'ಎಲ್ಲರು ಪೂಜಾರ ಆಗಲು ಸಾಧ್ಯವಿಲ್ಲ': ರಿಷಭ್ ಪಂತ್ ಸ್ಲೆಡ್ಜಿಂಗ್​ಗೆ ಬೆಚ್ಚಿದ ಆಸೀಸ್

ಅಶ್ವಿನ್ ಬೌಲಿಂಗ್​​ನ ಓವರ್​​ ಪೂರ್ತಿ ಪಂತ್ ಅವರು ಪ್ಯಾಟ್​​ಗೆ ಛೇಡಿಸಿದರು. ಈ ಸಂದರ್ಭ ಕಾಮೆಂಟ್ರಿ ಕೂಡ ನಿಲ್ಲಿಸಿದ್ದರಿಂದ ಪಂತ್ ಆಡಿದ ಒಂದೊಂದು ಮಾತು ಸ್ಪಷ್ಟವಾಗಿ ಸ್ಟಂಪ್ ಮೈಕ್​​ನಲ್ಲಿ ರೆಕಾರ್ಡ್​​ ಆಗಿವೆ.

Vinay Bhat | news18
Updated:December 10, 2018, 6:12 PM IST
'ಎಲ್ಲರು ಪೂಜಾರ ಆಗಲು ಸಾಧ್ಯವಿಲ್ಲ': ರಿಷಭ್ ಪಂತ್ ಸ್ಲೆಡ್ಜಿಂಗ್​ಗೆ ಬೆಚ್ಚಿದ ಆಸೀಸ್
Image credits: Fox Cricket / Twitter
Vinay Bhat | news18
Updated: December 10, 2018, 6:12 PM IST
ಅಡಿಲೇಡ್: ಇಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ 31 ರನ್​ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಎಂದಿನಿಂತೆ  ಪಂದ್ಯದ ಮಧ್ಯೆ ಆಸ್ಟ್ರೇಲಿಯನ್ನರು ಸ್ಲೆಡ್ಜಿಂಗ್ ಮಾಡುವುದು ಸಾಮಾನ್ಯವಾಗಿತ್ತು. ಆದರೆ, ಇದಕ್ಕೆ ಪ್ರತಿತಂತ್ರ ಎಂಬಂತೆ ಟೀಂ ಇಂಡಿಯಾದ ಯಂಗ್ ವಿಕೆಟ್ ಕೀಪರ್ ರಿಷಭ್ ಪಂತ್ ಕಾಂಗಾರುಗಳಿಗೆ ಸ್ಲೆಡ್ಜಿಂಗ್ ಮಾಡಿ ಸುದ್ದಿಯಲ್ಲಿದ್ದಾರೆ.

ಪಂದ್ಯದ ಕೊನೆಯ ದಿನವಾದ ಇಂದು ಭಾರತೀಯ ಬೌಲರ್​ಗಳು ಹೇಗೆ ಅದ್ಭುತ ಪ್ರದರ್ಶನ ತೋರಿದರೊ ಅದೇರೀತಿ ವಿಕೆಟ್ ಹಿಂದೆ ನಿಂತು ರಿಷಭ್ ಪಂತ್ ಕೂಡ ಆಸೀಸ್ ಆಟಗಾರರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೆ ಪುಷ್ಠಿ ಎಂಬಂತೆ ಆಸೀಸ್ ಆಟಗಾರ ಪ್ಯಾಟ್ ಕಮಿನ್ಸ್​ ಬ್ಯಾಟ್ ಮಾಡುವ ವೇಳೆ ಪಂತ್ ಅವರು ಬೌಲರ್​ಗೆ ಸೂಚನೆ ನೀಡುವ ನೆಪದಲ್ಲಿ ಪರೋಕ್ಷವಾಗಿ ಬ್ಯಾಟ್ಸ್​ಮನ್​​ಗೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಕನ್ನಡಿಗ ರಾಹುಲ್​ರನ್ನು ತಂಡದಿಂದ ಕೈ ಬಿಡಬಾರದು: ಯಾಕಂತೀರಾ? ಈ ಸ್ಟೋರಿ ಓದಿ

ಅಶ್ವಿನ್ ಬೌಲಿಂಗ್​​ನ ಓವರ್​​ ಪೂರ್ತಿ ಪಂತ್ ಅವರು ಪ್ಯಾಟ್​​ಗೆ ಛೇಡಿಸಿದರು. ಈ ಸಂದರ್ಭ ಕಾಮೆಂಟ್ರಿ ಕೂಡ ನಿಲ್ಲಿಸಿದ್ದರಿಂದ ಪಂತ್ ಆಡಿದ ಒಂದೊಂದು ಮಾತು ಸ್ಪಷ್ಟವಾಗಿ ಸ್ಟಂಪ್ ಮೈಕ್​​ನಲ್ಲಿ ರೆಕಾರ್ಡ್​​ ಆಗಿವೆ. ಈ ಬಗ್ಗೆ ಅನೇಕ ಟ್ವೀಟ್​ಗಳು ಬಂದಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗುತ್ತಿವೆ.

 ಅದರಲ್ಲು ಪಂತ್ ಆಡಿರುವ ಮಾತುಗಳನ್ನು ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ. 'ಇಲ್ಲಿ ಎಲ್ಲರು ಪೂಜಾರ ಆಗಲು ಸಾಧ್ಯವಿಲ್ಲ, ನಿನ್ನ ತಂಡವನ್ನು ಉಳಿಸಿಕೊಳ್ಳಲು ಅಸಾಧ್ಯ, ಕಮಾನ್ ಪ್ಯಾಟ್, ಸಿಕ್ಸ್​ ಬಾರಿಸು' ಎಂದು ಪಂತ್ ಹೇಳಿದ್ದಾರೆ.

 ಈ ಪಂದ್ಯದಲ್ಲಿ ಒಟ್ಟು 11 ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್ ಅವರು ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಸಾಧನೆ ಮಾಡಿದ್ದಾರೆ. ಜೊತೆಗೆ ವಿಶ್ವದ ಇಬ್ಬರು ವಿಕೆಟ್ ಕೀಪರ್​ಗಳ ಸಾಧನೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ ಇಂಗ್ಲೆಂಡ್​ನ ಜಾಕ್ ರಸ್ಸಲ್ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ ಅವರು​ ಒಂದು ಪಂದ್ಯದಲ್ಲಿ 11 ಕ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಸದ್ಯ ಭಾರತದ ರಿಷಭ್ ಪಂತ್ ಕೂಡ ಇವರ ಸಾಲಿಗೆ ಸೇರಿದ್ದಾರೆ.

    First published:December 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ