Pizza: ಪಿಜ್ಜಾಗಾಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ.. 2 ನಿಮಿಷದಲ್ಲಿ ತಯಾರಿಸ್ಬೋದು!

Pizza Ready in Two Minutes: ಪಿಜ್ಜಾವನ್ನು ಕೇವಲ 2 ನಿಮಿಷದಲ್ಲಿ ಮ್ಯಾಗಿಯಂತೆ ತಯಾರಿಸಿದಲು ಸಾಧ್ಯವಂತೆ. ಆಸ್ಟ್ರೇಲಿಯಾದಲ್ಲಿ ಪಿಜ್ಜಾವನ್ನು ಬೇಗನೆ ತಯಾರಿಸುವ ಯಂತ್ರವನ್ನು ತಯಾರಿಸಲಾಗಿದೆ. ಇದು ನಿಮ್ಮ ನೆಚ್ಚಿನ ಫ್ಲೇವರ್‌ನ ಪಿಜ್ಜಾವನ್ನು ಕಣ್ಣು ಮಿಟುಕಿಸುವುದರಲ್ಲಿ ತಯಾರಿಸುತ್ತದೆ.

ಪಿಜ್ಜಾ / pizza

ಪಿಜ್ಜಾ / pizza

 • Share this:
  ಪಿಜ್ಜಾ (Pizza) ಎಂದಾಗ ಕೆಲವರ ಬಾಯಲ್ಲಂತೂ ನೀರೂರುತ್ತದೆ. ಅದರ ಇದರ ರುಚಿ ಸವಿಯದವರು ಯಾರಿದ್ದಾರೆ ಹೇಳಿ? ಒಂದು ಬಾರಿಯಾದರು ಪಿಜ್ಜಾ ಸವಿದು ಅದರ ರುಚಿಯನ್ನು (Taste) ನೋಡಿರುತ್ತಾರೆ. ಆದರೆ ಕೆಲವರಿಗೆ ಪಿಜ್ಜಾ ಇಷ್ಟವಾದರೆ ಇನ್ನು ಕೆಲವರಿಗೆ  ಇಷ್ಟವಾಗುವುದಿಲ್ಲ. ಆದರೆ ಯುವಕ –ಯುವತಿಯರಿಗಂತೂ ಪಿಜ್ಜಾ ಅಂದರೆ ಬಲು ಇಷ್ಟ, ಮಳಿಗೆಗಳಲ್ಲಿ ಪಿಜ್ಜಾ ತಯಾರಿಸುವಾಗ ಕಡಿಮೆ ಎಂದರೆ ಅರ್ಧ ಗಂಟೆಯಾದರೂ ಕಾಯಬೇಕು. ಆದರೀಗ ಪಿಜ್ಜಾಗಾಗಿ ಅಷ್ಟೇನು ಕಾಯಬೇಕಿಲ್ಲ. ಕೇವಲ 2 ನಿಮಿಷದಲ್ಲಿ  (2 minutes)ತಯಾರಿಸಬಹುದಂತೆ!

  ಪಿಜ್ಜಾವನ್ನು ಕೇವಲ 2 ನಿಮಿಷದಲ್ಲಿ ಮ್ಯಾಗಿಯಂತೆ ತಯಾರಿಸಿದಲು ಸಾಧ್ಯವಂತೆ. ಆಸ್ಟ್ರೇಲಿಯಾದಲ್ಲಿ ಪಿಜ್ಜಾವನ್ನು ಬೇಗನೆ ತಯಾರಿಸುವ ಯಂತ್ರವನ್ನು ತಯಾರಿಸಲಾಗಿದೆ. ಇದು ನಿಮ್ಮ ನೆಚ್ಚಿನ ಫ್ಲೇವರ್‌ನ ಪಿಜ್ಜಾವನ್ನು ಕಣ್ಣು ಮಿಟುಕಿಸುವುದರಲ್ಲಿ ತಯಾರಿಸುತ್ತದೆ.

  ಆಸ್ಟ್ರೇಲಿಯದ ಉತ್ತರ ಸಿಡ್ನಿಯಲ್ಲಿರುವ ಅಲ್ಡಿ ಕಾರ್ನರ್ ಸ್ಟೋರ್‌ನಲ್ಲಿ ವಿಶೇಷವಾಗಿ ಅಳವಡಿಸಲಾಗಿರುವ ಯಂತ್ರದ ಹೆಸರು 'ಪಿಝಾಬೋಟ್'. ಇದು ಒಂದು ರೀತಿಯ ರೋಬೋಟಿಕ್ ಪಿಜ್ಜಾ ಮಾರಾಟ ಯಂತ್ರವಾಗಿದೆ. ಈ ಯಂತ್ರವು ರೆಸ್ಟೋರೆಂಟ್‌ನಂತೆ ಮೇಲೋಗರಗಳಿಂದ ಅಲಂಕರಿಸಲ್ಪಟ್ಟ ಪಿಜ್ಜಾವನ್ನು ಒದಗಿಸುತ್ತದೆ. ಇದರ ಬೆಲೆ $8.99 ಅಂದರೆ ಭಾರತೀಯ ಕರೆನ್ಸಿಯಲ್ಲಿ 670 ರೂ.

  ಒಂದು ದಿನದಲ್ಲಿ 450 ಪಿಜ್ಜಾ ತಯಾರಿಸುತ್ತದೆ

  ರೋಬೋಟಿಕ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಈ ಯಂತ್ರದ ಮೂಲಕ ಪಿಜ್ಜಾ ತಯಾರಿಸುವುದಾದರೆ ಒಂದು ದಿನದಲ್ಲಿ 450 ಪಿಜ್ಜಾಗಳನ್ನು ತಯಾರಿಸಬಹುದು ಮತ್ತು ವಿತರಿಸಬಹುದಗಿದೆ. ಯಂತ್ರವು ಮುಂಭಾಗದಲ್ಲಿ ಗಾಜಿನ ಕಿಟಕಿಯನ್ನು ಹೊಂದಿದೆ. ಇದು ಒಳಗೆ ಇರಿಸಲಾಗಿರುವ ಪಿಜ್ಜಾದ ನೋಟವನ್ನು ನೀಡುತ್ತದೆ. ಯಂತ್ರವು ಪ್ರಸ್ತುತ ಪಿಜ್ಜಾಗಳನ್ನು ಕೇವಲ ಎರಡು ರುಚಿಗಳಲ್ಲಿ ತಯಾರಿಸುತ್ತಿದೆ - ಪೆಪ್ಪೆರೋನಿ ಪಿಜ್ಜಾ ಮತ್ತು ಇಟಾಲಿಯನ್ ಪಿಜ್ಜಾ. ಆರ್ಡರ್ ಮಾಡಿದ ತಕ್ಷಣ, ಯಂತ್ರವು ಪಿಜ್ಜಾವನ್ನು ಬೇಯಿಸಿ, ಪ್ಯಾಕ್ ಮಾಡಿ ನಿಮಗೆ ನೀಡುತ್ತದೆ. ಇದು ಆಸ್ಟ್ರೇಲಿಯಾದಲ್ಲಿ ತಯಾರಾದ ಮೊದಲ ಪಿಜ್ಜಾ ವೆಂಡಿಂಗ್ ಮೆಷಿನ್ ಆಗಿದ್ದು, ಇದನ್ನು ಬಾಂಡಿ ಸ್ಟಾರ್ಟ್-ಅಪ್ ಪ್ಲೇಸರ್ ರೊಬೊಟಿಕ್ಸ್ ಸಹಯೋಗದಲ್ಲಿ ಮಾಡಲಾಗಿದೆ.

  ಇದನ್ನೂ ಓದಿ- Blackberry 5G: ಕನಸಾಗಿಯೇ ಉಳಿದ ಬ್ಲ್ಯಾಕ್​ಬೆರ್ರಿ ಸ್ಮಾರ್ಟ್‌ಫೋನ್.. ಯೋಜನೆ ಕೈ ಬಿಟ್ಟ ಆನ್‌ವರ್ಡ್‌ ಮೊಬಿಲಿಟಿ

  2 ನಿಮಿಷದಲ್ಲಿ ಪಿಜ್ಜಾ ಮಾಡುವುದು ಹೇಗೆ?

  ಯಂತ್ರದಲ್ಲಿ ಒಂದು ಪಿಜ್ಜಾ ಮಾಡಲು ಕೇವಲ 2 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಅಚ್ಚರಿ ಏನೆಂದರೆ ಇದು ಹೇಗೆ ಸಧ್ಯ ಎಂಬುದನ್ನು ತಿಳಿದುಕೊಳ್ಳುವ ಹಂಬಲ ಬಹುತೇಕರಿಗಿದೆ. ವಾಸ್ತವವಾಗಿ, ಯಂತ್ರದಲ್ಲಿ ಈಗಾಗಲೇ ಕೈಯಿಂದ ಮಾಡಿದ ಪಿಜ್ಜಾ ಬೇಸ್‌ಗಳನ್ನು ಸ್ವಲ್ಪ ಬೇಯಿಸಲಾಗುತ್ತದೆ. ಯಂತ್ರವು ಆದೇಶದಂತೆ ಮೇಲೋಗರಗಳ ರೂಪದಲ್ಲಿ ಪ್ರೀಮಿಯಂ ಪದಾರ್ಥಗಳನ್ನು ಸುರಿಯುವ ಕೆಲಸವನ್ನು ಮಾಡುತ್ತದೆ. ನಂತರ ಅದನ್ನು ಬೇಕಾದ ತಾಪಮಾನದಲ್ಲಿ ಬೇಯಿಸಿ ಮತ್ತು ಪ್ಯಾಕಿಂಗ್‌ನೊಂದಿಗೆ ತಿನ್ನುವವರಿಗೆ ಬಡಿಸುತ್ತದೆ.

  ಇದನ್ನೂ ಓದಿ-Love Story: 84 ವರ್ಷದ ಪ್ರಿಯತಮೆ ಜೊತೆ ಓಡಿಹೋದ 80 ವರ್ಷದ ಪ್ರಿಯಕರ! ಇದೆಂಥಾ ಲವ್​ ಮಾರಾಯ್ರೆ..

  ಪಿಜ್ಜಾಬಾಟ್ ಸಂಸ್ಥಾಪಕ ಮ್ಯಾಟ್ ಲಿಪ್ಸ್ಕಿ ಅವರು ಈ ಯಂತ್ರದ ಬಗ್ಗೆ ಮಾತನಾಡಿ, ಹೊಸ ಪಿಜ್ಜಾ ತಯಾರಿಸುವ ಯಂತ್ರ ಎಲ್ಲವನ್ನೂ ತಾಜಾವಾಗಿಡಲಾಗುತ್ತದೆ ಮತ್ತು ಡಿಜಿಟಲ್ ಸೆಟ್ಟಿಂಗ್‌ನೊಂದಿಗೆ ಸರಿಯಾದ ತಾಪಮಾನವನ್ನು ಸಹ ಹೊಂದಿಸಲಾಗಿದೆ. ಆದ್ದರಿಂದ ಪಿಜ್ಜಾದ ರುಚಿಗೆ ರಾಜಿ ಮಾಡಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ.
  Published by:Harshith AS
  First published: