• Home
 • »
 • News
 • »
 • trend
 • »
 • ಸಮುದ್ರ ಆಳದಲ್ಲಿ ಪತ್ತೆಯಾಯ್ತು 14 ಕಾಲಿನ ಹೊಸ ಜೀವಿ!

ಸಮುದ್ರ ಆಳದಲ್ಲಿ ಪತ್ತೆಯಾಯ್ತು 14 ಕಾಲಿನ ಹೊಸ ಜೀವಿ!

ಸಮುದ್ರ ಜಿರಳೆ

ಸಮುದ್ರ ಜಿರಳೆ

sea cockroach: ಪಶ್ಚಿಮ ಜಾವಾ ಇಂಡೋನೇಷ್ಯಾ ಬ್ಯಾಂಟಿನ್​​ ಸಮುದ್ರದಲ್ಲಿ ಹೊಸ ಜೀವಿ ಪತ್ತೆಯಾಗಿದೆ. ಏಡಿ ಹಾಗೂ ಜಿರಳೆಯಂತೆ ಹೋಲುವ ಈ ಜಿವಿಗೆ 14 ಕಾಲುಗಳಿವೆ. ಹೊಸ ಜೀವಿಯ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು. ಅನೇಕರ ಅಚ್ಚರಿಗೆ ಕಾರಣವಾಗಿದೆ.

 • Share this:

  ಭೂಮಿ ಮೇಲೆ ಎಷ್ಟು ಜೀವರಾಶಿಗಳಿವೆಯೋ ಅದಕ್ಕಿಂತ ಹೆಚ್ಚು ಜೀವರಾಶಿಗಳು ಸಮುದ್ರ ತಟದಲ್ಲಿಯೂ ಇದೆ. ವಿಜ್ಞಾನಿಗಳು ಪ್ರತಿ ಬಾರಿ ಸಮದ್ರದ ಆಳಕ್ಕೆ ಹೋಗಿ ಸಂಶೋಧಿಸಿದಾಗ ಹೊಸ ಜೀವಿಗಳು ಪತ್ತೆಯಾಗುತ್ತಿವೆ. ಅದರಂತೆ ಈ ಬಾರಿಯೂ ಹೊಸ ಜೀವಿಯೊಂದು ಪತ್ತೆಯಾಗಿದೆ. 14 ಕಾಲುಗಳನ್ನು ಈ ಜೀವಿ ಹೊಂದಿದೆ.


  ಪಶ್ಚಿಮ ಜಾವಾ ಇಂಡೋನೇಷ್ಯಾ ಬ್ಯಾಂಟಿನ್​​ ಸಮುದ್ರದಲ್ಲಿ ಹೊಸ ಜೀವಿ ಪತ್ತೆಯಾಗಿದೆ. ಏಡಿ ಹಾಗೂ ಜಿರಳೆಯಂತೆ ಹೋಲುವ ಈ ಜಿವಿಗೆ 14 ಕಾಲುಗಳಿವೆ. ಹೊಸ ಜೀವಿಯ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು. ಅನೇಕರ ಅಚ್ಚರಿಗೆ ಕಾರಣವಾಗಿದೆ.


  ಹೊಸ ಜೀವಿಯ ಬಗ್ಗೆ ಸಿಂಗಾಪುರ ನ್ಯಾಷನಲ್​​ ಯುನಿವರ್ಸಿಟಿಯಲ್ಲಿ ಅಧ್ಯಯನ ಪ್ರಾರಂಭ ಮಾಡಿದೆ.ಅದಕ್ಕೆ ಬಥ್ನೋಮಸ್​​ ರ್ಯಕ್ಸಸ್​ ಹೆಸರನ್ನು ಕೂಡ ಇಡಲಾಗಿದ್ದು,  ಸಮುದ್ರ ಜಿರಳೆ ಎಂದು ಕರೆದಿದ್ದಾರೆ.


  ಸಮುದ್ರದ ತಟದಲ್ಲಿ ಅನೇಕ ಜೀವರಾಶಿಗಳಿಗೆ. ಈವರೆಗೆ ಅಧ್ಯಯನದಲ್ಲಿ ಒಂದೊಂದೇ ವಿಚಾರಗಳು ಹೊರ ಬಂದಿದೆ. ಇನ್ನುಳಿದ ಜೀವರಾಶಿಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇದೀಗ ಸಮುದ್ರದಾಳದಲ್ಲಿ ಸಿಕ್ಕ ಸಮುದ್ರ ಜಿರಳೆ ಮತ್ತೊಂದು ಅಧ್ಯಯನಕ್ಕೆ ಕಾರಣವಾಗಿದೆ.
  ಸಮುದ್ರ ತಟದಲ್ಲಿ ಶೇಖರಣೆಯಾಗುವ ಪ್ಲಾಸ್ಟಿಕ್​ನಿಂದಾಗಿ ಹಲವು ಜೀವಿಗಳು ಅಳಿವಿನ ಅಂಚಿನಲ್ಲಿವೆ. ಮಾನವ ಬಳಸುವ ಪ್ಲಾಸ್ಟಿಕ್​ ಸಮುದ್ರ ಸೇರುತ್ತಿದೆ. ಹಾಗಾಗಿ ಪ್ಲಾಸ್ಟಿಕ್​ನಿಂದ ಅನೇಕ ಜೀವಚರಗಳಿದೆ ತೊಂದರೆಯುಂಟಾಗುತ್ತಿದೆ. ಒಂದಲ್ಲಾ ಒಂದಿ ದಿನ ಪ್ಲಾಸ್ಟಿಕ್​​ ಸಮಾಜದ ಮೇಲೆ ಮಾರಕ ಪರಿಣಾಮ ಬೀರುವ ಅನುಮಾನವೇ ಇಲ್ಲ.

  Published by:Harshith AS
  First published: