• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಮತ್ತೆ ಟ್ರೋಲ್ ಆಗಿದ್ದಾರೆ ಸಬ್ಯಸಾಚಿ, ನೀವ್ ಮಾಡೋ ಡ್ರೆಸ್​ ಚೆನ್ನಾಗಿಲ್ಲ ಅಂದ್ರು ನೆಟ್ಟಿಗರು

Viral News: ಮತ್ತೆ ಟ್ರೋಲ್ ಆಗಿದ್ದಾರೆ ಸಬ್ಯಸಾಚಿ, ನೀವ್ ಮಾಡೋ ಡ್ರೆಸ್​ ಚೆನ್ನಾಗಿಲ್ಲ ಅಂದ್ರು ನೆಟ್ಟಿಗರು

ಟ್ರೋಲ್​ಗಳು

ಟ್ರೋಲ್​ಗಳು

ಬಾಲಿವುಡ್ ನಟಿ ಮಣಿಯರ ಫೇವರೇಟ್ ಡಿಸೈನ್ ಸಂಸ್ಥೆ ಹಾಗೂ ಡಿಸೈನರ್ ಅಂದ್ರೆ ಅದು ಸಬ್ಯಸಾಚಿ ಡಿಸೈನ್ಸ್ ಮತ್ತು ಡಿಸೈನರ್ ಸಬ್ಯಸಾಚಿ ಮುಖರ್ಜಿ.

  • Share this:

ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮ, ಬಿಪಾಶಾ ಬಸು, ಪ್ರಿಯಾಂಕಾ ಚೋಪ್ರಾ ಮತ್ತು ವಿದ್ಯಾ ಬಾಲನ್ ಹೀಗೆ ಇವರೆಲ್ಲರ ಮದುವೆ ಫೋಟೋಗಳನ್ನು ನೀವೆಲ್ಲಾ ನೋಡೇ ಇರ‍್ತೀರಾ. ಅವರ ಮದುವೆ ಉಡುಪುಗಳನ್ನು (Dress) ಕಂಡು ವ್ಹಾವ್​ ಎಂಬ ಉದ್ಘಾರ ನಿಮ್ಮಲ್ಲಿ ಬಾರದೇ ಇರದು. ಏಕೆಂದರೆ ಒಂದೊಂದು ದಾರದಲ್ಲೂ, ಬಣ್ಣದಲ್ಲೂ, ಅಳತೆಯಲ್ಲೂ ಸಖತ್ ಪರ್ಫೆಕ್ಷನ್ (Perfect). ಹೌದು, ಈ ಎಲ್ಲಾ ನಟಿಮಣಿಯರು ಇಷ್ಟೊಂದು ಸುಂದರವಾಗಿ ಕಾಣುವಂತೆ ಮಾಡಿದ್ದು, ಸಬ್ಯಸಾಚಿ ಡಿಸೈನರ್ ಬಟ್ಟೆಗಳು. ಇದೀಗ ಅಂತರಾಷ್ಟೀಯ ಮಟ್ಟದವರೆಗೂ ಪ್ರಖ್ಯಾತಿ ಗಳಿಸಿದ್ದು, ಇದರ ರೂವಾರಿಯೇ ಸೆಲಿಬ್ರಿಟಿ (Celebrity)ಡಿಸೈನರ್ ಎಂದು ಕರೆಸಿಕೊಳ್ಳುತ್ತಿರುವ ಸಬ್ಯಸಾಚಿ ಮುಖರ್ಜಿ.


ಬಾಲಿವುಡ್ ನಟಿಮಣಿಯರ ಫೇವರೇಟ್ ಡಿಸೈನ್ ಸಂಸ್ಥೆ ಹಾಗು ಡಿಸೈನರ್ ಅಂದ್ರೆ ಅದು ಸಬ್ಯಸಾಚಿ ಡಿಸೈನ್ಸ್ ಮತ್ತು ಡಿಸೈನರ್ ಸಬ್ಯಸಾಚಿ ಮುಖರ್ಜಿ. ಇನ್ನು ದೀಪಿಕಾ ಪಡುಕೋಣೆ ತಮ್ಮ ಮದುವೆ ಸಂದರ್ಭದಲ್ಲಿ ಹಾಕಿದ್ದ ತಾಳಿಯನ್ನು ಸಹ ವಿನ್ಯಾಸಗೊಳಿಸಿದ್ದು ಸಬ್ಯಸಾಚಿ. ಇದು ಕೂಡ ಆಗ ಬಹಳಷ್ಟು ಟ್ರೆಂಡ್ ಆಗಿತ್ತು.


ಹಲವು ಬಾರಿ ಟ್ರೋಲ್


ಫ್ಯಾಷನ್ ಜಗತ್ತಿನಲ್ಲಿ ಟ್ರೆಂಡಿಂಗ್‍ನಲ್ಲಿರುವ ಸಬ್ಯಸಾಚಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಸಾಕಷ್ಟು ಡಿಸೈನ್ ಫೋಟೋಗಳನ್ನು, ರೂಪದರ್ಶಿಗಳು ತೊಟ್ಟ ಬಟ್ಟೆಗಳ ಫೋಟೋಗಳನ್ನು, ಒಡವೆಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.ಇವರು ಇನ್‌ಸ್ಟಾಗ್ರಾಮ್‌ಲ್ಲಿ ಹಾಕುವ ಫೋಟೋಗಳು ಕೆಲವೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಇನ್ನು ಕೆಲವೊಮ್ಮೆ ಟ್ರೋಲ್‌ಗೆ ಒಳಗಾಗುತ್ತವೆ. ಈ ಹಿಂದೆ ಒಡವೆಗಳನ್ನು ಧರಿಸಿದ್ದ ರೂಪದರ್ಶಿಗಳು, ಅವರ ಮುಖ ಹಾವಭಾವ ಟ್ರೋಲ್‌ಗೆ ಆಹಾರವಾಗಿತ್ತು. ಇದೀಗ ಮತ್ತೆ ರೂಪದರ್ಶಿ ತೊಟ್ಟ ಬಟ್ಟೆಗಿಂತ ಆಕೆಯ ಹಾವಭಾವ ಟ್ರೋಲ್‌ಗೆ ಒಳಗಾಗಿದೆ.


ರೂಪದರ್ಶಿ ಟ್ರೋಲ್


ಸಬ್ಯಸಾಚಿಯು ಮದುವೆಯ ಬಟ್ಟೆಯನ್ನು ಡಿಸೈನ್ ಮಾಡಿದ್ದು, ಆ ಬಟ್ಟೆಯನ್ನು ತೊಟ್ಟ ರೂಪದರ್ಶಿಗಳು ವಧು ಹಾಗೂ ವರನ ರೀತಿಯಲ್ಲಿ ಫೋಸ್ ಕೊಟ್ಟಿದ್ದಾರೆ.


ಇದನ್ನೂ ಓದಿ: ನಿಮ್ಮ ಮೊಬೈಲ್​ನಲ್ಲಿ​ ಬ್ಯಾಟರಿ ಕಡಿಮೆ ಇದ್ರೆ ಊಬರ್​ ಬಿಲ್ ಜಾಸ್ತಿ ಆಗುತ್ತಂತೆ! ಏನಿದು ವಿಷ್ಯ?


ಆ ಎರಡು ಫೋಟೋವನ್ನು ಸಬ್ಯಸಾಚಿಯು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆದರೆ ಆ ಫೋಟೋದಲ್ಲಿ ಒಂದು ಸಮಸ್ಯೆ ಇದೆ. ಏನೆಂದರೆ ಆ ಬಟ್ಟೆ ತೊಟ್ಟ ವಧು ಅಂದರೆ ರೂಪದರ್ಶಿಯು ತೀರಾ ಬೇಸರದಲ್ಲಿದ್ದಾಳೆ. ಇದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.


ಫೋಟೋಗಳನ್ನು ಹೊಸ ಕಲೆಕ್ಷನ್, ಝರಿ ಕಸೂತಿ ಆರ್ಗನ್ಜಾ ಸೀರೆ, ರೇಷ್ಮೆ ಕುಪ್ಪಸ ಮತ್ತು ಕೈಯಿಂದ ಮಾಡಿದ ಮುಸುಕು, ಸಬ್ಯಸಾಚಿ ಹೆರಿಟೇಜ್ ಆಭರಣ ಎಂಬ ಅಡಿಬರಹದಲ್ಲಿ ಸಬ್ಯಸಾಚಿಯು ಅಪ್‌ಲೋಡ್ ಮಾಡಿದ್ದಾರೆ.ಇದನ್ನು ನೋಡಿದ ನೆಟ್ಟಿಗರು, ರೂಪದರ್ಶಿ ಯಾಕೆ ಬೇಸರದಲ್ಲಿದ್ದಾಳೆ, ಸಬ್ಯಸಾಚಿ ಡಿಸೈನ್ ಇಷ್ಟವಾಗಲಿಲ್ಲವೇ, ವರ ಇಷ್ಟವಾಗಲಿಲ್ಲವೇ ಹೀಗೆ ನಾನಾ ಪ್ರಶ್ನೆಗಳನ್ನು ಕೇಳಿ ಸಬ್ಯಸಾಚಿಯ ಕಾಲೆಳೆದಿದ್ದಾರೆ. ಶಂಭವ್ ಶರ್ಮಾ ಎಂಬುವವರು ಆಕೆಗೆ ಸಬ್ಯಸಾಚಿಯ ಡಿಸೈನ್ ಬಟ್ಟೆಯನ್ನು ಧರಿಸಲು ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ದ್ವೀಪ ಇದು; ಇಲ್ಲಿರುವ ಒಂದು ಬಂಗಲೆಗೆ 200 ಕೋಟಿ!


ನನಗೆ ನಿಜವಾಗಿಯೂ ಸಬ್ಯಸಾಚಿ ಸೌಂದರ್ಯದ ವ್ಯಾಕರಣ ಅರ್ಥವಾಗುತ್ತಿಲ್ಲ. ನೀವು ಜೀವನದ ಅತ್ಯುನ್ನತ ಘಟ್ಟದ ಸಮಾರಂಭಕ್ಕೆ ಸಾಂಪ್ರದಾಯಿಕ ಶೈಲಿಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದೀರಿ ಮತ್ತು ಆದರೆ ನೀವು ರೂಪದರ್ಶಿಗಳನ್ನು ಸಂಪೂರ್ಣವಾಗಿ ದ್ವೇಷಿಸುವಂತೆ ಮಾಡುತ್ತೀರಿ ಎಂದು ಒಕೆ ಎಂಬುವವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.


ಮತ್ತೊಬ್ಬರು, ಮದುವೆಯ ಹುಡುಗ ಇಷ್ಟವಾಗದಿದ್ದರೂ ಸಬ್ಯಸಾಚಿ ವಸ್ತ್ರ ಧರಿಸಬೇಕೆಂಬ ಕಾರಣಕ್ಕಾಗಿ ಮದುವೆಯನ್ನು ಒಪ್ಪಿಕೊಂಡಂತಿದೆ ಎಂದು ಹೇಳಿದ್ದಾರೆ.
ನನಗೆ ಗೊತ್ತು ವಧು ಯಾಕೆ ಬೇಸರದಲ್ಲಿದ್ದಾಳೆ ಎಂದುತಿಳಿದಿದೆ. ಏಕೆಂದರೆ ಆಕೆಗೆ ಸಬ್ಯಸಾಚಿಯ ವಸ್ತ್ರ ವಿನ್ಯಾಸ ಇಷ್ಟವಾಗಲಿಲ್ಲ ಎಂದು ಅಭಿವ್ಯಕ್ತಿಸಿದ್ದಾರೆ.


ಸಂದೇಶ ಸ್ಪಷ್ಟವಾಗಿದೆ. ಸಾಲದಲ್ಲಿರುವವರು ಮದುವೆಯಲ್ಲಿ ಒಂದು ಸಣ್ಣ ನಗುವನ್ನು ಬೀರುವುದಿಲ್ಲ. ಹಾಗಾಗಿ ಸಬ್ಯಸಾಚಿಗೆ ದುಂದು ವೆಚ್ಚ ಮಾಡಬೇಡಿ. ಕೈಯಿಂದ ನೇಯ್ದ ಸ್ಥಳೀಯ ಬ್ರ್ಯಾಂಡ್ ಸೀರೆಗಳನ್ನು ಖರೀದಿಸಿ ಎಂದು ನೀತಿ ಪಾಠ ಹೇಳಿದ್ದಾರೆ.

First published: