Video Viral: ಕಣ್ಣೀರಿಗೆ ಕರಗಿದ ಕಳ್ಳರ ಮನಸ್ಸು; ದೋಚಿದ್ದನ್ನು ಏನು ಮಾಡಿದ್ರು ಗೊತ್ತಾ?

Video Viral: ಕಳ್ಳರಿಗೆ ಮನಸ್ಸೆಂಬುದು ಇದೆಯಾ? ಸಿಕ್ಕಿದೆಲ್ಲವನ್ನು ದೋಚಿಕೊಂಡು, ಎದುರು ಸಿಕ್ಕವನು ಪ್ರತಿರೋಧ ಮಾಡಿದರೆ ದರೋಡೆ ಮಾಡಿಕೊಂಡು ಓಡಿ ಬಿಡುತ್ತಾರೆ. ನಗರದಲ್ಲಿ ಕಳ್ಳತನವು ಸರಾಗವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಈ ವಿಡಿಯೋದಲ್ಲಿ ಕಳ್ಳರು ಏನು ಮಾಡಿದ್ದಾರೆ ಗೊತ್ತಾ?

news18-kannada
Updated:June 19, 2020, 4:52 PM IST
Video Viral: ಕಣ್ಣೀರಿಗೆ ಕರಗಿದ ಕಳ್ಳರ ಮನಸ್ಸು; ದೋಚಿದ್ದನ್ನು ಏನು ಮಾಡಿದ್ರು ಗೊತ್ತಾ?
ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ದೃಶ್ಯ
  • Share this:
ಕಳ್ಳರು ಒಂದು ಬಾರಿ ಕನ್ನ ಹಾಕಿದರೆ ಮುಗಿಯಿತು ಸಿಕ್ಕಿದೆಲ್ಲವನ್ನು ದೋಚಿಕೊಂಡು ಪರಾರಿಯಾಗುತ್ತಾರೆ. ಇಂದು ಈ ಊರು, ನಾಳೆ ಮತ್ತೊಂದು ಊರು ಹೀಗೆ ಕಳ್ಳತನ ಮಾಡಿಕೊಂಡು ಕೊನೆಗೊಂದು ದಿನ ಪೊಲೀಸರ ಅತಿಥಿಯಾಗುತ್ತಾರೆ.

ಕಳ್ಳರಿಗೆ ಮನಸ್ಸೆಂಬುದು ಇದೆಯಾ? ಸಿಕ್ಕಿದೆಲ್ಲವನ್ನು ದೋಚಿಕೊಂಡು, ಎದುರು ಸಿಕ್ಕವನು ಪ್ರತಿರೋಧ ಮಾಡಿದರೆ ದರೋಡೆ ಮಾಡಿ ಓಡಿ ಬಿಡುತ್ತಾರೆ. ನಗರದಲ್ಲಿ ಕಳ್ಳತನವು ಸರಾಗವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಈ ವಿಡಿಯೋದಲ್ಲಿ ಕಳ್ಳರು ಏನು ಮಾಡಿದ್ದಾರೆ ಗೊತ್ತಾ?. ನಮಗೂ ಮನಸ್ಸಿದೆ ಎಂದು ಸಾಬೀತು ಮಾಡಿದ್ದಾರೆ.

ಡೆಲಿವರಿ ಬಾಯ್​ ಒಬ್ಬ ಮನೆಯೊಂದರ ಬಳಿ ಪಾರ್ಸೆಲ್​ ಕೊಟ್ಟು ತನ್ನ ದ್ವೀಚಕ್ರ ವಾಹನದ ಬಳಿ ಬರುತ್ತಿದ್ದಂತೆ ಬೈಕಿನಲ್ಲಿ ಬಂದ ಖದೀಮರಿಬ್ಬರು ಆತನ ಬಳಿ ಬಂದು ಇರುವುದೆಲ್ಲವನ್ನು ದೋಚಿದ್ದಾರೆ. ಬೆಳಗ್ಗಿನಿಂದ ಕಷ್ಟಪಟ್ಟು ದುಡಿದ ಹಣವನ್ನು ಕಳ್ಳರು ದೋಚಿದ್ದನ್ನು ಕಂಡು ಡೆಲಿವರಿ ಬಾಯ್​ ಕಣ್ಣೀರು ಹಾಕುತ್ತಾನೆ.

ಆದರೆ ಕಳ್ಳರು ಆತನ ಕಣ್ಣೀರು ಕಂಡು ದೋಚಿದೆಲ್ಲವನ್ನು ವಾಪಸ್​ ನೀಡಿದ್ದಾರೆ. ನಂತರ ಆತನನ್ನು ತಬ್ಬಿಕೊಂಡು, ಷೇಕ್​​ ಹ್ಯಾಂಡ್​ ಮಾಡಿ ಹೊರಟು ಹೋಗಿದ್ದಾರೆ. ಇತ್ತ ಕಣ್ಣೀರು ಒರೆಸಿಕೊಂಡು ಡೆಲಿವರಿಬಾಯ್​ ಬೈಕ್​​​ ಸ್ಟಾರ್ಟ್​ ಮಾಡಿ ಹೊರಟು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಪಾಕಿಸ್ತಾನದ ಕರಾಚಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅನೇಕರು ಈ ವಿಡಿಯೋ ನೋಡಿ ಕಳ್ಳರಿಗೂ ಒಳ್ಳೆಯ ಮನಸ್ಸಿದೆ ಎಂದು ಕಾಮೆಂಟ್​ ಬರೆದಿದ್ದಾರೆ.
First published:June 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading