ಮುಂಬೈನ ಗಲ್ಲಿಯಲ್ಲಿ ಲೋಕಲ್ ಹುಡುಗರೊಂದಿಗೆ ಕ್ರಿಕೆಟ್ ಆಡಿದ ತೆಂಡೂಲ್ಕರ್!: ವೈರಲ್ ಆಯ್ತು ವಿಡಿಯೋ


Updated:April 17, 2018, 8:24 AM IST
ಮುಂಬೈನ ಗಲ್ಲಿಯಲ್ಲಿ ಲೋಕಲ್ ಹುಡುಗರೊಂದಿಗೆ ಕ್ರಿಕೆಟ್ ಆಡಿದ ತೆಂಡೂಲ್ಕರ್!: ವೈರಲ್ ಆಯ್ತು ವಿಡಿಯೋ

Updated: April 17, 2018, 8:24 AM IST
ನ್ಯೂಸ್ 18 ಕನ್ನಡ

ಮುಂಬೈ(ಏ.17): ಭಾರತದಲ್ಲಿ ಕ್ರಿಕೆಟ್ ಆಡದ ಊರಿಲ್ಲ, ಕ್ರಿಕೆಟ್ ಆಡದ ಬೀದಿ ಇಲ್ಲ. ಹುಡುಕುತ್ತಾ ಹೋದ್ರೆ, ಏನಿಲ್ಲಾ ಅಂದ್ರೂ ಮನೆಗೊಬ್ಬ ಕ್ರಿಕೆಟಿಗ ಸಿಕ್ಕೇ ಸಿಗ್ತಾನೆ. ಆದ್ರೆ, ಎಲ್ಲರಿಗೂ ಸ್ಟೇಡಿಯಂನಲ್ಲಿ ಆಡುವ ಅವಕಾಶ ಸಿಗಲ್ಲ. ಆದರೆ, ಅವರೆಲ್ಲಾ ಬೀದಿಗಳಲ್ಲಿ ಕ್ರಿಕೆಟ್ ಆಡ್ತಾರೆ. ಇತ್ತೀಚೆಗೆ ಸಚಿನ್ ತೆಂಡೂಲ್ಕರ್, ಹೀಗೆ ಮುಂಬೈನ ಹುಡುಗರ ಜೊತೆ ರಾತ್ರಿ ವೇಳೆ ಗಲ್ಲಿಯೊಂದರಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.

ಸಚಿನ್ ತೆಂಡೂಲ್ಕರ್ ಮುಂಬೈನ ಬೀದಿಯೊಂದರಲ್ಲಿ ಲೋಕಲ್ ಹುಡುಗರ ಜೊತೆ ಗಲ್ಲಿ ಕ್ರಿಕೆಟ್ ಆಡಿದ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.


ರಸ್ತೆ ಬ್ಯಾರಿಕೇಡ್​ನ ವಿಕೆಟ್ ಮಾಡಿಕೊಂಡು, ಲೋಕಲ್ ಹುಡುಗರ ಬ್ಯಾಟ್​ನೇ ಹಿಡಿದು, ಸಿಂಪಲ್ಲಾಗಿ ಶರ್ಟ್ ಪ್ಯಾಂಟ್ ಧರಿಸಿ ಸಚಿನ್ ಕ್ರಿಕೆಟ್ ಆಡಿ ಸಖತ್ ಎಂಜಾಯ್ ಮಾಡಿದ್ದಾರೆ. ಅದಕ್ಕೆ, ಸಚಿನ್ ಎಂದಿಗೂ ಕ್ರಿಕೆಟ್ ದೇವರು.
First published:April 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ