HOME » NEWS » Trend » RUSSIAN VLOGGER BURNS DOWN HIS RS CRORE MERCEDES BENZ AMG GT 63 S CAR OUT OF FRUSTRATION VIDEO VIRAL ON YOUTUBE HG

Video Viral: ಕೋಟಿ ಬೆಲೆಯ ಕಾರನ್ನು ನಿಮಿಷಾರ್ಧದಲ್ಲೇ ಸುಟ್ಟುಹಾಕಿದ; ಆತನ ಸಿಟ್ಟಿಗೆ ಕಾರಣವೇನು ಗೊತ್ತಾ?

Mercedes AMG GT 63 S: ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ದುಬಾರಿ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಆದರೆ ಆತ ಸುಮ್ಮನೆ ಸುಟ್ಟು ಹಾಕಿದ್ದಲ್ಲ. ಅದಕ್ಕೂ ಒಂದು ಕಾರಣವಿದೆ. ಆ ಕಾರಣ ಏನೆಂದು ತಿಳಿಯಬೇಕಾದರೆ ಈ ಸ್ಟೋರಿ ಓದಿ.

news18-kannada
Updated:October 28, 2020, 2:16 PM IST
Video Viral: ಕೋಟಿ ಬೆಲೆಯ ಕಾರನ್ನು ನಿಮಿಷಾರ್ಧದಲ್ಲೇ ಸುಟ್ಟುಹಾಕಿದ; ಆತನ ಸಿಟ್ಟಿಗೆ ಕಾರಣವೇನು ಗೊತ್ತಾ?
Mercedes AMG GT 63 S
  • Share this:
ಕೋಟಿ ಬೆಲೆಯ ಕಾರು ರೋಡಲ್ಲಿ ಹಾದು ಹೋದರೆ ಸಾಕು ಕಣ್ಣು ಬಾಯಿ ಬಿಟ್ಟು ನೋಡುತ್ತಿರುತ್ತೇವೆ. ಅಂತಹ ಕಾರನ್ನು ಯಾವಾಗ ಖರೀದಿಸುವುದೋ?. ಯಾವಾಗ ದುಬಾರಿ ಬೆಲೆಯ ಕಾರನ್ನು ಡ್ರೈವ್​ ಮಾಡುವುದೋ? ಎಂದು ಮನದಲ್ಲೇ ಅಂದುಕೊಳ್ಳುತ್ತೇವೆ. ದೇವರು ಅಂತಹ ಕಾರನ್ನು ಖರೀದಿಸುವ ಸಂದರ್ಭ ಒದಗಿಸಿಕೊಡಲಿ ಎಂದು ಅಂದುಕೊಳ್ಳುತ್ತಾ ಸುಮ್ಮನಾಗುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ದುಬಾರಿ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಆದರೆ ಆತ ಸುಮ್ಮನೆ ಸುಟ್ಟು ಹಾಕಿದ್ದಲ್ಲ. ಅದಕ್ಕೂ ಒಂದು ಕಾರಣವಿದೆ. ಆ ಕಾರಣ ಏನೆಂದು ತಿಳಿಯಬೇಕಾದರೆ ಈ ಸ್ಟೋರಿ ಓದಿ.

ಮಿಕೈಲ್​ ಲಿಟ್​ವಿನ್​​ ಎಂಬ ರಷ್ಯಾದ ವ್ಲಾಗರ್​​ ತನ್ನ 2.42 ಕೋಟಿ ಬೆಲೆಯ ಮರ್ಸಿಡಿಸ್​ –AMG GT 63 S ಕಾರಿಗೆ ಬೆಂಕಿ ಹಚ್ಚಿದ್ದಾರೆ. ಅಷ್ಟು ಮಾತ್ರವಲ್ಲ, ಬೆಂಕಿ ಹೊತ್ತಿ ಉರಿಯುತ್ತಿರುವ ಕಾರಿನ ವಿಡಿಯೋವನ್ನು ಸೆರೆಹಿಡಿದು ತನ್ನ ಯ್ಯೂಟೂಬ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆತ ಹಾಗೆ ಮಾಡಲು ಕಾರಣವೇನು ಗೊತ್ತಾ?.

ಮಿಕೈಲ್​ ಲಿಟ್​ವಿನ್​ ಜರ್ಮನ್​ ಕಾರು ಉತ್ಪಾದಕ ಸಂಸ್ಥೆಯ ವಿರುದ್ಧ ತನ್ನ ಸಿಟ್ಟನ್ನು ತೀರಿಸಿಕೊಳ್ಳಲು ಕಾರು ಸುಟ್ಟಿದ್ದಾರೆ. ಹೌದು. ಸರಿಯಾಗಿ ಸರ್ವಿಸ್​ ನೀಡದ ಈ ಸಂಸ್ಥೆಯ ವಿರುದ್ಧ ತನ್ನ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.

ಮಿಕೈಲ್​ ಖರೀದಿಸಿದ್ದ ಮರ್ಸಿಡಿಸ್​ –AMG GT 63 S ಕಾರಿನಲ್ಲಿ ಸಮಸ್ಯೆಯೊಂದು ಕಾಣಿಸಿಕೊಂಡಿತ್ತು. ಈ ಬಗ್ಗೆ ಹಲವು ಬಾರಿ ತೋರಿಸಿದರು ಸಮಸ್ಯೆ ಬಗೆಹರಿಯಲಿಲ್ಲ. ನಂತರ ಕಾರನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಆದರೆ ಕಾರಿನಲ್ಲಿ ಸಮಸ್ಯೆ ಇರುವುದನ್ನು ಅರಿತ  ಗಿರಾಕಿಗಳು ಖರೀದಿಸದೆ ಸುಮ್ಮನಾಗುತ್ತಾರೆ.

ಇದರಿಂದ ಬೇಸರಗೊಂಡ ಮಿಕೈಲ್​ ಮರ್ಸಿಡಿಸ್​ ಬೆಂಜ್​ ಕಂಪನಿಗೆ ಸಂದೇಶ ರವಾನಿಸುತ್ತಾರೆ. ನಂತರ ಕಾರನ್ನು ಮೈದಾನದ ಬಳಿ ತೆಗೆದುಕೊಂಡು ಹೋಗಿ ಅದರ ಮೇಲೆ ಇಂಧನವನ್ನು ಸುರಿದು ಬೆಂಕಿ ಹಚ್ಚುತ್ತಾರೆ.

Youtube Video


ತನ್ನದೇ ಕಾರಿಗೆ ಬೆಂಕಿ ಹಚ್ಚಿರುವ ವಿಡಿಯೋವನ್ನು ಮಿಕೈಲ್​ ಯ್ಯೂಟೂಬ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಎರಡು ದಿನಗಳಲ್ಲಿ 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಒಂದು ಮಿಲಿಯನ್​ ಲೈಕ್​ ಬಂದಿದೆ.
Published by: Harshith AS
First published: October 28, 2020, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories