Instagram: ಕೆಲವೇ ಗಂಟೆಗಳಲ್ಲಿ ಅತ್ಯಧಿಕ ಫಾಲೋವರ್ಸ್​ ಹೊಂದಿ ದಾಖಲೆ ಬರೆದ ನಟ!

Rupert Grint: ರುಪರ್ಟ್​ ಗ್ರಿಂಟ್​​ ‘ಹ್ಯಾರಿ ಪಾಟರ್’​ ಸಿನಿಮಾದಲ್ಲಿ ನಟಿಸಿದ್ದರು. ರಾನ್​ ವೀಸ್ಲೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟ ರುಪರ್ಟ್​ ಗ್ರಿಂಟ್​

ನಟ ರುಪರ್ಟ್​ ಗ್ರಿಂಟ್​

 • Share this:
  ಇನ್​​​ಸ್ಟಾಗ್ರಾಂನಲ್ಲಿ ಖಾತೆ ತೆರದು ಲಕ್ಷಾಂತರ ಮಂದಿ ಫಾಲೋವರ್ಸ್​ಗಳನ್ನು ಪಡೆಯಲು ಅನೇಕ ದಿನಗಳೇ ಬೇಕು. ಹಾಗಂತ ಸುಖಾ ಸುಮ್ಮನೆ ಯಾರೂ ಫಾಲೋ ಮಾಡುವುದಿಲ್ಲ. ಕೌಶಲ್ಯತೆ, ಸೃಜನಶೀಲತೆ, ಸೆಲೆಬ್ರಿಟಿಯಾಗಿದ್ದಾರೆ ತಾನಾಗಿ ಫಾಲೋವರ್ಸ್​ಗಳು ಹೆಚ್ಚುತ್ತಾ ಹೋಗುತ್ತದೆ. ಆದರೆ ಕೆಲವರಂತೂ ಸ್ಪಾನ್ಸರ್​​ ಮಾಡುವು ಮೂಲಕ ಬೇಗ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸುತ್ತಾರೆ. ಇನ್ನು ಸಿನಿಮಾ ತಾರೆಯರಿಗೆ ಯಾವುದೇ ಸ್ಪಾನ್ಸರ್​​ ಬೇಡ. ಕೆಲವೇ ದಿನಗಳಲ್ಲಿ ಹೆಚ್ಚಿನ ಫಾಲೋವರ್ಸ್​ಗಳನ್ನು ಅವರು ಹೊಂದುತ್ತಾರೆ. ಅದರಂತೆ ಇಲ್ಲೊಬ್ಬರು ನಟ ಕೇವಲ ಗಂಟೆಗಳಲ್ಲೇ ಲಕ್ಷಾಂತರ ಫಾಲೋಚರ್ಸ್​ಗಳನ್ನು ಹೊಂದಿ ಸುದ್ದಿಯಾಗಿದ್ದಾರೆ.

  ಹೌದು. ಹಾಲಿವುಡ್​ ನಟ ರುಪರ್ಟ್​ ಗ್ರಿಂಟ್​ ಇನ್​​ಸ್ಟಾಗ್ರಾಂ ಖಾತೆ ತೆರೆದಿದ್ದು, ತೆರೆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಫಾಲೋ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ, ದಾಖಲೆಯನ್ನು ಬರೆದಿದ್ದಾರೆ.

  ರುಪರ್ಟ್​ ಗ್ರಿಂಟ್​​ ‘ಹ್ಯಾರಿ ಪಾಟರ್’​ ಸಿನಿಮಾದಲ್ಲಿ ನಟಿಸಿದ್ದರು. ರಾನ್​ ವೀಸ್ಲೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರುಪರ್ಟ್​ ಇನ್​​ಸ್ಟಾದಲ್ಲಿ ಖಾತೆ ತೆಗೆದು ತನ್ನ ಪುತ್ರಿಯನ್ನು ಎತ್ತಿಕೊಂಡಿರುವ ಫೋಟೋವನ್ನು ತಮ್ಮ ಅಪ್ಲೋಡ್​ ಮಾಡಿದ್ದಾರೆ. ಅಚ್ಚರಿ ಎಂದರೆ 241 ನಿಮಿಷದಲ್ಲಿ ರುಪರ್ಟ್​ 10 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ.


  View this post on Instagram


  A post shared by Rupert Grint (@rupertgrint)


  ಇನ್ನು ಮಗಳನ್ನು ಎತ್ತಿಕೊಂಡಿರುವ ಫೋಟೋದ ಜೊತೆಗೆ ರುಪರ್ಟ್​ ‘ಹತ್ತು ವರ್ಷದ ನಂತರ ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ. ನನ್ನ ಮಗಳನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

  ರುಪರ್ಟ್​ 4 ಗಂಟೆ 1 ನಿಮಿಷದಲ್ಲಿ 10 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ.  ಆ ಮೂಲಕ ಡೇವಿಡ್​​ ಅಟೆನ್​ಬರೀ ಎಂಬ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಡೇವಿಡ್​ 5 ಗಂಟೆ 16 ನಿಮಿಷದಲ್ಲಿ 10 ಲಕ್ಷ ಫಾಲೋವರ್ಸ್​ ಹೊಂದಿದ್ದರು
  Published by:Harshith AS
  First published: