Viral Story- ರಷ್ಯನ್ ಹುಡುಗಿ ಮತ್ತು ದೈತ್ಯ ಕರಡಿಯ ಕುಚಿಕು ಸ್ನೇಹ ಕಂಡು ನೆಟ್ಟಿಗರು ಶಾಕ್

ಎರಡು ವರ್ಷದ ಹಿಂದೆ ತನ್ನ ಜೀವ ಉಳಿಸಿದ ರಷ್ಯನ್ ಮಹಿಳೆಯೊಬ್ಬಳ ಜೊತೆ ದೈತ್ಯ ಕರಡಿಯೊಂದು ಅದ್ಭುತ ಪ್ರೀತಿ ಬೆಳೆಸಿಕೊಂಡಿದೆ. ಇವರಿಬ್ಬರ ಸ್ನೇಹ ನಿಜಕ್ಕೂ ಎಂಥವರ ಮನಸ್ಸನ್ನೂ ಕರಗಿಸುತ್ತದೆ.

ರಷ್ಯನ್ ಮಹಿಳೆ ಮತ್ತು ಕರಡಿ ಸ್ನೇಹ

ರಷ್ಯನ್ ಮಹಿಳೆ ಮತ್ತು ಕರಡಿ ಸ್ನೇಹ

  • Share this:
ಕೆಲವರಿಗೆ ನಾಯಿಗಳೆಂದರೆ ಇಷ್ಟ, ಇನ್ನು ಕೆಲವರಿಗೆ ಬೆಕ್ಕುಗಳೆಂದರೆ ಇಷ್ಟ, ಮತ್ತೆ ಕೆಲವರಿಗೆ ಮೊಲ, ಇನ್ನು ಅದು ಇದು ಎಂದಲ್ಲ, ಎಲ್ಲಾ ರೀತಿಯ ಸಾಕು ಪ್ರಾಣಿಗಳನ್ನು ಇಷ್ಟಪಡುವವರೂ ಇದ್ದಾರೆ. ಆದರೆ ಈ ವಿಷಯದಲ್ಲಿ ರಷ್ಯಾದ ವೆರೋನಿಕಾ ಡಿಚ್ಕಾ ಅವರ ಮರ್ಜಿಯೇ ತೀರಾ ಭಿನ್ನ. ಅದು ಹೇಗಂತೀರಾ? ಅವರ ಮುದ್ದಿನ ಸಂಗಾತಿ ಯಾರು ಗೊತ್ತೇ? ಕರಡಿ, ಅಂತಿಂತಾ ಕರಡಿಯಲ್ಲ ಕಾಡು ಕರಡಿ! ಹೌದು, ರಷ್ಯಾದ ಮಹಿಳೆಯ ಆ ದೈತ್ಯ ಸಂಗಾತಿಯನ್ನು ಯಾರು ನೋಡಿದರೂ ಭಯದಿಂದ ಹೃದಯ ಕಂಪಿಸುವುದು ಖಂಡಿತಾ. ಆದರೆ ವೆರೋನಿಕಾ ಡಿಚ್ಕಾಗೆ ಆಕೆಯ ಸ್ನೇಹಿತ ಎಷ್ಟು ಇಷ್ಟವೆಂದರೆ, ಏನೇ ಆದರೂ ಅದನ್ನು ಅರೆ ಕ್ಷಣ ಒಂಟಿಯಾಗಿ ಬಿಟ್ಟಿರಲು ಆಕೆ ಬಯಸುವುದಿಲ್ಲ. ಅವರು ಒಟ್ಟಿಗೆ ಊಟ ಮಾಡುತ್ತಾರೆ, ಮೀನು ಹಿಡಿಯಲು ಹೋಗುತ್ತಾರೆ, ರಷ್ಯಾದ ನೋವೀಸಿಬಿರ್ಸ್ಕ್‌ ಸರೋವರದಲ್ಲಿ ದೋಣಿ ವಿಹಾರ ಮಾಡುತ್ತಾರೆ. ಅಷ್ಟು ಮಾತ್ರವಲ್ಲ ಅಕ್ಕಪಕ್ಕದಲ್ಲಿ ಮಲಗುತ್ತಾರೆ ಕೂಡ. ವೆರೋನಿಕಾ ಡಿಚ್ಕಾ ಆ ದೈತ್ಯ ಕಂದು ಕರಡಿಗೆ ಆರ್ಚಿ ಎಂದು ಹೆಸರಿಟ್ಟಿದ್ದಾರೆ.

2019ರಲ್ಲಿ ಸಫಾರಿ ಪಾರ್ಕ್ ಒಂದರಲ್ಲಿ ಸುತ್ತಾಡುತ್ತಿದ್ದಾಗ ವೆರೋನಿಕಾ ಡಿಚ್ಕಾ, ಆರ್ಚಿಯ ಜೀವವನ್ನು ಕಾಪಾಡಿದ್ದರು, ಅದೇ ಅವರ ಮೊದಲ ಭೇಟಿ. ಅದರ ಜೊತೆ ಸಮಯ ಕಳೆಯುತ್ತಾ, ಕಳೆಯುತ್ತಾ ವೆರೋನಿಕಾ ಡಿಚ್ಕಾ ಮತ್ತು ಆರ್ಚಿಯ ನಡುವೆ ಒಂದು ಒಳ್ಳೆಯ ಸ್ನೇಹ ಬೆಳೆಯಿತು. ಆಕೆ ಆರ್ಚಿಯನ್ನು ಸರೋವರಕ್ಕೆ ಮೀನು ಹಿಡಿಯಲು ಕರೆದುಕೊಂಡು ಹೋಗತೊಡಗಿದರು. ಕ್ರಮೇಣ ಅವರ ನಡುವೆ ಎಂತಹ ಬಾಂಧವ್ಯ ಬೆಳೆಯಿತೆಂದರೆ, ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಾದರು. ವೆರೋನಿಕಾ ಡಿಚ್ಕಾ ಪ್ರಕಾರ, ಆಕೆಗೆ ಆರ್ಚಿ ಜೊತೆ ಒಳ್ಳೆಯ ಸಂಬಂಧ ಬೆಳೆದಿದ್ದು, ಅವರಿಬ್ಬರು ಪರಸ್ಪರ ಸಮಯ ಕಳೆಯುವುದನ್ನು ಇಷ್ಟ ಪಡುತ್ತಾರೆ.

ಇದನ್ನೂ ಓದಿ: ಈ ಊರಿಗೆ ನೆಂಟರು ಬಂದ್ರೆ ಮಧ್ಯರಾತ್ರಿಗೇ ಜಾಗ ಖಾಲಿ ಮಾಡ್ತಾರೆ, ದನಗಳಿಗೂ ಇಲ್ಲಿ ಫ್ಯಾನ್ ಬೇಕೇ ಬೇಕು... ಏನಿದು ವಿಚಿತ್ರ?

ಕೆಲವು ಕರಡಿಗಳು ಮಾಂಸಾಹಾರಿಗಳು ಮತ್ತು ಕರಡಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡಿದ ಹಲವಾರು ಉದಾಹರಣೆಗಳಿವೆ. ಆದರೆ ತಮ್ಮ ನಡುವೆ ಅಂತಹ ಯಾವುದೇ ಕೆಟ್ಟ ಸಂಗತಿ ನಡೆಯುವುದಿಲ್ಲ ಎಂಬ ನಂಬಿಕೆ ವೆರೋನಿಕಾಗೆ ಇದೆ.

ಆರ್ಚಿಯ ಬಗೆಗಿನ ತನ್ನ ಪ್ರೀತಿ ವ್ಯಕ್ತಪಡಿಸಲು ವೆರೋನಿಕಾ ಹಲವಾರು ಫೋಟೋಶೂಟ್‍ಗಳನ್ನು ಮಾಡಿಸಿದ್ದಾಳೆ. ಅವುಗಳಲ್ಲಿ ಅವರಿಬ್ಬರು ಒಟ್ಟಿಗೆ ಮೀನು ಹಿಡಿಯುವ ಬೋಟನ್ನು ಚಲಾಯಿಸುತ್ತಿರುವ ಫೋಟೋಗಳಿವೆ. ಆರ್ಚಿಗೆ ಬೋಟ್ ಚಲಾಯಿಸುವುದು ಎಂದರೆ ತುಂಬಾ ಇಷ್ಟವಂತೆ ಎನ್ನುತ್ತಾರೆ ವೆರೋನಿಕಾ. ಕರಡಿ ತನ್ನನ್ನು ತಾಯಿಯ ಸಮಾನವೆಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲ ಅದಕ್ಕೆ ಭಯವಾದಾಗಲೆಲ್ಲಾ ತನ್ನ ಹಿಂದೆ ಅವಿತುಕೊಳ್ಳುತ್ತದೆ ಎನ್ನುತ್ತಾರೆ ಅವರು. ಅವರಿಬ್ಬರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಶಂಸೆ ಗಳಿಸಿದೆ ಮತ್ತು ಉಗ್ರ ಕಾಡು ಪ್ರಾಣಿಯೆಂದು ಪರಿಗಣಿಸಲ್ಪಡುವ ಜೀವಿಯೊಂದಿಗೆ ಬಾಂಧವ್ಯ ಹೊಂದಿರುವ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ಗಾಳಿ ತುಂಬಿರುವ ಪ್ಲಾಸ್ಟಿಕ್ ಬ್ಯಾಗ್‌ ದುಬಾರಿ ಬೆಲೆಗೆ ಮಾರಾಟ..! ಏನಿತ್ತು ಇದರೊಳಗೆ?

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

- ಶೈಲಾ ಆರ್, ಏಜೆನ್ಸಿ

Published by:Vijayasarthy SN
First published: