ಏರ್​ಪೋರ್ಟ್​ಗೆ ತೆರಳುತ್ತಿದ್ದ ಕಾರನ್ನು ಕೆಸರಿನ ಹೊಂಡದತ್ತ ದಾರಿತೋರಿಸಿದ ಗೂಗಲ್ ಮ್ಯಾಪ್!

ಕೊಲರಾಡೋದ ಡೆನ್ವರ್​ ಅಂತರಾಷ್ಟೀಯ ವಿಮಾಣ ನಿಲ್ದಾಣಕ್ಕೆ ತೆರಳಲು ಗೂಗಲ್​ ಮ್ಯಾಪ್​ ಬಳಸಿಕೊಂಡು ಹೋದ ಚಾಲಕರು ಕೆಸರಿನ ರಸ್ತೆಯಲ್ಲಿ ಸಿಲುಕಿಕೊಂಡು ಹಲವು ಗಂಟೆಗಳ ಕಾಲ ಪರದಾಡಿದ್ದಾರೆ.

news18
Updated:June 28, 2019, 7:15 PM IST
ಏರ್​ಪೋರ್ಟ್​ಗೆ ತೆರಳುತ್ತಿದ್ದ ಕಾರನ್ನು ಕೆಸರಿನ ಹೊಂಡದತ್ತ ದಾರಿತೋರಿಸಿದ ಗೂಗಲ್ ಮ್ಯಾಪ್!
ಪ್ರಾತಿನಿಧಿಕ ಚಿತ್ರ
  • News18
  • Last Updated: June 28, 2019, 7:15 PM IST
  • Share this:
ಅಪರಿಚಿತ ಊರಿಗೆ ತೆರಳುವಾಗ ಇಂದಿನ ಜಮಾನದಲ್ಲಿ ಗೂಗಲ್​ ಮ್ಯಾಪ್​ ಅವಶ್ಯಕ. ಆದರೆ ಇದನ್ನೇ ನಂಬಿಕೊಂಡು ಹೋಗಿ ಯಾವುದೋ ಊರಿಗೆ ತಲುಪಿದ ಘಟನೆಗಳು ಹಲವಾರಿವೆ. ಇದೀಗ ಅಮೆರಿಕದಲ್ಲೂ ಗೂಗಲ್​ ಮ್ಯಾಪ್​ ಬಳಸಿಕೊಂಡು ತೆರಳಿದ  ಕಾರು ಚಾಲಕರು ಕೆಸರಿನಲ್ಲಿ ಸಿಲುಕಿಕೊಂಡ ಘಟನೆಯೊಂದು ನಡೆದಿದೆ.

ಕೊಲರಾಡೋದ ಡೆನ್ವರ್​ ಅಂತರಾಷ್ಟೀಯ ವಿಮಾಣ ನಿಲ್ದಾಣಕ್ಕೆ ತೆರಳಲು ಗೂಗಲ್​ ಮ್ಯಾಪ್​ ಬಳಸಿಕೊಂಡು ಹೋದ ಚಾಲಕರು ಕೆಸರಿನ ರಸ್ತೆಯಲ್ಲಿ ಸಿಲುಕಿಕೊಂಡು ಹಲವು ಗಂಟೆಗಳ ಕಾಲ ಪರದಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಸಾಗಲು ಸಮೀಪದ ದಾರಿಯೆಂದು ತಿಳಿದು ಶಾರ್ಟ್​ ಕಟ್​ ರೋಡಿನಲ್ಲಿ ಚಲಾಯಿಸಿದ ಕಾರುಗಳು ಅರ್ಧ ದಾರಿಯಲ್ಲಿ ಕೆಸರಿನ ಹೊಂಡಕ್ಕೆ ಸಿಲುಕಿದ್ದಾರೆ. ಮಳೆ ಬಂದ ಕಾರಣ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದವು. ಹಾಗಾಗೀ ಗೂಗಲ್​ ಮ್ಯಾಪ್​ ಸಹಾಯ ಪಡೆದ ಕಾರು ಚಾಲಕರು ಪತೀಚಿಗೆ ಸಿಲುಕಿಕೊಂಡು ಪ್ಲೈಟ್​ ಮಿಸ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಏರ್​ಟೆಲ್​-ಜಿಯೋಗೆ ‘BSNL’​ ಭರ್ಜರಿ ಪೈಪೋಟಿ: ಪ್ರತಿದಿನ 1.5 GB ಜೊತೆಗೆ 10 GB ಡೇಟಾ ಆಫರ್..!

ಅನೇಕರು ಬೇರೆ ಊರಿಗೆ ತೆರಳಲು ಗೂಗಲ್​ ಮ್ಯಾಪ್​ ಸಹಾಯ ಪಡೆಯುತ್ತಾರೆ. ಕೆಲವೊಮ್ಮೆ ಗೂಗಲ್​ ಮ್ಯಾಪ್​  ಯಾವುದೋ ಊರಿಗೆ ಕರೆದೊಯ್ಯುತ್ತದೆ. ಹಾಗಾಗೀ ಗೂಗಲ್​ ಮ್ಯಾಪ್ ಬಳಸಿಕೊಂಡು ​ ತೆರಳುವ ಮುನ್ನ  ಪರೀಕ್ಷಿಸಿಕೊಂಡು ತೆರಳುವುದು ಒಳಿತು.

First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading