#RoadToSafety ನಿಮ್ಮ ರಸ್ತೆ ಪಯಣ ಸುರಕ್ಷಿತವಾಗಿರಲು ಇಲ್ಲಿವೆ ಟಿಪ್ಸ್

ಅಪಾಯಕ್ಕೆ ಒಳಗಾಗುವುದಕ್ಕಿಂತ ಮೊದಲೇ ಸುರಕ್ಷಿತವಾಗಿರುವುದು ಒಳ್ಳೆಯದು. ಅದರಲ್ಲೂ ವಿಶೇಷವಾಗಿ ನೀವು ರೋಡ್ ಟ್ರಿಪ್‌ ವೇಳೆ ನಿಮ್ಮ ಜೀವನವನ್ನೇ ಕಾರಿಗೆ ಪಣವಾಗಿಟ್ಟಿರುತ್ತೀರಿ. ನೀವು ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿಕೊಂಡು ಹೊಣೆಗಾರಿಕೆಯಿಂದ ವಾಹನ ಚಾಲನೆ ಮಾಡುವುದನ್ನು ಮರೆಯದಿರಿ.

news18
Updated:September 30, 2019, 7:25 PM IST
#RoadToSafety ನಿಮ್ಮ ರಸ್ತೆ ಪಯಣ ಸುರಕ್ಷಿತವಾಗಿರಲು ಇಲ್ಲಿವೆ ಟಿಪ್ಸ್
ರಸ್ತೆ ಸುರಕ್ಷತೆ
news18
Updated: September 30, 2019, 7:25 PM IST
ರೋಡ್ ಟ್ರಿಪ್‌ಗಳು ಅಥವಾ ರಸ್ತೆ ಪ್ರಯಾಣ ಯಾವತ್ತಿದ್ದರೂ ಖುಷಿಕೊಡುತ್ತವೆ. ಅದರಲ್ಲೂ ಈ ಪ್ರಯಾಣವು ಸಾಹಸಮಯ ಮತ್ತು ಸುರಕ್ಷಿತವಾಗಿದ್ದರಂತೂ ಅದರ ಮಜವೇ ಬೇರೆ! ರೋಡ್ ಟ್ರಿಪ್​ನಲ್ಲಿ ಸುರಕ್ಷತೆ ಬಹಳ ಮುಖ್ಯ, ಹಾಗಾಗಿ ನೀವು ಒಂದು ರೋಡ್ ಟ್ರಿಪ್ ಶುರು ಮಾಡುವ ಮೊದಲು ಮತ್ತು ಪ್ರಯಾಣದಲ್ಲಿರುವಾಗ ಅನುಸರಿಸಬೇಕಾದ ಕೆಲವು ರಸ್ತೆ ಸುರಕ್ಷತಾ ಸಲಹೆಗಳು ಇಲ್ಲಿವೆ.

ರಸ್ತೆ ಸುರಕ್ಷತಾ ಚೆಕ್‌ಲಿಸ್ಟ್!

ರೋಡ್ ಟ್ರಿಪ್‌ಗಿಂತ ಮೊದಲು ತೆಗೆದುಕೊಳ್ಳಬಹುದಾದ ಸುರಕ್ಷತಾ ಕ್ರಮಗಳು:

* ಹೆದ್ದಾರಿ ಚಿಹ್ನೆಗಳು ಸದಾ ನಿಮ್ಮ ಸ್ಮರಣೆಯಲ್ಲಿರಲಿ
* ರಸ್ತೆಯಲ್ಲಿ ಅಗತ್ಯಬಿದ್ದಾಗ ಪ್ರಥಮ ಚಿಕಿತ್ಸಾ ಕಿಟ್ ಮತ್ತು ಅಗತ್ಯ ಔಷಧಿಗಳು ಸಿಗದೇ ಇರಬಹುದು. ಹಾಗಾಗಿ ನಿಮ್ಮೊಂದಿಗೆ ಅವುಗಳನ್ನು ಕೊಂಡೊಯ್ಯಲು ಮರೆಯಬೇಡಿ.
* ಕಾರು ಹಾಳಾಗಿ ನಿಮ್ಮ ರೋಡ್ ಟ್ರಿಪ್ ನಿಂತುಹೋಗುವ ಅಥವಾ ಅಪಾಯ ಎದುರಾಗುವ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಕಾರನ್ನು ಮೊದಲೇ ರಿಪೇರಿ ಅಥವಾ ಸರ್ವಿಸ್ ಮಾಡಿಸಿಕೊಳ್ಳಿ.
* ಕೆಲವು ಕಡೆಗಳಲ್ಲಿ ಇಂಟರ್ನೆಟ್ ಕನೆಕ್ಷನ್ ಸರಿಯಾಗಿ ಇರುವುದಿಲ್ಲ, ಆದ್ದರಿಂದ ದೂರದ ಸ್ಥಳಗಳಿಗೆ ಹೋಗುವಾಗ ನಿಮ್ಮ ಜೊತೆ ಒಂದು ನಕ್ಷೆಯನ್ನು ಇಟ್ಟುಕೊಂಡಿರಿ.
Loading...

* ದಾರಿ ತೋರಿಸುವವರು ಮತ್ತು ಡ್ರೈವರ್ ಇಬ್ಬರೂ ನೀವೇ ಆಗಬೇಡಿ. ಚಾಲನೆ ಮಾಡುವಾಗ ನಿಮ್ಮ ಸಂಪೂರ್ಣ ಗಮನ ರಸ್ತೆಯ ಮೇಲಿರಲಿ.
* ಸರಿಯಾದ ಟೂಲ್ ಕಿಟ್ ಅನ್ನು ನಿಮ್ಮೊಂದಿಗೆ ಇಟ್ಟುಕೊಂಡು ನಿಮ್ಮ ಕಾರಿನಲ್ಲಾಗುವ ಸಣ್ಣ ಪುಟ್ಟ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.
* ತಾಜಾ ಹಣ್ಣು ಮತ್ತು ಆಹಾರವನ್ನು ತಣ್ಣಗಿನ ಮತ್ತು ಒಣ ಜಾಗದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.

Road safety infographics in Kannada
ರಸ್ತೆ ಸುರಕ್ಷತೆಯ ಗ್ರಾಫಿಕ್


ರಸ್ತೆ ಪ್ರಯಾಣದ ವೇಳೆ ಅನುಸರಿಸಬಹುದಾದ ಸುರಕ್ಷತಾ ಕ್ರಮಗಳು:
* ನಿಮ್ಮ ಮತ್ತು ನಿಮ್ಮ ಜೊತೆಗಿರುವವರ ಸುರಕ್ಷತೆಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ.
* ವಾಹನ ಚಾಲನೆ ಮಾಡುವಾಗ ಫೋನಿನಲ್ಲಿ ಮಾತನಾಡಬೇಡಿ. ಬದಲಿಗೆ ಸಹ ಪ್ರಯಾಣಿಕರೊಡನೆ ಸಂಭಾಷಣೆ ನಡೆಸುವ ಆಯ್ಕೆ ನಿಮ್ಮದಿರಲಿ.
* ಒಂದು ವೇಳೆ, ನಿಮ್ಮ ಪ್ರಯಾಣದಲ್ಲಿ ನಿಮ್ಮೊಂದಿಗೆ ಮಕ್ಕಳಿದ್ದರೆ ಕಾರಿನಲ್ಲಿ ಚೈಲ್ಡ್ ಸೇಫ್ಟಿ ಲಾಕ್ ಹಾಕಿಸಿಕೊಳ್ಳಿ.
* ಚಾಲನೆ ಮಾಡುವಾಗ ಏನನ್ನೂ ತಿನ್ನಬೇಡಿ.
* ಸೀಟ್‌ಬೆಲ್ಟ್ ನಿಮಗೆ ಸುರಕ್ಷತೆ ಒದಗಿಸುತ್ತದೆ. ಆದ್ದರಿಂದ ಮುಂದಿನ ಮತ್ತು ಹಿಂದಿನ ಸೀಟಿನಲ್ಲಿ ಎಲ್ಲರೂ ಸೀಟ್‌ಬೆಲ್ಟ್ ಹಾಕಿಕೊಳ್ಳುವುದನ್ನು ಮರೆಯಬೇಡಿ.
* ಆಯಾಸದಿಂದಾಗಿಯೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಚಾಲನೆ ಮಾಡುವಾಗ ಅಗಾಗ ವಿರಾಮ ತೆಗೆದುಕೊಳ್ಳಿ.
* ರೋಡ್ ಟ್ರಿಪ್ ಮಜಾ ಹೌದು, ಹಾಗಂತ ಚಾಲನೆ ಮಾಡುವಾಗ ಆಚರಣೆ ಬೇಡ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಲೇಬೇಡಿ!

ಅಪಾಯಕ್ಕೆ ಒಳಗಾಗುವುದಕ್ಕಿಂತ ಮೊದಲೇ ಸುರಕ್ಷಿತವಾಗಿರುವುದು ಒಳ್ಳೆಯದು. ಅದರಲ್ಲೂ ವಿಶೇಷವಾಗಿ ನೀವು ರೋಡ್ ಟ್ರಿಪ್‌ ವೇಳೆ ನಿಮ್ಮ ಜೀವನವನ್ನೇ ಕಾರಿಗೆ ಪಣವಾಗಿಟ್ಟಿರುತ್ತೀರಿ. ನೀವು ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿಕೊಂಡು ಹೊಣೆಗಾರಿಕೆಯಿಂದ ವಾಹನ ಚಾಲನೆ ಮಾಡುವುದನ್ನು ಮರೆಯದಿರಿ. ಇಂಥ ಜವಾಬ್ದಾರಿಯುತರ ಗುಂಪಿಗೆ ನೀವೂ ಸೇರಿಕೊಳ್ಳಲು ಹಾಗೂ ಎಂದಿಗೂ ಕುಡಿದು ವಾಹನ ಚಲಾಯಿಸದಿರಲು ಶಪಥ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ.
First published:September 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...