VIDEO: ಸರ್ಫ್​ ಎಕ್ಸೆಲ್​ ಜಾಹೀರಾತಿನಲ್ಲಿ ಲವ್​ ಜಿಹಾದ್?​ ಅಷ್ಟಕ್ಕೂ ಇದರಲ್ಲೇನಿದೆ?

ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದರೆ, ಹೆಚ್ಚಿನವರು ಇದೊಂದು ಅತ್ಯುತ್ತಮ ಜಾಹೀರಾತು ಎಂದು ವಾದಿಸಿದ್ದಾರೆ.

zahir | news18
Updated:March 13, 2019, 8:44 PM IST
VIDEO: ಸರ್ಫ್​ ಎಕ್ಸೆಲ್​ ಜಾಹೀರಾತಿನಲ್ಲಿ ಲವ್​ ಜಿಹಾದ್?​ ಅಷ್ಟಕ್ಕೂ ಇದರಲ್ಲೇನಿದೆ?
@Latestly.com
zahir | news18
Updated: March 13, 2019, 8:44 PM IST
ಹೋಳಿ ಹಬ್ಬದ ಸಂದರ್ಭಕ್ಕಾಗಿ ಖ್ಯಾತ ಡಿಟರ್ಜೆಂಟ್ ಬ್ರ್ಯಾಂಡ್ ಸರ್ಫ್ ಎಕ್ಸೆಲ್ ಮಾಡಿರುವ ಜಾಹೀರಾತು ದೇಶದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಈ ಜಾಹೀರಾತು ಲವ್​ ಜಿಹಾದ್​ ಅನ್ನು ಬೆಂಬಲಿಸುತ್ತಿದೆ ಎಂದು ಕೆಲ ಹಿಂದೂ ಸಂಘಟನೆಗಳು ಆರೋಪಿಸಿದೆ. ಇದರಿಂದ ಈ ಜಾಹೀರಾತಿನ ಪರ-ವಿರೋಧ ವಾದಗಳು ಹುಟ್ಟಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ರಂಗ್ ಲಾಯೇ ಸಂಗ್ ಎಂಬ ಥೀಮ್ ಮೂಲಕ ಮೂಡಿಬಂದಿದ್ದ ಜಾಹೀರಾತಿನಲ್ಲಿ ಹಿಂದೂ ಬಾಲಕಿ ಹಾಗೂ ಮುಸ್ಲಿಂ ಬಾಲಕ ಪ್ರಮುಖ ಪಾತ್ರಧಾರಿಗಳು. ಹೋಳಿ ಆಚರಣೆ ಸಂದರ್ಭದಲ್ಲಿ ಮಸೀದಿಗೆ ಹೊರಟ ಮುಸ್ಲಿಂ ಗೆಳೆಯನ ಬಿಳಿ ಬಟ್ಟೆಗೆ ಬಣ್ಣ ತಾಗದಂತೆ ಮಾಡಲು ಗೆಳೆತಿ ಎಲ್ಲರನ್ನು ತನಗೆ ರಂಗೆರುಚುವಂತೆ ತಿಳಿಸುತ್ತಾಳೆ. ಎಲ್ಲಾ ಮಕ್ಕಳ ಬಳಿಯಿರುವ ಬಣ್ಣದೋಕುಳಿ ಮುಗಿಯುತ್ತಿದ್ದಂತೆ ತನ್ನ ಗೆಳೆಯನ್ನು ಮನೆಯಿಂದ ಹೊರಗೆ ಕರೆದು ಮಸೀದಿಗೆ ಬಿಡುತ್ತಾಳೆ. ಈ ಸಂದರ್ಭದಲ್ಲಿ ನಮಾಜ್ ಮಾಡಿ ಬರುವೆ ಎಂದೇಳುವ ಗೆಳೆಯನಿಗೆ, ಹಿಂತಿರುಗಿದ ಮೇಲೆ ಬಣ್ಣ ಹಚ್ಚುವುದಾಗಿ ಗೆಳೆತಿ ತಿಳಿಸುತ್ತಾಳೆ. ಇದಕ್ಕೆ ಅಷ್ಟೇ ಕ್ಯೂಟ್ ನಗುವಿನಿಂದ ಓಕೆ ಎಂದೇಳುವ ಈ ಜಾಹೀರಾತು ರಾತ್ರೋರಾತ್ರಿ ಹಿಟ್ ಆಗಿತ್ತು.


ಬಣ್ಣಗಳು ನಮ್ಮನ್ನು ಒಂದುಗೂಡಿಸುತ್ತವೆ ಎಂಬ ಕಾನ್ಸೆಪ್ಟ್​ನಲ್ಲಿ ಬಂದಿದ್ದ ಈ ಜಾಹೀರಾತಿಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಲವ್ ಜಿಹಾದ್​ ಅನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಹೋಳಿ ಹಬ್ಬವನ್ನು ಅವಮಾನಿಸಲಾಗಿದೆ. ಹೀಗಾಗಿ ಸರ್ಫ್​ ಎಕ್ಸೆಲ್​ ಅನ್ನು ಬಹಿಷ್ಕರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. #boycottSurfexcel ಎಂಬ ಹ್ಯಾಶ್​ ಟ್ಯಾಗ್​ನಲ್ಲಿ ಆರಂಭವಾದ ಅಭಿಯಾನ ಈಗ ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ.

ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದರೆ, ಹೆಚ್ಚಿನವರು ಇದೊಂದು ಅತ್ಯುತ್ತಮ ಜಾಹೀರಾತು ಎಂದು ವಾದಿಸಿದ್ದಾರೆ. ಈ ಜಾಹೀರಾತಿನ ಮೂಲಕ ದೇಶದಲ್ಲಿ ಸೌಹಾರ್ದತೆಯನ್ನು ಮೂಡಿಸಲು ಪ್ರಯತ್ನಿಸಲಾಗಿದೆ. ಮಕ್ಕಳ ನಡುವಿನ ಸ್ನೇಹಕ್ಕೂ ಲವ್ ಜಿಹಾದ್ ಬಣ್ಣ ಹಚ್ಚಲಾಗುತ್ತಿದೆ ಎಂದು ಹವಲರು ಹರಿಹಾಯ್ದಿದ್ದಾರೆ.




ಇನ್ನು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೂಡ ಪ್ರತಿಕ್ರಿಯಿಸಿದ್ದು, ಭಕ್ತರು ಸರ್ಫ್ ಎಕ್ಸೆಲ್ ಬಳಸಿ ತೊಳೆಯಿರಿ. ಈ ಮೂಲಕ ನಿಮ್ಮ ಮನಸಿನ ಕಲೆಗಳು ತೊಲಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಪರ ವಿರೋಧದ ನಡುವೆಯು ಈ ಜಾಹೀರಾತು ಈಗಾಗಲೇ 7 ಕೋಟಿಗೂ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ.



First published:March 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...