• Home
 • »
 • News
 • »
 • trend
 • »
 • Sachin Tendulkar: ವೈದ್ಯಳಾಗಬೇಕೆಂಬ ರೈತನ ಮಗಳ ಆಸೆಗೆ ಆಸರೆಯಾದ 'ಕ್ರಿಕೆಟ್ ದೇವರು'

Sachin Tendulkar: ವೈದ್ಯಳಾಗಬೇಕೆಂಬ ರೈತನ ಮಗಳ ಆಸೆಗೆ ಆಸರೆಯಾದ 'ಕ್ರಿಕೆಟ್ ದೇವರು'

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ದೀಪ್ತಿಯ ಕಥೆಯು ಇತರ ಅನೇಕರಿಗೆ ತಮ್ಮ ಗುರಿಗಳತ್ತ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ಸಚಿನ್​​​ ಟ್ವೀಟ್‌ ಮಾಡಿದ್ದಾರೆ.

 • Share this:

  ಕ್ರಿಕೆಟ್​​ ಐಕಾನ್ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಲೋಕೋಪಕಾರದ ಕೆಲಸಗಳನ್ನು ಮಾಡುತ್ತಲ್ಲೇ ಬರುತ್ತಿದ್ದಾರೆ. ಸಚಿನ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಅವರ ಸಾಮಾಜಿಕ ಕಾರ್ಯಗಳಿಂದಲೂ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಇದೀಗಾ ರತ್ನಾಗಿರಿಯ ಜಾಯ್ರೆ ಮೂಲದ ಬಡ ರೈತನ ಮಗಳಾದ ದೀಪ್ತಿ ವಿಶ್ವಸ್ರಾವ್ ಅವರಿಗೆ ವೈದ್ಯಕೀಯ ಪದವಿ ಪಡೆಯುವ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಲು ಮುಂದಗಿದ್ದಾರೆ ಹಾಗೂ ಮತ್ತೊಮ್ಮೆ ತಮ್ಮ ಲೋಕೋಪಕಾರದ ಅವತಾರವನ್ನು ಜಗತ್ತಿಗೆ ತೋರಿಸಿದ್ದಾರೆ.


  ರತ್ನಾಗಿರಿಯ ಜಾಯ್ರೆ ಮೂಲದ ದೀಪ್ತಿ ವಿಶ್ವಸ್ರಾವ್ ಈಗ ತನ್ನ ಹಳ್ಳಿಯಿಂದ ಮೊದಲ ವೈದ್ಯರಾಗಲು ಸಜ್ಜಾಗಿದ್ದಾರೆ. @ Sachin_rt ಅವರ ಸಹಾಯಕ್ಕೆ ಧನ್ಯವಾದಗಳು! ಹಾಗೂ ವೈದ್ಯಕೀಯ ಕಾಲೇಜಿಗೆ ಹೋಗಬೇಕೆಂಬ ಅವಳ ಕನಸು ಈಗ ನನಸಾಗಿದೆ. ದೀಪ್ತಿಯ ಕನಸಿನ ಭಾಗವಾಗಿದ್ದಕ್ಕಾಗಿ ಮತ್ತು ಇತರ ಹಲವಾರು ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಹಾಯ ಮಾಡಿದಕ್ಕೆ ಧನ್ಯವಾದಗಳು ಸಚಿನ್, "ಲಾಭರಹಿತ ಮತ್ತು ಸ್ವಯಂಸೇವಕ-ಚಾಲಿತ ಸಂಸ್ಥೆಯಾದ ಸೇವಾ ಸಹ್ಯಾಗ್ ಫೌಂಡೇಶನ್ ಟ್ವೀಟ್ ನಲ್ಲಿ ತಿಳಿಸಿದೆ.ಸ್ವಯಂಸೇವಕ-ಚಾಲಿತ ಸಂಸ್ಥೆಯಾದ ಸೇವಾ ಸಹ್ಯಾಗ್ ಫೌಂಡೇಶನ್ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಚಿನ್ ಬೆಂಬಲಿಸಿದ್ದಕ್ಕಾಗಿ ದೀಪ್ತಿ ವಿಶ್ವಸ್ರಾವ್ ಧನ್ಯವಾದ ಅರ್ಪಿಸಿದ್ದಾರೆ.


  "ಈಗ, ನಾನು ಸರ್ಕಾರಿ ವೈದ್ಯಕೀಯ ಶಾಲೆಯಾದ ಅಕೋಲಾದಲ್ಲಿ ಎಂಬಿಬಿಎಸ್ ಓದುತ್ತಿದ್ದೇನೆ. ನನ್ನ ಕುಟುಂಬದಲ್ಲಿ ನಾನು, ನನ್ನ ಪೋಷಕರು ಮತ್ತು ಕಿರಿಯ ಸಹೋದರ ಸೇರಿದಂತೆ ನಾಲ್ಕು ಜನರಿದ್ದಾರೆ. ನನ್ನ ತಂದೆ ಕೃಷಿಕ ಮತ್ತು ನನ್ನ ತಾಯಿ ಗೃಹಿಣಿ." ಎಂದು ದೀಪ್ತಿ ವಿಶ್ವಸ್ರಾವ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ."ಆದರೆ ಕೆಲವರು ಕಠಿಣ ಪರಿಶ್ರಮವೇ ಯಶಸ್ಸಿನ ಕೀಎಂದು ಹೇಳುತ್ತಾರೆ. ಅಂತಿಮವಾಗಿ, ನನ್ನ ಎಲ್ಲಾ ಶ್ರಮಗಳು ಫಲ ನೀಡಿದೆ ನನಗೆ ಸರ್ಕಾರಿ ವೈದ್ಯಕೀಯ ಶಾಲೆಯಲ್ಲಿ ಸ್ಥಾನ ಸಿಕ್ಕಿದೆ. ನನಗೆ ವಿದ್ಯಾರ್ಥಿವೇತನ ನೀಡಿದ್ದಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ನನ್ನ ಧನ್ಯವಾದಗಳು," ಎಂದು ತಮ್ಮ ಅನಿಸಿಕೆಯನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ ದೀಪ್ತಿ ವಿಶ್ವಸ್ರಾವ್.ಟ್ವಿಟ್ಟರ್‌ನಲ್ಲಿ ಅನೇಕ ಜನರು ದೀಪ್ತಿ ವಿಶ್ವಸ್ರಾವ್ ಅನ್ನು ಅಭಿನಂದಿಸುತ್ತಿದ್ದಾರೆ.


  ಇದನ್ನೂ ಓದಿ: ಆತನನ್ನ ಕಳೆದುಕೊಂಡಿದ್ದಕ್ಕೆ ವಿಷಾದಿಸುತ್ತೇನೆ ಒಲಿಂಪಿಕ್ ಪದಕ ವಿಜೇತನಿಗೆ ಹಳೇ ಹುಡುಗಿಯ ಸಂದೇಶ

  ದೀಪ್ತಿಯ ಟ್ವೀಟ್‌ಗೆ ಪ್ರತಿ ಉತ್ತರ ನೀಡಿರುವ ಸಚಿನ್ ತೆಂಡೂಲ್ಕರ್ "ದೀಪ್ತಿಯ ಪ್ರಯಾಣವು ಕನಸುಗಳನ್ನು ಬೆನ್ನಟ್ಟುವ ಮತ್ತು ಅವುಗಳನ್ನು ನನಸಾಗಿಸಿಕೊಳ್ಳಲು ಒಂದು ಹೊಳೆಯುವ ಉದಾಹರಣೆಯಾಗಿದೆ. ದೀಪ್ತಿಯ ಕಥೆಯು ಇತರ ಅನೇಕರಿಗೆ ತಮ್ಮ ಗುರಿಗಳತ್ತ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ" ಎಂದು ಟ್ವೀಟ್‌ ಮಾಡಿದ್ದಾರೆ. ಈ ವಿಷಯ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ ಮತ್ತು ಸಚಿನ್ ಮಾಡಿದ ಸಹಾಯ ಕುರಿತು ಎಲ್ಲಾರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನಾವು ಅವರ ಹೆಜ್ಜೆಗುರುತುಗಳನ್ನು ಅನುಸರಿಸಬೇಕು ಮತ್ತು ದೀಪ್ತಿಯಂತಹ ನೂರಾರು ಜನರ ಕನಸುಗಳನ್ನು ನನಸು ಮಾಡಲು ಬಹಳಷ್ಟು ಜನರಿಗೆ ಪ್ರೋತ್ಸಾಹಿಸಬೇಕು.

  First published: