• Home
  • »
  • News
  • »
  • trend
  • »
  • Viral Video: ಸತ್ತ ಮೀನು ಜೀವಂತ ಎದ್ದು ನಿಂತಾಗ..! ಇದು ಕತೆಯಲ್ಲ ಜೀವನ

Viral Video: ಸತ್ತ ಮೀನು ಜೀವಂತ ಎದ್ದು ನಿಂತಾಗ..! ಇದು ಕತೆಯಲ್ಲ ಜೀವನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral Video: ವೆನ್ ಎಂಬ ವ್ಯಕ್ತಿ ಇನ್ನೇನು ತವಾದಲ್ಲಿ ಮೀನನ್ನು ಹುರಿಯಬೇಕು ಎಂದುಕೊಳ್ಳುವಾಗ ತವಾದಲ್ಲಿದ್ದ ಮೀನು ಮಿಸುಕಾಡುತ್ತಾ ಅತ್ತಿತ್ತ ಚಲಿಸಿರುವುದು ಅವರ ಪಾಲಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

  • Share this:

ಪೌರಾಣಿಕ (Mythological stories) ಕತೆಗಳಲ್ಲಿ ಸತ್ತ ಮನುಷ್ಯರ ಮೇಲೆ ಋಷಿಗಳು ಮಂತ್ರದ ನೀರು ಚಿಮುಕಿಸುತ್ತಿದ್ದಂತೆಯೇ (Sprinkle water) ಮೇಲೇಳುವುದನ್ನು ನಾವೆಲ್ಲ ಓದಿಯೇ ಇರುತ್ತೇವೆ. ಆದರೆ, ಈ ಕಲಿಗಾಲದಲ್ಲಿ ಇಂತಹ ಪವಾಡ ಮಾಡಲು ಸಾಧ್ಯವೇ ಇಲ್ಲವಲ್ಲ..? ಹೀಗಿದ್ದೂ ಮೀನು ಪ್ರಿಯರ ಮನೆಯಲ್ಲೊಂದು ಪವಾಡ ನಡೆದಿದೆ. ಅದೂ ಅವರ ಫ್ರೈಯಿಂಗ್ ತವಾ (Frying tawa) ಮೇಲೆ..!ಮಾರುಕಟ್ಟೆಯಿಂದ  (Market ) ಕೊಂಡು ತಂದ ಮೀನನ್ನು(Fish) ಶುಚಿಗೊಳಿಸಿ, ಅದರ ಮೈಗೆಲ್ಲ ಮಸಾಲೆ ಹಚ್ಚಿ ಇನ್ನೇನು ಪ್ರೈಯಿಂಗ್ ತವಾ ಮೇಲೆ ಹುರಿಯಬೇಕು ಎನ್ನುವಾಗ ಮೀನೊಂದು ಜೀವ ಬಂದು ಮಿಸುಕಾಡಿದರೆ ಮೀನು ಪ್ರಿಯರಿಗೆ ಏನಾಗಬೇಡ..? ಇಂತಹದೊಂದು ದೃಶ್ಯ ಟಿಕ್ ಟಾಕ್‌ನಲ್ಲಿ ವಿಪರೀತ ವೈರಲ್(viral) ಆಗಿದೆ.


ದೆವ್ವದ ಮೀನು ಎಂದು ನಾಮಕರಣ
ನೀವೇನಾದರೂ ಹಾರರ್ ಸಿನಿಮಾ ಪ್ರಿಯರಾಗಿದ್ದು, ದೆವ್ವ, ಭೂತಗಳ ಬಗ್ಗೆ ನಂಬಿಕೆ ಇದ್ದವರಾಗಿದ್ದರೆ ಟಿಕ್ ಟಾಕ್‌ನಲ್ಲಿ ವೈರಲ್ ಆಗಿರುವ ದೃಶ್ಯವು ನಿಮ್ಮ ಬೆನ್ನು ಮೂಳೆಯಲ್ಲಿ ಚಳಿ ಹುಟ್ಟಿಸುವುದು ನಿಶ್ಚಿತ. ಸದ್ಯ ವೈರಲ್ ಆಗಿರುವ ದೃಶ್ಯದಲ್ಲಿ ದೆವ್ವ, ಭೂತಗಳಿವೆ ಎಂಬುದಕ್ಕೆ ಸಾಕ್ಷಿ ಇರುವಂತೆ ಕಾಣಿಸುತ್ತಿದೆ. ಅದರಲ್ಲೂ ಮೀನಿನ ರೂಪದಲ್ಲಿ!!! ಇದಕ್ಕೆ ನೆಟ್ಟಿಗರು ದೆವ್ವದ ಮೀನು ಎಂದು ನಾಮಕರಣ ಮಾಡಿದ್ದಾರೆ.


ಇದನ್ನೂ ಓದಿ: ಆನೆ ಮನುಷ್ಯನನ್ನು ಅಟ್ಟಾಡಿಸಿಕೊಂಡು ಬಂದ್ರೆ ಹೇಗಿರುತ್ತೆ? ನಿಜವಾದ ಘಟನೆಯ ವಿಡಿಯೋ ನೋಡಿ...


ವಿಡಿಯೋ ನೋಡಿ:ತವಾದಲ್ಲಿದ್ದ ಮೀನು ಮಿಸುಕಾಡಿದೆ
ಈ ಘಟನೆ ಚೀನಾದ ಜೆಂಗ್ ಜೋದಿಂದ ವರದಿಯಾಗಿದ್ದು, ವೆನ್ ಎಂಬ ವ್ಯಕ್ತಿ ಇನ್ನೇನು ತವಾದಲ್ಲಿ ಮೀನನ್ನು ಹುರಿಯಬೇಕು ಎಂದುಕೊಳ್ಳುವಾಗ ತವಾದಲ್ಲಿದ್ದ ಮೀನು ಮಿಸುಕಾಡುತ್ತಾ ಅತ್ತಿತ್ತ ಚಲಿಸಿರುವುದು ಅವರ ಪಾಲಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಕುರಿತು ವರದಿ ಮಾಡಿರುವ ಲ್ಯಾಡ್ ಬೈಬಲ್, ಘಟನೆಯಿಂದ ವೆನ್ ಮೂಕವಿಸ್ಮಿತರಾಗಿದ್ದಾರೆ. ತಾನೆಂದೂ ಇಂತಹ ಘಟನೆಗೆ ಸಾಕ್ಷಿಯಾಗಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಮೀನು ಸಂಪೂರ್ಣ ನಿಸ್ತೇಜವಾಗುವವರೆಗೂ ಕಾದಿರುವ ವೆನ್, ನಂತರವಷ್ಟೇ ಮೀನಿನ ಫ್ರೈ ಅನ್ನು ತಮ್ಮ ಪತ್ನಿಗೆ ಬಡಿಸಿದ್ದಾರೆ.


ನೈಜ ಕಾರಣ ಇಲ್ಲ
ಈ ಟಿಕ್ ಟಾಕ್ ವಿಡಿಯೋ ವೀಕ್ಷಕರನ್ನು ಇನ್ನಿಲ್ಲದ ಗೊಂದಲಕ್ಕೆ ನೂಕಿದೆ. ಬಹುತೇಕರು ಈ ಘಟನೆಗೆ ನೈಜ ಕಾರಣ ಹೇಳುವಲ್ಲಿ ವಿಫಲರಾಗಿದ್ದಾರೆ. ಕೆಲವರು ಈ ಘಟನೆಯನ್ನು ಕೊಂಚ ವಾಸ್ತವಗೊಳಿಸಿ, ಏನಾಗಿರಬಹುದು ಎಂದು ಹೇಳಲು ಬಯಸಿದ್ದಾರೆ. ಒಬ್ಬ ವೀಕ್ಷಕರು ಈ ಘಟನೆಯ ಕುರಿತು ವಿವರಿಸಲು ಪ್ರಯತ್ನಿಸಿದ್ದು, ಮೀನು ಸಾವನ್ನಪ್ಪಿದ್ದರೂ, ಮೀನಿನಿಂದ ಅದರ ಮೂಳೆಯನ್ನು ಹೊರತೆಗೆದಿಲ್ಲ. ಹೀಗಾಗಿ ಶಾಖದ ಸಂಪರ್ಕಕ್ಕೆ ಬಂದಿರುವುದರಿಂದ ಮೀನಿನ ನರಗಳು ಜೀವಂತಗೊಂಡು, ಮೀನು ಮಿಸುಕಾಡಿರಬಹುದು ಎಂದು ವ್ಯಾಖ್ಯಾನಿಸಿದ್ದಾರೆ.


ಅಕ್ಟೋಪಸ್ ಚಲಿಸಿತ್ತು
ತನ್ನ ಮಾತಿಗೆ ನಿದರ್ಶನವೊಂದನ್ನು ನೀಡಿರುವ ವೀಕ್ಷಕ, ಸೀಫುಡ್ ರೆಸ್ಟೋರೆಂಟ್ ಒಂದರಲ್ಲಿ ಭಟ್ಟ ಆಕ್ಟೋಪಸ್ ಅನ್ನು ತುಂಡು ತುಂಡಾಗಿ ಕತ್ತರಿಸಿದ್ದನಾದರೂ, ಅದರ ಗ್ರಹಣಾಂಗಗಳನ್ನು ಬೇರ್ಪಡಿಸಿರಲಿಲ್ಲ. ಅಡುಗೆ ಸಿದ್ಧಗೊಳಿಸಲು ಹೊರಟಾಗ ಅಕ್ಟೋಪಸ್ ಚಲಿಸಲು ಆರಂಭಿಸಿತು ಎಂದು ವಿವರಿಸಿದ್ದಾನೆ. ಆದರೆ, ಮತ್ತೊಬ್ಬ ವೀಕ್ಷಕ ಈ ದೃಶ‍್ಯದ ಕುರಿತು ಲಘು ಹಾಸ್ಯ ಮಾಡಿದ್ದು, “ಇಂತಹ ಮೀನುಗಳನ್ನು ಖರೀದಿಸುವುದೇ ಉತ್ತಮ. ಯಾಕೆಂದರೆ, ಇಂಥ ಮೀನುಗಳು ತಾಜಾ ಆಗಿರುತ್ತವೆ” ಎಂದಿದ್ದಾನೆ.


ಇದನ್ನೂ ಓದಿ: Viral Video: ಎಮ್ಮೆ ಅಂತ ಬೈಯುವ ಮುನ್ನ ಒಮ್ಮೆ ಯೋಚಿಸಿ ನೋಡಿ, ಮನುಷ್ಯರಂತೆ ಎಮ್ಮೆಗೂ ಇದೆ ಬುದ್ದಿವಂತಿಕೆ


2018ರಲ್ಲೂ ಇಂತಹುದೇ ಘಟನೆ
ನೀವು ಘಟನೆಯಿಂದ ಸಂಪೂರ್ಣ ತಬ್ಬಿಬ್ಬಾಗುವ ಮೊದಲು, ಇಂತಹ ಘಟನೆಗಳಿಗೆ ತಾರ್ಕಿಕ ಕಾರಣಗಳೂ ಇರುತ್ತವೆ ಎಂಬುದನ್ನು ಅರಿತುಕೊಳ್ಳುವುದು ಒಳ್ಳೆಯದು. 2018ರಲ್ಲೂ ಇಂತಹುದೇ ಘಟನೆ ಸಂಭವಿಸಿತ್ತು. ಆಗ ಡಿಸ್ಕವರಿ ನ್ಯೂಸ್‌ನೊಂದಿಗೆ ಮಾತನಾಡಿದ್ದ ರಸಾಯನ ಶಾಸ್ತ್ರ ಶಿಕ್ಷಕರೊಬ್ಬರು, ಯಾವುದೇ ಜೀವಿ ಸತ್ತ ನಂತರವೂ ಅದರ ಬಹುತೇಕ ಜೀವಕೋಶಗಳು ಜೀವಂತವಾಗಿರುತ್ತವೆ. ಕೋಶಗಳ ಚಯಾಪಚಯ ಕ್ರಿಯೆಗಳು ಹಾಗೆಯೇ ಇರುತ್ತವೆ. ನರಕೋಶಗಳಲ್ಲಿರುವ ಪೊರೆಯ ವಿದ್ಯುತ್ ಶಕ್ತಿ ಅಥವಾ ಸಾಮರ್ಥ್ಯವೂ ಹಾಗೆ ಇರುವ ಸಾಧ‍್ಯತೆ ಇರುತ್ತದೆ” ಎಂದು ಹೇಳಿದ್ದರು. ಮೇಲಿನ ವಿವರಣೆಯಿಂದ ನೀವು ರಾತ್ರಿ ನಿರಾತಂಕವಾಗಿ ನಿದ್ರೆ ಮಾಡುತ್ತೀರಲ್ಲವೆ?

Published by:vanithasanjevani vanithasanjevani
First published: