Viral Story: ಮಲಮಗನಿಂದ ಗರ್ಭಿಣಿಯಾಗಿ ಮಗು ಪಡೆದ ತಾಯಿ! ಇದು ಕಲಿಗಾಲವಯ್ಯಾ

ಮರೀನಾ ಬಲ್ಮಶೇವಾ ಪತಿಗೆ ವಿಚ್ಛೇದನ ನೀಡಿದ ಬಳಿಕ ಮಲಮಗನ ಪ್ರೀತಿಗೆ ಬಿದ್ದಳು. ಬಳಿಕ ಇವರಿಬ್ಬರಿಂದ ಹೆಣ್ಣು ಮಗುವೊಂದು ಜನಿಸಿದೆ. ಇದೀಗ ಮರೀನಾ ಬಲ್ಮಶೇವಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಫಾಲೋವರ್ಸ್​ಗಳ ಜೊತೆಗೆ ಹಂಚಿಕೊಂಡಿದ್ದಾಳೆ.

ಮಲ ಮಗನೊಂದಿಗೆ ಮರೀನಾ ಬಲ್ಮಶೇವಾ

ಮಲ ಮಗನೊಂದಿಗೆ ಮರೀನಾ ಬಲ್ಮಶೇವಾ

  • Share this:
    ಜೀವನದ ಉದ್ದಕ್ಕೂ ಸಾಕಷ್ಟು ಕಷ್ಟ-ನಷ್ಟಗಳು ಬರುತ್ತವೆ. ಆದರೆ ಅವುಗಳನ್ನೆಲ್ಲಾ ಮೆಟ್ಟಿ ನಿಂತು, ದೃತಿಗೆಡದೆ ಸಾಗಿದರೆ ಮಾತ್ರ ಬದುಕು ಸುಂದರವಾಗಿ ಸಾಗುತ್ತದೆ. ಆದರೆ ಈಗ ಹಾಗಿಲ್ಲ, ಕಾಲ ಬದಲಾಗಿದೆ, ಯಾರು ಯಾರನ್ನು ಬೇಕಾದರೂ ಪ್ರೀತಿಸುತ್ತಾರೆ (Love). ಇಂದು ಮದುವೆಯಾದವರು (Marriage) ನಾಳೆ ವಿಚ್ಛೇದನ (Divorce) ಪಡೆಯುತ್ತಾರೆ. ಹಾಗಾಗಿ ಸಂಬಂಧದ ಬೆಲೆ ತಿಳಿದಿರುವುದಿಲ್ಲ. ಇದೀಗ ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ತಾಯಿಯೊಬ್ಬಳು ತನ್ನ ಮಲಮಗನಿಂದ (Stepson) ಗರ್ಭಿಣಿಯಾಗಿ (Pregnant) ಮಗು ಪಡೆದಿದದ್ದಾಳೆ. ಈ ವಿಚಾರವನ್ನು ಆಕೆಯೇ ತನ್ನ ಬಾಯಾರೆ ಹೇಳಿಕೊಂಡಿದ್ದಾಳೆ.

    ಹೌದು. ಇದು ನಂಬಲಸಾಧ್ಯವಾದ ಸುದ್ದಿಯಾದರು, ಈ ಸುದ್ದಿ ಇದೀಗ ವೈರಲ್​ ಆಗುತ್ತಿದೆ. 37 ವರ್ಷದ ಮರೀನಾ ಬಲ್ಮಶೇವಾ ಎಂಬಾಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆಕೆ ತನ್ನ ಮಲಮಗನಿಂದ ಈ ಉಡುಗೊರೆ ಪಡೆದಿದ್ದಾಳಂತೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಆಕೆ ಮಲಮಗನಿಂದ ಎರಡನೇ ಬಾರಿಗೆ ಗರ್ಭ ಧರಿಸಿದ್ದಾಳಂತೆ. ಈ ವಿಚಾರವನ್ನು ಮರೀನಾ ಬಲ್ಮಶೇವಾ ಹೇಳಿಕೊಂಡಿದ್ದಾಳೆ.

    ಮರೀನಾ ಬಲ್ಮಶೇವಾ ಪತಿಗೆ ವಿಚ್ಛೇದನ ನೀಡಿದ ಬಳಿಕ ಮಲಮಗನ ಪ್ರೀತಿಗೆ ಬಿದ್ದಳು. ಬಳಿಕ ಇವರಿಬ್ಬರಿಂದ ಹೆಣ್ಣು ಮಗುವೊಂದು ಜನಿಸಿದೆ. ಇದೀಗ ಮರೀನಾ ಬಲ್ಮಶೇವಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಫಾಲೋವರ್ಸ್​ಗಳ ಜೊತೆಗೆ ಹಂಚಿಕೊಂಡಿದ್ದಾಳೆ.

    ಅಂದಹಾಗೆಯೇ, ಮರೀನಾ ಬಲ್ಮಶೇವಾ ತನ್ನ ಮಲಮಗನನ್ನು 10ನೇ ವಯಸ್ಸಿನಿಂದ ಸಾಕುತ್ತಾ ಬಂದಿದ್ದಾಳೆ. ತನ್ನ ಕೈಯಾರೆ ಊಟ ಮಾಡಿಸಿ, ಆತನನ್ನು ನಿದ್ರಿಸುವಲ್ಲಿಯವರೆಗೆ ಮಲಮಗನನ್ನು ಪೋಷಣೆ ಮಾಡಿದವಳು ಮರೀನಾ ಬಲ್ಮಶೇವಾ. ಆದರೆ ಆತ ಬೆಳೆದು ದೊಡ್ಡವನಾಗುತ್ತಿದ್ದಂತೆಯೇ ಆತನ ಮಗುವಿಗೆ ಮರೀನಾ ಬಲ್ಮಶೇವಾ ತಾಯಿಯಾಗಿದ್ದಾಳೆ.

    ಇದನ್ನೂ ಓದಿ: Two Marriage: ಒಂದಲ್ಲಾ, ಎರಡು ಮದುವೆ ಆಗಲೇಬೇಕು! ಇಲ್ಲಾ ಅಂದ್ರೆ ಈ ದೇಶದಲ್ಲಿ ಜೈಲಿಗೆ ಹಾಕ್ತಾರೆ

    ಪ್ರಾರಂಭದಲ್ಲಿ ಅಲೆಕ್ಸಿ ಶಾವಿರಿನ್ ಅವರನ್ನು ಮರೀನಾ ಬಲ್ಮಶೇವಾ ವಿವಾಹವಾದರು. 7ನೇ ವಯಸ್ಸಿನಿಂದ ತನ್ನ ಮನೆಯಲ್ಲಿ ಮಲಮಗನನ್ನು ಬೆಳೆಸಿದಳು. ಅಲೆಕ್ಸಿ  ಜೊತೆಗೆ ವಾಸಿಸುತ್ತಿರುವಾಗ ಮರೀನಾ ಒಟ್ಟು 4 ಮಕ್ಕಳನ್ನು ದತ್ತು ಪಡೆದಳು. ಅವರು ಈಗ ಅಲೆಕ್ಸಿಯೊಂದಿಗೆ ವಾಸಿಸುತ್ತಿದ್ದಾರೆ. ಮರೀನಾ ಬಲ್ಮಶೇವಾ ಅವರು ಅಲೆಕ್ಸಿಯೊಂದಿಗೆ ವಿಚ್ಛೇದನ ಪಡೆದಿದ್ದಾರೆ.






    ಮಿರರ್ ವರದಿಯ ಪ್ರಕಾರ, ಮರೀನಾ ಬಲ್ಮಶೇವಾ ವಿಶ್ವವಿದ್ಯಾನಿಲಯದ ರಜೆಗಾಗಿ ಮನೆಗೆ ಬಂದ ಮಲಮಗನೊಂದಿಗೆ ಆಕೆಯ ಸಂಬಂಧವು ಪ್ರಾರಂಭವಾಯಿತು. ಮರೀನಾ ತನ್ನ ಮಲಮಗನನ್ನು ಮದುವೆಯಾಗಲು ತನ್ನ ಮೊದಲ ಪತಿಯಿಂದ ದೂರವಾದಳು. ಈ ವೇಳೆ ದಂಪತಿಗೆ 20 ತಿಂಗಳ ಹೆಣ್ಣು ಮಗುವಿತ್ತು.

    ಇದನ್ನೂ ಓದಿ: Ola New Electric Car: ಸಿಂಗಲ್​ ಚಾರ್ಜ್​ನಲ್ಲಿ 500km ಕ್ರಮಿಸುತ್ತೆ! 4 ಸೆಕೆಂಡ್​ಗಳಲ್ಲಿ 100km ವೇಗದಲ್ಲಿ ಸಾಗುತ್ತೆ ಈ ಕಾರು!

    ರಷ್ಯಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಮರೀನಾ ತನ್ನ ಮಲಮಗನೊಂದಿಗೆ ಮದುವೆಯಾಗಿ ಸಾಕಷ್ಟು ಸಮಯ ಕಳೆದಿದ್ದು, ಇದೀಗ ಮತ್ತೊಂದು ಮಗುವಿಗೆ ತಾಯಿಯಾಗಲಿದ್ದಾಳೆ. ಮರೀನಾ ಬಲ್ಮಶೇವಾ ತಮ್ಮ 620k ಅನುಯಾಯಿಗಳೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾಳೆ.ಅವರಲ್ಲಿ ಹಲವರು ಅವರನ್ನು ಅಭಿನಂದಿಸಿದ್ದಾರೆ.






    ಅವರ ತಂದೆ ವ್ಲಾಡಿಮಿರ್ ಮತ್ತು ಮರೀನಾ ಅವರ ಮಾಜಿ ಪತಿ ಈ ಸಂಬಂಧವನ್ನು ಇಷ್ಟಪಡುತ್ತಿಲ್ಲ. ಆದರೆ ಈಗ ಅವರು ಬಲವಂತವಾಗಿ ಇದ್ದಾರೆ. ವ್ಲಾಡಿಮಿರ್ ಉಕ್ರೇನ್ ಬಳಿ ಕೆಲಸ ಮಾಡುತ್ತಿದ್ದಾರೆ. ಆದರೆ ಯುದ್ಧದ ನಂತರ, ಮರೀನಾ ತನ್ನ ಗಳಿಕೆಯಿಂದ ಆಕೆಯನ್ನು ಬೆಂಬಲಿಸುತ್ತಿದ್ದಾಳೆ. ಇಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಸಾಕಷ್ಟು ಸುದ್ದಿ ಮಾಡಿದ್ದಾರೆ.

    ಈ ವಿಚಿತ್ರ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿದೇಶಿ ಮೂಲದ ಮರೀನಾ ತನ್ನ ಮಲಮಗನನ್ನೇ ಪ್ರೀತಿಸಿ ಆತನಿಂದ ಹೆಣ್ಣು ಮಗುವಿಗೆ ತಾಯಿಯಾದ ಘಟನೆ ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ಆತನಿಂದ ಆಕೆ 2ನೇ ಬಾರಿಗೆ ತಾಯಿಯಾಗುತ್ತಿದ್ದಾಳೆ.
    Published by:Harshith AS
    First published: