HOME » NEWS » Trend » ROHIT SHARMA COMPLIMENTS RISHABH PANT INVITES HIM TO BABYSIT DAUGHTER

ಆಸೀಸ್​ ನಾಯಕ ಆಯ್ತು ಈಗ ರೋಹಿತ್ ಸರದಿ: ಪಂತ್​​ರನ್ನು ಬೇಬಿ ಸಿಟ್ಟರ್​ ಎಂದ ಹಿಟ್​ಮ್ಯಾನ್

ಪಂತ್ ಅವರು ಟಿಮ್ ಪೇಯ್ನ್ ಅವರ ಮನೆಗೆ ತೆರಳಿ ಅವರ ಪತ್ನಿ ಬೋನಿ ಪೇಯ್ನ್​​ ಜೊತೆ ಎರಡು ಮಕ್ಕಳನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಬೋನಿ ಅವರು ಬೆಸ್ಟ್​ ಬೇಬಿ ಸಿಟ್ಟರ್ ಎಂದು ಬರೆದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

Vinay Bhat | news18
Updated:January 9, 2019, 5:03 PM IST
ಆಸೀಸ್​ ನಾಯಕ ಆಯ್ತು ಈಗ ರೋಹಿತ್ ಸರದಿ: ಪಂತ್​​ರನ್ನು ಬೇಬಿ ಸಿಟ್ಟರ್​ ಎಂದ ಹಿಟ್​ಮ್ಯಾನ್
Pic: Twitter
  • News18
  • Last Updated: January 9, 2019, 5:03 PM IST
  • Share this:
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಟೀಂ ಇಂಡಿಯಾಕ್ಕೆ ಹಲವು ನೆನಪುಗಳ ಬುತ್ತಿಯನ್ನು ಕಟ್ಟಿಕೊಟ್ಟಿದೆ. ಭಾರತೀಯ ಆಟಗಾರರಿಗೆ ಇದು ಐತಿಹಾಸಿಕ ಗೆಲುವು ಒಂದು ಕಡೆ ಆದರೆ, ನಾಯಕ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಎಂಬುದು ಮತ್ತೊಂದು ವಿಚಾರ. ಇತ್ತ ರಿಷಭ್ ಪಂತ್ ಕೂಡ ಸ್ಲೆಡ್ಜಿಂಗ್​ ಜೊತೆಗೆ ಬೆಸ್ಟ್​ ಬೇಬಿ ಸಿಟ್ಟರ್ ಎಂಬ ಬಿರುದು ಪಡೆದುಕೊಂಡರು.

ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್​ ಪಂದ್ಯದ ಮಧ್ಯೆ ರಿಷಭ್ ಪಂತ್ ಬ್ಯಾಟ್ ಮಾಡುವಾಗ ಆಸೀಸ್ ನಾಯಕ ಟಿಮ್ ಪೇಯ್ನ್ ಅವರು ಪಂತ್​ರನ್ನು 'ಬೇಬಿ ಸಿಟ್ಟರ್' ಎಂದು ಕರೆದಿದ್ದರು. ಅಷ್ಟೆ ಅಲ್ಲದೆ ನಾನು ನನ್ನ ಹೆಂಡತಿ ಮೂವಿ ನೋಡಲು ಹೊರಗಡೆ ಹೋದಾಗ ಮನೆಯಲ್ಲಿ ನನ್ನ ಮಕ್ಕಳನ್ನು ನೋಡಿಕೊಂಡಿರು ಎಂದು ಹೇಳಿ ಸ್ಲೆಡ್ಜಿಂಗ್ ಮಾಡಿದ್ದರು.

ಇದನ್ನೂ ಓದಿ: ನೆಟ್​​ನಲ್ಲಿ ಮ್ಯಾಕ್ಸ್​​ವೆಲ್​​ರಿಂದ ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರ್ಯಾಕ್ಟೀಸ್: ವಿಡಿಯೋ ವೈರಲ್

ಇದಾದ ಬಳಿಕ ಪಂತ್ ಅವರು ಟಿಮ್ ಪೇಯ್ನ್ ಅವರ ಮನೆಗೆ ತೆರಳಿ ಅವರ ಪತ್ನಿ ಬೋನಿ ಪೇಯ್ನ್​​ ಜೊತೆ ಎರಡು ಮಕ್ಕಳನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಬೋನಿ ಅವರು 'ಬೆಸ್ಟ್​ ಬೇಬಿ ಸಿಟ್ಟರ್' ಎಂದು ಬರೆದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿತ್ತು.

(Image: GultiGrinch/Twitter)


ಸದ್ಯ ಇದೆ ವಿಷಯವನ್ನು ಗುರಿಯಾಗಿಸಿಕೊಂಡಿರುವ ರೋಹಿತ್ ಶರ್ಮಾ ನಮಗೂ ಒಬ್ಬ ಬೆಸ್ಟ್​ ಬೇಬಿ ಸಿಟ್ಟರ್​ ಬೇಕಾಗಿದ್ದಾರೆ ಎಂದು ಹೇಳಿದ್ದಾರೆ. ಮೊನ್ನೆಯಷ್ಟೆ ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿರುವ ರೋಹಿತ್​​, ‘ಗುಡ್ ಮಾರ್ನಿಂಗ್ ರಿಷಭ್, ನೀನು ಉತ್ತಮ ಬೇಬಿ ಸಿಟ್ಟರ್ ಎಂದು ಕೇಳಿದ್ದೆನೆ. ಇದರಿಂದ ರಿತಿಕಾ ಖುಷಿಯಾಗಿದ್ದಾಳೆ. ನಮಗೂ ನಿನ್ನ ಅವಶ್ಯಕತೆಯಿದೆ’ ಎಂದು ಟ್ವೀಟ್​​ ಮಾಡಿ ಪಂತ್ ಅವರ ಕಾಲೆಳೆದಿದ್ದಾರೆ.

 


First published: January 9, 2019, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories