• Home
  • »
  • News
  • »
  • trend
  • »
  • Agriculture App: ಲಕ್ಷ ಸಂಬಳದ IT ಜಾಬ್ ಬಿಟ್ಟು ಕೃಷಿಯಲ್ಲಿ ತೊಡಗಿದ ರುಚಿತ್ ಗಾರ್ಗ್, ರೈತರಿಗಾಗಿ HFN ಆ್ಯಪ್ ಬಿಡುಗಡೆ

Agriculture App: ಲಕ್ಷ ಸಂಬಳದ IT ಜಾಬ್ ಬಿಟ್ಟು ಕೃಷಿಯಲ್ಲಿ ತೊಡಗಿದ ರುಚಿತ್ ಗಾರ್ಗ್, ರೈತರಿಗಾಗಿ HFN ಆ್ಯಪ್ ಬಿಡುಗಡೆ

ರುಚಿತ್ ಗಾರ್ಗ್

ರುಚಿತ್ ಗಾರ್ಗ್

ರೈತರನ್ನು ಖರೀದಿದಾರರಿಗೆ ನೇರವಾಗಿ ಸಂಪರ್ಕ ರಚಿಸುವ ಸಂಬಂಧ ರುಚಿತ್, “ಹಾರ್ವೆಸ್ಟಿಂಗ್ ಫಾರ್ಮರ್ ನೆಟ್‌ವರ್ಕ್” ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದ್ದಾರೆ.

  • Share this:

ದೇಶಾದ್ಯಂತ (Country) ಕೃಷಿಯಲ್ಲಿ ಉಂಟಾದ ನಷ್ಟ ಮತ್ತು ಸಾಲದಿಂದ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ರೈತರು (Formers) ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರದಿಂದ ರಾಜ್ಯ ಸರ್ಕಾರಗಳವರೆಗೆ, ರೈತರು ವರ್ಷಗಳಿಂದ ಆದಾಯವನ್ನು (Income) ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಆದರೆ ಇನ್ನೂ ಇತರ ವೃತ್ತಿಗಳಿಗೆ ಹೋಲಿಸಿದರೆ ರೈತರು ಆರ್ಥಿಕವಾಗಿ ಸಬಲರಾಗಿಲ್ಲ. ರೈತರ ಈ ಎಲ್ಲ ಸಮಸ್ಯೆಗಳನ್ನು (Problems) ಗಮನದಲ್ಲಿಟ್ಟುಕೊಂಡು ರೈತರ ಪರ ಕೆಲಸ ಮಾಡುತ್ತಿರುವ “ರುಚಿತ್ ಗಾರ್ಗ್” (Ruchit Garg) ಎಂಬುವವರು ಮೊಬೈಲ್ ಅಪ್ಲಿಕೇಷನ್ (Application) ನ್ನು ರಚಿಸಿದ್ದಾರೆ. ಆ್ಯಪ್ ಮೂಲಕ ರೈತರು ಬೆಳೆಗಳನ್ನು ನೇರವಾಗಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಆ್ಯಪ್ ಲಭ್ಯವಿದೆ. ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುತ್ತಿದೆ. ಅಂದ ಹಾಗೆ ಈ ಅಪ್ಲಿಕೇಶನ್‌ನ ಹೆಸರು  "ಹಾರ್ವೆಸ್ಟಿಂಗ್ ಫಾರ್ಮರ್ಸ್ ನೆಟ್‌ವರ್ಕ್” (HFN).


ರೈತರಿಗಾಗಿ ಸ್ಟಾರ್ಟಪ್ ಪ್ರಾರಂಭಿಸಿದ ರುಚಿತ್ ಗಾರ್ಗ್


ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಜನಿಸಿದ ರುಚಿತ್ ಗಾರ್ಗ್, ಅಮೆರಿಕದಲ್ಲಿ ವಿಶ್ವದ ಪ್ರಮುಖ ಐಟಿ ಕಂಪನಿ ಮೈಕ್ರೋಸಾಫ್ಟ್‌ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲಿಂದ ರೈತರಿಗಾಗಿ ಸ್ಟಾರ್ಟಪ್ ಅನ್ನು ಪ್ರಾರಂಭಿಸಿದ್ದಾರೆ. ಅದರ ಮೂಲಕ ವಿಶ್ವದಾದ್ಯಂತದ ಅನ್ನದಾತರಿಗೆ ಸಹಾಯ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ರುಚಿತ್ ತನ್ನ ಕುಟುಂಬದೊಂದಿಗೆ ಅಮೆರಿಕದಿಂದ ಭಾರತಕ್ಕೆ ಮರಳಿದ್ದಾರೆ. ಲಾಕ್‌ಡೌನ್‌ ಅವಧಿಯಿಂದ ಇಲ್ಲಿಯವರೆಗೆ ಅನೇಕ ರೈತರ ಬೆಂಬಲ ನೀಡಿದ್ದಾರೆ.


ರುಚಿತ್ ಅವರು ಮೈಕ್ರೋಸಾಫ್ಟ್ ಕಂಪನಿಗೆ 2005 ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಹೈದರಾಬಾದ್‌ನಲ್ಲಿ ಮೂರು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ್ದರು. ನಂತರ ಅವರನ್ನು ಅಮೆರಿಕಕ್ಕೆ ಕಳುಹಿಸಲಾಯಿತು. 2011 ರಲ್ಲಿ ರುಚಿತ್ ಮೈಕ್ರೋಸಾಫ್ಟ್ ಕಂಪನಿಯನ್ನು ತೊರೆದು ಅಮೆರಿಕದಲ್ಲಿ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸಿದರು.


ಇದನ್ನೂ ಓದಿ: ಬರಡು ನೆಲದಲ್ಲಿ ಇಸ್ರೇಲ್ ಮಾದರಿ ಅನುಸರಿಸಿ ಬಂಗಾರದಂಥ ಬೆಳೆ.. ಸಂಪೂರ್ಣ ಮಾಹಿತಿ ಇಲ್ಲಿದೆ


ಹೈಟೆಕ್ ತಂತ್ರಜ್ಞಾನದ ಮೂಲಕ ರೈತರು ಸಾಲ ಮತ್ತು ವಿಮೆ


2016 ರಲ್ಲಿ ಅವರು ತಮ್ಮ ಕಂಪನಿಯನ್ನು ಮಾರಾಟ ಮಾಡಿದರು. ಇದಾದ ನಂತರ ರೈತರಿಗಾಗಿ ದುಡಿಯುವ ಹಂಬಲದಿಂದ ರುಚಿತ್ ಕೃಷಿ ಕ್ಷೇತ್ರದತ್ತ ಒಲವು ತೋರಿದರು. ಎಐ ಮತ್ತು ಸ್ಯಾಟಲೈಟ್ ಡೇಟಾದಲ್ಲಿ ಕೆಲಸ ಮಾಡುವ ಮೂಲಕ ರೈತರಿಗೆ ಸಹಾಯ ಮಾಡಿದರು. ಈ ಹೈಟೆಕ್ ತಂತ್ರಜ್ಞಾನದ ಮೂಲಕ ರೈತರು ಸಾಲ ಮತ್ತು ವಿಮೆ ಪಡೆಯಬಹುದು. ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು.  ಯಾವ ಬೆಳೆ ಬೆಳೆದರೆ ಲಾಭವಾಗುತ್ತದೆ ಎಂಬ ಬಗ್ಗೆ ತಿಳಿದುಕೊಂಡರು. ಜುಲೈ-ಆಗಸ್ಟ್ 2019 ರಲ್ಲಿ ಭಾರತಕ್ಕೆ ಮರಳಿದ್ದಾಗಿ ರುಚಿತ್ ಆಜ್ ತಕ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.


ಖರೀದಿದಾರರಿಗೆ  ರೈತರ ನೇರವಾಗಿ ಸಂಪರ್ಕ


ರೈತರನ್ನು ಖರೀದಿದಾರರಿಗೆ ನೇರವಾಗಿ ಸಂಪರ್ಕ ರಚಿಸುವ ಸಂಬಂಧ ರುಚಿತ್, “ಹಾರ್ವೆಸ್ಟಿಂಗ್ ಫಾರ್ಮರ್ ನೆಟ್‌ವರ್ಕ್” ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ರೈತರು ನೇರವಾಗಿ ಖರೀದಿದಾರರೊಂದಿಗೆ ಸಂಪರ್ಕ ಹೊಂದಬಹುದು. ಟ್ವಿಟರ್‌ನಲ್ಲಿ ತಮ್ಮ ವಾಟ್ಸಾಪ್ ಸಂಖ್ಯೆ ನೀಡುವ ಮೂಲಕ ಏಪ್ರಿಲ್ 2020 ರಲ್ಲಿ ರೈತರಿಗಾಗಿ “HFN ಕಿಸಾನ್” ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ರಚಿಸಿದರು. ಈ ಅಪ್ಲಿಕೇಶನ್‌ನಲ್ಲಿ, ರೈತರು ತಮ್ಮ ಬೆಳೆಗಳನ್ನು ನೇರವಾಗಿ ಮಾರಾಟ ಮಾಡಬಹುದು.


ದೇಶದ 30 ರಾಜ್ಯಗಳ ರೈತರು ಆ್ಯಪ್ ಬಳಸುತ್ತಿದ್ದಾರೆ


ಪ್ರಪಂಚದ ಯಾವುದೇ ಖರೀದಿದಾರರು ರೈತರ ಬೆಳೆಯನ್ನು ನೇರವಾಗಿ ಖರೀದಿಸಬಹುದು. ಇದಕ್ಕಾಗಿ ರೈತರಿಂದ ಯಾವುದೇ ಕಮಿಷನ್ ಪಡೆಯುವುದಿಲ್ಲ. ದೇಶದ 30 ರಾಜ್ಯಗಳ ರೈತರು ಆ್ಯಪ್ ಬಳಸುತ್ತಿದ್ದಾರೆ ಎಂದು ರುಚಿತ್ ಹೇಳಿಕೊಂಡಿದ್ದಾರೆ. ಕಳೆದ 12 ತಿಂಗಳುಗಳಲ್ಲಿ, ರೈತರು ಅಪ್ಲಿಕೇಶನ್‌ನಲ್ಲಿ $ 425 ಮಿಲಿಯನ್ ಉತ್ಪನ್ನವನ್ನು ಹಾಕಿದ್ದಾರೆ ಮತ್ತು ಈ ಉತ್ಪನ್ನವು ವಿದೇಶಗಳಿಗೂ ರಫ್ತಾಗಿದೆ ಎಂದು ತಿಳಿಸಿದ್ದಾರೆ.


ದುಬೈ ಉದ್ಯಮಿ ಆ್ಯಪ್ ಮೂಲಕ ಬಾಳೆಹಣ್ಣು ಖರೀದಿ


ಆ್ಯಪ್ ಮೂಲಕ ಯಾರಾದರೂ ಶುಂಠಿಗೆ ಬೇಡಿಕೆ ಇಟ್ಟರೆ ನೇರವಾಗಿ ರೈತರಿಗೆ ಸಂಪರ್ಕ ಕಲ್ಪಿಸಿ ನಂತರ ಅಲ್ಲಿಗೆ ತಲುಪಿಸಲಾಗುತ್ತಿತ್ತು. ಅದೇ ಸಮಯದಲ್ಲಿ, ಮೇಘಾಲಯದಿಂದ ನೇರವಾಗಿ ದಕ್ಷಿಣ ಆಫ್ರಿಕಾಕ್ಕೆ ರೈತರೊಬ್ಬರು  20 ಸಾವಿರ ಕೆಜಿ ಶುಂಠಿಯನ್ನು ಮಾರಾಟ ಮಾಡಿದ್ದಾರೆ ಎಂದು ರುಚಿತ್ ಹೇಳಿದ್ದಾರೆ.  ಇದೇ ವೇಳೆ ದುಬೈನಲ್ಲಿ ನೆಲೆಸಿರುವ ಉದ್ಯಮಿಯೊಬ್ಬರು ಆ್ಯಪ್ ಮೂಲಕ ಬಾಳೆಹಣ್ಣು ಖರೀದಿಸಿದ್ದಾರೆ. ಈ ಮೂಲಕ ರೈತರು ತಮ್ಮ ಬೆಳೆಗಳನ್ನು ನೇರವಾಗಿ ಹೊರ ದೇಶಗಳಿಗೂ ಮಾರಾಟ ಮಾಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.


ಇದನ್ನೂ ಓದಿ: ವೀಳ್ಯದೆಲೆಯೇ ಈ ಊರಿನ ಗುರುತು.. ರೈತರಿಗೆ ಶ್ರೀಮಂತಿಕೆ ತಂದ ಕಥೆ ಇದು!


ಆ್ಯಪ್‌ನಲ್ಲಿ ರೈತರಿಗೆ ಸಲಹೆ


ಆ್ಯಪ್‌ನಲ್ಲಿ ರೈತರಿಗೆ ಸಲಹೆಗಳನ್ನು ನೀಡಲಾಗುತ್ತದೆ. ಮೊಬೈಲ್ ಆ್ಯಪ್‌ನಲ್ಲಿಯೂ ಸಲಹಾ ವ್ಯವಸ್ಥೆಯನ್ನು ರಚಿಸಲಾಗಿದೆ. ಸ್ವಯಂಚಾಲಿತ ಸಲಹೆಯನ್ನು ಎಂಟು ಭಾಷೆಗಳಲ್ಲಿ ಸುಮಾರು 60 ಕ್ಕೂ ಹೆಚ್ಚು ಬೆಳೆಗಳನ್ನು ನೀಡಲಾಗುತ್ತದೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಮೈ ಫಾರ್ಮ್‌ನಲ್ಲಿ ನೋಂದಾಯಿಸಿ. ಇದಾದ ನಂತರ ಮುಂಬರುವ ಸಮಸ್ಯೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಬೀಜದಿಂದ ಮಾರುಕಟ್ಟೆಗೆ ಸೌಲಭ್ಯಗಳನ್ನು ಮೊಬೈಲ್ ಆ್ಯಪ್ ಮೂಲಕ ಸಂಪರ್ಕಿಸಲಾಗಿದೆ. ರೈತರು ಮೊಬೈಲ್ ಆ್ಯಪ್‌ನಲ್ಲಿಯೂ ಬೀಜಗಳನ್ನು ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Published by:renukadariyannavar
First published: