• Home
  • »
  • News
  • »
  • trend
  • »
  • Rihanna: ಬಿಲಿಯನೇರ್ ಆದ ಪಾಪ್‌ ಗಾಯಕಿ ರಿಹಾನಾ; ಇವರೇ ವಿಶ್ವದ ಅತ್ಯಂತ ಶ್ರೀಮಂತ ಸಂಗೀತಗಾರ್ತಿ..!

Rihanna: ಬಿಲಿಯನೇರ್ ಆದ ಪಾಪ್‌ ಗಾಯಕಿ ರಿಹಾನಾ; ಇವರೇ ವಿಶ್ವದ ಅತ್ಯಂತ ಶ್ರೀಮಂತ ಸಂಗೀತಗಾರ್ತಿ..!

ಗಾಯಕಿ ರಿಹಾನ

ಗಾಯಕಿ ರಿಹಾನ

ರಿಹಾನಾಳ ನಿಜವಾದ ಹೆಸರು ರಾಬಿನ್ ಫೆಂಟಿ. ಈಕೆ ಐಷಾರಾಮಿ ಸರಕುಗಳ ಕಂಪನಿ LVMHನ ಸಹಭಾಗಿತ್ವದಲ್ಲಿ 2017ರಲ್ಲಿ ಫೆಂಟಿ ಬ್ಯೂಟಿಯನ್ನು ಪ್ರಾರಂಭಿಸಿದರು. ರಿಹಾನಾಳ ಬ್ಯೂಟಿ ಕಂಪನಿಯು ಎಲ್​ ವಿ ಎಂ ಎಚ್​ ಕಂಪನಿಯ ಅರ್ಧ ಮಾಲೀಕತ್ವವನ್ನು ಹೊಂದಿದ್ದು, ಇದು 50 ಸ್ಕಿನ್ ಟೋನ್​ಗಳ ಉತ್ಪಾದನಾ ವ್ಯಾಪ್ತಿಗೆ ಸಾಕಷ್ಟು ಹೆಸರುವಾಸಿಯಾಗಿದೆ.

ಮುಂದೆ ಓದಿ ...
  • Share this:

ರಿಹಾನಾ ಈಗ ಅಧಿಕೃತವಾಗಿ ಬಿಲಿಯನೇರ್ ಅಂದರೆ ನೂರು ಕೋಟಿಗೂ ಅಧಿಕ ಆಸ್ತಿಯ ಒಡತಿಯಾಗಿದ್ದು ಮತ್ತು ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಸಂಗೀತಗಾರ್ತಿ ಎಂದು ಫೋರ್ಬ್ಸ್‌ ನಿಯತಕಾಲಿಕೆ ವರದಿ ಮಾಡಿದೆ.


ಓಪ್ರಾ ವಿನ್​ಪ್ರೇ ನಂತರ ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಮನರಂಜಕಿ ರಿಹಾನಾ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಸಂಗೀತವು ರಿಹಾನ್ನಾರ ಸಂಪತ್ತಿನ ಪ್ರಾಥಮಿಕ ಮೂಲವಲ್ಲ. ಪಾಪ್ ತಾರೆ 1.7 ಶತಕೋಟಿ ಡಾಲರ್‌ (£ 1.2 ಶತಕೋಟಿ) ಮೌಲ್ಯದ ಆಸ್ತಿ ಹೊಂದಿದ್ದು, ಈ ಪೈಕಿ ಅಂದಾಜು 1.4 ಶತಕೋಟಿ ಡಾಲರ್‌ ಆಸ್ತಿ ಆಕೆಯ ಫೆಂಟಿ ಬ್ಯೂಟಿ ಸೌಂದರ್ಯವರ್ಧಕ ಕಂಪನಿಯ ಮೂಲದಿಂದಲೇ ಬಂದಿದೆ ಎಂದು ತಿಳಿದುಬಂದಿದೆ.


ಫೆಂಟಿ ಬ್ಯೂಟಿ ಕಾಸ್ಮೆಟಿಕ್ಸ್ ಕಂಪೆನಿಯಲ್ಲಿ ರಿಹಾನಾ 50% ಪಾಲನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಇನ್ನು, ರಿಹಾನಾಳ ಉಳಿದ ಆಸ್ತಿಯ ಭಾಗವು ಹೆಚ್ಚಾಗಿ ಒಳ ಉಡುಪು ಕಂಪನಿ, ಸ್ಯಾವೇಜ್ ಎಕ್ಸ್ ಫೆಂಟಿ, ಅಂದಾಜು 270 ಮಿಲಿಯನ್ ಡಾಲರ್‌ ಮೌಲ್ಯದ್ದಾಗಿದೆ. ಮತ್ತು ಸಂಗೀತ ಹಾಗೂ ನಟನೆಯಿಂದಲೂ ರಿಹಾನಾ ಸಾಕಷ್ಟು ಹಣ ಗಳಿಸುತ್ತಿದ್ದಾರೆ.


ರಿಹಾನಾಳ ನಿಜವಾದ ಹೆಸರು ರಾಬಿನ್ ಫೆಂಟಿ. ಈಕೆ ಐಷಾರಾಮಿ ಸರಕುಗಳ ಕಂಪನಿ LVMHನ ಸಹಭಾಗಿತ್ವದಲ್ಲಿ 2017ರಲ್ಲಿ ಫೆಂಟಿ ಬ್ಯೂಟಿಯನ್ನು ಪ್ರಾರಂಭಿಸಿದರು. ರಿಹಾನಾಳ ಬ್ಯೂಟಿ ಕಂಪನಿಯು ಎಲ್​ ವಿ ಎಂ ಎಚ್​ ಕಂಪನಿಯ ಅರ್ಧ ಮಾಲೀಕತ್ವವನ್ನು ಹೊಂದಿದ್ದು, ಇದು 50 ಸ್ಕಿನ್ ಟೋನ್​ಗಳ ಉತ್ಪಾದನಾ ವ್ಯಾಪ್ತಿಗೆ ಸಾಕಷ್ಟು ಹೆಸರುವಾಸಿಯಾಗಿದೆ.


ಆ ಸಮಯದಲ್ಲಿ, "ಪ್ರತಿಯೊಂದು ವಿಧದ ಮಹಿಳೆಯರಿಗೂ" ಈ ಸೌಂದರ್ಯವರ್ಧಕ ಕಂಪನಿಯ ಉತ್ಪನ್ನಗಳು ವರ್ಕ್ ಆಗುತ್ತದೆ. ಇದರ ಚಮತ್ಕಾರವನ್ನು "ಫೆಂಟಿ ಎಫೆಕ್ಟ್" ಎಂದು ಕರೆಯಲ್ಪಡುವುದಕ್ಕೆ ಕಾರಣವಾಯಿತು, ಫೆಂಟಿಯ ಎದುರಾಗಿ ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳು ಮೇಕಪ್ ಉತ್ಪನ್ನಗಳಲ್ಲಿ ಹೆಚ್ಚೆಚ್ಚು ಶೇಡ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದವು. ಈ ಬ್ಯೂಟಿ ಉದ್ಯಮ ಮೊದಲ ವರ್ಷದಲ್ಲಿ 550 ಮಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಆದಾಯವನ್ನು ತಂದುಕೊಟ್ಟಿತು ಎಂದು LVMH ಹೇಳಿದೆ.


ಆದರೆ, ರಿಹಾನ್ನಾರ ಎಲ್ಲಾ ವ್ಯಾಪಾರೋದ್ಯಮಗಳು ಫಲ ನೀಡಲಿಲ್ಲ. ಈ ವರ್ಷದ ಆರಂಭದಲ್ಲಿ, 33 ವರ್ಷದ ರಿಹಾನ್ನಾ LVMHನೊಂದಿಗೆ ತನ್ನ ಫೆಂಟಿ ಫ್ಯಾಶನ್ ಲೇಬಲ್ ಅನ್ನು ಎರಡು ವರ್ಷಗಳ ಉತ್ಪಾದನೆಯ ನಂತರ ಮುಚ್ಚಲು ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಸಹೋದರರಿಗೆ ಇಲ್ಲ ಸಚಿವ ಸ್ಥಾನ; 17 ವರ್ಷಗಳ ಬಳಿಕ ಕೈತಪ್ಪಿದ ಮಂತ್ರಿಗಿರಿ!


250 ಮಿಲಿಯನ್‌ಗೂ ಅಧಿಕ ಅಲ್ಬಂ ರೆಕಾರ್ಡ್‌ಗಳ ಮಾರಾಟದೊಂದಿಗೆ ಬಾರ್ಬಡಿಯನ್ ಮೂಲದ ಗಾಯಕಿ ರಿಹಾನಾ ಸಾರ್ವಕಾಲಿಕವಾಗಿ ಹೆಚ್ಚು ಮಾರಾಟವಾದ ಸಂಗೀತ ಕಲಾವಿದರಲ್ಲಿ ಒಬ್ಬರು. ಆದರೆ 2016 ರ ಆ್ಯಂಟಿ ನಂತರ ಯಾವುದೇ ಸಂಗೀತ ಆಲ್ಬಂ ಅನ್ನು ಬಿಡುಗಡೆ ಮಾಡಿಲ್ಲ. ಆದರೆ, ಇತ್ತೀಚೆಗೆ ತನ್ನ ಬಾಯ್‌ಫ್ರೆಂಡ್‌ ಹಾಗೂ ರ‍್ಯಾಪರ್‌ A$AP ರಾಕಿಯೊಂದಿಗೆ ಮ್ಯೂಸಿಕ್ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದು ಕಂಡುಬಂದಿದೆ. ಅಂಬ್ರೆಲ್ಲಾ ಹಾಗೂ ಲವ್‌ ದ ವೇ ಯು ಲೈ ಹಾಡುಗಳು ರಿಹಾನಾಳ ಖ್ಯಾತ ಆಲ್ಬಂಗಳಲ್ಲಿ ಒಂದಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: