ಕೊಲಂಬಿಯಾ ಪೊಲೀಸರು ತಮ್ಮ ಅಧಿಕೃತ ಫೇಸ್‍ಬುಕ್ ಪುಟದಲ್ಲಿ, ಇಬ್ಬರು ದುಷ್ಕರ್ಮಿಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಅವರು ಹುಡುಕಿಕೊಟ್ಟವರಿಗೆ 3 ಮಿಲಿಯನ್ ಡಾಲರ್ ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದಾರೆ. ಅದಕ್ಕೂ ಮಾರ್ಕ್ ಜೂಕರ್ಬರ್ಗ್ಗೂ ಏನು ಸಂಬಂಧ ಅಂತೀರಾ? ಆ ಚಿತ್ರದಲ್ಲಿರುವ ಒಬ್ಬ ದುಷ್ಕರ್ಮಿ ಮಾರ್ಕ್ ಜೂಕರ್‌ಬರ್ಗ್ ಅವರನ್ನು ಹೋಲುತ್ತಾನೆ!
ಮಾರ್ಕ್ ಜೂಕರ್‌ಬರ್ಗ್ ಯಾರಿಗೆ ಗೊತ್ತಿಲ್ಲ? ವಿಶ್ವದ ಅತೀ ದೊಡ್ಡ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾದ ಫೇಸ್‍ಬುಕ್ ಸಂಸ್ಥಾಪಕ, ಅಮೆರಿಕನ್ ಮೀಡಿಯಾ ಮ್ಯಾಗ್ನೆಟ್, ಇಂಟರ್ನೆಟ್ ಉದ್ಯಮಿ ಮತ್ತು ದಾನಿ ಅವರು. ಅಷ್ಟು ಜನಪ್ರಿಯ ವ್ಯಕ್ತಿಯಾಗಿದ್ದರೂ, ಇದೀಗ ತಾವೇ ಸ್ಥಾಪಿಸಿದ ವೇದಿಕೆಯಲ್ಲಿ (ಅನಪೇಕ್ಷಿತ) ಗಮನ ಸೆಳೆಯುತ್ತಿದ್ದಾರೆ! ಅದಕ್ಕೆ ಕಾರಣ ಕೊಲಂಬಿಯಾ ಪೊಲೀಸರು ಹಾಕಿರುವ ಒಂದು ಪೋಸ್ಟ್! ಹಾಗಂತ ಮಾರ್ಕ್ ಜೂಕರ್‌ಬರ್ಗ್ ಯಾವುದೋ ತಪ್ಪು ಕೆಲಸ ಮಾಡಿದ್ದಾರೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಕೊಲಂಬಿಯಾ ಪೊಲೀಸರು ತಮ್ಮ ಅಧಿಕೃತ ಫೇಸ್‍ಬುಕ್ ಪುಟದಲ್ಲಿ, ಇಬ್ಬರು ದುಷ್ಕರ್ಮಿಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಅವರನ್ನು ಹುಡುಕಿಕೊಟ್ಟವರಿಗೆ 3 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದಾರೆ. ಅದಕ್ಕೂ ಮಾರ್ಕ್ ಜೂಕರ್ಬರ್ಗ್ಗೂ ಏನು ಸಂಬಂಧ ಅಂತೀರಾ? ಆ ಚಿತ್ರದಲ್ಲಿರುವ ಒಬ್ಬ ದುಷ್ಕರ್ಮಿ ಮಾರ್ಕ್ ಜೂಕರ್‌ಬರ್ಗ್ ಅವರನ್ನು ಹೋಲುತ್ತಾನೆ!
“ ಅವರನ್ನು ಹುಡುಕಲು ನಮಗೆ ಸಹಾಯ ಮಾಡಿ! ಅಧ್ಯಕ್ಷ ಇವಾನ್ ಡ್ಯೂಕ್ ಮತ್ತು ಅವರ ಸಹವರ್ತಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಹೆಲಿಕಾಫ್ಟರ್ ಮೇಲೆ ದಾಳಿ ಮಾಡಿದವರ ಚಿತ್ರಗಳಿವು. ಸುಮಾರು 3.000 ಡಾಲರ್ ಬಹುಮಾನ ನೀಡಲಾಗುವುದು. 3213945367 ಅಥವಾ 3143587212 ಸಂಪರ್ಕಿಸಬೇಕಾದ ಸಂಖ್ಯೆಗಳು” ಇದು ಪೋಸ್ಟ್‌ನ ಸ್ಥೂಲ ಅನುವಾದ. ಅದೇನೇ ಇದ್ದರೂ, ದುಷ್ಕರ್ಮಿಗಳ ಚಿತ್ರದಲ್ಲಿ ಒಂದು ಚಿತ್ರ ಮಾತ್ರ ಎಲ್ಲರ ಗಮನ ಸೆಳೆಯುವಲ್ಲಿ ಸಫಲವಾಗಿದೆ. ಕಾರಣವಿಷ್ಟೆ, ಆ ಫೋಟೋ, ಮಾರ್ಕ್ ಜೂಕರ್‌ಬರ್ಗ್ ಅನ್ನು ಕೆಟ್ಟದಾಗಿ ಚಿತ್ರಿಸಿರುವ ಚಿತ್ರದಂತೆ ಕಾಣುತ್ತಿದೆ.
ಇದುವರೆಗೆ ಫೋಟೋಗೆ 66,000 ಪ್ರತಿಕ್ರಿಯೆಗಳು ಬಂದಿದ್ದು, 22,000 ಹಂಚಿಕೆಗಳಾಗಿವೆ- ಹಲವಾರು ಜನರು ಜೂಕರ್‌ಬರ್ಗ್ ಫೋಟೋವನ್ನು ಪೋಸ್ಟ್ ಮಾಡಿ, ಅವರನ್ನು ಟ್ಯಾಗ್ ಮಾಡಿ, ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ.
ಈತನ ಅಪರಾಧವೇನು?
ಅಲ್‍ಜಜೀರಾದ ವರದಿಯ ಪ್ರಕಾರ, ಶುಕ್ರವಾರ , ಕೊಲಂಬಿಯಾದ ಅಧ್ಯಕ್ಷ ಇವಾನ್ ಡ್ಯೂಕ್ ಅವರು, ಕಟಟುಂಬೋ ಪ್ರದೇಶದ ಮೂಲಕ ರಾಷ್ಟ್ರದ ನೊರ್ಟೆ ಡಿ ಸ್ಯಾಂಟಂಡೆರ್ ಪ್ರಾಂತ್ಯದ ರಾಜಧಾನಿ ಕುಕುಟಾ ನಗರದ ಕಡೆಗೆ, ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಆ ಹೆಲಿಕಾಫ್ಟರ್‌ಗೆ ಗುಂಡಿನ ಮಳೆಗೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ಇವಾನ್ ಡ್ಯೂಕ್ ಅವರ ಜೊತೆಗೆ, ಆ ಹೆಲಿಕಾಫ್ಟರ್‌ನಲ್ಲಿ ರಕ್ಷಣಾ ಸಚಿವ ಡಿಯಾಗೋ ಮೊಲಾನೋ, ಆಂತರಿಕ ಸಚಿವ ಡ್ಯಾನಿಯಲ್ ಪ್ಯಲಾಶಿಯಸ್ ಮತ್ತು ನೊರ್ಟೆ ಡಿ ಸ್ಯಾಂಟಂಡೆರ್ ಪ್ರಾಂತ್ಯದ ಗವರ್ನರ್ ಕೂಡ ಇದ್ದರು.
“ಇದೊಂದು ಹೇಡಿತನದ ದಾಳಿ, ನೀವು ಅಧ್ಯಕ್ಷರ ಹೆಲಿಕಾಫ್ಟರ್‌ನಲ್ಲಿ ಬುಲೆಟ್ ರಂಧ್ರಗಳನ್ನು ನೋಡಬಹುದು” ಎಂದು ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಲ್‍ಜಜೀರಾಗೆ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ