• Home
  • »
  • News
  • »
  • trend
  • »
  • ಸಿಂಗಾಪುರದ ಪಾರ್ಕ್​​ನಲ್ಲಿ ಪತ್ತೆ ಆಯ್ತ ವಿಚಿತ್ರ ಜೀವಿ; ಅಷ್ಟಕ್ಕೂ ಏನಿದು?

ಸಿಂಗಾಪುರದ ಪಾರ್ಕ್​​ನಲ್ಲಿ ಪತ್ತೆ ಆಯ್ತ ವಿಚಿತ್ರ ಜೀವಿ; ಅಷ್ಟಕ್ಕೂ ಏನಿದು?

ರೋಬಾಟ್​

ರೋಬಾಟ್​

ಸಿಂಗಪುರದಲ್ಲಿ ಈ ರೀತಿ ಆಗಿರುವುದು ಇದೇ ಮೊದಲೇನಲ್ಲ. ಏಕೆಂದರೆ ಈ ಮೊದಲು ಸಾಕಷ್ಟು ಬಾರಿ ಈ ರೀತಿಯ ರೋಬಾಟ್​ಗಳನ್ನು ಬಿಡಲಾಗಿತ್ತು. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿತ್ತು.  

  • Share this:

    ವಿಶ್ವಾದ್ಯಂತ ಕೊರೋನಾ ವೈರಸ್​ ಹೆಚ್ಚಿದ್ದು, ಸಾಮಾಜಿಕ ಅಂತ ಕಾಯ್ದುಕೊಳ್ಳುವಂತೆ ಸರ್ಕಾರ ಕೋರಿದೆ. ಪಾರ್ಕ್​ ಸೇರಿ ಎಲ್ಲ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಮಧ್ಯೆ ಸಿಂಗಾಪುರದ ಪಾರ್ಕ್​ನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ! ಇದನ್ನು ನೋಡಿದವರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ!


    ಅಷ್ಟಕ್ಕೂ ಈ ವಿಚಿತ್ರ ಪ್ರಾಣಿ ಬೇರೇನು ಅಲ್ಲ ರೋಬಾಟ್​! ಹೌದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಎಚ್ಚರಿಕೆ ಮೂಡಿಸಲು ಬೋಸ್ಟನ್​ ಡೈನಮಿಕ್ಸ್​ ರೋಬಾಟಿಕ್​ ನಾಯಿ ಒಂದನ್ನು ಸಿದ್ಧಪಡಿಸಿದೆ. ಈ ಶ್ವಾನ ಪಾರ್ಕ್​ ಒಳಗೆ ಎಂಟ್ರಿ ಕೊಡುತ್ತಿದ್ದಂತೆ ಜನ ವಿಚಿತ್ರವಾಗಿ ಅದನ್ನು ನೋಡಲು ಆರಂಭಿಸಿದ್ದಾರೆ.


    ಕೊರೋನಾದಿಂದ ಮೊದಲೇ ಕಂಗಾಲಾಗಿದ್ದ ಜನತೆ ಈ ರೋಬಾಟ್​ ನೋಡಿ ನಿಜ್ಜಕ್ಕೂ ಶಾಕ್​ ಆಗಿದ್ದಾರೆ. ಇದು ಪ್ರಾಣಿಯೋ ಅಥವಾ ಜೀವಿಯೋ ಎನ್ನುವುದೇ ಅವರಿಗೆ ಅರ್ಥವಾಗಲಿಲ್ಲ. ನಂತರ ಇದು ಏನು ಎಂಬುದರ ನಿಜವಾದ ವಿಚಾರ ತಿಳಿದು ಬಂದಿದೆ.


    ಇದನ್ನೂ ಓದಿ: ಬೆಂಗಳೂರೊಂದರಲ್ಲೇ ಇಂದು12 ಕೊರೋನಾ ಕೇಸ್ ಪತ್ತೆ; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ


    ಅಂದಹಾಗೆ, ಸಿಂಗಪುರದಲ್ಲಿ ಈ ರೀತಿ ಆಗಿರುವುದು ಇದೇ ಮೊದಲೇನಲ್ಲ. ಏಕೆಂದರೆ ಈ ಮೊದಲು ಸಾಕಷ್ಟು ಬಾರಿ ಈ ರೀತಿಯ ರೋಬಾಟ್​ಗಳನ್ನು ಬಿಡಲಾಗಿತ್ತು. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿತ್ತು.


    Published by:Rajesh Duggumane
    First published: