ನಮ್ಮಲ್ಲಿ ಹೆಚ್ಚಿನವರು ಈ ರೆಸ್ಟೋರೆಂಟ್ (Restaurant) ಗಳಿಗೆ ಮತ್ತು ಕೆಫೆಗಳಿಗೆ (Cafe)ಹೋಗಿ ಕುಳಿತುಕೊಂಡು ತಿನ್ನುವುದನ್ನು ತುಂಬಾನೇ ಆನಂದಿಸುತ್ತಾರೆ. ಆದರೆ ಏನ್ ಮಾಡೋದು? ಈಗ ಎಲ್ಲಾ ಕಡೆ ಈ ತಿಂಡಿಗಳು ಮತ್ತು ಊಟದ ಬೆಲೆ ಸಹ ತುಂಬಾನೇ ಹೆಚ್ಚಾಗಿದ್ದು, ಜನರು ರೆಸ್ಟೋರೆಂಟ್ ಗಳಿಗೆ ಹೋಗುವ ಮುಂಚೆ ಅವರ ವ್ಯಾಲೆಟ್ ನಲ್ಲಿ ಎಷ್ಟು ಹಣವಿದೆ ಅಂತ ನೋಡಿಕೊಳ್ಳುವ ಹಾಗಾಗಿದೆ ಅಂತ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಈ ರೆಸ್ಟೋರೆಂಟ್ ಗಳಲ್ಲಿ ಹೆಚ್ಚಾದ ಬೆಲೆಗಳ ಬಗ್ಗೆ ದೂರುತ್ತಾರೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಊಟದ ಬಿಲ್ ಗೆ ಸೇರಿಸಲಾಗುವ ತೆರಿಗೆಯನ್ನು ಸಹ ತುಂಬಾನೇ ದೂರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬಜೆಟ್ ಸ್ನೇಹಿ ಸ್ಥಳದಲ್ಲಿ ಒಂದು ಊಟಕ್ಕೆ 1,000-1,200 ರೂಪಾಯಿ ಖರ್ಚಾಗಬಹುದು.
ಆದರೆ ಸುಮಾರು ನಾಲ್ಕು ದಶಕಗಳ ಹಿಂದೆ ಬೆಲೆಯ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಸುಮಾರು 37 ವರ್ಷಗಳ ಹಿಂದೆ ಅಂದರೆ 1985 ರಲ್ಲಿ ಹೊಟ್ಟೆ ತುಂಬುವಷ್ಟು ಊಟ ಮಾಡಿದರೆ ಬಿಲ್ ಎಷ್ಟಾಗುತ್ತಿತ್ತು ಅಂತ ಯೋಚಿಸಿದ್ದೀರಾ? ನಿಮ್ಮ ಉತ್ತರ ‘ಇಲ್ಲ’ ಅಂತಾದರೆ ಬನ್ನಿ ಇಲ್ಲಿ ಒಂದು ಹಳೆಯ ಊಟದ ಬಿಲ್ ಇದೆ ನೋಡಿ.
37 ವರ್ಷಗಳ ಹಿಂದಿನ ಊಟದ ಬಿಲ್ ಅನ್ನು ಹಂಚಿಕೊಂಡ ರೆಸ್ಟೋರೆಂಟ್
ಒಂದು ರೆಸ್ಟೋರೆಂಟ್ 1985 ರ ಹಳೆಯ ಬಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ ಮತ್ತು ಇದು ಅನೇಕ ಇಂಟರ್ನೆಟ್ ಬಳಕೆದಾರರನ್ನು ಆಘಾತಕ್ಕೀಡು ಮಾಡಿದೆ ಅಂತ ಹೇಳಬಹುದು.
ಮೂಲತಃ ಆಗಸ್ಟ್ 12, 2013 ರಂದು ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ಈಗ ಮತ್ತೆ ವೈರಲ್ ಆಗಿದೆ. ದೆಹಲಿಯ ಲಜಪತ್ ನಗರ ಪ್ರದೇಶದಲ್ಲಿರುವ ಲಜೀಜ್ ರೆಸ್ಟೋರೆಂಟ್ ಆಂಡ್ ಹೋಟೆಲ್ ಡಿಸೆಂಬರ್ 20, 1985 ರ ದಿನಾಂಕದ ಒಂದು ಹಳೆಯ ಬಿಲ್ ಅನ್ನು ಹಂಚಿಕೊಂಡಿದೆ. ಬಿಲ್ ನಲ್ಲಿ ತೋರಿಸಿರುವಂತೆ ಗ್ರಾಹಕರು ಶಾಹಿ ಪನ್ನೀರ್, ದಾಲ್ ಮಖ್ನಿ, ರೈತಾ ಮತ್ತು ಕೆಲವು ಚಪಾತಿಗಳ ಒಂದು ಪ್ಲೇಟ್ ಅನ್ನು ಆರ್ಡರ್ ಮಾಡಿದ್ದರು.
ಮೊದಲ ಎರಡು ಭಕ್ಷ್ಯಗಳಿಗೆ ಕ್ರಮವಾಗಿ 8 ರೂಪಾಯಿ, ಇತರ ಎರಡು ಭಕ್ಷ್ಯಗಳಿಗೆ ಕ್ರಮವಾಗಿ 5 ಮತ್ತು 6 ರೂಪಾಯಿ ಬೆಲೆ ಇತ್ತು. ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಬಿಲ್ ನ ಒಟ್ಟು ಮೊತ್ತ ಕೇವಲ 26 ರೂಪಾಯಿ. ಇದು ಇಂದಿನ ಸಮಯದಲ್ಲಿ ಒಂದು ದೊಡ್ಡ ಚಿಪ್ಸ್ ಪ್ಯಾಕೆಟ್ ನ ಬೆಲೆಗೆ ಸಮನಾಗಿರುತ್ತದೆ.
ಈ ಹಳೆಯ ಬಿಲ್ ನೆಟ್ಟಿಗರಿಗೆ ಶಾಕ್ ನೀಡಿದೆ..
ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ, ಈ ಪೋಸ್ಟ್ ಗೆ 1,800 ಕ್ಕೂ ಹೆಚ್ಚು ಲೈಕ್ ಗಳು ಲಭಿಸಿವೆ ಮತ್ತು 587 ಬಾರಿ ಇದನ್ನು ಮರು ಹಂಚಿಕೊಳ್ಳಲಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಓ ದೇವರೇ.. ಆಗ ತುಂಬಾನೇ ಅಗ್ಗವಾಗಿತ್ತು, ಹೌದು, ಆ ದಿನಗಳಲ್ಲಿ ಹಣದ ಮೌಲ್ಯವು ಬಹಳ ಹೆಚ್ಚಾಗಿತ್ತು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಪೋಸ್ ಮಾಡೋಕೆ ಬಂದವ ಸಮುದ್ರಕ್ಕೆ ಹಾರಿದ್ದೇಕೆ? ವಿಡಿಯೋ ನೋಡಿ ಸಖತ್ ಫನ್ನಿ ಇದೆ!
ಇನ್ನೊಬ್ಬ ಬಳಕೆದಾರರು "ಹಳೆಯ ಬಿಲ್ ಅನ್ನು ಹಾಗೆ ಸಂಗ್ರಹಿಸಿಟ್ಟು ಕೊಂಡಿದ್ದಕ್ಕಾಗಿ ನಿಮ್ಮನ್ನು ಹೊಗಳಲೇಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.
ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಇಂಟರ್ನೆಟ್ ಬಳಕೆದಾರರು
ಹಳೆಯ ದಿನಗಳನ್ನು ನೆನಪಿಸಿಕೊಂಡು, ಇಂಟರ್ನೆಟ್ ಬಳಕೆದಾರರೊಬ್ಬರು "ಆಹಾ! ಆ ದಿನಗಳು ಎಷ್ಟು ಚೆನ್ನಾಗಿದ್ದವು. ನಾನು 1968 ರಲ್ಲಿ ಅಡ್ಯಾರ್ ನಲ್ಲಿ 20 ಲೀಟರ್ ಪೆಟ್ರೋಲ್ ಗೆ 18 ರೂಪಾಯಿ 60 ಪೈಸೆ ಪಾವತಿಸುತ್ತಿದ್ದೆ. ಟೈರ್ ಗಳಲ್ಲಿನ ಗಾಳಿಯನ್ನು ಪರೀಕ್ಷಿಸಲು ಹುಡುಗನಿಗೆ 10 ಪೈಸೆ ನೀಡುತ್ತಿದ್ದೆ. ಪೆಟ್ರೋಲ್ ಬಂಕ್ ಇನ್ನೂ ಆಂಧ್ರ ಮಹಿಳಾ ಸಭಾದ ಎದುರು ಇದೆ. 1972 ರಲ್ಲಿ ಎಸ್ಪಿಎಸ್ ನಲ್ಲಿ ನನ್ನ ಸಂಬಳ ತಿಂಗಳಿಗೆ 550 ರೂಪಾಯಿ ಆಗಿತ್ತು" ಎಂದು ಇನ್ನೊಬ್ಬರು ಹೇಳಿದರು.
Story link: Restaurant Shares Bill From 1985, Shocks Internet Users (ndtv.com)
Srinivas Reddy
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ