Tokyo Olympics: ಆಟವಾಡೋಕೆ ಹೋದವ್ರು ಏರ್‌ಪೋರ್ಟ್‌ನಲ್ಲೇ 8 ಗಂಟೆ ಕಾದು ಕುಳಿತರು, ಭಾರತೀಯ ಕ್ರೀಡಾಪಟುಗಳಿಗೆ ಬೇರೆ ದಾರಿ ಇರಲಿಲ್ಲ

Tokyo Olympics: ಸುಮಾರು 8 ಗಂಟೆಗಳಿಗಿಂತಲೂ ಹೆಚ್ಚಿನ ಕಾಲದ ವರೆಗೆ ತಮ್ಮ ಹೋಟೆಲ್ಗಳಿಗೆ ಹೋಗಲು ಬಿಡುವುದಕ್ಕೂ ಮುಂಚಿತವಾಗಿ ಅಲ್ಲಿಯೇ ವಿಮಾನ ನಿಲ್ದಾಣದಲ್ಲಿನ ಕುರ್ಚಿಯ ಮೇಲೆ ಕಾದು ಕುಳಿತುಕೊಳ್ಳಬೇಕಾಯಿತು.

ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಭಾರತೀಯ ಕ್ರೀಡಾಪಟುಗಳು

ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಭಾರತೀಯ ಕ್ರೀಡಾಪಟುಗಳು

  • Share this:
Tokyo Olympics: ಆರು ಜನರ ಭಾರತೀಯ ನೌಕಾಯಾನ ತಂಡವು ಟೊಕಿಯೋದ ಹನೇಡಾ ವಿಮಾನ ನಿಲ್ದಾಣದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 8 ಗಂಟೆಗಳಿಗೂ ಸ್ವಲ್ಪ ಹೆಚ್ಚಿನ ಕಾಲದವರೆಗೆ ವಿಮಾನ ನಿಲ್ದಾಣದಲ್ಲಿಯೇ ಕಾದು ಕುಳಿತುರುವಂತಹ ಘಟನೆಯು ಮಂಗಳವಾರ ನಡೆದಿದೆ.ಆರು ಜನರ ಭಾರತೀಯ ನೌಕಾಯಾನ ತಂಡವು ನಾಲ್ಕು ನಾವಿಕರನ್ನು ಮತ್ತು ಇಬ್ಬರು ತರಬೇತುದಾರರನ್ನು ಒಳಗೊಂಡಿದ್ದು, ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ತಂಡವೊಂದನ್ನು ಕೋವಿಡ್-19 ಪರೀಕ್ಷೆಗಳು ಮತ್ತು ಇತರೆ ತಾಂತ್ರಿಕ ಪರಿಶೀಲನೆಗಾಗಿ ಸುಮಾರು 8 ಗಂಟೆಗಳಿಗಿಂತಲೂ ಹೆಚ್ಚಿನ ಕಾಲದ ವರೆಗೆ ತಮ್ಮ ಹೋಟೆಲ್ಗಳಿಗೆ ಹೋಗಲು ಬಿಡುವುದಕ್ಕೂ ಮುಂಚಿತವಾಗಿ ಅಲ್ಲಿಯೇ ವಿಮಾನ ನಿಲ್ದಾಣದಲ್ಲಿನ ಕುರ್ಚಿಯ ಮೇಲೆ ಕಾದು ಕುಳಿತುಕೊಳ್ಳಬೇಕಾಯಿತು.


ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಅವರನ್ನು ಹೋಟೆಲ್‌ಗೆ ಕಳುಹಿಸಲು ಸುಮಾರು 8 ಗಂಟೆಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಯಿತು. ಇದು ತುಂಬಾ ಧೀರ್ಘಕಾಲದವರೆಗೆ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿರುವಂತಹ ಸಂಗತಿಯಾದರೂ, ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವೇ ಆಗಿದೆ. ಕಳೆದ ವಾರವಷ್ಟೇ ಒಲಂಪಿಕ್ ಕ್ರೀಡಾಕೂಟದ ಆಯೋಜಕರೊಂದಿಗೆ ನಡೆದ ಸಭೆಯ ನಂತರ ಭಾರತೀಯ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ನರಿಂದರ್ ಬಾತ್ರಾ ಅವರು ದೇಶದ 227 ಆಟಗಾರಗಿಗೂ ಈ ರೀತಿಯಾಗಿ ವಿಳಂಬಗಳು ಸಹಜವಾಗಿರುತ್ತವೆ ಮತ್ತು ನೀವು ಅದಕ್ಕೆ ಸಿದ್ಧರಾಗಿರುವಂತೆ ಎಲ್ಲಾ ಆಟಗಾರರಿಗೂ ತಿಳಿಸಿದ್ದರು.


ಬೇರೆ ದೇಶದ ಆಟಗಾರರು ಸಹ ವಿಮಾನ ನಿಲ್ದಾಣದಲ್ಲಿ ಇಮ್ಮಿಗ್ರೇಷನ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು 4 ಗಂಟೆಗಳ ಕಾಲ ಕಾಯಬೇಕಾಯಿತು. ನೀವು ವಿಮಾನ ನಿಲ್ದಾಣದಲ್ಲಿ ಆಗುವಂತಹ ವಿಳಂಬದ ಬಗ್ಗೆ ಮಾನಸಿಕವಾಗಿ ಸಿದ್ಧರಾಗಿರಿ ಮತ್ತು ಈ ಒಲಂಪಿಕ್ ಕ್ರೀಡಾಕೂಟವನ್ನು ಜಪಾನ್ ದೇಶವು ತುಂಬಾ ಕಠಿಣವಾದ ಸಮಯದಲ್ಲಿ ಆಯೋಜಿಸಿದ್ದು, ಎಲ್ಲವನ್ನೂ ನಾವು ನಗುಮುಖದಿಂದಲೇ ಸ್ವೀಕರಿಸಬೇಕು ಎಂದು ಬಾತ್ರಾ ತಮ್ಮ ಸಂದೇಶದಲ್ಲಿ ಆಟಗಾರರಿಗೆ ತಿಳಿಸಿದ್ದರು.
ಆನಂತರ ಕ್ರೀಡಾಕೂಟ ನಡೆಯುವಂತಹ ಜಾಗದ ಹತ್ತಿರವೇ ಇವರಿಗೆಲ್ಲಾ ಬೇರೆ ಬೇರೆ ವಸತಿಯನ್ನು ಕಲ್ಪಿಸಿಕೊಡಲಾಗಿದ್ದು, ಅಲ್ಲಿ ಅವರಿಗೆ ಯಾವುದೇ ರೀತಿಯ ಟೆಸ್ಟ್‌ಗಳನ್ನಾಗಲಿ ಅಥವಾ ಪರಿಶೀಲನೆ ಮಾಡಿಲ್ಲ. ಭಾರತೀಯ ನೌಕಾಯಾನ ತಂಡವನ್ನು ಇಮ್ಮಿಗ್ರೇಷನ್ ಪ್ರಕ್ರಿಯೆ ಮತ್ತು ಕೋವಿಡ್ ಟೆಸ್ಟ್ ವರದಿಗಾಗಿ ಕಾಯಬೇಕಾಗಿರುವುದರಿಂದ ಹೆಚ್ಚು ಕಾಲ ಅವರನ್ನು ವಿಮಾನ ನಿಲ್ದಾಣದಲ್ಲಿ ಇರಿಸಿಕೂಳ್ಳಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.


ಈ ಸಮಯದಲ್ಲಿ ಆಟಗಾರರಿಗೆ ತಮ್ಮ ಮೊಬೈಲ್‌ಗಳಲ್ಲಿ ಎರಡು ಆ್ಯಪ್‌ಗಳನ್ನೂ ಹಾಕಿಕೊಟ್ಟ ಕ್ವಾರಂಟೈನ್ ಅಧಿಕಾರಿಗಳು ಕ್ವಾರಂಟೈನ್ ನಿಯಮಗಳನ್ನು ಸಹ ತಿಳಿಸಿದರು. ಅವರ ಮೊಬೈಲ್ನಲ್ಲಿ ಬ್ಲೂಟೂತ್ ಮತ್ತು ಜಿಪಿಎಸ್ ಇರುವಂತೆ ತಿಳಿಸಿದರು. ಇನ್ನೂ ಕೆಲವು ಆಟಗಾರರ ಹತ್ತಿರ ಅಕ್ರಿಡಿಯೇಷನ್ ಕಾರ್ಡ್ ಇರದ ಕಾರಣ ವಿಮಾನ ನಿಲ್ದಾಣದಲ್ಲಿ ಅವರಿಗೆ ಕಾರ್ಡ್ ಮಾಡಿಸಲು ಮತ್ತು ಇತರೆ ಕಾರಣಗಳಿಂದ ತುಂಬಾ ಸಮಯ ಬೇಕಾಯಿತು ಎಂದು ಹೇಳಿದರು. ಜುಲೈ 17 ರಂದು ಟೊಕಿಯೋಗೆ ಏರ್ ಇಂಡಿಯಾ ವಿಮಾನದಲ್ಲಿ ತೆರಳಲಿರುವ ಎರಡನೆಯ ಬ್ಯಾಚಿನ ಭಾರತೀಯ ಆಟಗಾರರಿಗೆ ಇದು ಮುನ್ನೆಚ್ಚರಿಕೆಯಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. 

Published by:Soumya KN
First published: