯಕ್ತಿ

 • Share this:
  ಕೆಲವೊಮ್ಮೆ ನಮಗೆ ನಮ್ಮ ಕೆಲಸಕ್ಕೆ (Work) ನೀಡುವ ಸಂಬಳ (Salery) ಯಾವುದಕ್ಕೂ ಸಾಕಾಗುವುದಿಲ್ಲ, ಆದರೂ ಹೊಟ್ಟೆ ಪಾಡಿಗಾಗಿ ಕೆಲಸ ಮಾಡಲೇಬೇಕು ಅಂತ ಮತ್ತು ಮುಂದೆ ಎಂದಾದರೂ ನಮಗೂ ಒಳ್ಳೆಯ ಅವಕಾಶಗಳು (Good Opportunity) ಬಂದು, ಒಳ್ಳೆಯ ಸಂಬಳ ಸಿಗಬಹುದು ಎಂಬ ಒಂದು ಆಶಾ ಭಾವನೆಯೊಂದಿಗೆ ಬಹುತೇಕರು ಕೆಲಸ ಮಾಡುತ್ತಿರುತ್ತಾರೆ. ಇಲ್ಲಿಯೂ ಸಹ ಒಬ್ಬ ವ್ಯಕ್ತಿಗೆ ತನ್ನ ಬಾಸ್ (Boss) ನೀಡುವ ಸಂಬಳ ಅವನ ಮನೆಯ ಬಾಡಿಗೆ (Home Rent) ಕಟ್ಟುವುದಕ್ಕೂ ಆಗದ ಕಾರಣ, ಅವನು ಏನು ಮಾಡಿದ್ದಾನೆ ನೀವೇ ನೋಡಿ…

  ಆಫೀಸ್‌ನಲ್ಲೇ ವಾಸಿಸುತ್ತಿರುವ ವ್ಯಕ್ತಿ

  ತನ್ನ ಸಂಬಳದೊಂದಿಗೆ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದ ಕಾರಣ ತನ್ನ ಕಚೇರಿಯಲ್ಲಿ ಅವನಿಗೆ ಕುಳಿತು ಕೆಲಸ ಮಾಡಲು ಮಾಡಿಕೊಟ್ಟ ಕ್ಯೂಬೀಕಲ್ ಅನ್ನೆ ತನ್ನ ಮನೆಯ ಕೋಣೆ ಅಂತೆ ಬಳಸಿಕೊಳ್ಳುತ್ತಿದ್ದಾನೆ. ಇದನ್ನು ನೋಡಿ ಅವರ ಬಾಸ್ ಹೇಗೆ ಸುಮ್ಮನಿರುತ್ತಾರೆ? ಹೌದು.. ಬಾಸ್ ಸುಮ್ಮನಿರದೆ ಈ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

  ಬಾಡಿಗೆ ಕಟ್ಟದೇ ವಾಸ್ತವ್ಯ

  ಸೈಮನ್ ಜಾಕ್ಸನ್ ಎಂಬ ಹೆಸರನ್ನು ವೃತ್ತಿಪರವಾಗಿ ಬಳಸುವ ಚಿಬುಜೋರ್ ಎಜಿಮೊಫೋರ್, ಅವರು ತಮ್ಮ ಕಚೇರಿ ಕ್ಯೂಬಿಕಲ್ ಅನ್ನು ಹೇಗೆ ತಮ್ಮ ಮನೆಯ ಕೋಣೆಯನ್ನಾಗಿ ಪರಿವರ್ತಿಸಿಕೊಂಡಿದ್ದರು ಎಂಬುದನ್ನು ಹಂಚಿ ಕೊಂಡಿದ್ದಾರೆ ನೋಡಿ. ಇದರಿಂದ ಅವರು ಬಾಡಿಗೆ ಕಟ್ಟದೇ ಮುಕ್ತವಾಗಿ ವಾಸಿಸಲು ಸಾಧ್ಯವಾಯಿತು ನೋಡಿ.

  ಇದನ್ನೂ ಓದಿ: Viral Video: ಆಟಗಾರರು ಕಣ್ಣರಳಿಸುವಂತೆ ವಾಲಿಬಾಲ್ ಆಡುತ್ತಿರುವ ಸೂಪರ್ ಡಾಗ್ ವಿಡಿಯೋ ನೋಡಿ

  ಈ ವಾರದ ಆರಂಭದಲ್ಲಿ ವೈರಲ್ ಆದ ಟಿಕ್‌ಟಾಕ್ ವಿಡಿಯೋದಲ್ಲಿ ಅವರು "ನಾನು ನನ್ನ ಅಪಾರ್ಟ್ಮೆಂಟ್ ನಿಂದ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ನನ್ನ ಆಫೀಸಿನಲ್ಲಿರುವ ನನ್ನ ಕೆಲಸ ಮಾಡುವ ಕ್ಯೂಬೀಕಲ್ ಗೆ ಹೋಗಿದ್ದೆ" ಎಂದು ಹೇಳಿದರು.

  ಜಾಕ್ಸನ್ ಈ ವಿಡಿಯೋಗೆ "ನನ್ನ ಹೊಸ ಅಪಾರ್ಟ್ಮೆಂಟ್ ಅನ್ನು ಪರಿಶೀಲಿಸಿ" ಎಂದು ಶೀರ್ಷಿಕೆ ನೀಡಿದರು, ಅದರಲ್ಲಿ ಅವರು ತಮ್ಮ ಬಟ್ಟೆಗಳನ್ನು ತಮ್ಮ ಡೆಸ್ಕ್ ಸ್ಟೋರೇಜ್ ಗೆ ಲೋಡ್ ಮಾಡಿದರು ಮತ್ತು ಸೂಟ್ಕೇಸ್ ನಿಂದ ತಮ್ಮ ಸ್ಲೀಪಿಂಗ್ ಬ್ಯಾಗನ್ನು ಬಿಚ್ಚಿದರು.

  ಅವರು ಆಫೀಸಿಗೆ ಬಂದಾಗ ಸ್ಥಳವು ಖಾಲಿಯಾಗಿದೆ ಎಂದು ಅವರು ಹೇಳಿದರು "ಏಕೆಂದರೆ ಪ್ರತಿಯೊಬ್ಬರೂ ಈಗ ಕೋವಿಡ್ ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಮನೆಯಿಂದ ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ನಾನು ಆಫೀಸಿನಲ್ಲಿ ಹೋಗಿ ಏಕೆ ಇರಬಾರದು ಎಂದು ಯೋಚಿಸಿದೆ" ಎಂದು ಹೇಳಿಕೊಂಡಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್

  ಜಾಕ್ಸನ್ ತನ್ನ ಆಫೀಸಿನಲ್ಲಿರುವ ಕ್ಯೂಬೀಕಲ್ ನಲ್ಲಿ ಹೇಗೆ ವಾಸಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಅನೇಕ ಫಾಲೋ-ಅಪ್ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

  "ನನ್ನ ಕಂಪನಿಯು ಡೌನ್ಟೌನ್ ನಲ್ಲಿ ಖಾಲಿ ಕಚೇರಿಯನ್ನು ಹೊಂದಿದೆ ಎಂದು ನಾನು ಕಂಡು ಕೊಂಡಾಗ, ಇದು ನನ್ನ ಬಾಡಿಗೆ ಸಮಸ್ಯೆಗೆ ಪರಿಪೂರ್ಣವಾದ ಪರಿಹಾರವಾಗಿತ್ತು, ಏಕೆಂದರೆ ಇದು ನಾನು ಆಫೀಸಿನ ಹತ್ತಿರದಲ್ಲೇ ವಾಸಿಸುತ್ತಿದ್ದೆ ಮತ್ತು ಆಫೀಸಿನಲ್ಲಿರುವುದು ಸಂಪೂರ್ಣವಾಗಿ ಉಚಿತವಾಗಿರುತ್ತದೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

  ಇವರದ್ದು ಒಂಥರಾ ಪ್ರತಿಭಟನೆ

  "ಅವರು ಕೆಲಸ ಮಾಡಲು ನನಗೆ ಸಾಕಷ್ಟು ಸಂಬಳ ನೀಡುವುದಿಲ್ಲ, ಆದ್ದರಿಂದ ಪ್ರತಿಭಟನೆಯ ವಿಷಯವಾಗಿ, ನಾನು ನನ್ನ ಕ್ಯೂಬೀಕಲ್ ನಲ್ಲಿಯೇ ವಾಸ ಮಾಡುತ್ತಿದ್ದೇನೆ ಮತ್ತು ಇದರಿಂದ ಎಷ್ಟು ಸಮಯದವರೆಗೆ ಈ ಬಾಡಿಗೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು ಎಂದು ನಾನು ನೋಡುತ್ತೇನೆ" ಎಂದು ಹೇಳಿದರು.

  ಕಂಪನಿ ತೊರೆಯಲು ನಿರ್ಧರಿಸಿದ ವ್ಯಕ್ತಿ

  ವಿಡಿಯೋ ಪೋಸ್ಟ್ ಮಾಡಿದ ನಾಲ್ಕು ದಿನಗಳ ನಂತರ, ಜಾಕ್ಸನ್ ತನ್ನ ಕಂಪನಿಯಿಂದ ಒಂದು ಕರೆಯನ್ನು ಸ್ವೀಕರಿಸಿದರು. ತನ್ನ ಡೆಸ್ಕ್ ಯಿಂದ ತನ್ನೆಲ್ಲಾ ವಸ್ತುಗಳನ್ನು ತೆರವುಗೊಳಿಸಲು ಮತ್ತು ಅವನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಎಲ್ಲಾ ವಿಡಿಯೋಗಳನ್ನು ಅಳಿಸಲು ಅಥವಾ ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕುವಂತೆ ಅವನಿಗೆ ಎಚ್ಚರಿಕೆ ನೀಡಲಾಯಿತು. ಇದನ್ನು ಕೇಳಿದ ಜಾಕ್ಸನ್ ಅವರು ಕಂಪನಿಯನ್ನು ತೊರೆಯಲು ನಿರ್ಧರಿಸಿದರು.

  ಜಾಕ್ಸನ್ ತನ್ನ ಈ ಕೆಲಸವನ್ನು ತನ್ನ ಪ್ರಸ್ತುತ ಸಂಬಳದಲ್ಲಿ ಸಿಯಾಟಲ್ ನಲ್ಲಿ ಒಂದು ಅಪಾರ್ಟ್ಮೆಂಟ್ ಅನ್ನು ಖರೀದಿಸುವ ತೊಂದರೆಯ ಬಗ್ಗೆ ಗಮನ ಸೆಳೆಯುವ ಗುರಿಯನ್ನು ಹೊಂದಿರುವ "ಪ್ರತಿಭಟನೆ" ಇದಾಗಿತ್ತು ಎಂದು ಹೇಳಿದ್ದಾರೆ.

  ಈ ಬಗ್ಗೆ ಈತನ ಬಾಸ್ ಹೇಳಿದ್ದೇನು?

  "ಅವರು ಹಣದ ವಿಷಯದಲ್ಲಿ ಹೆಚ್ಚು ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನನ್ನೊಂದಿಗೆ ಮಾತಾಡಬಹುದಿತ್ತು" ಎಂದು ಬಾಸ್ ಆರ್ಕಾಡಿಸ್ ಅವರು ಹೇಳಿದರು.

  ಇದನ್ನೂ ಓದಿ: Viral Video: ಮೊದಲ ಬಾರಿಗೆ ಟಿವಿಯಲ್ಲಿ ಡೈನೋಸಾರ್ ನೋಡಿದ ಮಗುವಿನ Reaction ನೋಡಿ

  "ಸಿಬ್ಬಂದಿ ಮಾಹಿತಿಗೆ ಸಂಬಂಧಿಸಿದ ಗೌಪ್ಯತೆ ಕಾಳಜಿಗಳಿಂದಾಗಿ, ಉದ್ಯೋಗಿಯ ಅನುಮತಿಯಿಲ್ಲದೆ ಪ್ರಸ್ತುತ ಅಥವಾ ಮಾಜಿ ಉದ್ಯೋಗಿಗಳಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಬಹಿರಂಗಪಡಿಸಲು ಕಂಪನಿಗೆ ಸ್ವಾತಂತ್ರ್ಯವಿಲ್ಲ" ಎಂದು ಆರ್ಕಾಡಿಸ್ ಸುದ್ದಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
  Published by:Annappa Achari
  First published: