• Home
  • »
  • News
  • »
  • trend
  • »
  • ರೋಮನ್ನರು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ವಸ್ತು ಯಾವುದು? ದೀರ್ಘ ಬಾಳಿಕೆಯ ಹಿಂದಿನ ಸೀಕ್ರೆಟ್ ಇಲ್ಲಿದೆ

ರೋಮನ್ನರು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ವಸ್ತು ಯಾವುದು? ದೀರ್ಘ ಬಾಳಿಕೆಯ ಹಿಂದಿನ ಸೀಕ್ರೆಟ್ ಇಲ್ಲಿದೆ

ಕಟ್ಟಡ

ಕಟ್ಟಡ

ಪ್ರಾಚೀನ ಕಾಲದಲ್ಲಿಯೇ ರೋಮನ್ನರು ನಿರ್ಮಾಣ ವೃತ್ತಿಗಳಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿದವರಾಗಿದ್ದರು. ರಸ್ತೆ, ಬಂದರು, ಕಟ್ಟಡಗಳು ಹೀಗೆ ವಿಶೇಷ ಜಾಲಗಳನ್ನೇ ನಿರ್ಮಿಸಿದವರಾಗಿದ್ದರು.

  • Trending Desk
  • 4-MIN READ
  • Last Updated :
  • Share this:

ಯಾವುದೇ ಕಟ್ಟಡ(Building) ಬಹಳಷ್ಟು ಕಾಲ ಬಾಳ್ವಿಕೆ ಬರಬೇಕು ಎಂದರೆ ಅದನ್ನು ಸಮರ್ಪಕವಾದ ರೀತಿಯಲ್ಲಿ ನಿರ್ಮಿಸಿರಬೇಕು(Construction). ಹಿಂದಿನ ಕಾಲಗಳಲ್ಲಿ ನಿರ್ಮಿಸಿರುವ ಅದೆಷ್ಟೋ ಕಟ್ಟಡಗಳು, ಸೇತುವೆಗಳು(Bridges), ರಸ್ತೆಗಳು(Roads) ಇಂದಿಗೂ ಗಟ್ಟಿಮುಟ್ಟಾಗಿದ್ದು ಆ ಕಾಲದ ಉತ್ತಮ ವ್ಯವಸ್ಥೆಗೆ ನಿದರ್ಶನಗಳಾಗಿವೆ. ಇಂದಿನ ಕಾಲದಲ್ಲಿ ಒಂದೆರಡು ಮಳೆಗೆ ಕಿತ್ತುಬರುವ ರಸ್ತೆಗಳಿಗೆ ಅಂದಿನ ನಿರ್ಮಾಣಗಳು ಉತ್ತಮ ಉದಾಹರಣೆಗಳಾಗಿವೆ.


ಇಂದಿನ ಲೇಖನದಲ್ಲಿ ಇಂತಹುದೇ ಪ್ರಾಚೀನ ನಿರ್ಮಾಣ ಗುಣಮಟ್ಟದ ಬಗ್ಗೆ ಕೆಲವೊಂದು ಮಾಹಿತಿಯನ್ನು ನೀಡುತ್ತಿದ್ದು ರೋಮನ್ನರು ಕಟ್ಟುತ್ತಿದ್ದ ಕಟ್ಟಡಗಳು ಇಂದಿಗೂ ಉತ್ತಮ ನಿದರ್ಶನಗಳು ಎಂದೆನಿಸಿದೆ.


ಪ್ರಾಚೀನ ಕಾಲದಲ್ಲಿಯೇ ರೋಮನ್ನರು ನಿರ್ಮಾಣ ವೃತ್ತಿಗಳಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿದವರಾಗಿದ್ದರು. ರಸ್ತೆ, ಬಂದರು, ಕಟ್ಟಡಗಳು ಹೀಗೆ ವಿಶೇಷ ಜಾಲಗಳನ್ನೇ ನಿರ್ಮಿಸಿದವರಾಗಿದ್ದರು.


ಅವುಗಳ ಅವಶೇಷ ಎರಡು ಸಹಸ್ರಮಾನಗಳವರೆಗೆ ಉಳಿದುಕೊಂಡಿವೆ ಎಂದರೆ ನಿಜಕ್ಕೂ ಕಟ್ಟಡಗಳನ್ನು ಅವರು ಹೇಗೆ ಕಟ್ಟುತ್ತಿದ್ದರು ಎಂಬುದು ಆಶ್ಚರ್ಯಕಾರಿ ಅಂಶವಾಗಿದೆ.


ಇದನ್ನೂ ಓದಿ: Monkey's Video: ಟ್ರಿಪ್​ ಹೋದ ಹುಡುಗಿ ಮೇಲೆ ಮಂಗಗಳ ಅಟ್ಯಾಕ್​; ಗರ್ಲ್ ಶಾಕ್​, ಮಂಕಿ ರಾಕ್​!


ಕಾಂಕ್ರೀಟ್ ಬಳಕೆ


ಕಾಂಕ್ರೀಟ್‌ಗಳಿಂದ ಹೆಚ್ಚಿನ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬುದು ಇತಿಹಾಸಗಳಿಂದ ತಿಳಿದುಬಂದಿರುವ ಮಾಹಿತಿಯಾಗಿದೆ. A.D. 128 ರಲ್ಲಿ ನಿರ್ಮಿಸಲಾದ ರೋಮ್‌ನ ಪ್ರಸಿದ್ಧ ಪ್ಯಾಂಥಿಯಾನ್ ಶಕ್ತಿಯುತ ಹಾಗೂ ಬಲವರ್ಧತ ಕಾಂಕ್ರೀಟ್‌ನ ಗುಮ್ಮಟವನ್ನು ಹೊಂದಿದೆ. ಆದರೆ ಅವರುಗಳು ಕಾಂಕ್ರೀಟ್ ಅನ್ನು ವಿಶೇಷ ತಂತ್ರಗಳನ್ನು ಬಳಸಿ ಉಪಯೋಗಿಸುತ್ತಿದ್ದರು.


ಪುರಾತನ ನಿರ್ಮಾಣ ಕಲೆಯ ರಹಸ್ಯವನ್ನು ಅರಿತುಕೊಳ್ಳಲು ಸಂಶೋಧಕರು ಹಲವಾರು ಸಮಯಗಳಿಂದ ಅಧ್ಯಯನವನ್ನು ಕೈಗೆತ್ತಿಕೊಂಡಿದ್ದಾರೆ.


ಬಂದರು, ಒಳಚರಂಡಿ ಹಾಗೂ ಸಮುದ್ರ ಗೋಡೆಗಳಂತಹ ಕಠಿಣವಾದ ನಿರ್ಮಾಣಗಳನ್ನು ಭೂಕಂಪನ ಸ್ಥಳಗಳಲ್ಲಿ ರೋಮನ್ನರು ನಿರ್ಮಿಸಿದ್ದು ಸೋಜಿಗವನ್ನುಂಟು ಮಾಡಿದೆ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.


ಪುರಾತನ ಕಾಂಕ್ರೀಟ್ ನಿರ್ಮಾಣ ತಂತ್ರಗಳು


ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಈ ಕುರಿತು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದೆ ಹಾಗೂ ಕೂಲಂಕುಷವಾಗಿ ಅಧ್ಯಯನಗಳನ್ನು ನಡೆಸಿದೆ. ರೋಮನ್ನರು ಪುರಾತನ ಕಾಂಕ್ರೀಟ್ ನಿರ್ಮಾಣ ತಂತ್ರಗಳನ್ನು ಕಂಡುಹಿಡಿದಿದ್ದರು ಎಂಬುದನ್ನು ಸಂಶೋಧನಾ ತಂಡ ತಿಳಿಸಿದೆ.


ಜ್ವಾಲಾಮುಖಿಯ ಬೂದಿಯ ಬಳಕೆ


ಕಟ್ಟಡಗಳ ನಿರ್ಮಾಣಗಳಿಗಾಗಿ ಅವರು ಬಳಸುತ್ತಿದ್ದ ಉತ್ಪನ್ನಗಳು ಅವುಗಳ ಬಾಳ್ವಿಕೆಗೆ ಪರಿಣಾಮಕಾರಿಯಾಗಿವೆ ಎಂಬುದು ಸಂಶೋಧಕರ ಮಾತಾಗಿದೆ.


ನೇಪಲ್ಸ್ ಕೊಲ್ಲಿಯ ಪೊಝುವೊಲಿ ಪ್ರದೇಶದಿಂದ ಜ್ವಾಲಾಮುಖಿ ಬೂದಿಯಾದ ಪೊಝೋಲಾನಿಕ್ ವಸ್ತುವನ್ನು ನಿರ್ಮಾಣ ಕಾರ್ಯಗಳಲ್ಲಿ ಬಳಸುತ್ತಿದ್ದರು. ಈ ಬೂದಿಯೇ ಕಾಂಕ್ರೀಟ್‌ನ ಮುಖ್ಯ ವಸ್ತುವಾಗಿದೆ ಎಂಬುದು ಅಧ್ಯಯನಕಾರರ ಮಾತಾಗಿದೆ.


ಈ ಬೂದಿಯು ಪ್ರಕಾಶಮಾನವಾದ ಖನಿಜ ನಿಕ್ಷೇಪಗಳನ್ನು ಒಳಗೊಂಡಿದೆ ಎಂಬುದು ಇನ್ನಷ್ಟು ಪರಿಶೋಧನೆಗಳಿಂದ ತಿಳಿದುಬಂದಿದೆ. ಸುಣ್ಣದ ಅಂಶಗಳನ್ನು ಈ ಬೂದಿಯಲ್ಲಿ ಅಧ್ಯಯನಕಾರರು ಅನ್ವೇಷಿಸಿದ್ದಾರೆ. ಅವರುಗಳ ಪ್ರಕಾರ, ಕಟ್ಟಡಗಳ ಬಾಳ್ವಿಕೆಗೆ ಆರಿಸಿದ ಸುಣ್ಣ ಕೂಡ ಪ್ರಧಾನ ಅಂಶವಾಗಿದೆ ಎಂಬುದಾಗಿದೆ.


ಇದನ್ನೂ ಓದಿ: Ganga Vilas: ಗಂಗಾ ವಿಲಾಸ ವಿಹಾರಕ್ಕೆ ಟಿಕೆಟ್ ಎಷ್ಟು, ಪ್ರಯಾಣ ಹೇಗಿರುತ್ತೆ? ಫೋಟೋ ನೋಡಿ


ಸುಣ್ಣದ ಹುಡಿಯ ಬಳಕೆ


ಕಾಂಕ್ರೀಟ್‌ಗೆ ತಣಿಸಿ ಆರಿಸಿದ ಸುಣ್ಣ (ಸುಣ್ಣದ ಬಿಳಿ ಪುಡಿ) ವನ್ನು ಮಿಶ್ರ ಮಾಡಿ ನೀರಿನೊಂದಿಗೆ ಸೇರಿಸಿ ಪೇಸ್ಟ್ ಮಾದರಿಯನ್ನು ತಯಾರಿಸುತ್ತಿದ್ದರು. ಇದನ್ನು ಸ್ಲೇಕಿಂಗ್ ಎಂದು ಕರೆಯಲಾಗುತ್ತದೆ.


ಪುರಾತನ ಕಾಂಕ್ರೀಟ್‌ನ ಮಾದರಿಯನ್ನು ಇನ್ನಷ್ಟು ಪರಿಶೋಧಿಸಿದಾಗ ಕ್ಯಾಲ್ಸಿಯಂ ಕಾರ್ಬೋನೇಟ್ ಅಂಶಗಳಿರುವುದನ್ನು ಖಾತ್ರಿಪಡಿಸಿದ್ದಾರೆ.


ಸುಣ್ಣದ ಬಿಳಿ ಪುಡಿ ಹಾಗೂ ಕಾಂಕ್ರೀಟ್ ಮಿಶ್ರಣವನ್ನು ಬಿರುಕು ಬಿಟ್ಟ ಗೋಡೆಗಳಲ್ಲಿ ಹಚ್ಚುವುದು ಬಿರುಕನ್ನು ಸ್ವಯಂಚಾಲಿತವಾಗಿ ತಗ್ಗಿಸುತ್ತದೆ ಎಂಬುದನ್ನು ತಂಡವು ಅನ್ವೇಷಿಸಿದೆ.


ಕಾಂಕ್ರೀಟ್ ಅನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿಮಾಡಿ ಸುಣ್ಣದ ಹುಡಿಯನ್ನು ಬಳಸಿದಾಗ ಅಲ್ಲೊಂದು ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಬಿರುಕುಗಳನ್ನು ಮುಚ್ಚುವುದಕ್ಕೆ ಅನುಕೂಲಕಾರಿ ಹಾಗೂ ಕಟ್ಟಡ ನಿರ್ಮಾಣದ ಸಮಯವನ್ನು ಉಳಿಸುತ್ತದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.


ಹವಾಮಾನ ಪ್ರಭಾವ ತಗ್ಗಿಸಲು ಸಹಕಾರಿ


ಈ ರೀತಿಯ ಕಾಂಕ್ರೀಟ್ ರೂಪಗಳು, ಸಿಮೆಂಟ್ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಕಾರಿ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ. ಇದರಿಂದ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣ 8% ಎಂಬುದು ತಿಳಿದುಬಂದಿದೆ.


ಗಾಳಿಯಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಕಾಂಕ್ರೀಟ್‌ನಂತಹ ಇತರ ಅನ್ವೇಷಣೆಗಳೊಂದಿಗೆ, ಈ ಸುಧಾರಣೆಗಳು ಕಾಂಕ್ರೀಟ್‌ನ ಜಾಗತಿಕ ಹವಾಮಾನ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by:Latha CG
First published: